ಪಿಎಂಎಫ್‌ಎಮ್‌ಇ (Pradhan Mantri Formalisation of Micro Food Processing Enterprises) ಯೋಜನೆವು ಕೇಂದ್ರ ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆ ಆಗಿದ್ದು, ಆಹಾರ ಸಂಸ್ಕರಣಾ ಉದ್ಯಮಗಳಿಗೆ ಬೆಂಬಲ ನೀಡಲು ರೂಪಿಸಲಾಗಿದೆ. ಈ ಯೋಜನೆಯಡಿ ಕಿರು ಮತ್ತು ಸಣ್ಣ ಆಹಾರ ಸಂಸ್ಕರಣಾ ಘಟಕಗಳಿಗೆ 50% ವರೆಗೆ ಸಬ್ಸಿಡಿ ನೀಡಲಾಗುತ್ತದೆ. ಈ ಯೋಜನೆ ಕುರಿತು ಹೆಚ್ಚಿನ ಮಾಹಿತಿ ಮತ್ತು ಉದ್ಯಮ ಮಾಡುವ ಸಾಧ್ಯತೆಗಳ ಬಗ್ಗೆ ವಿವರಿಸಲು ಈ ಲೇಖನವನ್ನು ಬಳಸಿಕೊಳ್ಳಬಹುದು. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ
ಯಾವ ಯಾವ ಉದ್ಯಮಗಳನ್ನು ಮಾಡಬಹುದು?
ಪಿಎಂಎಫ್‌ಎಮ್‌ಇ ಯೋಜನೆಯಡಿ(PMFME scheme), ಕೆಳಗಿನ ವಿವಿಧ ಆಹಾರ ಸಂಸ್ಕರಣಾ ಉದ್ಯಮಗಳನ್ನು ಮಾಡಬಹುದಾಗಿದೆ:
ರೊಟ್ಟಿ ಮಾಡುವ ಯಂತ್ರ: ಗೃಹಶ್ರೀಮಂತರಿಗೆ, ಭಕ್ಷ್ಯ ತಯಾರಕರಿಗೆ ಸೂಕ್ತವಾದ ಯಂತ್ರ.
ಎಣ್ಣೆಗಾಣ: ಎಣ್ಣೆ ಗಾಣಗಳ ಮೂಲಕ ಸ್ವಚ್ಛ ಮತ್ತು ಶುದ್ಧ ಎಣ್ಣೆ ಉತ್ಪಾದನೆ.
ಬೆಲ್ಲದ ಗಾಣ: ಚಕ್ಕರಿಗಟ್ಟೆಯ ಮೂಲಕ ಬೆಲ್ಲ ತಯಾರಿ
ಕಾರದಪುಡಿ ಘಟಕ: ಕಾರದ ಪುಡಿ ಉತ್ಪಾದನೆ ಮತ್ತು ಪ್ಯಾಕೇಜಿಂಗ್.
ಶಾವಿಗೆ, ಹಪ್ಪಳ-ಸಂಡಿಗೆ: ಸ್ಥಳೀಯ ಕಿರು ಉತ್ಪನ್ನಗಳ ತಯಾರಿಕಾ ಘಟಕ.
ಹಿಟ್ಟಿನ ಗಿರಣಿ: ಗೋಧಿ, ಜೋಳ ಹಿಟ್ಟಿನ ತಯಾರಿಕಾ ಘಟಕ.
ಬೇಕರಿ ಉತ್ಪನ್ನಗಳು: ಬ್ರೆಡ್, ಬನ್, ಕೇಕ್, ಬಿಸ್ಕೆಟ್ ಮುಂತಾದವು
ಹಾಲಿನ ಉತ್ಪನ್ನಗಳು: ಹಾಲಿನಿಂದ ಬೆಣ್ಣೆ, ಖೋವಾ, ಚೀಸ್, ಪನೀರ್ ಇತ್ಯಾದಿಗಳ ಉತ್ಪಾದನೆ
ಉಪ್ಪಿನಕಾಯಿ: ಖಾದ್ಯ ಸಂರಕ್ಷಣೆಯ ಮೂಲಕ ಉಪ್ಪಿನಕಾಯಿ ಮತ್ತು ಇತರ ಅಚ್ಚಾರಿಗಳ ತಯಾರಿಕೆ.
