ದೇಶದಾದ್ಯಂತ ‘ಪಿಎಂ-ಜನ್ ಮನ್’ ಪೇಸ್ 2 ಕಾರ್ಯಕ್ರಮ, ಶಿಬಿರ ಹಾಗೂ ಸ್ಯಾಚುರೇಷನ್ ಕ್ಯಾಂಪ್ಗಳನ್ನು ಸೆಪ್ಟೆಂಬರ್ 10 ರವರೆಗೆ ವಿಸ್ತರಿಸಲಾಗಿದೆ.
ರಾಜ್ಯ ಹಾಗೂ ಕೇಂದ್ರ ಸರ್ಕಾರದಿಂದ ಹಲವಾರು ಯೋಜನೆಗಳು ಜಾರಿಯಲ್ಲಿವೆ ಹಾಗೆಯೇ ವಿವಿಧ ಸಮುದಾಯದ ವರ್ಗಗಳಿಗೂ ಕೂಡ ಅನೇಕ ಯೋಜನೆಗಳು, ಕಾರ್ಯಕ್ರಮಗಳು ಜಾರಿಯಾಗುತ್ತಿರುತ್ತವೆ. ಈ ರೀತಿಯ ಯೋಜನೆಗಳು, ಕಾರ್ಯಕ್ರಮಗಳು ಬುಡಕಟ್ಟು ಹಾಗೂ ಹಿಂದುಳಿದ ವರ್ಗದ ಜನರಿಗೆ ಬಹಳ ಉಪಯೋಗವಾಗುತ್ತದೆ. ಅವರ ಹಲವಾರು ರೀತಿಯ ಕಷ್ಟ ಪಾಡುಗಳನ್ನು ಈ ಇಂತಹ ಕಾರ್ಯಕ್ರಮಗಳಲ್ಲಿ ಭಾಗವಹಿಸಿ ಬಗೆಹರಿಸಿಕೊಳ್ಳಬಹುದು.
ಹಾಗೆ ಇದೀಗ ಸರ್ಕಾರವು ಇಂತಹ ಅನೇಕ ಕಾರ್ಯಕ್ರಮಗಳನ್ನು ಜಾರಿಗೋಳಿಸುತ್ತಿದೆ. ಹಾಗೆಯೇ ಇದೀಗ ದೇಶದಾದ್ಯಂತ ಪಿಎಂ-ಜನ್ಮನ್ ಪೇಸ್ 2 (PMJANMAN Phase-II) ಎಂಬ ಕಾರ್ಯಕ್ರಮನ್ನು ಪಿವಿಟಿಜಿ ಸಮುದಾಯವರಿಗೆ ಆಯೋಜಿಸಿದೆ. ಈ ಒಂದು ಕಾರ್ಯಕ್ರಮದಿಂದ ಏನೆಲ್ಲ ಪ್ರಯೋಜನ ಇದೆ. ಇದು ಹೇಗೆ ಕಾರ್ಯ ನಿರ್ವಹಿಸುತ್ತದೆ ಎಂಬುದರ ಬಗ್ಗೆ ಸಂಪೂರ್ಣ ಮಾಹಿತಿಯನ್ನು ತಿಳಿದುಕೊಳ್ಳೋಣ ಬನ್ನಿ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ
ದೇಶದಾದ್ಯಂತ ಪಿಎಂ-ಜನ್ಮನ್ ಪೇಸ್ 2 (PMJANMAN Phase-II) ಕಾರ್ಯಕ್ರಮಗಳು :
ಕೇಂದ್ರ ಬುಡಕಟ್ಟು ವ್ಯವಹಾರಗಳ ಮಂತ್ರಾಲಯ ವತಿಯಿಂದ ಪ್ರಧಾನಮಂತ್ರಿ ಜನಜಾತಿಯ ಆದಿವಾಸಿ ನ್ಯಾಯ ಮಹಾ ಯೋಜನೆಯಡಿ (ಪಿಎಂ-ಜನ್ಮನ್) ಕಾರ್ಯಕ್ರಮಗಳನ್ನು ಪಿವಿಟಿಜಿ ಸಮುದಾಯವರಿಗೆ ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಯೋಜನೆಗಳ ಪ್ರಯೋಜನ ಪಡೆಯಲು ದೇಶದಾದ್ಯಂತ ಪಿಎಂ-ಜನ್ಮನ್ ಪೇಸ್ 2 (PMJANMAN Phase-II) ಕಾರ್ಯಕ್ರಮದಡಿ ಅರಿವು ಮೂಡಿಸುವ ಶಿಬಿರ/ಫಲಾನುಭವಿಗಳ ಸ್ಯಾಚುರೇಷನ್ ಕ್ಯಾಂಪ್ಗಳನ್ನು (Saturation camp) ಸೆಪ್ಟೆಂಬರ್ 10 ರವರೆಗೆ ವಿಸ್ತರಿಸಲಾಗಿದೆ.
