ಹವಾಮಾನ ಇಲಾಖೆಯಿಂದ ಮಳೆಯ ಮುನ್ಸೂಚನೆ, ಸೆಪ್ಟೆಂಬರ್ 24ರಿಂದ ಮತ್ತೆ ಅಬ್ಬರಿಸಲಿದೆ ಮಳೆ, ಹಲವು ಜಿಲ್ಲೆಗಳಿಗೆ ಅಲರ್ಟ್!
ಈ ವರ್ಷದಲ್ಲಿ ಹಲವಾರು ಕಡೆಗಳಲ್ಲಿ ಅಧಿಕ ಮಳೆಯಾಗಿದ್ದು, ಧಾರಕಾರ ಮಳೆಯಿಂದ(Heavy rainfall) ಜನರು ಬಹಳ ಕಷ್ಟ ನೋವುಗಳನ್ನು ಎದುರಿಸಿದ್ದಾರೆ. ಹಾಗೆಯೇ ಇನ್ನು ಹಲವು ಸ್ಥಳಗಳಲ್ಲಿ ಮಳೆಯಾಗದೆ ಜನರು, ರೈತರು ಬಹಳ ಸಂಕಷ್ಟ ಪಡುತ್ತಿದ್ದಾರೆ. ಹಾಗೆಯೇ ಇದೀಗ ಸೆಪ್ಟೆಂಬರ್ ತಿಂಗಳಲ್ಲಿ ಮತ್ತೆ ಹಲವು ಜಿಲ್ಲೆಗಳಲ್ಲಿ ವರುಣನ ಆರ್ಭಟ ಕೇಳಿ ಬರಲಿದೆ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ
ಕರ್ನಾಟಕದ (karnataka) 20ಕ್ಕೂ ಅಧಿಕ ಜೆಲ್ಲೆಗಳಲ್ಲಿ ಸೆಪ್ಟೆಂಬರ್ 24 ರಿಂದ ಮತ್ತೆ ಮಳೆ ಶುರು :
ಕಳೆದ ಎರಡು ವಾರದಿಂದ ರಾಜ್ಯದಲ್ಲಿ ಮಳೆಯ ಪ್ರಮಾಣ ಕಡಿಮೆಯಾಗಿತ್ತು, ಅಲ್ಲಲ್ಲಿ ಅಲ್ಪ ಸ್ವಲ್ಪ ಮಳೆ ಕಾಣಿಸಿಕೊಂಡಿದ್ದು, ಇದೀಗ ಕರ್ನಾಟಕದ 20ಕ್ಕೂ ಅಧಿಕ ಜೆಲ್ಲೆಗಳಲ್ಲಿ (District) ಸೆಪ್ಟೆಂಬರ್ 24 ರಿಂದ ಮತ್ತೆ ಮಳೆ ಶುರುವಾಗಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆಯನ್ನು ನೀಡಿದೆ. ಅದರ ಬಗ್ಗೆ ಸಂಪೂರ್ಣ ಮಾಹಿತಿಯನ್ನು ತಿಳಿದುಕೊಳ್ಳೋಣ ಬನ್ನಿ.
ಹಲವು ಭಾಗಗಳಲ್ಲಿ ಮಳೆಯ ಮುನ್ಸೂಚನೆ (Rain forecast) :
ಹವಾಮಾನ ಇಲಾಖೆಯ ಪ್ರಕಾರ ಬೆಂಗಳೂರಿನಲ್ಲಿ ಭಾಗಶಃ ಮೋಡ ಕವಿದ ವಾತಾವರಣ ಹಾಗೂ ಒಣ ಹವಾಮಾನದ ವಾರದಿಯಾಗಿದೆ. ಅಲ್ಲದೇ ಕರಾವಳಿ ಜಿಲ್ಲೆಗಳಲ್ಲಿ ಹಾಗೂ ಮಲೆನಾಡಿನ ಭಾಗದಲ್ಲಿ ಮತ್ತೆ ಮಳೆ ಅಬ್ಬರಿಸುವ ಮುನ್ಸೂಚನೆ ನೀಡಿದ್ದು, ರೈತ ಬೆಳೆಗಳಿಗೆ ಮಳೆಯಿಂದ ಸಮಸ್ಯೆ ಆಗಬಹುದೇ ಎಂಬ ಅನುಮಾನ ಕಾಡಲಿದೆ.
