ಕಮ್ಮಿ ಬೆಲೆ 34 ಕಿ.ಮೀ ಮೈಲೇಜ್..ಜನಪ್ರಿಯ ಕಾರ್ ಖರೀದಿಗೆ ಮುಗಿಬಿದ್ದ ಜನ.!

IMG 20240917 WA0000

ಮಾರುತಿ ಸುಜುಕಿ (Maruti Suzuki) ದೇಶದ ಅತಿದೊಡ್ಡ ಕಾರು ತಯಾರಕ ಕಂಪನಿಯಾಗಿ ಮನೆ ಮಾತಾಗಿದೆ. ಈ ಹಿಂದೆ ಅನೇಕ ಜನಪ್ರಿಯ ಮಾದರಿಗಳನ್ನು ಪರಿಚಯಿಸಿದ ಮಾರುತಿ, ಇದೀಗ ಸೆಲೆರಿಯೊ (Celerio) ಹ್ಯಾಚ್‌ಬ್ಯಾಕ್‌ನೊಂದಿಗೆ ಮತ್ತೆ ಗಮನ ಸೆಳೆಯುತ್ತಿದೆ. ಆಕರ್ಷಕ ವಿನ್ಯಾಸ ಮತ್ತು ಉತ್ತಮ ಮೈಲೇಜ್‌ ನೀಡುವ ಈ ಕಾರು ಆಗಸ್ಟ್ 2024ರಲ್ಲಿ ಮಾರಾಟದಲ್ಲಿ ಪ್ರಮುಖ ಸಾಧನೆ ಮಾಡಿದೆ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ

ಮಾರುತಿ ಸೆಲೆರಿಯೊ (Maruti Celerio):
ws5hbua 1541093

ಮಾರಾಟದ ಪ್ರಗತಿ 2024ರ ಆಗಸ್ಟ್ ತಿಂಗಳಲ್ಲಿ ಮಾರುತಿ ಸುಜುಕಿ(Maruti Suzuki) 3181 ಸೆಲೆರಿಯೊ(Celerio) ಕಾರುಗಳನ್ನು ಮಾರಾಟ ಮಾಡಿದೆ, ಇದು 2023ರ ಆಗಸ್ಟ್‌ನಲ್ಲಿ ಮಾರಾಟವಾದ 2465 ಯುನಿಟ್‌ಗಳಿಗಿಂತ ಶೇಕಡ 29.05% ಹೆಚ್ಚಾಗಿದೆ. ವಾರ್ಷಿಕವಾಗಿ ಮಾರಾಟದಲ್ಲಿ ಈ ಮುನ್ನಡೆ ಈ ಕಾರಿನ ಸೌಲಭ್ಯಗಳು ಮತ್ತು ಗ್ರಾಹಕ ಹಿತಕ್ಕೆ ಸಾಕ್ಷಿಯಾಗಿದೆ. ಹಬ್ಬಗಳ ಸಮಯದಲ್ಲಿ ಸೆಲೆರಿಯೊ ಕಾರಿನ ಮಾರಾಟದಲ್ಲಿ ಇನ್ನೂ ಹೆಚ್ಚಳವಾಗುವ ನಿರೀಕ್ಷೆ ಇದೆ.

ಸೆಲೆರಿಯೊ(Celerio) ವಿನ್ಯಾಸ ಮತ್ತು ಬಣ್ಣ ಆಯ್ಕೆ:

ಸೆಲೆರಿಯೊ ಕಾರು ಮೊಡವೆಪದ್ರ ಹೊಸ ವಿನ್ಯಾಸವನ್ನು ಹೊಂದಿದೆ, ಮತ್ತು ಕೈಗೆಟುಕುವ ಬೆಲೆಯಲ್ಲಿ ದೊರೆಯುತ್ತಿದೆ. ರೂ. 4.99 ಲಕ್ಷದಿಂದ ರೂ. 7.04 ಲಕ್ಷದ ವರೆಗೆ ಅನೇಕ ರೂಪಾಂತರಗಳಲ್ಲಿ ಇದು ಲಭ್ಯವಿದ್ದು, ಕೆಫೀನ್ ಬ್ರೌನ್(Caffeine brown), ಪರ್ಲ್ ಮಿಡ್ನೈಟ್ ಬ್ಲಾಕ್(Pearl midlight black), ಗ್ಲಿಸ್ಟೆನಿಂಗ್ ಗ್ರೇ(Glistening grey), ಸಿಲ್ಕಿ ಸಿಲ್ವರ್(Silky silver), ಮತ್ತು ಸ್ಪೀಡಿ ಬ್ಲೂ (Speedy Blue) ಸೇರಿದಂತೆ ವಿವಿಧ ಬಣ್ಣಗಳಲ್ಲಿ ಲಭ್ಯವಿದೆ. ಇದು 5 ಮಂದಿ ಪ್ರಯಾಣಿಕರಿಗೆ ಆರಾಮದಾಯಕ ಅನುಭವವನ್ನು ನೀಡುತ್ತಿದ್ದು, 313 ಲೀಟರ್ ಬೂಟ್ ಸ್ಪೇಸ್(Boot space), ಹಾಗೂ ಪ್ರಯಾಣಿಕರ ಅನಿವಾರ್ಯವಾದ ಸಾಮಾನುಗಳನ್ನು ಹೊತ್ತೊಯ್ಯಲು ಸಹಾಯಕವಾಗಿದೆ.

ಪವರ್‌ಟ್ರೇನ್ (Powertrain) ಮತ್ತು ಮೈಲೇಜ್(Milage):

ಸೆಲೆರಿಯೊ (Celerio) ಕಾರು 1.0 ಲೀಟರ್ ಪೆಟ್ರೋಲ್ ಎಂಜಿನ್(Petrol Engine) ಅಥವಾ ಸಿಎನ್‌ಜಿ ಎಂಜಿನ್ (CNG engine) ಆಯ್ಕೆಯಲ್ಲಿ ಲಭ್ಯವಿದೆ. ಪೆಟ್ರೋಲ್ ಮಾದರಿಯು 67 ಪಿಎಸ್ ಶಕ್ತಿ ಮತ್ತು 89 ಎನ್‌ಎಂ ಟಾರ್ಕ್ ಅನ್ನು ಉತ್ಪಾದಿಸುತ್ತದೆ, ಸಿಎನ್‌ಜಿ(CNG) ಮಾದರಿಯು 57 ಪಿಎಸ್ ಶಕ್ತಿ ಮತ್ತು 82 ಎನ್‌ಎಂ ಟಾರ್ಕ್ ಅನ್ನು ಉತ್ಪಾದಿಸುತ್ತದೆ. ಪೆಟ್ರೋಲ್ ಕಾರು 25.24 ಕಿಮೀ/ಲೀಟರ್ ಮತ್ತು 26.68 ಕಿಮೀ/ಲೀಟರ್ ಮೈಲೇಜ್ ನೀಡಿದರೆ, ಸಿಎನ್‌ಜಿ (CNG) ಮಾದರಿಯು 34.43 ಕಿಮೀ/ಕೆಜಿ ಮೈಲೇಜ್(mileage) ಅನ್ನು ನೀಡುತ್ತದೆ.

