RRB Recruitment : ಪ್ಯಾರಾಮೆಡಿಕಲ್ ಹುದ್ದೆಗಳಿಗೆ ನೇಮಕಾತಿ ಅರ್ಜಿ ಆಹ್ವಾನ. ಇಲ್ಲಿದೆ ಲಿಂಕ್

IMG 20240827 WA0007

ರೈಲ್ವೆ ಇಲಾಖೆಯಿಂದ ಗುಡ್ ನ್ಯೂಸ್, 1376 ಪ್ಯಾರಾ ಮೆಡಿಕಲ್ ಹುದ್ದೆಗಳ ನೇಮಕಾತಿಗೆ(Recruitment) ಅರ್ಜಿ ಆಹ್ವಾನಿಸಿದೆ.

ಇಂದು ಹಲವಾರು ಜನರು ಉದ್ಯೋಗಕ್ಕಾಗಿ ಕಾಯುತ್ತಿದ್ದಾರೆ. ಅದರಲ್ಲೂ ರೈಲ್ವೆ ಇಲಾಖೆಯಲ್ಲಿ  (Railway department) ಹುದ್ದೆಗಳನ್ನು ಪಡೆದುಕೊಳ್ಳಲು ಕಾತುರದಿಂದ ಕಾಯುತ್ತಿದ್ದಾರೆ. ರೈಲ್ವೆ ಇಲಾಖೆ ದೇಶದ ಲೈಫ್‌ಲೈನ್‌ (lifeline) ಎಂದು ಕರೆಯಲಾಗುತ್ತದೆ. ಕಾರಣ ಭಾರತದಲ್ಲಿ ಅತಿಹೆಚ್ಚು ಉದ್ಯೋಗ ಅವಕಾಶಗಳನ್ನು ಹೊಂದಿರುವ ಒಂದೇ ಒಂದು ಇಲಾಖೆ ಇದ್ರೆ ಅದುವೇ ಭಾರತೀಯ ರೈಲ್ವೆ ಇಲಾಖೆ. ಈ ಇಲಾಖೆಯಡಿ ಉದ್ಯೋಗಕ್ಕೆ ಸೇರುವವರೆಲ್ಲರಿಗೂ ಸಹ ಕೈತುಂಬ ಸಂಬಳ, ಮೆಡಿಕಲ್, ವಸತಿ, ಪಿಂಚಣಿ ಸೇರಿದಂತೆ ಹಲವಾರು ಸೌಲಭ್ಯಗಳು ಸಿಗಲಿವೆ. ರೈಲ್ವೆ ಇಲಾಖೆಯು ಇದೀಗ ಅಭ್ಯರ್ಥಿಗಳಿಗೆ ಗುಡ್ ನ್ಯೂಸ್ ನೀಡಿದೆ. 1376 ಪ್ಯಾರಾ ಮೆಡಿಕಲ್ ಹುದ್ದೆಗಳ ನೇಮಕಾತಿಗೆ ಅರ್ಜಿ (Application) ಆಹ್ವಾನಿಸಲಾಗಿದೆ. ಅದರ ಬಗ್ಗೆ ಸಂಪೂರ್ಣ ಮಾಹಿತಿಯನ್ನು ಈ ವರದಿಯಲ್ಲಿ ತಿಳಿದು ಕೊಳ್ಳೋಣ ಬನ್ನಿ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ

1376 ಪ್ಯಾರಾಮೆಡಿಕಲ್ ಹುದ್ದೆಗಳ ನೇಮಕಾತಿಗೆ ಅರ್ಜಿ ಆಹ್ವಾನಿಸಲಾಗಿದೆ :

ರೈಲ್ವೆ ನೇಮಕಾತಿ ಮಂಡಳಿ (RRB) ಹೊಸ ನೇಮಕಾತಿಯ ಅಧಿಸೂಚನೆ ಇದೀಗ ಬಿಡುಗಡೆ ಮಾಡಿದ್ದು, 1376 ಪ್ಯಾರಾ ಮೆಡಿಕಲ್ ಹುದ್ದೆಗಳಿಗೆ ನೇಮಕಾತಿಗೆ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಿದೆ. ಪ್ಯಾರಾ ಮೆಡಿಕಲ್‌ನ ವಿವಿಧ ವರ್ಗಗಳಿಗೆ ಅರ್ಜಿ ಪ್ರಕ್ರಿಯೆ ಶುರುವಾಗಿದ್ದು, ಆಸಕ್ತ ಮತ್ತು ಅರ್ಹ ಅಭ್ಯರ್ಥಿಗಳು ಆರ್  ಆರ್  ಬಿ ಪ್ರಾದೇಶಿಕ ವೆಬ್ ಸೈಟ್‌ನಲ್ಲಿ ಅರ್ಜಿ ಸಲ್ಲಿಸಬಹುದಾಗಿದೆ.

