ನಿಮ್ಮ ಬಳಿ ಯಶಸ್ವಿನಿ ಕಾರ್ಡ್ ಇದೆಯಾ? ಹಾಗಿದ್ದಲ್ಲಿ ಕೆಲವು ಕಾಯಿಲೆಗಳ ಚಿಕಿತ್ಸೆಗೆ ಈ ಕಾರ್ಡ್ ಉಪಯೋಗವಾಗಲಿದೆ.
ಇಂದು ತಂತ್ರಜ್ಞಾನ (Technology) ಮುಂದುವರಿದಂತೆ ಮನುಷ್ಯನ ಜೀವನದಲ್ಲಿ ಹಲವಾರು ಬದಲಾವಣೆಗಳನ್ನು ಕಾಣಬಹುದು. ಮಾನವನ ಆರೋಗ್ಯದ ವಿಷಯಕ್ಕೆ ಬಂದರೆ ಆರೋಗ್ಯದ ಮೇಲೆ ಹಲವು ದುಷ್ಪರಿಣಾಮಗಳು ಎದುರಾಗುತ್ತಲೇ ಇವೆ. ಕೆಲವೊಂದು ಕಾಯಿಲೆಗಳನ್ನು ವಾಸಿ ಮಾಡಿಕೊಳ್ಳಲು ಅತಿ ಹೆಚ್ಚು ಹಣವನ್ನು ಭರಿಸುವ ಅಗತ್ಯತೆ ಎದುರಾಗಿದೆ. ಹೆಚ್ಚು ಹೆಚ್ಚು ಆಸ್ಪತ್ರೆಗಳು ನಿರ್ಮಾಣವಾದ್ದರಿಂದ ಹಾಗೂ ಎಲ್ಲಾ ಕಾಯಿಲೆಗಳಿಗೂ ತಂತ್ರಜ್ಞಾನದಿಂದಲೇ ಚಿಕಿತ್ಸೆ (treatment) ಕೊಡುತ್ತಿರುವುದರಿಂದ ಕೆಲವೊಂದು ಕಾಯಿಲೆಗಳಿಗೆ ದುಬಾರಿ ಹಣ ಬೇಕಾಗುತ್ತದೆ. ಆದ್ದರಿಂದ ಕೆಲವೊಂದು ಕಾಯಿಲೆಗಳಿಗೆ ಎಲ್ಲಾ ವರ್ಗದವರು ಕೂಡ ಚಿಕಿತ್ಸೆಯನ್ನು ಪಡೆದುಕೊಳ್ಳಲು ಸ್ವಲ್ಪ ಕಷ್ಟವಾಗುತ್ತದೆ. ಆದ್ದರಿಂದ ಸರ್ಕಾರ ಕೆಲವೊಂದು ಮಾರ್ಗೋಪಾಯಗಳನ್ನು ಮಾಡಿಕೊಟ್ಟಿದೆ. ಈ ನಿಟ್ಟಿನಲ್ಲಿ ಯಶಸ್ವಿನಿ ಕಾರ್ಡ್ (Yashashwini Card) ಅಡಿಯಲ್ಲಿ ಹಲವು ಕಾಯಿಲೆಗಳಿಗೆ ಚಿಕಿತ್ಸೆಯನ್ನು ಪಡೆದುಕೊಳ್ಳಬಹುದು. ಯಾವೆಲ್ಲ ಕಾಯಿಲೆಗಳಿಗೆ ಚಿಕಿತ್ಸೆ ಪಡೆದುಕೊಳ್ಳಬಹುದು? ಯಾರೆಲ್ಲಾ ಪಡೆದುಕೊಳ್ಳಬಹುದು? ಎಂಬ ಸಂಪೂರ್ಣ ಮಾಹಿತಿಯನ್ನು ತಿಳಿದುಕೊಳ್ಳೋಣ ಬನ್ನಿ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ
