Lunar Eclipse 2024: ಸೆಪ್ಟೆಂಬರ್ ತಿಂಗಳು ಚಂದ್ರ ಗ್ರಹಣ, ದಿನಾಂಕ, ಸಮಯ ಕಂಪ್ಲೀಟ್ ಡೀಟೇಲ್ಸ್..!

IMG 20240912 WA0006

ಸೆಪ್ಟೆಂಬರ್ 18ರಂದು ಈ ವರ್ಷದ ಎರಡನೇ ಚಂದ್ರ ಗ್ರಹಣ ಸಂಭವಿಸಲಿದೆ. 8 ರಾಶಿಯವರಿಗೆ ಅದೃಷ್ಟ ಒದಗಿ ಬರಲಿದೆ.

ಭಾರತದಲ್ಲಿ ಜನರು ಆಚಾರ ವಿಚಾರಗಳನ್ನು ಹೆಚ್ಚಾಗಿ ಪಾಲಿಸುತ್ತಾರೆ. ಆದ್ದರಿಂದ ಕೆಲವೊಂದು ಪೂಜೆ ಪುನಸ್ಕಾರಗಳು, ಹಬ್ಬ ಹರಿದಿನಗಳು ಜನರಿಗೆ ಸಂತೋಷ ಮತ್ತು ಲಾಭವನ್ನು ತಂದುಕೊಟ್ಟರೆ. ಇನ್ನು ಕೆಲವೊಂದು ವಿಷಯಗಳು ಅಥವಾ ಕೆಲವು ಸಂದರ್ಭಗಳು ಕಷ್ಟದ ಪರಿಸ್ಥಿತಿಗಳನ್ನು ಎದುರಿಸುವಂತೆ ಮಾಡಿಬಿಡುತ್ತವೆ. ಅದರಲ್ಲೂ ವೈದಿಕ ಜ್ಯೋತಿಷ್ಯದಲ್ಲಿ (Astrology) ಗ್ರಹಣಗಳಿಗೆ ವಿಶೇಷ ಪ್ರಾಮುಖ್ಯತೆ ಇದೆ. ಏಕೆಂದರೆ ಗ್ರಹಣ ಕೆಲವು ರಾಶಿಯವರ ಜೀವನದಲ್ಲಿ ಸಾಕಷ್ಟು ಬದಲಾವಣೆಗಳನ್ನು ತರುತ್ತವೆ. ಈ ವರ್ಷದ ಮೊದಲ ಚಂದ್ರಗ್ರಹಣ(lunar eclipse)ವು ಹಿಂದೂ ಕ್ಯಾಲೆಂಡರ್ ಪ್ರಕಾರ ಮಾರ್ಚ್ 25ರಂದು ಸಂಭವಿಸಿತು. ಈ ವರ್ಷದ ಎರಡನೇ ಚಂದ್ರ ಗ್ರಹಣ ಇದೇ ತಿಂಗಳು ಅಂದರೆ ಸೆಪ್ಟೆಂಬರ್ ತಿಂಗಳಿನಲ್ಲಿ ಸಂಭವಿಸಲಿದೆ. ಈ ಗ್ರಹಣವು ಕೆಲವು ರಾಶಿಯವರಿಗೆ ಅದೃಷ್ಟವನ್ನು ತಂದುಕೊಡುತ್ತದೆ ಎಂದು ಜ್ಯೋತಿಷಿಗಳು (Astrologers) ಹೇಳುತ್ತಾರೆ. ವರ್ಷದ ಎರಡನೇ ಚಂದ್ರ ಗ್ರಹಣ ಯಾವ ದಿನದಂದು ನಡೆಯುತ್ತದೆ? ಯಾವ ಯಾವ ರಾಶಿಯವರಿಗೆ ಅದೃಷ್ಟವನ್ನು ತಂದು ಕೊಡುತ್ತದೆ ಎಂಬ ಸಂಪೂರ್ಣ ಮಾಹಿತಿಯನ್ನು ತಿಳಿದುಕೊಳ್ಳೋಣ ಬನ್ನಿ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ

ವರ್ಷದ ಎರಡನೇ ಚಂದ್ರಗ್ರಹಣ ಯಾವಾಗ ಸಂಭವಿಸಲಿದೆ?