ರೈಲ್ವೆ ಇಲಾಖೆಯ ಪ್ಯಾರಾಮೆಡಿಕಲ್ ನಲ್ಲಿ ಇರುವ ಹುದ್ದೆಗಳ (posts) ವಿವರ ಹೀಗಿದೆ :

ಆಹಾರ ತಜ್ಞ – 5 ಪೋಸ್ಟ್
ನರ್ಸಿಂಗ್ ಸೂಪರಿಂಟೆಂಡೆಂಟ್ –   713 ಪೋಸ್ಟ್
ಆಡಿಯಾಲಜಿಸ್ಟ್ ಮತ್ತು ಸ್ಪೀಚ್ ಥೆರಪಿಸ್ಟ್ – 4 ಪೋಸ್ಟ್
ಕ್ಲಿನಿಕಲ್ ಸೈಕಾಲಜಿಸ್ಟ್ – 7 ಪೋಸ್ಟ್ 
ದಂತ ನೈರ್ಮಲ್ಯ ತಜ್ಞ – 3 ಪೋಸ್ಟ್ 
ಡಯಾಲಿಸಿಸ್ ತಂತ್ರಜ್ಞ – 20 ಪೋಸ್ಟ್
ಆರೋಗ್ಯ ಮತ್ತು ಮಲೇರಿಯಾ ಇನ್‌ಸ್ಪೆಕ್ಟರ್ ಗ್ರೇಡ್ III – 126 ಪೋಸ್ಟ್
ಲ್ಯಾಬೋರೇಟರಿ ಸೂಪರಿಂಟೆಂಡೆಂಟ್ ಗ್ರೇಡ್ III – 27 ಪೋಸ್ಟ್
ಪರ್ಫ್ಯೂಷನಿಸ್ಟ್ – 2 ಪೋಸ್ಟ್ 
ಭೌತಚಿಕಿತ್ಸಕ ಗ್ರೇಡ್ II – 20 ಪೋಸ್ಟ್
ಆಕ್ಯುಪೇಷನಲ್ ಥೆರಪಿಸ್ಟ್ – 2 ಪೋಸ್ಟ್
ಕ್ಯಾಥ್ ಲ್ಯಾಬೊರೇಟರಿ ತಂತ್ರಜ್ಞ – 2 ಪೋಸ್ಟ್
ಫಾರ್ಮಾಸಿಸ್ಟ್ (ಪ್ರವೇಶ ದರ್ಜೆ) – 246 ಪೋಸ್ಟ್
ರೇಡಿಯೋಗ್ರಾಫರ್ ಎಕ್ಸ್-ರೇ ತಂತ್ರಜ್ಞ – 64 ಪೋಸ್ಟ್
ಸ್ಪೀಚ್ ಥೆರಪಿಸ್ಟ್ – 1 ಪೋಸ್ಟ್
ಹೃದಯ ತಂತ್ರಜ್ಞ – 4 ಪೋಸ್ಟ್
ಆಪ್ಟೋಮೆಟ್ರಿಸ್ಟ್ – 4 ಪೋಸ್ಟ್
ಇಸಿಜಿ ತಂತ್ರಜ್ಞ – 13 ಪೋಸ್ಟ್
ಪ್ರಯೋಗಾಲಯ ಸಹಾಯಕ ಗ್ರೇಡ್ II – 94 ಪೋಸ್ಟ್
ಫೀಲ್ಡ್ ವರ್ಕರ್ – 19 ಪೋಸ್ಟ್

ರೈಲ್ವೆ ಇಲಾಖೆಯ ಪ್ಯಾರಾಮೆಡಿಕಲ್ (Paramedical) ಹುದ್ದೆಗೆ ಅರ್ಜಿ ಸಲ್ಲಿಸಲು ಇರಬೇಕಾದ ವಿದ್ಯಾರ್ಹತೆ :