ಯಶಸ್ವಿನಿ ಯೋಜನೆ ಯಾವಾಗ ಜಾರಿಗೆ ಬಂತು :
ಯಶಸ್ವಿನಿ ಯೋಜನೆಯ ಕರ್ನಾಟಕ ರಾಜ್ಯ ಸರ್ಕಾರದ ಪ್ರಮುಖ ಯೋಜನೆಯಾಗಿದ್ದು, ಗ್ರಾಮೀಣ ಪ್ರದೇಶದ ಜನರ ಆರೋಗ್ಯದ ರಕ್ಷಣೆಯನ್ನು ಕಾಪಾಡುವ ಸಲುವಾಗಿ 2003 ಜೂನ್ 1 ರಂದು ಮಾಜಿ ಮುಖ್ಯಮಂತ್ರಿ ಎಸ್‌ಎಂ ಕೃಷ್ಣ (Ex chief minister SM krishna) ಅವರು ಈ ಯೋಜನೆಯನ್ನು ಜಾರಿಗೆ ತಂದರು. ಇದು ಕರ್ನಾಟಕ ರಾಜ್ಯದ ಗ್ರಾಮೀಣ ಸಹಕಾರಿಗಳಿಗಾಗಿಯೇ ರೂಪಗೊಂಡಿರುವ ಒಂದು ‘ಸ್ವಯಂ- ನಿಧಿ ಶಸ್ತ್ರಚಿಕಿತ್ಸಾ ಯೋಜನೆಯಾಗಿದೆ’. ಈ ಯೋಜನೆಯ ಮುಖ್ಯ ಉದ್ದೇಶ ಬಡ ಮತ್ತು ಮಧ್ಯಮ-ವರ್ಗದ ಕುಟುಂಬಗಳಿಗೆ ವೈದ್ಯಕೀಯ ವಿಮಾ (Medical Vima) ರಕ್ಷಣೆ ಒದಗಿಸುವುದಾಗಿದೆ.
ಯಶಸ್ವಿನಿ ಕಾರ್ಡ್ ನಿಂದ ಆಗುವ ಪ್ರಯೋಜನ :
ಯಶಸ್ವಿನಿ ಆರೋಗ್ಯ ವಿಮಾ ಯೋಜನೆಯಿಂದ ಹಲವು ಸೌಲಭ್ಯಗಳನ್ನು ಪಡೆದುಕೊಳ್ಳಬಹುದು. ಅದರಲ್ಲೂ ಸರ್ಕಾರದ ಸವಲತ್ತುಗಳನ್ನು ಪಡೆಯಲು ಯಶಸ್ವಿನಿ ಕಾರ್ಡನ್ನು ಬಳಸಬಹುದು.
ಯಶಸ್ವಿನಿ ಕಾರ್ಡ್ ಆರ್ಥಿಕವಾಗಿ ಸಹಾಯಮಾಡುತ್ತದೆ.
ಬಡ ಮತ್ತು ಮಧ್ಯಮ ವರ್ಗದ ಕುಟುಂಬಗಳು ಈ ಕಾರಣ ಪ್ರಯೋಜನವನ್ನು ಪಡೆಯಬಹುದು.
ಅದರಲ್ಲೂ ವೈದ್ಯಕೀಯ ಪ್ರಯೋಜನಗಳು ಜನರಿಗೆ ಹೆಚ್ಚು ಸಹಕಾರವಾಗಿವೆ.
ಈ ಕಾರ್ಡ್ ಮೂಲಕ ನೀವು ರೂ.5 ಲಕ್ಷದವರೆಗೆ ಉಚಿತ ಚಿಕಿತ್ಸೆ ಪಡೆಯಬಹುದು.
