ಭಾಗ್ಯಲಕ್ಷ್ಮಿ ಯೋಜನೆಯಿಂದ ಫಲಾನುಭವಿಗಳಿಗೆ ಗುಡ್‌ನ್ಯೂಸ್. ಫಲಾನುಭವಿಗಳ ಖಾತೆಗೆ ಮೆಚ್ಯುರಿಟಿ ಹಣ ಜಮಾ ಆಗಲಿದೆ.
ಕರ್ನಾಟಕ ರಾಜ್ಯ ಸರ್ಕಾರವು (State government) ಕರ್ನಾಟಕ ಭಾಗ್ಯ ಲಕ್ಷ್ಮಿ ಯೋಜನೆ (Bhagyalakshmi scheme) ಯಡಿ ಹೆಣ್ಣು ಮಕ್ಕಳಿಗೆ ಆರ್ಥಿಕ ನೆರವು ನೀಡುತ್ತದೆ. ಈ ಬೆಂಬಲದ ಪಾವತಿಯನ್ನು ಎಲ್ಲಾ ಅವಶ್ಯಕತೆಗಳನ್ನು ಪೂರೈಸಿದರೆ ತಾಯಿ, ತಂದೆ ಅಥವಾ ಕಾನೂನು ಪಾಲಕರ ಮೂಲಕ ಮಾಡಲಾಗುವುದು. ಬಡತನ ರೇಖೆಗಿಂತ ಕೆಳಗಿರುವ ಕುಟುಂಬಗಳಲ್ಲಿ ಹೆಣ್ಣು ಮಕ್ಕಳ ಜನನವನ್ನು ಉತ್ತೇಜಿಸುವುದು, ಅಷ್ಟೇ ಅಲ್ಲದೆ
ಸಮಾಜದಲ್ಲಿಯೂ ಕೂಡ ಹೆಣ್ಣು ಮಗುವಿನ ಸ್ಥಾನಮಾನವನ್ನು ಹೆಚ್ಚಿಸುವ ನಿಟ್ಟಿನಲ್ಲಿ ಸರ್ಕಾರವು ಈ ಯೋಜನೆಯನ್ನು ಜಾರಿಗೆ ತರಲಾಗಿದೆ. ಹಾಗೆಯೇ ಇದೀಗ ಸರ್ಕಾರವು ಭಾಗ್ಯಲಕ್ಷ್ಮಿ ಯೋಜನೆಯಿಂದ ಫಲಾನುಭವಿಗಳಿಗೆ ಗುಡ್‌ನ್ಯೂಸ್ ನೀಡಿದೆ. ಫಲಾನುಭವಿಗಳ ಖಾತೆಗೆ ಮೆಚ್ಯುರಿಟಿ ಹಣ ಜಮಾ ಆಗಲಿದೆ. ಅದರ ಬಗ್ಗೆ ಸಂಪೂರ್ಣ ಮಾಹಿತಿಯನ್ನು ತಿಳಿದುಕೊಳ್ಳೋಣ ಬನ್ನಿ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ
ಭಾಗ್ಯಲಕ್ಷ್ಮಿ ಯೋಜನೆಯ 2.30 ಲಕ್ಷ ಫಲಾನುಭವಿಗಳಿಗೆ ಮೆಚ್ಯುರಿಟಿ ಹಣ (Maturity fund) ದೊರೆಯಲಿದೆ :
ಬಿಎಸ್ ಯಡಿಯೂರಪ್ಪನವರು (BS Yadiyurappa) ಮುಖ್ಯಮಂತ್ರಿ ಯಾಗಿದ್ದಾಗ ರಾಜ್ಯದಲ್ಲಿ ಭಾಗ್ಯಲಕ್ಷ್ಮೀ ಯೋಜನೆ ಜಾರಿಗೆ ತಂದರು. ಈ ಒಂದು ಯೋಜನೆಯು ಬಹಳಷ್ಟು ಬಡ ಹೆಣ್ಣು ಮಕ್ಕಳಿಗೆ ವರದಾನವಾಗಿದೆ. ಹಾಗೆಯೇ ಇದೀಗ ಭಾಗ್ಯಲಕ್ಷ್ಮೀ ಯೋಜನೆಯ ಅಡಿಯಲ್ಲಿ ಹಣ ಜಮಾ ಮಾಡುತ್ತಿದ ಫಲಾನುಭವಿಗಳಿಗೆ ಗುಡ್‌ನ್ಯೂಸ್ ತಿಳಿದು ಬಂದಿದೆ. ಯೋಜನೆ ಆರಂಭಗೊಂಡು ಇದೀಗ 18 ವರ್ಷ ತುಂಬಿದ್ದು, ಇದೀಗ 2.30 ಲಕ್ಷ ಫಲಾನುಭವಿಗಳಿಗೆ ಮೆಚ್ಯುರಿಟಿ ಹಣ ದೊರೆಯಲಿದೆ.