ಅರ್ಜಿ ಸಲ್ಲಿಸುವ ವಿಧಾನ:
ಅರ್ಹ ಅರ್ಜಿದಾರರು http://mofpi.nic.in/pmfme/ ಪೋರ್ಟಲ್‌ನಲ್ಲಿ ಅರ್ಜಿಯನ್ನು ಆನ್‌ಲೈನ್‌ನಲ್ಲಿ ಸಲ್ಲಿಸಬಹುದು. ಜೊತೆಗೆ, ಜಿಲ್ಲಾ ಸಂಪನ್ಮೂಲ ವ್ಯಕ್ತಿಗಳ (District Resource Person) ಮೂಲಕ ಅರ್ಜಿ ಸಲ್ಲಿಸುವ ಅನುಕೂಲವೂ ಇದೆ.
ಅರ್ಜಿ ಸಲ್ಲಿಸುವ ಪ್ರಕ್ರಿಯೆ ಈ ಹಂತಗಳನ್ನು ಒಳಗೊಂಡಿರುತ್ತದೆ:
ಅರ್ಜಿಯನ್ನು ಆನ್‌ಲೈನ್‌ನಲ್ಲಿ ಭರ್ತಿ ಮಾಡುವುದು ಅಥವಾ ಜಿಲ್ಲಾ ಸಂಪನ್ಮೂಲ ವ್ಯಕ್ತಿಗಳ ಮೂಲಕ ಅರ್ಜಿಯನ್ನು ತುಂಬಿಸಿಕೊಳ್ಳುವುದು.
ಯೋಜನಾ ವರದಿ (DPR), ಈ ಅರ್ಜಿ ಮತ್ತು ವರದಿ ಅನ್ನು ಜಿಲ್ಲಾ ಮಟ್ಟದ ಸಮಿತಿಗೆ ಸಲ್ಲಿಸಲಾಗುತ್ತದೆ.
ಸಮಿತಿಯ ಪರಿಶೀಲನೆ: ಜಂಟಿ ಕೃಷಿ ನಿರ್ದೇಶಕರ ನೇತೃತ್ವದಲ್ಲಿ ಸಮಿತಿ ಅರ್ಜಿಯನ್ನು ಪರಿಶೀಲಿಸುತ್ತದೆ.
ಅರ್ಹ ಫಲಾನುಭವಿಗಳ ಆಯ್ಕೆ: ಸಮಿತಿಯು ಅರ್ಹ ಫಲಾನುಭವಿಗಳನ್ನು ಆಯ್ಕೆ ಮಾಡುತ್ತದೆ ಮತ್ತು ಅರ್ಜಿಯನ್ನು ಬ್ಯಾಂಕ್‌ಗಳಿಗೆ ಕಳುಹಿಸುತ್ತದೆ ಸಾಲ(loan) ಮಂಜೂರಾತಿಗಾಗಿ.15 ಲಕ್ಷದ ಮೇಲಾದ ಸಹಾಯಧನಗಳಿಗಾಗಿ ಅರ್ಜಿಗಳನ್ನು ರಾಜ್ಯ ಅಥವಾ ಕೇಂದ್ರ ಸರ್ಕಾರಕ್ಕೆ ಕಳುಹಿಸಲಾಗುತ್ತದೆ.
ಅರ್ಜಿ ಸಲ್ಲಿಸಲು ಬೇಕಾದ ದಾಖಲೆಗಳು:
ಆಧಾರ್ ಕಾರ್ಡ್ (Aadhar Card)
ಪ್ಯಾನ್ ಕಾರ್ಡ್ (Pan Card)
ಬ್ಯಾಂಕ್ ಪಾಸ್‌ಬುಕ್ (Bank Passbook)
ಜಿಲ್ಲಾ ಸಂಪನ್ಮೂಲ ವ್ಯಕ್ತಿಗಳ ಸಂಪರ್ಕ ಸಂಖ್ಯೆ
ಯೋಜನೆಯ ಅನುಷ್ಠಾನವನ್ನು ಸುಗಮಗೊಳಿಸಲು ಜಿಲ್ಲಾ ಸಂಪನ್ಮೂಲ ವ್ಯಕ್ತಿಗಳು (DRP) ಈ ಪ್ರಕ್ರಿಯೆಯಲ್ಲಿ ಪ್ರಮುಖ ಪಾತ್ರವಹಿಸುತ್ತಾರೆ. ಈ DRPಗಳ ಮೂಲಕ, ಅರ್ಜಿ ತುಂಬುವುದು, ಯೋಜನಾ ವರದಿ ಸಿದ್ಧಪಡಿಸುವುದು, ಮತ್ತು ಅಗತ್ಯ ದಾಖಲೆಗಳನ್ನು ಕಳುಹಿಸುವ ಪ್ರಕ್ರಿಯೆಯನ್ನು ನೆರವೇರಿಸಬಹುದು. DRPಗಳು ಸಂಬಂಧಪಟ್ಟ ಜಿಲ್ಲೆಯಲ್ಲಿ ಕಾರ್ಯನಿರ್ವಹಿಸುತ್ತಾರೆ.
