ಕರ್ನಾಟಕಕ್ಕೂ ಬಂತು ಸ್ಲೀಪರ್ ಕ್ಲಾಸ್ ವಂದೇ ಭಾರತ್ ರೈಲು (Vande Bharat Sleeper Class Train)! ಯಾವ ಯಾವ ದಿನ ಸಂಚಾರ ನಡೆಸಲಿದೆ.
ಇಂದು ರೈಲಿನ ಪ್ರಯಾಣವನ್ನು ಜನರು ಹೆಚ್ಚಾಗಿ ಇಷ್ಟಪಡುತ್ತಾರೆ. ಅದರಲ್ಲೂ ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲು (Vande Bharat Express train) ಸಂಚರಿಸಲು ಶುರುಮಾಡಿದಾಗಿನಿಂದಲೂ ಜನರು ಇದರಲ್ಲಿ ಪ್ರಯಾಣಿಸಲು ಇಚ್ಛಿಸುತ್ತಾರೆ. ಈಗಾಗಲೇ ದೇಶದಾದ್ಯಂತ ಸಂಚರಿಸುತ್ತಿರುವ ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲು ದಿನದಿಂದ ದಿನಕ್ಕೆ ಭಾರೀ ಜನಮನ್ನಣೆ ಪಡೆಯುತ್ತಿದೆ. ಆದ್ದರಿಂದ ಹಲವು ಭಾಗಗಳಿಗೆ ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲಿನ ಸೇವೆಯನ್ನು ಹಲವು ಭಾಗಗಳಿಗೆ ವಿಸ್ತರಿಸಲಾಗುತ್ತಿದೆ. ಈಗಾಗಲೇ ಕರ್ನಾಟಕದಲ್ಲಿ 10 ವಂದೇ ಭಾರತ್ ರೈಲುಗಳು ಸಂಚರಿಸುತ್ತಿವೆ. ಹಾಗೂ ಶೀಘ್ರದಲ್ಲಿಯೇ ಹೊಸ ವಂದೇ ಭಾರತ್ ಸ್ಲೀಪರ್ ರೈಲು ಕೂಡ ಜನರಿಗೆ ಲಭ್ಯವಾಗಲಿದೆ. ಈ ರೈಲು ಯಾವ ಮಾರ್ಗದಿಂದ ಹೋಗುತ್ತದೆ? ಯಾವ ಯಾವ ದಿನ ಸಂಚಾರ ನಡೆಸುತ್ತದೆ? ಹಾಗೂ ಯಾವ ಸಮಯಕ್ಕೆ ಸಂಚಾರ ನಡೆಸುತ್ತದೆ ಎಂಬ ಸಂಪೂರ್ಣ ಮಾಹಿತಿಯನ್ನು ತಿಳಿದುಕೊಳ್ಳೋಣ ಬನ್ನಿ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ
ಜನರು ಐಷಾರಾಮಿ ರೈಲಿನಲ್ಲಿ ಪ್ರಯಾಣ ಮಾಡಲು ಹೆಚ್ಚಾಗಿ ಬಯಸುತ್ತಿದ್ದಾರೆ. ಆದ್ದರಿಂದ ಸರ್ಕಾರ ವಂದೇ ಭಾರತ್ ರೈಲಿನ ಸಂಚಾರವನ್ನು ವಿಸ್ತರಿಸಿದೆ. ಪ್ರಯಾಣಿಕರ ಬೇಡಿಕೆಯ ಮೇರೆಗೆ ವಂದೇ ಭಾರತ್ ಸ್ಲೀಪರ್ ಕ್ಲಾಸ್ ರೈಲಿಗೂ ಚಾಲನೆ ನೀಡಿದ್ದಾರೆ.
ಈಗಾಗಲೇ ಕರ್ನಾಟಕದ ವಿವಿಧ ಭಾಗಗಳಲ್ಲಿ ಸಂಚರಿಸುತ್ತಿರುವ ರೈಲಿನ ಪಟ್ಟಿ ಹೀಗಿದೆ :
ರೈಲು ಸಂಖ್ಯೆ 20607/20608 ಮೈಸೂರು-ಎಂಜಿಆರ್ ಚೆನ್ನೈ ಸೆಂಟ್ರಲ್.
ರೈಲು ಸಂಖ್ಯೆ 20661/20662 ಕೆಎಸ್‌ಆರ್ ಬೆಂಗಳೂರು-ಧಾರವಾಡ.
ರೈಲು ಸಂಖ್ಯೆ 20703/20704 ಯಶವಂತಪುರ-ಕಾಚಿಗುಡ.
ರೈಲು ಸಂಖ್ಯೆ 20631/20632 ಮಂಗಳೂರು ಸೆಂಟ್ರಲ್-ತಿರುವಂತಪುರ.
ರೈಲು ಸಂಖ್ಯೆ 20642/20641 ಬೆಂಗಳೂರು ಕಂಟೋನ್ಮೆಂಟ್-ಕೊಯಮತ್ತೂರು.