ಭಾದ್ರಪದ ಮಾಸದ ಹುಣ್ಣಿಮೆ (full moon) ಯಂದು ಈ ವರ್ಷದ ಎರಡನೇ ಚಂದ್ರ ಗ್ರಹಣ ಸಂಭವಿಸಲಿದೆ. ಸೆಪ್ಟೆಂಬರ್ ತಿಂಗಳ 18ರಂದು ಗ್ರಹಣ ಸಂಭವಿಸಲಿದ್ದು, ಬೆಳಿಗ್ಗೆ 6:11 ಕ್ಕೆ ಪ್ರಾರಂಭವಾಗುತ್ತದೆ ಮತ್ತು ಸೋಮವಾರ ಬೆಳಿಗ್ಗೆ 10:17 ಕ್ಕೆ ಕೊನೆಗೊಳ್ಳುತ್ತದೆ. ವೈದಿಕ ಜ್ಯೋತಿಷ್ಯದಲ್ಲಿ ಚಂದ್ರ ಗ್ರಹಣವು ವಿಶೇಷ ಪ್ರಾಮುಖ್ಯತೆಯನ್ನು ಹೊಂದಿದೆ. ಅಂದಹಾಗೆ ವರ್ಷದ ಎರಡನೆಯ ಚಂದ್ರಗ್ರಹಣವೂ ಭಾರತದಲ್ಲಿ ಗೋಚರಿಸುವುದಿಲ್ಲ.

ವರ್ಷದ ಎರಡನೆಯ ಚಂದ್ರಗ್ರಹಣವು ಭಾರತದಲ್ಲಿ ಏಕೆ ಗೋಚರಿಸುವುದಿಲ್ಲ:

ಹೌದು ಈ ಬಾರಿಯ ಚಂದ್ರಗ್ರಹಣವು ಭಾರತದಲ್ಲಿ ಗೋಚರಿಸುವುದಿಲ್ಲ. ಏಕೆಂದರೆ ಸಂಪೂರ್ಣ ಗ್ರಹಣದ ಸಮಯದಲ್ಲಿ ಚಂದ್ರನು (Moon) ಆಕಾಶದ ಕೆಳಗೆ ಇರುವುದರಿಂದ ಗ್ರಹಣ ಭಾರತದಲ್ಲಿ ಗೋಚರಿಸುವುದಿಲ್ಲ. ಈ ಬಾರಿಯ ಚಂದ್ರಗ್ರಹಣ  ಭಾರತದಲ್ಲಿ ಗೋಚರಿಸದಿದ್ದರೂ ಕೂಡ ಕೆಲವು ರಾಶಿಗಳ ಮೇಲೆ ಇದು ಪರಿಣಾಮ ಬೀರಲಿದೆ.

ವರ್ಷದ ಎರಡನೆಯ ಚಂದ್ರಗ್ರಹಣ ಯಾವ ದೇಶದಲ್ಲಿ ಗೋಚರಿಸುತ್ತದೆ:

ಗ್ರಹಣ ಸಂಭವಿಸುವ ಸಂದರ್ಭದಲ್ಲಿ ಚಂದ್ರನು ಆಕಾಶದ ಕೆಳಗೆ ಇರುವುದರಿಂದ ಭಾರತದಲ್ಲಿ ಚಂದ್ರ ಗ್ರಹಣವಾಗುವುದು ಗೋಚರಿಸುವುದಿಲ್ಲ. ಆದರೆ ಯುರೋಪ್, ಏಷ್ಯಾದ ಬಹುಭಾಗ, ಆಫ್ರಿಕಾ, ಉತ್ತರ ಅಮೆರಿಕಾ, ದಕ್ಷಿಣ ಅಮೆರಿಕಾ, ಪೆಸಿಫಿಕ್, ಅಟ್ಲಾಂಟಿಕ್, ಹಿಂದೂ ಮಹಾಸಾಗರ, ಆರ್ಕ್ಟಿಕ್ ಮತ್ತು ಅಂಟಾರ್ಕ್ಟಿಕಾ ಈ ಪ್ರದೇಶಗಳಲ್ಲಿ ಚಂದ್ರಗ್ರಹಣವಾಗುವುದು ಗೋಚರಿಸುತ್ತದೆ.