ಯೋಜನೆಯು 823 ಕ್ಕೂ ಹೆಚ್ಚು ಶಸ್ತ್ರಚಿಕಿತ್ಸಾ ವಿಧಾನಗಳನ್ನು ಒಳಗೊಂಡಿದ್ದು, ಗ್ರಾಮೀಣ ಪ್ರದೇಶದ ಸದಸ್ಯರಿಗೆ 1.25 ಲಕ್ಷ ಮತ್ತು ನಗರ ಪ್ರದೇಶದ ಸದಸ್ಯರಿಗೆ 1.75 ಲಕ್ಷದವರೆಗೆ ಒಂದು ಬಾರಿ ಆಸ್ಪತ್ರೆಗೆ ದಾಖಲಿಸಿದರೆ ವೈದ್ಯಕೀಯ ಚಿಕಿತ್ಸೆ ವೆಚ್ಚವನ್ನು ಭರಿಸುತ್ತದೆ.
ಯಶಸ್ವಿನಿ ಕಾರ್ಡ್ ಪಡೆಯಲು ಇರಬೇಕಾದ ಅರ್ಹತೆಗಳು :
ಯಶಸ್ವಿನಿ ಕಾರ್ಡನ್ನು ಪಡೆಯ ಬಯಸುವ ಫಲಾನುಭವಿಗಳು ಅರ್ಹ ಗ್ರಾಮೀಣ ಸಹಕಾರ ಸಂಘವೊಂದರಲ್ಲಿ ಸದಸ್ಯರಾಗಿರಬೇಕು. ಸದಸ್ಯರಾಗಿ ಕನಿಷ್ಠ ಮೂರು ತಿಂಗಳಾದರೂ ಕಳೆದಿರಬೇಕು. ಗ್ರಾಮೀಣ ಸಹಕಾರ ಸಂಘ/ ಬ್ಯಾಂಕುಗಳೊಡನೆ ವ್ಯವಹರಿಸುತ್ತಿರುವ ಗ್ರಾಮೀಣ ಸ್ತ್ರೀ ಶಕ್ತಿ ಗುಂಪು, ಸ್ವ-ಸಹಾಯ ಗುಂಪಿನ ಸದಸ್ಯರು ಮತ್ತು ಅವರ ಕುಟುಂಬದ ಎಲ್ಲ ಸದಸ್ಯರು ಯಶಸ್ವಿನಿ ಕಾರ್ಡ್ ಪಡೆಯಲು ಅರ್ಹರಾಗಿರುತ್ತಾರೆ.
ಅರ್ಜಿ ಸಲ್ಲಿಸಲು ಬೇಕಾಗುವ ದಾಖಲೆಗಳು (Documents) :
ರೇಷನ್ ಕಾರ್ಡ್.
ಪ್ರತಿ ಸದಸ್ಯರ ಆಧಾರ್ ಕಾರ್ಡ್ ಪ್ರತಿ.
ಇತ್ತೀಚಿನ ಭಾವಚಿತ್ರ.
ಜಾತಿಯ ಪ್ರಮಾಣ ಪತ್ರದ ಆರ್ ಟಿ ನಂಬರ್ ಸಲ್ಲಿಸಬೇಕು.
ಯಶಸ್ವಿನಿ ಕಾರ್ಡ್‌ಗೆ ಅರ್ಜಿ ಸಲ್ಲಿಸುವುದು ಹೇಗೆ (how to Apply Application)?
ನೀವೇನಾದರೂ ಯಶಸ್ವಿನಿ ಕಾರ್ಡಿಗೆ ಅರ್ಜಿ ಸಲ್ಲಿಸಲು ಅರ್ಹ ಫಲಾನುಭವಿಗಳಾಗಿದ್ದು, ಅರ್ಜಿ ಸಲ್ಲಿಸಲು ಬಯಸಿದರೆ ಮೊದಲು ಯಾವುದಾದರೂ ಒಂದು ಸಹಕಾರಿ ಸಂಘಗಳಲ್ಲಿ ನೀವು ಸದಸ್ಯರಾಗಿರಬೇಕು.