ರೈಲು ಸಂಖ್ಯೆ 20646/20645 ಮಂಗಳೂರು ಸೆಂಟ್ರಲ್-ಮಡಂಗಾವ್.
ರೈಲು ಸಂಖ್ಯೆ 22231/22232 ಕಲಬುರಗಿ (ಗುಲ್ಬರ್ಗ)-ಎಸ್‌ಎಂವಿಟಿ.
ರೈಲು ಸಂಖ್ಯೆ 060021/06002 ಎಸ್‌ಎಂವಿಟಿ ಬೆಂಗಳೂರು-ಎರ್ನಾಕುಲಂ.
ರೈಲು ಸಂಖ್ಯೆ 20671/20672 ಮಧುರೈ-ಬೆಂಗಳೂರು.
ರೈಲು ಸಂಖ್ಯೆ 20669/20670 ಪುಣೆ ಬೆಳಗಾವಿ ಹುಬ್ಬಳ್ಳಿ.
ರೈಲ್ವೆ ರಾಜ್ಯ ಸಚಿವ ವಿ ಸೋಮಣ್ಣ(V Somanna) ಕರ್ನಾಟಕದ ಜನತೆಗೆ ಶುಭಸುದ್ದಿ ನೀಡಿದ್ದು, ರಾಜ್ಯದಲ್ಲಿ ವಂದೇ ಭಾರತ್ ಸ್ಲೀಪರ್ ರೈಲು (Vande Bharat Sleeper Class Train) ಶೀಘ್ರದಲ್ಲಿಯೇ ಸಂಚಾರ ನಡೆಸಲಿದೆ ಎಂದು ತಿಳಿಸಿದ್ದಾರೆ.ಈ ರೈಲು ಬೆಂಗಳೂರು ಬೆಳಗಾವಿ ನಡುವೆ ಸಂಚಾರ ನಡೆಸಲಿದೆ.
ಸೋಮವಾರ ರಾತ್ರಿ (ಸೆಪ್ಟೆಂಬರ್. 16) ನಗರದ ರೈಲ್ವೆ ನಿಲ್ದಾಣದಲ್ಲಿ ಬೆಳಗಾವಿ ಮಾರ್ಗವಾಗಿ ಪುಣೆ-ಹುಬ್ಬಳ್ಳಿ ನಡುವೆ ಸಂಚಾರ ಆರಂಭಿಸಿದ ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲನ್ನು ನಿಲ್ದಾಣ ಪ್ರವೇಶಿಸುತ್ತಿದ್ದಂತೆಯೇ ಜನರು ಭಾರತ ಮಾತಾಕಿ ಜೈ ಘೋಷಣೆ ಮೊಳಗಿಸಿ ಸಂತಸ ಸಂತಸ ಬರಮಾಡಿಕೊಂಡರು. ಈ ಸಮಯದಲ್ಲಿ ರೈಲ್ವೆ ರಾಜ್ಯ ಸಚಿವ ವಿ.ಸೋಮಣ್ಣ, ಸಂಸದ ಜಗದೀಶ್ ಶೆಟ್ಟರ್, ರಾಜ್ಯಸಭಾ ಸದಸ್ಯ ಈರಣ್ಣ ಕಡಾಡಿ, ವಿಧಾನ ಪರಿಷತ್ ಮಾಜಿ ಸದಸ್ಯ ಮಹಾಂತೇಶ ಕವಟಗಿಮಠ, ಶಾಸಕ ವಿಠ್ಠಲ ಹಲಗೇಕರ್, ಮಾಜಿ ಸಂಸದೆ ಮಂಗಲ ಸುರೇಶ ಅಂಗಡಿ, ಮಾಜಿ ಶಾಸಕ ಅನಿಲ ಬೆನಕೆ ಸೇರಿದಂತೆ ಇತರರು ಪುಷ್ಪವನ್ನು ಹಾಕುವ ಮೂಲಕ ವಂದೇ ಭಾರತ್ ರೈಲನ್ನು ಸ್ವಾಗತಿಸಿದರು.