ಯಾವ ಯಾವ ರಾಶಿಯವರಿಗೆ ವರ್ಷದ ಎರಡನೇ ಚಂದ್ರ ಗ್ರಹಣ ಒಳಿತನ್ನು ಮಾಡಲಿದೆ :

ಒಟ್ಟು ನಾಲ್ಕು ರಾಶಿಯವರಿಗೆ ಈ ವರ್ಷದ ಎರಡನೇ ಚಂದ್ರ ಗ್ರಹಣ ಶುಭ ಸುದ್ದಿಯನ್ನು ನೀಡುತ್ತಿದೆ. ಅವುಗಳೆಂದರೆ
ವೃಷಭ ರಾಶಿ
ಮೇಷ ರಾಶಿ
ಕಟಕ ರಾಶಿ
ಕನ್ಯಾ ರಾಶಿ
ತುಲಾ ರಾಶಿ
ಧನಸ್ಸು ರಾಶಿ
ಸಿಂಹ ರಾಶಿ
ವೃಶ್ಚಿಕ ರಾಶಿ

ವೃಷಭ ರಾಶಿ(Taurus) :

ವರ್ಷದ ಎರಡನೇ ಚಂದ್ರ ಗ್ರಹಣವು ವೃಷಭ ರಾಶಿಯವರಿಗೆ ಶುಭ ಗಳಿಗೆಯನ್ನು ತರಲಿದ್ದು, ಹಲವು ರೀತಿಯ ಒಳ್ಳೆಯ ಕೆಲಸಗಳು ಈ ಸಂದರ್ಭದಲ್ಲಿ ಸಂಭವಿಸುತ್ತವೆ. ದೀರ್ಘಕಾಲದಿಂದ ಬಾಕಿ ಉಳಿದಿರುವಂತಹ ಕೆಲಸಗಳು ಪೂರ್ಣಗೊಳ್ಳುತ್ತವೆ. ಹಾಗೂ ಇದರ ಜೊತೆಯಲ್ಲಿ ಆರ್ಥಿಕ ಲಾಭದಾಯವನ್ನು ಕೂಡ ಈ ರಾಶಿಯವರು ಕಾಣಬಹುದು. ಈ ರಾಶಿಯವರ ಜೀವನ ಮಟ್ಟವು ಸುಧಾರಿಸುವುದರ ಜೊತೆಗೆ ದಾಂಪತ್ಯ ಜೀವನದಲ್ಲಿ ಸಾಮರಸ್ಯ ಹೆಚ್ಚಾಗುತ್ತದೆ. ಚಂದ್ರಗ್ರಹಣವು ಆರೋಗ್ಯದ ಮೇಲೆ ಯಾವುದೇ ಋಣಾತ್ಮಕ ಪರಿಣಾಮ ಬೀರುವುದಿಲ್ಲ.

ಮೇಷ ರಾಶಿ(Aries) :

ಈ ರಾಶಿಯವರು ಸ್ವಲ್ಪ ಪ್ರಯತ್ನ ಪಟ್ಟರೆ ಕೆಲವೊಂದು ಪ್ರಮುಖ ಕಾರ್ಯಗಳು ಹಾಗೂ ವ್ಯವಹಾರದಲ್ಲಿ ಲಾಭವನ್ನು ಕೂಡ ಗಳಿಸಬಹುದು. ಗೌರವ ಹಾಗೂ ಗಣ್ಯರಿಂದ ಮನ್ನಣೆಯನ್ನು ಪಡೆಯುವುದರ ಜೊತೆಗೆ ಆದಾಯ ಮತ್ತು ಆರೋಗ್ಯದಲ್ಲಿ ಸಮತೋಲನವನ್ನು ಕಾಪಾಡಿಕೊಳ್ಳಬಹುದು. ಬುದ್ಧಿವಂತಿಕೆಯಿಂದ ಹಾಗೂ ಎಚ್ಚರಿಕೆಯಿಂದ ವ್ಯಾಪಾರದಲ್ಲಿ ಮುನ್ನುಗ್ಗಬೇಕಾಗುತ್ತದೆ. ಅಧಿಕಾರಿಗಳು ನಿಮ್ಮನ್ನು ನಂಬಿ ಉದ್ಯೋಗದಲ್ಲಿ ಹೊಸ ಜವಾಬ್ದಾರಿಗಳನ್ನು ಕೂಡ ನೀಡಲಿದ್ದಾರೆ ಆದ್ದರಿಂದ ಬಹಳ ಎಚ್ಚರಿಕೆಯಿಂದ ಮುನ್ನಡೆಯಬೇಕು.