ಅರ್ಜಿ ನಮೂನೆಯನ್ನು ಸಹಕಾರಿ ಸಂಘದ ಸಿಬ್ಬಂದಿ ಮೂಲಕ ಸಲ್ಲಿಸಬೇಕು.
ಅರ್ಜಿ ನಮೂನೆಯೊಂದಿಗೆ, ನಿಮ್ಮ ಆಧಾರ್ ಸಂಖ್ಯೆ, ಪಡಿತರ ಚೀಟಿ ಮತ್ತು ನಿಮ್ಮ ಇತ್ತೀಚಿನ ಎರಡು ಭಾವಚಿತ್ರಗಳನ್ನು ನೀವು ಸಲ್ಲಿಸಬೇಕು.
ಯಾವ ಯಾವ ರೋಗಗಳಿಗೆ ಈ ಯೋಜನೆಯ ಲಾಭ ದೊರೆಯಲಿದೆ :
ಆಯುಷ್ಮಾನ್ ಭಾರತ್ ಆರೋಗ್ಯ ಕಾರ್ಡಿ (Ayushman Bharath Arogya Card) ನಲ್ಲಿ 1,560 ಕಾಯಿಲೆಗಳನ್ನು ಯಶಸ್ವಿನಿ ಯೋಜನೆಯ ಮೂಲಕ ಚಿಕಿತ್ಸೆ ಪಡೆಯಬಹುದು. ಪ್ರಮುಖವಾಗಿ ಹೃದಯದ ಖಾಯಿಲೆ, ಮೂಗು ಹಾಗೂ ಗಂಟಲು ವ್ಯಾದಿಗಳ ಚಿಕಿತ್ಸೆ, ನರರೋಗಕ್ಕೆ, ನಾಯಿ ಅಥವಾ ಹಾವು ಕಚ್ಚಿದರೆ, ಕಿವಿಗೆ ಸಂಬಂಧಿಸಿದ ಚಿಕಿತ್ಸೆ, ನೇತ್ರ ಚಿಕಿತ್ಸೆಗೆ, ನವಜಾತ ಶಿಶುವಿಗೆ ಹೆಚ್ಚಿನ ಪ್ರಮಾಣದ ಚಿಕಿತ್ಸೆ ಲಭ್ಯವಿದೆ ಎಂದಾದರೆ, ಕೃಷಿ ಉಪಕರಣಗಳ ಬಳಸುವ ಸಮಯದಲ್ಲಿ ಏನಾದರೂ ತೀವ್ರ ಗಾಯವಾದರೆ, ನೀರಿನಲ್ಲಿ ಮುಳುಗಿ ಪ್ರಾಣಾಪಾಯದಲ್ಲಿ ಇದ್ದರೆ, ಹಾಗೂ ಸಾಮನ್ಯ ಶಸ್ತ್ರ ಚಿಕಿತ್ಸೆಗಳಿಗೆ ಈ ವಿಮಾ ಯೋಜನೆಯ ಹಣವು ಬರುತ್ತದೆ.
ಈ ಮಾಹಿತಿಗಳನ್ನು ಓದಿ
ದಯವಿಟ್ಟು ಗಮನಿಸಿ: ನೀಡ್ಸ್ ಆಫ್ ಪಬ್ಲಿಕ್ ತನ್ನ ಓದುಗರಿಗೆ ನಿಖರವಾದ ಮತ್ತು ಅಧಿಕೃತ ಮಾಹಿತಿಗಳನ್ನು ಮಾತ್ರ ಪ್ರಕಟಿಸುತ್ತದೆ. ಇಲ್ಲಿ ನಾವು ಯಾವುದೇ ಅನಧಿಕೃತ ಮತ್ತು ಸುಳ್ಳು ಮಾಹಿತಿಯನ್ನು ಬಿತ್ತರಿಸುವುದಿಲ್ಲ