ಈ ಸಂದರ್ಭದಲ್ಲಿ ಸಚಿವ ವಿ ಸೋಮಣ್ಣ ಮಾತನಾಡಿ, “ಪುಣೆ-ಹುಬ್ಬಳ್ಳಿ ನಡುವೆ ಸಂಚರಿಸುತ್ತಿದ್ದ ರೈಲು ಬೆಳಗಾವಿಗೆ ಬಂದಿದೆ. ಇನ್ನು ಕೆಲವೇ ಕೆಲವು ದಿನಗಳಲ್ಲಿ ಇನ್ನೊಂದು ರೈಲು ಬರಲಿದ್ದು, ಬೆಳಗಾವಿಯಿಂದ ಬೆಂಗಳೂರಿಗೆ ವಂದೇ ಭಾರತ್ ಸ್ಲೀಪರ್ ಕ್ಲಾಸ್ ರೈಲು ಸಂಚಾರ ಆರಂಭಿಸಲಾಗುವುದು” ಎಂದು ತಿಳಿಸಿದರು. ಇದರ ಜೊತೆಯಲ್ಲಿ ರಾಜ್ಯದ ಹಲವು ಜಿಲ್ಲೆಗಳಲ್ಲಿ ವಂದೇ ಭಾರತ್ ರೈಲು ಸಂಚಾರ ಆರಂಭಿಸಲಾಗುವುದು ಹಾಗೂ ಅವುಗಳನ್ನು ಬೆಳಗಾವಿ ಮೂಲಕ ಸಂಚರಿಸಲು ಆದ್ಯತೆ ನೀಡಲಾಗುವುದು. ಹಾಗೂ ದಿ.ಸುರೇಶ ಅಂಗಡಿ ಅವರ ಕನಸಾದ ಹುಬ್ಬಳ್ಳಿ – ಕಿತ್ತೂರು – ಬೆಳಗಾವಿ ಮಾರ್ಗವಾಗಿ ರೈಲು ಸಂಚಾರ ಆರಂಭಿಸುವ ನಿಟ್ಟಿಲ್ಲಿ ತ್ವರಿತವಾಗಿ ಕಾಮಗಾರಿ ಕೈಗೊಳ್ಳಲಾಗುತ್ತದೆ 2027ರ ಡಿಸೆಂಬರ್ ತಿಂಗಳಿಗೂ ಮೊದಲು ಈ ಮಾರ್ಗದಲ್ಲಿ ರೈಲು ಸಂಚಾರ ಆರಂಭಿಸಲು ಉದ್ದೇಶಿಸಲಾಗಿದೆ ಎಂದು ತಿಳಿಸಿದರು.
ವಂದೇ ಭಾರತ್ ಸಂಚಾರ ಸಮಯ:
ಬುಧವಾರ, ಶುಕ್ರವಾರ ಮತ್ತು ಭಾನುವಾರದಂದು ಸಂಚಾರ ನಡೆಸುವ ವಂದೇ ಭಾರತ್ ರೈಲು ಹುಬ್ಬಳ್ಳಿಯ ಶ್ರೀ ಸಿದ್ಧಾರೂಢಸ್ವಾಮಿ ರೈಲು ನಿಲ್ದಾಣದಿಂದ ಬೆಳಗ್ಗೆ 5 ಗಂಟೆಗೆ ಹೊರಟು ವಂದೇ ಭಾರತ್ ರೈಲು (ಸಂಖೆ. 20669) ಮಧ್ಯಾಹ್ನ 1.30ಕ್ಕೆ ಪುಣೆ ತಲುಪಲಿದೆ. ಈ ರೈಲು ಧಾರವಾಡಕ್ಕೆ ಬೆಳಗ್ಗೆ 5.15, ಬೆಳಗಾವಿಗೆ 6.55, ಮೀರಜ್ 9 ಗಂಟೆ, ಸಾಂಗ್ಲಿ 9.15, ಸತಾರಾ 10.47 ಗಂಟೆಗೆ ತಲುಪಲಿದೆ. ಪುಣೆಯಿಂದ ಗುರುವಾರ, ಶನಿವಾರ ಮತ್ತು ಸೋಮವಾರ ಮಧ್ಯಾಹ್ನ 2.15 ಕ್ಕೆ ಹೊರಡುವ ರೈಲು (ಸಂಖ್ಯೆ 20670) ರಾತ್ರಿ 10.45 ಕ್ಕೆ ಹುಬ್ಬಳ್ಳಿ ತಲುಪಲಿದೆ. ಮಾರ್ಗ ಮಧ್ಯದ ಬೆಳಗಾವಿಗೆ 8.35ಕ್ಕೆ ಹಾಗೂ ಧಾರವಾಡಕ್ಕೆ 10.20ಕ್ಕೆ ಬರಲಿದೆ.
ಈ ಮಾಹಿತಿಗಳನ್ನು ಓದಿ
ದಯವಿಟ್ಟು ಗಮನಿಸಿ: ನೀಡ್ಸ್ ಆಫ್ ಪಬ್ಲಿಕ್ ತನ್ನ ಓದುಗರಿಗೆ ನಿಖರವಾದ ಮತ್ತು ಅಧಿಕೃತ ಮಾಹಿತಿಗಳನ್ನು ಮಾತ್ರ ಪ್ರಕಟಿಸುತ್ತದೆ. ಇಲ್ಲಿ ನಾವು ಯಾವುದೇ ಅನಧಿಕೃತ ಮತ್ತು ಸುಳ್ಳು ಮಾಹಿತಿಯನ್ನು ಬಿತ್ತರಿಸುವುದಿಲ್ಲ.