ಕಟಕ ರಾಶಿ(Cancer) :

ಕಟಕ ರಾಶಿಯವರಿಗೆ ಹಣಕಾಸಿನ ಸಮಸ್ಯೆಗಳನ್ನು ಪರಿಹರಿಸಿಕೊಳ್ಳುವುದರ ಜೊತೆಗೆ ಆದಾಯದ ಕಡೆಯೂ ಕೂಡ ಗಮನ ಹರಿಸಬೇಕಾಗುತ್ತದೆ. ಹಾಗೂ ವ್ಯವಹಾರದಲ್ಲಿ ಇರುವಂತಹ ಕೆಲವೊಂದು ಅಷ್ಟು ಸಮಸ್ಯೆಗಳು ಬಗೆಹರಿಯಬಹುದು. ಅನಿರೀಕ್ಷಿತವಾಗಿ ಸ್ನೇಹಿತರನ್ನು ಕೂಡ ಭೇಟಿ ಮಾಡುತ್ತಾರೆ. ಸಂತೋಷ ಹಾಗೂ ಆರೋಗ್ಯ ವಾತಾವರಣ ಮನೆ ಮಾಡಿರುತ್ತದೆ.

ಕನ್ಯಾ ರಾಶಿ(Virgo) :

ಕನ್ಯಾ ರಾಶಿಯವರಿಗೆ ಹಲವು ದಿನಗಳಿಂದ ಮಾಡುತ್ತಿರುವ ಪ್ರಯತ್ನಕ್ಕೆ ಪ್ರತಿಫಲ ದೊರೆಯಲಿದೆ. ಹಾಗೂ ವಿದೇಶದಲ್ಲಿ ನೆಲೆಸಿರುವಂತಹ ಮಕ್ಕಳಿಂದ ಅನಿರೀಕ್ಷಿತ ಕರೆ  ಬರಲಿದೆ. ಸಕಾಲಕ್ಕೆ ಪೂರ್ಣಗೊಳ್ಳುತ್ತವೆ. ಉದ್ಯೋಗದಲ್ಲಿ ಹಾಗೂ ಕುಟುಂಬದಲ್ಲಿ ಶುಭ ಬೆಳವಣಿಗೆಗಳು ಸಂಭವಿಸಲಿವೆ.

ತುಲಾ ರಾಶಿ(Libra)  :

ತುಲಾ ರಾಶಿಯವರಿಗೆ ವ್ಯಾಪಾರದಲ್ಲಿ ತೃಪ್ತಿಕರವಾದ ಅಂತಹ ಮುನ್ನಡೆ ದೊರೆಯಲಿದ್ದು, ಆದಾಯ ಮತ್ತು ಆರೋಗ್ಯದ ಮೇಲೆ ಪರಿಣಾಮ ಬೀರುವುದಿಲ್ಲ. ವಿದ್ಯಾರ್ಥಿಗಳಿಗೆ ಅನಿರೀಕ್ಷಿತ ಪ್ರಗತಿ ದೊರೆಯುತ್ತದೆ. ಹಣಕಾಸಿನ ಸಮಸ್ಯೆಗಳ ಒತ್ತಡವು ಬಹಳವಾಗಿ ಕಡಿಮೆಯಾಗುವುದರ ಜೊತೆಗೆ ದಾಂಪತ್ಯದ ಕಲಹಗಳು ದೂರವಾಗಲಿದೆ. ಆದರೆ ಈ ರಾಶಿಯವರು ಕೆಲವು ಮುನ್ನೆಚ್ಚರಿಕೆಗಳನ್ನು ತೆಗೆದುಕೊಳ್ಳಬೇಕಾಗುತ್ತದೆ.