ಕೊಡಗಿನ ಜೇನುಕುರುಬ ಸಮುದಾಯದವರಿಗೆ ಪಿಎಂ-ಜನ್ಮನ್ ಪೇಸ್ 2 ರಲ್ಲಿ ಕೇಂದ್ರ ಹಾಗೂ ರಾಜ್ಯ ಸರ್ಕಾರದ ಯೋಜನೆಗಳು :
ಕೊಡಗು ಜಿಲ್ಲೆಯ ಬುಡಕಟ್ಟು ಸಮುದಾಯವಾದ ಜೇನುಕುರುಬ ಸಮುದಾಯದವರಿಗೆ ಪಿಎಂ-ಜನ್ಮನ್ ಪೇಸ್ 2 (PM-JANMAN phase II) ರಲ್ಲಿ ಕೇಂದ್ರ ಹಾಗೂ ರಾಜ್ಯ ಸರ್ಕಾರದ ಯೋಜನೆಗಳನ್ನು ತಲುಪಿಸುವ ನಿಟ್ಟಿನಲ್ಲಿ ಜಿಲ್ಲಾ ಮತ್ತು ತಾಲ್ಲೂಕು/ ಬ್ಲಾಕ್ ನೋಡೆಲ್ ಅಧಿಕಾರಿಗಳ ತಂಡ ರಚಿಸಲಾಗಿದೆ.
ಜೇನುಕುರುಬ ಜನಾಂಗದವರಿಗೆ ಹಲವು ಕಾರ್ಯಕ್ರಮಗಳನ್ನು (Programes) ಅನುಷ್ಠಾನಗೊಳಿಸಲಾಗುತ್ತಿದೆ :
ಆಗಸ್ಟ್, 23 ರಿಂದ ಸೆಪ್ಟೆಂಬರ್, 10 ರ ಅವಧಿಯಲ್ಲಿ ಜೇನುಕುರುಬ ಜನಾಂಗದವರಿಗೆ ಆಧಾರ್ ಕಾರ್ಡ್ ನೋಂದಣಿ, ಪಿಎಂ ಜನ್ಧನ್ ಬ್ಯಾಂಕ್ ಖಾತೆ, ಆಯುಷ್ಮಾನ್ ಭಾರತ್ ಕಾರ್ಡ್, ಸಿಕೆಲ್ಸೆಲ್ ಅನೆಮಿಯಾ ಖಾಯಿಲೆ ಸ್ಕ್ರೀನಿಂಗ್ ಪರೀಕ್ಷೆ, ಜಾತಿ ಪ್ರಮಾಣ ಪತ್ರ, ಪಡಿತರ ಚೀಟಿ ಕಾರ್ಯಕ್ರಮಗಳನ್ನು ಅನುಷ್ಠಾನಗೊಳಿಸಲಾಗುತ್ತಿದೆ.
ಗಮನಿಸಿ (Notice) :
ಹೆಚ್ಚಿನ ಮಾಹಿತಿಗೆ ಯೋಜನಾ ಸಮನ್ವಯಾಧಿಕಾರಿ, ಸಮಗ್ರ ಗಿರಿಜನ ಅಭಿವೃದ್ಧಿ ಯೋಜನೆ, ಕೊಡಗು ಜಿಲ್ಲೆ ಇವರ ಕಚೇರಿ ದೂರವಾಣಿ ಸಂಖ್ಯೆ 08272-200500, ತಾಲ್ಲೂಕು ಪರಿಶಿಷ್ಟ ವರ್ಗಗಳ ಕಲ್ಯಾಣಾಧಿಕಾರಿ, ವಿರಾಜಪೇಟೆ ತಾಲ್ಲೂಕು (9901482763) ಹಾಗೂ ಸಹಾಯಕ ನಿರ್ದೇಶಕರು (ಗ್ರೇಡ್-2), ಸಮಾಜ ಕಲ್ಯಾಣ ಇಲಾಖೆ, ಸೋಮವಾರಪೇಟೆ ತಾಲ್ಲೂಕು (7259552655) ರವರನ್ನು ಸಂಪರ್ಕಿಸಬಹುದು ಎಂದು ಕೊಡಗು ಜಿಲ್ಲಾಧಿಕಾರಿ ವೆಂಕಟ್ ರಾಜಾ ಅವರು ತಿಳಿಸಿದ್ದಾರೆ.
ಈ ಮಾಹಿತಿಗಳನ್ನು ಓದಿ
ದಯವಿಟ್ಟು ಗಮನಿಸಿ: ನೀಡ್ಸ್ ಆಫ್ ಪಬ್ಲಿಕ್ ತನ್ನ ಓದುಗರಿಗೆ ನಿಖರವಾದ ಮತ್ತು ಅಧಿಕೃತ ಮಾಹಿತಿಗಳನ್ನು ಮಾತ್ರ ಪ್ರಕಟಿಸುತ್ತದೆ. ಇಲ್ಲಿ ನಾವು ಯಾವುದೇ ಅನಧಿಕೃತ ಮತ್ತು ಸುಳ್ಳು ಮಾಹಿತಿಯನ್ನು ಬಿತ್ತರಿಸುವುದಿಲ್ಲ.