ವೈಶಿಷ್ಟ್ಯಗಳು ಮತ್ತು ಸುರಕ್ಷತೆ:

ಮಾರುತಿ ಸೆಲೆರಿಯೊ(Maruti Celerio) ಕಾರು ಪ್ರಯಾಣಿಕರಿಗೆ ಸುಲಭವಾದ ಅನುಭವವನ್ನು ನೀಡಲು 7-ಇಂಚಿನ ಟಚ್‌ಸ್ಕ್ರೀನ್ ಇನ್ಫೋಟೈನ್ಮೆಂಟ್ ಸಿಸ್ಟಮ್, ಪುಶ್-ಬಟನ್ ಸ್ಟಾರ್ಟ್/ಸ್ಟಾಪ್, ಮತ್ತು ಕೀಲೆಸ್ ಎಂಟ್ರಿ (keyless entry) ಜೊತೆಗೆ ಮ್ಯಾನ್ಯುಯಲ್ ಏಸಿ (Manual AC), ಮತ್ತು ಡುಯಲ್ ಫ್ರಂಟ್ ಏರ್‌ಬ್ಯಾಗ್‌ಗಳನ್ನು(Dual front airbag) ಹೊಂದಿದೆ. ಸುರಕ್ಷತಾ ವೈಶಿಷ್ಟ್ಯಗಳಲ್ಲಿ ಎಬಿಎಸ್(ABS), ಇಬಿಡಿ(EBD), ಮತ್ತು ಇತರ ಅತಿ ಆಧುನಿಕ ತಂತ್ರಜ್ಞಾನವನ್ನು ಬಳಸಲಾಗಿದೆ, ಇದು ಪ್ರಯಾಣಿಕರ ಸುರಕ್ಷತೆಯನ್ನು ಗರಿಷ್ಠ ಮಟ್ಟದಲ್ಲಿ ಖಾತ್ರಿಪಡಿಸುತ್ತದೆ.

ಭಾವಿಷ್ಯದಲ್ಲಿ ಹೆಚ್ಚಿದ ನಿರೀಕ್ಷೆಗಳು ಕೈಗೆಟುಕುವ ಬೆಲೆ, ಉತ್ತಮ ಮೈಲೇಜ್, ಆಕರ್ಷಕ ವಿನ್ಯಾಸ ಹಾಗೂ ಹೆಚ್ಚಿನ ಸುರಕ್ಷತೆಗಳಿಂದ ಕೂಡಿದ ಮಾರುತಿ ಸುಜುಕಿ ಸೆಲೆರಿಯೊ (Maruti Suzuki Celerio) ಕಾರು ಮುಂದಿನ ತಿಂಗಳಲ್ಲಿ ಇನ್ನೂ ಹೆಚ್ಚು ಜನಪ್ರಿಯತೆಯನ್ನು ಗಳಿಸುವ ನಿರೀಕ್ಷೆಯಿದೆ.ಮತ್ತು ಇಂತಹ ಉತ್ತಮವಾದ  ಮಾಹಿತಿ  ಹೊಂದಿದ ಈ ವರದಿಯನ್ನು  ಕೂಡಲೇ ನಿಮ್ಮೆಲ್ಲಾ ಸ್ನೇಹಿತರೊಂದಿಗೆ ಹಾಗೂ ಬಂಧುಗಳಿಗೆ ಶೇರ್ ಮಾಡಿ, ಧನ್ಯವಾದಗಳು.

ಈ ಮಾಹಿತಿಗಳನ್ನು ಓದಿ

 


ದಯವಿಟ್ಟು ಗಮನಿಸಿ: ನೀಡ್ಸ್ ಆಫ್ ಪಬ್ಲಿಕ್ ತನ್ನ ಓದುಗರಿಗೆ ನಿಖರವಾದ ಮತ್ತು ಅಧಿಕೃತ ಮಾಹಿತಿಗಳನ್ನು ಮಾತ್ರ ಪ್ರಕಟಿಸುತ್ತದೆ. ಇಲ್ಲಿ ನಾವು ಯಾವುದೇ ಅನಧಿಕೃತ ಮತ್ತು ಸುಳ್ಳು ಮಾಹಿತಿಯನ್ನು ಬಿತ್ತರಿಸುವುದಿಲ್ಲ

WhatsApp Group Join Now
Telegram Group Join Now

Related Posts

Leave a Reply

Your email address will not be published. Required fields are marked *

error: Content is protected !!