18 ವರ್ಷ ಪೂರ್ಣಗೊಂಡ ನಂತರ ಬಡ್ಡಿ ಸಹಿತ ಮೆಚೂರಿಟಿ ಹಣ ನೀಡುವ ಯೋಜನೆ ಇದಾಗಿದೆ :
ಬಡತನ ರೇಖೆಗಿಂತ ಕೆಳಗಿನ ಕುಟುಂಬದಲ್ಲಿ ಜನಿಸಿದ ಹೆಣ್ಣು ಮಕ್ಕಳ ಭವಿಷ್ಯಕ್ಕಾಗಿ ಭಾಗ್ಯಲಕ್ಷ್ಮಿ ಯೋಜನೆ ಜಾರಿಗೆ ತಂದಿದ್ದು, ಹೆಣ್ಣು ಮಕ್ಕಳ ಶಿಕ್ಷಣ, ಆರೋಗ್ಯ, ಸರ್ವಾಂಗೀಣ ಅಭಿವೃದ್ಧಿಗೆ ನಿಶ್ಚಿತ ಠೇವಣಿ ಹೂಡಿಕೆ ಮಾಡಿ ಮಗುವಿಗೆ 18 ವರ್ಷ ಪೂರ್ಣಗೊಂಡ ನಂತರ ಬಡ್ಡಿ ಸಹಿತ (with interest) ಮೆಚೂರಿಟಿ ಹಣ ನೀಡುವ ಯೋಜನೆ ಇದಾಗಿದೆ. ರಾಜ್ಯದಲ್ಲಿ ಆರಂಭದಿಂದ ಇದುವರೆಗೆ 34.50 ಲಕ್ಷ ಮಂದಿ ಭಾಗ್ಯ ಲಕ್ಷ್ಮಿ ಬಾಂಡ್ ಪಡೆದುಕೊಂಡಿದ್ದಾರೆ. ಈಗ ಭಾಗ್ಯಲಕ್ಷ್ಮಿ ಸುಕನ್ಯಾ ಹೆಸರಿನಲ್ಲಿ 4.30 ಲಕ್ಷ ಮಂದಿ ಬಾಂಡ್ ಪಡೆದುಕೊಂಡಿದ್ದಾರೆ. ಭಾಗ್ಯಲಕ್ಷ್ಮಿ ಬಾಂಡ್ ಪಡೆದು 18 ವರ್ಷ ಪೂರ್ಣಗೊಂಡ ಹೆಣ್ಣು ಮಕ್ಕಳಿಗೆ ಷರತ್ತುಗಳ ಅನ್ವಯ ಅವರ ಖಾತೆಗಳಿಗೆ ಮೆಚೂರಿಟಿ ಹಣ ವರ್ಗಾವಣೆ ಮಾಡಲಾಗುವುದು.
ಈ ಯೋಜನೆಯ ಫಲಾನುಭವಿಗಳ ನೋಂದಾಯಿತ ಖಾತೆಗೆ ಹಣವನ್ನು ಜಮೆ ಮಾಡಲು ಸಿದ್ದತೆ ನಡೆದಿದೆ :
18 ವರ್ಷಗಳ ಹಿಂದೆ ಜಾರಿಗೆ ಬಂದಿದ್ದ ಭಾಗ್ಯಲಕ್ಷ್ಮಿ ಯೋಜನೆಗೆ ನೋಂದಣಿ ಮಾಡಿಸಿದವರಿಗೆ ಮುಂದಿನ ಏಪ್ರಿಲ್ ಮತ್ತು ಮೇ ತಿಂಗಳ ಅಂತ್ಯಕ್ಕೆ ಮೆಚ್ಯುರಿಟಿಗೆ ಅರ್ಹರಾಗಿದ್ದಾರೆ. ರಾಜ್ಯ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಸಿದ್ಧತೆ ನಡೆಸಿದೆ. ಯೋಜನೆ ಅಂಚೆ ಇಲಾಖೆ (Post office) ವ್ಯಾಪ್ತಿಯಲ್ಲಿದ್ದು, ಅಂಚೆ ಇಲಾಖೆ ಅಧಿಕಾರಿಗಳೊಂದಿಗೆ ಸಭೆ ನಡೆಸಿ ಚರ್ಚೆ ನಡೆಸಲಾಗಿದ್ದು, ಅರ್ಹ ಫಲಾನುಭವಿಗಳ ಪಟ್ಟಿ ಸಿದ್ಧಪಡಿಸಲಾಗಿದೆ. ದಾಖಲೆಗಳನ್ನು ಸಂಗ್ರಹಿಸಲು ಇಲಾಖೆ ಮುಂದಾಗಿದೆ.
