ಮಹಿಳೆಯರಿಗೆ ಈ ಯೋಜನೆಯಡಿ ಸಿಗಲಿದೆ 5 ಲಕ್ಷ ಬಡ್ಡಿ ರಹಿತ ಸಾಲ.!

IMG 20240911 WA0003

WhatsApp Group Telegram Group
ಮಹಿಳೆಯರು ಆರ್ಥಿಕವಾಗಿ ಮುಂದುವರೆಯಲು ಸಹಕಾರಿಯಾಗಲಿದೆ ಈ ಯೋಜನೆ. ಈ ಯೋಜನೆ ಯಾವುದು?

ಮಹಿಳೆಯರು ಎಲ್ಲಾ ಕ್ಷೇತ್ರದಲ್ಲೂ ಮುಂದಿದ್ದಾರೆ, ಹಾಗೆ ಆರ್ಥಿಕವಾಗಿ ಮುಂದೆ ಬರಬೇಕು ಎಂಬ ಉದ್ದೇಶವನ್ನು ಇಟ್ಟುಕೊಂಡು ನಮ್ಮ ಸರ್ಕಾರ (Government) ಹಲವಾರು ಯೋಜನೆಗಳು ಹಾಗೂ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತಲೇ ಇರುತ್ತದೆ. ಅದೇ ರೀತಿಯಾಗಿ ಪ್ರಧಾನಮಂತ್ರಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ (Central Government) ಜನರಿಗಾಗಿ ಹಲವು ಜನಪ್ರಿಯ ಯೋಜನೆಗಳನ್ನು ಜಾರಿಗೆ ತಂದಿದ್ದು, ಈ ಪೈಕಿ “ಲಕ್ ಪತಿ ದೀದಿ” ಯೋಜನೆಯೂ ಒಂದು. ಅದರಲ್ಲೂ ಪ್ರಸ್ತುತ ಸಾಲಿನ ಮಧ್ಯಂತರ ಬಜೆಟ್ ನಲ್ಲಿ ಮಹಿಳೆಯರಿಗಾಗಿ ಲಖ್‌ಪತಿ ದೀದಿ ಯೋಜನೆಯನ್ನು ವಿತ್ತ ಸಚಿವೆ ಪ್ರಸ್ತಾಪಿಸಿದ್ದು, 3 ಕೋಟಿ ಮಹಿಳೆಯರಿಗೆ ಈ ಯೋಜನೆಯನ್ನು ತಲುಪಿಸುವ ಗುರಿ ಹೊಂದಿದೆ ಎಂದು ಹೇಳಿದ್ದಾರೆ. ಲಖ್‌ಪತಿ ದೀದಿ ಯೋಜನೆಗೆ ಅರ್ಜಿ ಸಲ್ಲಿಸುವದು ಹೇಗೆ? ಯಾವೆಲ್ಲಾ ದಾಖಲೆಗಳು ಬೇಕು? ಎಂಬ ಸಂಪೂರ್ಣ ಮಾಹಿತಿಯನ್ನು ತಿಳಿದುಕೊಳ್ಳೋಣ ಬನ್ನಿ. ಸೆಂಟ್ರಲ್ ಬ್ಯಾಂಕನಲ್ಲಿ ಖಾಲಿ ಹುದ್ದೆಗಳ ನೇರ ನೇಮಕಾತಿ! ಅರ್ಜಿ ಹಾಕಿ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ

ಏನಿದು ಲಕ್ ಪತಿ ದೀದಿ ಯೋಜನೆ (Lakhpati Didi Scheme) :

