ತಿಂಗಳಿಗೆ ₹70,000 ವರೆಗೆ ಸ್ಥಿರ ಆದಾಯ ಬಯಸುವಿರಾ? ಬ್ಯಾಂಕಿನೊಂದಿಗೆ ಕೈಜೋಡಿಸಿ ನಿಮ್ಮ ಆರ್ಥಿಕ ಗುರಿಗಳನ್ನು ಸುಲಭವಾಗಿ ಸಾಧಿಸಿ. ಹೂಡಿಕೆ(invest)ಗಿಂತ ಭಿನ್ನವಾದ ಈ ಅವಕಾಶದ ಬಗ್ಗೆ ಇನ್ನಷ್ಟು ತಿಳಿಯಲು ಈ ವರದಿಯನ್ನು ತಪ್ಪದೆ ಕೊನೆಯವರೆಗೂ ಓದಿ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ
ಭಾರತದಲ್ಲಿ ಡಿಜಿಟಲ್ ಇಂಡಿಯಾ(Digital India) ಅಭಿಯಾನದಿಂದಾಗಿ ಉದ್ಯಮದ ಕ್ಷೇತ್ರದಲ್ಲಿ ಬೃಹತ್ ಬದಲಾವಣೆಗಳು ಕಂಡುಬರುತ್ತಿವೆ. ಇದೀಗ ಸರ್ಕಾರವು ಹೊಸ ಉದ್ಯಮಗಳನ್ನು ಪ್ರೋತ್ಸಾಹಿಸುವ ನಿಟ್ಟಿನಲ್ಲಿ ವಿವಿಧ ಪ್ರೋತ್ಸಾಹಕ ಯೋಜನೆಗಳನ್ನು ಪರಿಚಯಿಸಿದ್ದು, ಬ್ಯಾಂಕ್ ಜೊತೆಗೆ ಬಿಸಿನೆಸ್ ಮಾಡಲು ಆಸಕ್ತರಿಗೆ ತಲುಪಿಸಿಕೊಡುತ್ತಿದೆ. ಅದರಲ್ಲೂ, ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (SBI) ಬ್ಯಾಂಕ್ ಜೊತೆ ಬಿಸಿನೆಸ್ ಮಾಡುವ ಅವಕಾಶವನ್ನು ನೀಡುತ್ತಿದೆ, ಇದರಿಂದ ತಿಂಗಳಿಗೆ 60,000 ರಿಂದ 70,000 ರೂಪಾಯಿವರೆಗೆ ಆದಾಯ ಗಳಿಸಬಹುದು.
SBI ಎಟಿಎಂ ಫ್ರಾಂಚೈಸಿ(SBI ATM Franchise): ಏನಿದು ಮತ್ತು ಹೇಗೆ ಕಾರ್ಯನಿರ್ವಹಿಸುತ್ತದೆ?
SBI ಸ್ವತಃ ಎಟಿಎಂ (ATM) ಮಶೀನ್‌ಗಳನ್ನು ಸ್ಥಾಪಿಸುವುದಿಲ್ಲ. ಬದಲಾಗಿ, ಇದನ್ನು ಇತರ ಖಾಸಗಿ ಕಂಪನಿಗಳಿಗೆ ಗುತ್ತಿಗೆ ನೀಡಿದೆ. ಟಾಟಾ ಇಂಡಿಕ್ಯಾಶ್, ಮೂಥೂಟ್ ಎಟಿಎಂ, ಮತ್ತು ಇಂಡಿಯಾ ಒನ್ ಎಟಿಎಂ ಕಂಪನಿಗಳು SBI ಎಟಿಎಂ ಮಶೀನ್‌ಗಳನ್ನು ಇನ್‌ಸ್ಟಾಲ್ ಮಾಡುವ ಜವಾಬ್ದಾರಿ ಹೊಂದಿವೆ. ಆಸಕ್ತ ಉದ್ಯಮಿಗಳು ಈ ಕಂಪನಿಗಳಿಂದ ಎಟಿಎಂ ಫ್ರಾಂಚೈಸಿ(ATM franchise) ಪಡೆದು, ಎಟಿಎಂ ಮಶೀನ್‌ಗಳನ್ನು ಸ್ಥಾಪಿಸಬಹುದು.
ಆದಾಯ ಹೇಗೆ?
ಪ್ರತಿ ತಿಂಗಳು ನಿಮ್ಮ ಎಟಿಎಂ ಕೇಂದ್ರದಲ್ಲಿ 300 ಅಥವಾ ಅದಕ್ಕೂ ಹೆಚ್ಚು ಟ್ರಾನ್ಸಾಕ್ಷನ್‌ಗಳು ನಡೆಯಬೇಕು ಎಂಬುದು ಮುಖ್ಯ. ಇದರಿಂದ ನೀವು 60,000 ರಿಂದ 70,000 ರೂಪಾಯಿವರೆಗೆ ಆದಾಯ ಗಳಿಸಬಹುದು. ಹೆಚ್ಚಿನ ಟ್ರಾನ್ಸಾಕ್ಷನ್‌ಗಳು ನಡೆದಂತೆ, ಆದಾಯವೂ ಹೆಚ್ಚಾಗುತ್ತದೆ.