ಜಿಲ್ಲಾ DRPಗಳ ಸಂಪರ್ಕ ಸಂಖ್ಯೆಗಳನ್ನು ಯೋಜನೆಯ ಅಧಿಕೃತ ವೆಬ್‌ಸೈಟ್ ಮೂಲಕ ಪಡೆದುಕೊಳ್ಳಬಹುದು.
ನೀಡುವ ಸಹಾಯಧನದ ಸವಲತ್ತು ಪ್ರಧಾನ ಮಂತ್ರಿ ಕಿರು ಆಹಾರ ಉದ್ಯಮ ಪೂರಕ ಯೋಜನೆಯಡಿ, ವ್ಯಕ್ತಿಗತ ಅಥವಾ ಗುಂಪು ಯೋಜನೆಗಳಿಗೆ 50% ಸಬ್ಸಿಡಿ(Subsidy) ಸೌಲಭ್ಯ ನೀಡಲಾಗುತ್ತದೆ. ಈ ಸಬ್ಸಿಡಿಯು ಹೊಸ ಬಂಡವಾಳ ಹೂಡಿಕೆ, ಯಂತ್ರಾಂಶ ಖರೀದಿ, ಮತ್ತು ಉತ್ಪಾದನಾ ಶಕ್ತಿ ವೃದ್ಧಿಯ ಪೂರಕವಾಗಿ ಬಳಸಬಹುದು.
PMFME ಯೋಜನೆವು ಗ್ರಾಮೀಣ ಮತ್ತು ಕಿರಿಯ ಉದ್ಯಮಿಗಳನ್ನು ಸಬಲೀಕರಣಗೊಳಿಸಲು ಮಹತ್ವದ ಪಾತ್ರ ವಹಿಸುತ್ತಿದ್ದು, ಈ ಯೋಜನೆಯಿಂದ ಸಾವಿರಾರು ಕುಟುಂಬಗಳು ಸ್ವಾವಲಂಬಿಯಾಗಿ ಬೆಳೆಯಲು ಸಾಧ್ಯವಾಗುತ್ತದೆ. ಮತ್ತು ಇಂತಹ ಉತ್ತಮವಾದ ಮಾಹಿತಿ ಹೊಂದಿದ ಈ ವರದಿಯನ್ನು ಕೂಡಲೇ ನಿಮ್ಮೆಲ್ಲಾ ಸ್ನೇಹಿತರೊಂದಿಗೆ ಹಾಗೂ ಬಂಧುಗಳಿಗೆ ಶೇರ್ ಮಾಡಿ, ಧನ್ಯವಾದಗಳು.
ಈ ಮಾಹಿತಿಗಳನ್ನು ಓದಿ
ದಯವಿಟ್ಟು ಗಮನಿಸಿ: ನೀಡ್ಸ್ ಆಫ್ ಪಬ್ಲಿಕ್ ತನ್ನ ಓದುಗರಿಗೆ ನಿಖರವಾದ ಮತ್ತು ಅಧಿಕೃತ ಮಾಹಿತಿಗಳನ್ನು ಮಾತ್ರ ಪ್ರಕಟಿಸುತ್ತದೆ. ಇಲ್ಲಿ ನಾವು ಯಾವುದೇ ಅನಧಿಕೃತ ಮತ್ತು ಸುಳ್ಳು ಮಾಹಿತಿಯನ್ನು ಬಿತ್ತರಿಸುವುದಿಲ್ಲ