ಧನಸ್ಸು ರಾಶಿ(grant) :

ಈ ವರ್ಷದ ಎರಡನೇ ಚಂದ್ರ ಗ್ರಹಣವು ಧನಸ್ಸು ರಾಶಿಯವರಿಗೆ ಉತ್ತಮವಾಗಿರುತ್ತದೆ. ಅನಿರೀಕ್ಷಿತವಾಗಿ ಉದ್ಯಮಗಳಿಗೆ ಲಾಭವು ದೊರೆಯುತ್ತದೆ. ಹಾಗೂ ಉದ್ಯೋಗಿಗಳಿಗೆ ಸಂಬಳ ಹೆಚ್ಚಳದ ಬಗ್ಗೆ ಒಳ್ಳೆಯ ಸುದ್ದಿ ಸಿಗಬಹುದು. ಸಂಬಂಧಿಕರ ಆಗಮನದಿಂದ ಮನೆಯಲ್ಲಿ ಹಬ್ಬದ ವಾತಾವರಣ ನಿರ್ಮಾಣವಾಗುತ್ತದೆ.

ಸಿಂಹ ರಾಶಿ(Leo) :

ವರ್ಷದ ಕೊನೆಯ ಚಂದ್ರಗ್ರಹಣವು ಈ ರಾಶಿಯ ಜನರಿಗೆ ಪ್ರಯೋಜನಕಾರಿಯಾಗಿದ್ದು, ಜೀವನದಲ್ಲಿ ಸಂತೋಷ ಮತ್ತು ಶಾಂತಿ ಇರುತ್ತದೆ. ಇದರಿಂದ ಮನಸ್ಸಿಗೆ ತೃಪ್ತಿ ಸಿಗುತ್ತದೆ. ಮದುವೆಯ ಸಮಸ್ಯೆಗಳು, ಮಕ್ಕಳ ಸಮಸ್ಯೆಗಳಿಗೆ ಮುಕ್ತಿ ದೊರೆಯುತ್ತದೆ.

ವೃಶ್ಚಿಕ ರಾಶಿ(Scorpio) :

ಈ ರಾಶಿಯ ಜನರು ವ್ಯವಹಾರದಲ್ಲಿ ಮಾತ್ರವಲ್ಲದೆ ಜೀವನದಲ್ಲಿಯೂ ಕೂಡ ಉತ್ತಮ ಯಶಸ್ಸನ್ನು ಸಾಧಿಸುತ್ತಾರೆ. ಬಹಳ ದಿನದಿಂದ ಕಾಡುತ್ತಿರುವಂತಹ ಆರೋಗ್ಯ ಸಮಸ್ಯೆಗಳು ಸುಧಾರಿಸುತ್ತವೆ.

ಈ ಮಾಹಿತಿಗಳನ್ನು ಓದಿ

 


ದಯವಿಟ್ಟು ಗಮನಿಸಿ: ನೀಡ್ಸ್ ಆಫ್ ಪಬ್ಲಿಕ್ ತನ್ನ ಓದುಗರಿಗೆ ನಿಖರವಾದ ಮತ್ತು ಅಧಿಕೃತ ಮಾಹಿತಿಗಳನ್ನು ಮಾತ್ರ ಪ್ರಕಟಿಸುತ್ತದೆ. ಇಲ್ಲಿ ನಾವು ಯಾವುದೇ ಅನಧಿಕೃತ ಮತ್ತು ಸುಳ್ಳು ಮಾಹಿತಿಯನ್ನು ಬಿತ್ತರಿಸುವುದಿಲ್ಲ

WhatsApp Group Join Now
Telegram Group Join Now

Related Posts

Leave a Reply

Your email address will not be published. Required fields are marked *

error: Content is protected !!