ಎಟಿಎಂ ಕೇಂದ್ರ ಸ್ಥಾಪಿಸಲು ಅಗತ್ಯವಿರುವ ಸೌಲಭ್ಯಗಳು
ಸ್ಥಳ : ಕನಿಷ್ಠ 50-60 ಚದರ ಅಡಿ ಸ್ಥಳವು ಬೇಕಾಗಿದ್ದು, ಕಾಂಕ್ರಿಟ್ ರೂಫ್, ಶಟರ್ ಡೋರ್, ಹಾಗೂ 24 ಗಂಟೆಯ ವಿದ್ಯುತ್ ಸಂಪರ್ಕವು ಕಡ್ಡಾಯವಾಗಿದೆ.
ವಿದ್ಯುತ್(Electricit): 1 ಕಿಲೋವ್ಯಾಟ್ ವಿದ್ಯುತ್ ಸಂಪರ್ಕದೊಂದಿಗೆ ನಿರಂತರ ವಿದ್ಯುತ್ ಪೂರೈಕೆ ಇರಬೇಕು.
ಅಂತರ(Distance): ಮತ್ತೊಂದು ಎಟಿಎಂ ಕೇಂದ್ರದಿಂದ ಕನಿಷ್ಠ 100 ಮೀಟರ್ ದೂರದಲ್ಲಿ ನಿಮ್ಮ ಎಟಿಎಂ ಸ್ಥಾಪಿಸಬೇಕು.
NOC: ನಿಮ್ಮ ಕಟ್ಟಡ ಅಥವಾ ಸ್ಥಳಗಳಿಗೆ ಸಂಬಂಧಿಸಿದ ಅಧಿಕಾರಿಗಳಿಂದ NOC (No Objection Certificate) ಸಿಗಬೇಕು.
ಆರಂಭಿಕ ಬಂಡವಾಳ ಮತ್ತು ಹೂಡಿಕೆ
SBI ಎಟಿಎಂ ಫ್ರಾಂಚೈಸಿ ಆರಂಭಿಸಲು, 2 ಲಕ್ಷ ರೂಪಾಯಿ ಸೆಕ್ಯೂರಿಟಿ ಡೆಪಾಸಿಟ್ (Refundable) ಹಾಗೂ 3 ಲಕ್ಷ ರೂಪಾಯಿ ವರ್ಕಿಂಗ್ ಕ್ಯಾಪಿಟಲ್ ಬಂಡವಾಳ ಅವಶ್ಯಕ. ಈ 5 ಲಕ್ಷ ರೂಪಾಯಿಯ ಹೂಡಿಕೆಯಿಂದ, ನೀವು ಬಿಸಿನೆಸ್ ಆರಂಭಿಸಬಹುದು.
SBI ಎಟಿಎಂ ಫ್ರಾಂಚೈಸಿ ಮೂಲಕ, ನೀವು ಬ್ಯಾಂಕ್ ಜೊತೆಗೆ ಬಿಸಿನೆಸ್ ಮಾಡಬಹುದಾಗಿದೆ. ಸರಿಯಾದ ಹೂಡಿಕೆ, ವ್ಯವಸ್ಥೆ, ಮತ್ತು ಕಾರ್ಯತಂತ್ರದಿಂದ, ತಿಂಗಳಿಗೆ 60,000 ರಿಂದ 70,000 ರೂಪಾಯಿವರೆಗೆ ಆದಾಯ ಗಳಿಸಬಹುದು. ಬ್ಯಾಂಕ್ ಕ್ಷೇತ್ರದಲ್ಲಿ ಬಿಸಿನೆಸ್ ಮಾಡಲು ಇದು ಒಳ್ಳೆಯ ಅವಕಾಶವಿದ್ದು, ಇದರ ಉಪಯೋಗವನ್ನು ಪಡೆದು ತಮ್ಮದೇ ಆದಂತಹ ಬಿಸಿನೆಸ್ ಸ್ಥಾಪಿಸಬಹುದು.
ಈ ಮಾಹಿತಿಗಳನ್ನು ಓದಿ
ದಯವಿಟ್ಟು ಗಮನಿಸಿ: ನೀಡ್ಸ್ ಆಫ್ ಪಬ್ಲಿಕ್ ತನ್ನ ಓದುಗರಿಗೆ ನಿಖರವಾದ ಮತ್ತು ಅಧಿಕೃತ ಮಾಹಿತಿಗಳನ್ನು ಮಾತ್ರ ಪ್ರಕಟಿಸುತ್ತದೆ. ಇಲ್ಲಿ ನಾವು ಯಾವುದೇ ಅನಧಿಕೃತ ಮತ್ತು ಸುಳ್ಳು ಮಾಹಿತಿಯನ್ನು ಬಿತ್ತರಿಸುವುದಿಲ್ಲ.