ಹುದ್ದೆಗೆ ಅನುಗುಣವಾಗಿ ವಿದ್ಯಾರ್ಹತೆ ಕೂಡ ಬದಲಾಗುತ್ತವೆ. ಹಾಗಾಗಿ ಇಲ್ಲಿ ವಿವಿಧ ಹುದ್ದೆಗಳು ಇರುವುದರಿಂದ ಆಯಾ ಹುದ್ದೆಗಳಿಗೆ ವಿದ್ಯಾರ್ಹತೆ ನಿಗದಿಯಾಗುತ್ತದೆ. ಪಿಯುಸಿ, ಸ್ನಾತಕೋತ್ತರ ಪದವಿ, ನರ್ಸಿಂಗ್, ಬಿಎಸ್ಸಿ, ಡಿಪ್ಲೊಮಾ, ಬಿಎ, ಬಿಎಸ್ಸಿ ನರ್ಸಿಂಗ್, ಡಿ ಫಾರ್ಮಸಿ, ಬಿ ಫಾರ್ಮಸಿ ಮುಂತಾದ ವಿದ್ಯಾರ್ಹತೆಗಳು ಅನ್ವಯಿಸುತ್ತವೆ.

ಈಗಾಗಲೇ ಆನ್‌ಲೈನ್ (Online) ಅಪ್ಲಿಕೇಶನ್ ಪ್ರಕ್ರಿಯೆ ಪ್ರಾರಂಭವಾಗಿದೆ :

ಆನ್‌ಲೈನ್ ಅಪ್ಲಿಕೇಶನ್‌ಗೆ ಕೊನೆಯ ದಿನಾಂಕ – ಸೆಪ್ಟೆಂಬರ್ 16, 2024 ಆಗಿರುತ್ತದೆ.
ಅರ್ಜಿ ತಿದ್ದುಪಡಿಗೆ ಅವಕಾಶ ಈ ದಿನಾಂಕಗಳವರೆಗೆ ಇರುತ್ತದೆ – ಸೆಪ್ಟೆಂಬರ್ 17 – ಸೆಪ್ಟೆಂಬರ್ 26, 2024

ಈ ಎಲ್ಲಾ ಹುದ್ದೆಗಳಿಗೆ ಇರುವ ಆಯ್ಕೆ ಪ್ರಕ್ರಿಯೆ :

ಪ್ಯಾರಾಮೆಡಿಕಲ್ ಹುದ್ದೆಗೆ ಅರ್ಹ ಅಭ್ಯರ್ಥಿಗಳ ಆಯ್ಕೆಗಾಗಿ ರೈಲ್ವೆಯು ಕಂಪ್ಯೂಟರ್ ಆಧಾರಿತ ಪರೀಕ್ಷೆಯನ್ನು ನಡೆಸಲಿದೆ. ಪರೀಕ್ಷೆಯಲ್ಲಿ ಋಣಾತ್ಮಕ ಅಂಕಗಳೂ ಇರುತ್ತವೆ. ಪರೀಕ್ಷೆಯಲ್ಲಿ ಅರ್ಹತೆ ಪಡೆದ ಅಭ್ಯರ್ಥಿಗಳನ್ನು ದಾಖಲೆ ಪರಿಶೀಲನೆ ಮತ್ತು ವೈದ್ಯಕೀಯ ಪರೀಕ್ಷೆಗೆ ಕರೆಯಲಾಗುವುದು.

ಈ ಹುದ್ದೆಗಳಿಗೆ ಇರುವ ಅರ್ಜಿ ಶುಲ್ಕದ (Application fee) ವಿವರ ಹೀಗಿದೆ :

ಸಾಮಾನ್ಯ ವರ್ಗದ ಅಭ್ಯರ್ಥಿಗಳು ಅರ್ಜಿ ಶುಲ್ಕವಾಗಿ 500 ರೂ ಪಾವತಿಸಬೇಕು. ಆದರೆ, ಎಸ್‌ಸಿ, ಎಸ್‌ಟಿ, ಮಾಜಿ ಸೈನಿಕರು, ಅಂಗವಿಕಲರು, ಮಹಿಳೆಯರು, ತೃತೀಯ ಲಿಂಗಿಗಳು, ಇಬಿಸಿ 250 ರೂಪಾಯಿ. ಅರ್ಜಿ ಶುಲ್ಕವನ್ನು ಡೆಬಿಟ್ (Debit) ಅಥವಾ ಕ್ರೆಡಿಟ್ ಕಾರ್ಡ್ (credit card) ಅಥವಾ ನೆಟ್ ಬ್ಯಾಂಕಿಂಗ್ (Net Banking) ಮೂಲಕ ಆನ್‌ಲೈನ್ ಮೋಡ್‌ನಲ್ಲಿ ಪಾವತಿಸಬಹುದು.