ದೇಶದ 9 ಕೋಟಿ ಮಹಿಳೆಯರು ಮಹಿಳಾ ಸ್ವಯಂ ಸ್ವಸಹಾಯ ಗುಂಪುಗಳೊಂದಿಗೆ ಸಂಪರ್ಕದಲ್ಲಿದ್ದಾರೆ. ಇದರಿಂದ ಬಹಳಷ್ಟು ಸಹಾಯಗಳನ್ನು ಪಡೆದುಕೊಂಡು ಸ್ವಾವಲಂಬಿಗಳಾಗಿ ಬದುಕುತ್ತಿದ್ದಾರೆ. ಈ ಸ್ವಸಹಾಯ ಗುಂಪುಗಳ ಮೂಲಕ ಮಹಿಳೆಯರ ಆದಾಯ ಹೆಚ್ಚಿಸುವುದಕ್ಕಾಗಿ ಲಕ್ ಪತಿ ದೀದಿ ಯೋಜನೆಯನ್ನು ಜಾರಿಗೆ ತರಲಾಗಿದೆ. ಮಹಿಳೆಯರನ್ನು ಆರ್ಥಿಕವಾಗಿ ಹಾಗೂ ಉದ್ಯಮಶೀಲ ಕ್ಷೇತ್ರದಲ್ಲಿ ಅವರನ್ನು ಮುಂದೆ ತರುವುದು ಲಕ್ ಪತಿ ದೀದಿ ಯೋಜನೆಯ ಮುಖ್ಯ ಉದ್ದೇಶವಾಗಿದೆ.

ಮಹಿಳೆಯರಿಗಾಗಿ ಸ್ವಯಂ ಉದ್ಯೋಗ ಕಲ್ಪಿಸಿ ಬಡತನ ನಿರ್ಮೂಲನೆ ಮಾಡಿ ಮಹಿಳೆಯರನ್ನು ಆರ್ಥಿಕವಾಗಿ ಸಬಲರಾಗಿಸಬೇಕೆಂಬ ನಿಟ್ಟಿನಲ್ಲಿ ಪ್ರಧಾನಮಂತ್ರಿ ನರೇಂದ್ರ ಮೋದಿಯವರು 2023ರ ಆಗಸ್ಟ್ 15ರ ಸ್ವಾತಂತ್ರ್ಯ ದಿನದ ಭಾಷಣದಲ್ಲಿ, ಮಹಿಳೆಯರಿಗೆ ಸಣ್ಣ ಉದ್ಯಮಗಳನ್ನು ಪ್ರಾರಂಭಿಸಲು ಪ್ರೋತ್ಸಾಹಿಸುವ ಉದ್ದೇಶದಿಂದ ಲಕ್ ಪತಿ ದೀದಿ ಯೋಜನೆಯನ್ನು ಘೋಷಿಸಿದರು. ಈ ಯೋಜನೆಯಡಿ ಮಹಿಳೆಯರಿಗಾಗಿ ಕೌಶಲ್ಯ ತರಬೇತಿಯನ್ನು (Skill training) ಸಹ ನೀಡಲಾಗುತ್ತದೆ.

ಲಕ್ ಪತಿ ದೀದಿ ಯೋಜನೆಯಿಂದ ಆಗುವ ಸಹಾಯ:

ಈ ಯೋಜನೆಯಡಿ ಸ್ವಂತ ಉದ್ಯಮವನ್ನು ಆರಂಭಿಸುವ ಅಭಿಲಾಷೆಯನ್ನು ಇಟ್ಟುಕೊಂಡಿರುವ ಮಹಿಳೆಯರಿಗೆ ಒಂದು ಲಕ್ಷ ದಿಂದ ಒಂದು ಕೋಟಿಯವರೆಗೂ ಬಡ್ಡಿ ರಹಿತ ಸಾಲವನ್ನು ನೀಡುತ್ತದೆ. ಅದರಲ್ಲೂ ಸುಲಭವಾಗಿ 5 ಲಕ್ಷ ರೂ.ಗಳ ವರೆಗೆ ಸಾಲ(loan)ವನ್ನು ಕೂಡ ಪಡೆದುಕೊಳ್ಳಬಹುದು.

ಲಖ್‌ಪತಿ ದೀದಿ ಯೋಜನೆಯಲ್ಲಿ ಸಿಗುವ ಪ್ರಯೋಜನಗಳು:

ಸ್ವಯಂ ಸ್ವಸಹಾಯ ಗುಂಪು ನೆರವಿನಿಂದ ಮಹಿಳೆಯರು ಸಣ್ಣ ಪುಟ್ಟ ಕೌಶಲ್ಯಾಭಿವೃದ್ಧಿ ತರಬೇತಿ ಪಡೆಯುತ್ತಾರೆ. ಒಳ್ಳೆಯ ಕೌಶಲ್ಯಗಳನ್ನು ಬೆಳೆಸಿಕೊಂಡು ಸಂಪಾದನೆ ಮಾಡುವ ದಾರಿ ಕಂಡುಕೊಳ್ಳುತ್ತಾರೆ. ಕೇವಲ ಕೌಶಲ್ಯ ತರಬೇತಿಗೆ ಮಾತ್ರ ಸೀಮಿತವಾಗಿಲ್ಲ ಇದರ ಹೊರತಾಗಿಯೂ ಸಣ್ಣ ಉದ್ದಿಮೆಗಳಿಗೆ ತೊಡಗಿಸಿಕೊಳ್ಳಲು ಆರ್ಥಿಕ ತಿಳುವಳಿಕೆ ಹೆಚ್ಚಿಸುವ ಸಾಕ್ಷರತಾ ಕಾರ್ಯಾಗಾರವನ್ನು ನಡೆಸಲಾಗುತ್ತದೆ. ಸಾಲ ಸೌಲಭ್ಯ, ವಿಮೆ, ಕೌಶಲ್ಯ ಅಭಿವೃದ್ಧಿ, ಆರ್ಥಿಕ ಪ್ರೋತ್ಸಾಹ ಸೇರಿದಂತೆ ಹಲವು ಹೆಚ್ಚುವರಿ ಪ್ರಯೋಜನಗಳನ್ನು ಪಡೆಯಬಹುದು. ಆದರೆ ಈ ಯೋಜನೆಯ ಫಲಾನುಭವಿಗಳಾಗ ಬಯಸುವ ಮಹಿಳೆಯರು ಯಾವುದಾದರೂ ಸ್ವ ಸಹಾಯ ಗುಂಪಿನ ಸದಸ್ಯರಾಗಿರಬೇಕು.

ಲಖ್‌ಪತಿ ದೀದಿ ಯೋಜನೆಗೆ ಅರ್ಜಿ ಸಲ್ಲಿಸಲು ಇರಬೇಕಾದ ಅರ್ಹತೆಗಳು (Qualifications) :

ಈ ಯೋಜನೆ ಮಹಿಳೆಯರಿಗೆ ಮಾತ್ರ.
ಮಹಿಳಾ ಅರ್ಜಿದಾರರು, ತಾವು ಅರ್ಜಿ ಸಲ್ಲಿಸುವ ರಾಜ್ಯದ ಕಾಯಂ ನಿವಾಸಿಯಾಗಿರಬೇಕು.
18 ವರ್ಷಕ್ಕಿಂತ ಮೇಲ್ಪಟ್ಟ ಮಹಿಳೆಯರು ಮಾತ್ರ ಈ ಯೋಜನೆ ಅಡಿಯಲ್ಲಿ ಸಾಲವನ್ನು ಪಡೆದುಕೊಳ್ಳಬಹುದು.
ಮಹಿಳೆಯ ಕುಟುಂಬದ ವಾರ್ಷಿಕ ಆದಾಯ 3 ಲಕ್ಷ ರೂಪಾಯಿ ಮೀರಬಾರದು.
ಅರ್ಜಿದಾರರ ಕುಟುಂಬದಲ್ಲಿ ಯಾರೂ ಸರ್ಕಾರಿ ಉದ್ಯೋಗದಲ್ಲಿ ಇರಬಾರದು.
ಸ್ವಂತ ಉದ್ಯಮವನ್ನು ಪ್ರಾರಂಭಿಸುವಂತಹ ಕೌಶಲ್ಯ ಹೊಂದಿರಬೇಕು.
ಮುಖ್ಯವಾಗಿ ಸ್ವಸಹಾಯ ಸಂಘಗಳಲ್ಲಿ ಮಹಿಳೆಯರು ಈಗಾಗಲೇ ಸದಸ್ಯರಾಗಿರಬೇಕು.