ಭಾಗ್ಯಲಕ್ಷ್ಮಿ ಯೋಜನೆಯ ಹಣವನ್ನು ವಾಪಾಸ್ ಪಡೆಯಲು ಹಲವು ನಿಯಮಗಳನ್ನು ಅನುಸರಿಸಬೇಕು :
ಭಾಗ್ಯಲಕ್ಷ್ಮಿ ಯೋಜನೆಯ ಹಣವನ್ನು ವಾಪಾಸ್ ಪಡೆಯಲು ಹಲವು ನಿಯಮಗಳನ್ನು ಸರಕಾರ ಜಾರಿಗೆ ತಂದಿದ್ದು, ಈ ನಿಯಮಗಳು (Rules) ಬಹಳ ಮುಖ್ಯವಾಗಿದ್ದು ಇವುಗಳನ್ನು ಅನುಸರಿದರೆ ಮಾತ್ರ ಭಾಗ್ಯಲಕ್ಷ್ಮಿ ಹಣ ವಾಪಸ್ ದೊರೆಯುತ್ತದೆ.
ಭಾಗ್ಯಲಕ್ಷ್ಮೀ ಯೋಜನೆಯ ಫಲಾನುಭವಿಗಳು ಕಡ್ಡಾಯವಾಗಿ ಬಿಪಿಎಲ್ ಕಾರ್ಡ್ (BPL Card) ಹೊಂದಿರಲೇ ಬೇಕು.
ಅಲ್ಲದೇ ಮೂರು ಮಕ್ಕಳನ್ನು ಮೀರಿರಬಾರದು.
ಯೋಜನೆಯಲ್ಲಿ ನೋಂದಣಿ ಮಾಡಿರುವ ಮಗುವು ಕಡ್ಡಾಯವಾಗಿ 8 ನೇ ತರಗತಿ ವಿದ್ಯಾಭ್ಯಾಸವನ್ನು ಪೂರೈಸಿರಲೇ ಬೇಕು. ಈ ಕುರಿತು ಶಾಲೆಗಳಿಂದ ಅಧಿಕೃತ ದಾಖಲೆಯನ್ನು ನೀಡಬೇಕು.
ಭಾಗ್ಯಲಕ್ಷ್ಮೀ ಯೋಜನೆಯ ಅಡಿಯಲ್ಲಿ ನೋಂದಣಿ ಮಾಡಿಸಿರುವ ಫಲಾನುಭವಿಗಳು ಬಾಲ ಕಾರ್ಮಿಕರಾಗಿರಬಾರದು.
ಅಲ್ಲದೇ ಬಾಲ್ಯ ವಿವಾಹಕ್ಕೆ (Child marriage) ಒಳಗಾಗಿರಬಾರದು ಎನ್ನುವ ನಿಯಮವನ್ನು ಕಡ್ಡಾಯಗೊಳಿಸಲಾಗಿದೆ.
ಒಟ್ಟಿನಲ್ಲಿ ಹದಿನೆಂಟು ವರ್ಷಗಳ ಹಿಂದೆ ಹಣವನ್ನು ಹೂಡಿಕೆ ಮಾಡಿರುವ ಫಲಾನುಭವಿಗಳಿಗೆ ಭಾಗ್ಯಲಕ್ಷ್ಮೀ ಯೋಜನೆ ವರದಾನವಾಗಲಿದೆ.
ಈ ಮಾಹಿತಿಗಳನ್ನು ಓದಿ
ದಯವಿಟ್ಟು ಗಮನಿಸಿ: ನೀಡ್ಸ್ ಆಫ್ ಪಬ್ಲಿಕ್ ತನ್ನ ಓದುಗರಿಗೆ ನಿಖರವಾದ ಮತ್ತು ಅಧಿಕೃತ ಮಾಹಿತಿಗಳನ್ನು ಮಾತ್ರ ಪ್ರಕಟಿಸುತ್ತದೆ. ಇಲ್ಲಿ ನಾವು ಯಾವುದೇ ಅನಧಿಕೃತ ಮತ್ತು ಸುಳ್ಳು ಮಾಹಿತಿಯನ್ನು ಬಿತ್ತರಿಸುವುದಿಲ್ಲ