ರೈಲ್ವೆ ಪ್ಯಾರಾಮೆಡಿಕಲ್ ಇರುವ ಹುದ್ದೆಗಳಿಗೆ ದೊರೆಯುವ ಸಂಬಳದ ವಿವರ :

ಸಂಬಳ – 19 ಸಾವಿರದಿಂದ 44 ಸಾವಿರ ತನಕ ಇರುತ್ತದೆ. ಮುಖ್ಯವಾಗಿ ಇದರಲ್ಲಿ ಉದ್ಯೋಗದ ಆಧಾರಕ್ಕೆ ತಕ್ಕಂತೆ ವೇತನ ಇರುತ್ತದೆ.

ಆರ್  ಆರ್  ಬಿ (RRB) ಸ್ಟಾಫ್ ನರ್ಸ್ ಪ್ಯಾರಾಮೆಡಿಕಲ್ ನೇಮಕಾತಿಗೆ ಅರ್ಜಿ ಸಲ್ಲಿಸುವ ವಿಧಾನ :

ಹಂತ 1: ಯಾವುದೇ ಒಂದು ಅಧಿಕೃತ ಆರ್ ಆರ್ ಬಿ ವೆಬ್‌ಸೈಟ್‌ ಓಪನ್ ಮಾಡಿ: rrbapply.gov.in.
ಹಂತ 2: ಮುಖಪುಟದಲ್ಲಿ ಆರ್ ಆರ್ ಬಿ ಪ್ಯಾರಾಮೆಡಿಕಲ್ ಪೋಸ್ಟ್ ಗೆ ಆನ್‌ಲೈನ್ ಅಪ್ಲಿಕೇಶನ್ ಲಿಂಕ್ ಕ್ಲಿಕ್ ಮಾಡಿ.
ಹಂತ 3: ಅಪ್ಲೈ ಟ್ಯಾಬ್ ನಲ್ಲಿ ‘ಕ್ರಿಯೇಟ್ ಅಕೌಂಟ್’ ಕ್ಲಿಕ್ ಮಾಡಿ.
ಹಂತ 4: ಖಾತೆಯನ್ನು ರಚಿಸಲು ಅಗತ್ಯವಿರುವ ಎಲ್ಲಾ ವಿವರಗಳೊಂದಿಗೆ ಫಾರ್ಮ್ ಭರ್ತಿ ಮಾಡಿ.
ಹಂತ 5: ನಂತರ ನಿಮ್ಮ ಮೊಬೈಲ್ ಸಂಖ್ಯೆ/ಇಮೇಲ್ ವಿಳಾಸ ಮತ್ತು ಪಾಸ್ ವರ್ಡ್  ನೊಂದಿಗೆ ಲಾಗ್ ಇನ್ ಮಾಡಿ.
ಹಂತ 6: ಈಗ ಮಾನ್ಯ ಮತ್ತು ಸರಿಯಾದ ವಿವರಗಳೊಂದಿಗೆ ಅರ್ಜಿ ಭರ್ತಿ ಮಾಡಿ.
ಹಂತ 7: ನಿಗದಿತ ನಮೂನೆಯಲ್ಲಿ ಭಾವಚಿತ್ರ, ಸಹಿ ಮತ್ತು ಇತರ ದಾಖಲೆಗಳನ್ನು ಅಪ್‌ಲೋಡ್ ಮಾಡಿ.
ಹಂತ 8: ಅಪ್ಲಿಕೇಶನ್ ಪ್ರಕ್ರಿಯೆಯನ್ನು ಪೂರ್ಣಗೊಳಿಸಲು ನಿಮ್ಮ ವರ್ಗಕ್ಕೆ ಅನುಗುಣವಾಗಿ ನಿಗದಿತ ಶುಲ್ಕವನ್ನು ಪಾವತಿಸಿ.

ಈ ಮಾಹಿತಿಗಳನ್ನು ಓದಿ

 

ದಯವಿಟ್ಟು ಗಮನಿಸಿ: ನೀಡ್ಸ್ ಆಫ್ ಪಬ್ಲಿಕ್ ತನ್ನ ಓದುಗರಿಗೆ ನಿಖರವಾದ ಮತ್ತು ಅಧಿಕೃತ ಮಾಹಿತಿಗಳನ್ನು ಮಾತ್ರ ಪ್ರಕಟಿಸುತ್ತದೆ. ಇಲ್ಲಿ ನಾವು ಯಾವುದೇ ಅನಧಿಕೃತ ಮತ್ತು ಸುಳ್ಳು ಮಾಹಿತಿಯನ್ನು ಬಿತ್ತರಿಸುವುದಿಲ್ಲ

WhatsApp Group Join Now
Telegram Group Join Now

Related Posts

Leave a Reply

Your email address will not be published. Required fields are marked *

error: Content is protected !!