ಲಖ್‌ಪತಿ ದೀದಿ ಯೋಜನೆಗೆ ಅರ್ಜಿ ಸಲ್ಲಿಸಲು ಬೇಕಾಗುವ ದಾಖಲಾತಿಗಳು (Documents) :

ವಸತಿ ಪ್ರಮಾಣ ಪತ್ರ.
ಆಧಾರ್ ಕಾರ್ಡ್.
ಪಡಿತರ ಚೀಟಿ.
ಆದಾಯ ಪ್ರಮಾಣ ಪತ್ರ.
ಬ್ಯಾಂಕ್ ಖಾತೆ.
ಮೊಬೈಲ್ ಸಂಖ್ಯೆ.
ಪ್ಯಾನ್ ಕಾರ್ಡ್.
ಸ್ವಸಹಾಯ ಸಂಘದಲ್ಲಿ ಇರುವಂತಹ ಸದಸ್ಯತ್ವದ ಸರ್ಟಿಫಿಕೇಟ್.

ಲಕ್‌ಪತಿ ದೀದಿ ಯೋಜನೆಗೆ ಅರ್ಜಿ ಸಲ್ಲಿಸುವುದು ಹೇಗೆ?

ಸ್ವಸಹಾಯ ಗುಂಪಿಗೆ ಸೇರಿಕೊಳ್ಳದಿದ್ದರೆ ಮೊದಲು ಸ್ಥಳೀಯ ಸ್ವಸಹಾಯ ಗುಂಪಿಗೆ ಸೇರಿಕೊಳ್ಳ ಬೇಕು.
ಲಕ್‌ಪತಿ ದೀದಿ ಯೋಜನೆಗಾಗಿ ಅರ್ಜಿ ನಮೂನೆಯನ್ನು ಅತ್ತಿರದ ಅಂಗನವಾಡಿ ಕೇಂದ್ರದಿಂದ ಪಡೆದು ನಿಮ್ಮ ವಿವರಗಳನ್ನು ಭರ್ತಿ ಮಾಡಿಕೊಳ್ಳಬೇಕು.
ನಿಗದಿತ ಕಚೇರಿ ಅಥವಾ ಅಂಗನವಾಡಿ ಕೇಂದ್ರಗಳಿಗೆ ಅಗತ್ಯವಿರುವ ಎಲ್ಲಾ ದಾಖಲೆಗಳೊಂದಿಗೆ ಅರ್ಜಿ ನಮೂನೆಯನ್ನು ಸಲ್ಲಿಸಬೇಕು.
ಅರ್ಜಿಯನ್ನು ಪರಿಶೀಲಿಸಿದ ನಂತರ ಅರ್ಜಿಯ ಅನುಮೋದನೆಯ ನಿರ್ಧಾರವನ್ನು ಎಸ್‌ಎಂಎಸ್ (SMS) ಮತ್ತು ಇ-ಮೇಲ್ ಮೂಲಕ ತಿಳಿಸಲಾಗುತ್ತದೆ.
ಆಯ್ಕೆಯ ನಂತರ ಕಾರ್ಯಾಗಾರಗಳು ಮತ್ತು ಇತರ ತರಬೇತಿ ಕಾರ್ಯಕ್ರಮಗಳಿಗೆ ಹಾಜರಾಗಬೇಕಾಗುತ್ತದೆ.
ಬೇಕಾದ ತರಬೇತಿಗಳನ್ನು ಪಡೆದುಕೊಂಡ ನಂತರ ಹಣಕಾಸಿನ ನೆರವು ಸೇರಿದಂತೆ ಹಲವು ಪ್ರಯೋಜನಗಳನ್ನು ಒದಗಿಸಲಾಗುತ್ತದೆ.

ಈ ಮಾಹಿತಿಗಳನ್ನು ಓದಿ

ದಯವಿಟ್ಟು ಗಮನಿಸಿ: ನೀಡ್ಸ್ ಆಫ್ ಪಬ್ಲಿಕ್ ತನ್ನ ಓದುಗರಿಗೆ ನಿಖರವಾದ ಮತ್ತು ಅಧಿಕೃತ ಮಾಹಿತಿಗಳನ್ನು ಮಾತ್ರ ಪ್ರಕಟಿಸುತ್ತದೆ. ಇಲ್ಲಿ ನಾವು ಯಾವುದೇ ಅನಧಿಕೃತ ಮತ್ತು ಸುಳ್ಳು ಮಾಹಿತಿಯನ್ನು ಬಿತ್ತರಿಸುವುದಿಲ್ಲ

 

WhatsApp Group Join Now
Telegram Group Join Now

Related Posts

Leave a Reply

Your email address will not be published. Required fields are marked *

error: Content is protected !!