ರಾಜ್ಯದಲ್ಲಿ (state) ಮತ್ತೆ ಕೇಳಿ ಬರಲಿದೆ ವರುಣ ಆರ್ಭಟ :
ಕೆಲವು ದಿನಗಳ ಹಿಂದೆ ಮಳೆಯ ಆರ್ಭಟ ಕಡಿಮೆಯಾಗಿದ್ದು, ಜನರು ಸ್ವಲ್ಪ ಮಟ್ಟಿಗೆ ಚೇತರಿಸಿಕೊಂಡಿದ್ದರು, ಹಾಗೆಯೇ ಇದೀಗ ಮತ್ತೆ ಮಳೆಯಾಗುವ ಮುನ್ಸೂಚನೆ ತಿಳಿದು ಬಂದಿದೆ. ಹವಾಮಾನ ಇಲಾಖೆ ಮಾಹಿತಿ ಪ್ರಕಾರ ಇದೇ ಸೆಪ್ಟೆಂಬರ್ 24ರಿಂದ (September 24) ರಾಜ್ಯದಲ್ಲಿ ಮತ್ತೆ ಮಳೆ ಅಬ್ಬರಿಸಲಿದೆ ಎಂದು ತಿಳಿದುಬಂದಿದೆ. ಅದರಂತೆ ಶಿವಮೊಗ್ಗ, ಚಿಕ್ಕಮಗಳೂರು, ಉತ್ತರ ಕನ್ನಡ, ಉಡುಪಿ, ದಕ್ಷಿಣ ಕನ್ನಡ, ಬಾಗಲಕೋಟೆ, ಬೆಳಗಾವಿ, ಬೀದರ್, ಧಾರವಾಡ, ಕಲಬುರಗಿ, ಹಾವೇರಿ, ಕೊಪ್ಪಳ, ವಿಜಯಪುರ, ಯಾದಗಿರಿ, ಬೆಂಗಳೂರು, ಚಾಮರಾಜನಗರ, ಚಿತ್ರದುರ್ಗ, ದಾವಣಗೆರೆ, ಕೊಡಗು, ಕೋಲಾರ, ಚಿಕ್ಕಬಳ್ಳಾಪುರ, ಚಿಕ್ಕಮಗಳೂರು, ಹಾಸನದಲ್ಲಿ ಮತ್ತೆ ಮಳೆಯಾಗಲಿದೆ ಎಂದು ವರದಿಯಾಗಿದೆ.
ನಗರಗಳ ಇಂದಿನ ಹವಾಮಾನ ವರದಿಯ (Weather report) ವಿವರ ಹೀಗಿದೆ :
ಬೆಂಗಳೂರು: 29 ಡಿಗ್ರಿ ಸೆಲ್ಸಿಯಸ್- 19 ಡಿಗ್ರಿ ಸೆಲ್ಸಿಯಸ್
ಮಂಗಳೂರು: 29 ಡಿಗ್ರಿ ಸೆಲ್ಸಿಯಸ್- 24 ಡಿಗ್ರಿ ಸೆಲ್ಸಿಯಸ್
ಶಿವಮೊಗ್ಗ: 28 ಡಿಗ್ರಿ ಸೆಲ್ಸಿಯಸ್- 21 ಡಿಗ್ರಿ ಸೆಲ್ಸಿಯಸ್
ಬೆಳಗಾವಿ: 28 ಡಿಗ್ರಿ ಸೆಲ್ಸಿಯಸ್- 20 ಡಿಗ್ರಿ ಸೆಲ್ಸಿಯಸ್
ಮೈಸೂರು: 30 ಡಿಗ್ರಿ ಸೆಲ್ಸಿಯಸ್- 19 ಡಿಗ್ರಿ ಸೆಲ್ಸಿಯಸ್
ಮಂಡ್ಯ: 32 ಡಿಗ್ರಿ ಸೆಲ್ಸಿಯಸ್- 21 ಡಿಗ್ರಿ ಸೆಲ್ಸಿಯಸ್
ಮಡಿಕೇರಿ: 23 ಡಿಗ್ರಿ ಸೆಲ್ಸಿಯಸ್- 17 ಡಿಗ್ರಿ ಸೆಲ್ಸಿಯಸ್
ರಾಮನಗರ: 31 ಡಿಗ್ರಿ ಸೆಲ್ಸಿಯಸ್- 21 ಡಿಗ್ರಿ ಸೆಲ್ಸಿಯಸ್
ಹಾಸನ: 27 ಡಿಗ್ರಿ ಸೆಲ್ಸಿಯಸ್- 18 ಡಿಗ್ರಿ ಸೆಲ್ಸಿಯಸ್
ಚಾಮರಾಜನಗರ: 31 ಡಿಗ್ರಿ ಸೆಲ್ಸಿಯಸ್- 20 ಡಿಗ್ರಿ ಸೆಲ್ಸಿಯಸ್
ಚಿಕ್ಕಬಳ್ಳಾಪುರ: 30 ಡಿಗ್ರಿ ಸೆಲ್ಸಿಯಸ್- 19 ಡಿಗ್ರಿ ಸೆಲ್ಸಿಯಸ್
ಕೋಲಾರ: 31 ಡಿಗ್ರಿ ಸೆಲ್ಸಿಯಸ್- 21 ಡಿಗ್ರಿ ಸೆಲ್ಸಿಯಸ್
ತುಮಕೂರು: 29 ಡಿಗ್ರಿ ಸೆಲ್ಸಿಯಸ್- 19 ಡಿಗ್ರಿ ಸೆಲ್ಸಿಯಸ್
ಉಡುಪಿ: 29 ಡಿಗ್ರಿ ಸೆಲ್ಸಿಯಸ್ – 24 ಡಿಗ್ರಿ ಸೆಲ್ಸಿಯಸ್
ಕಾರವಾರ: 29 ಡಿಗ್ರಿ ಸೆಲ್ಸಿಯಸ್- 24 ಡಿಗ್ರಿ ಸೆಲ್ಸಿಯಸ್
ಚಿಕ್ಕಮಗಳೂರು: 26 ಡಿಗ್ರಿ ಸೆಲ್ಸಿಯಸ್- 18 ಡಿಗ್ರಿ ಸೆಲ್ಸಿಯಸ್
ದಾವಣಗೆರೆ: 29 ಡಿಗ್ರಿ ಸೆಲ್ಸಿಯಸ್- 19 ಡಿಗ್ರಿ ಸೆಲ್ಸಿಯಸ್
ಹುಬ್ಬಳ್ಳಿ: 29 ಡಿಗ್ರಿ ಸೆಲ್ಸಿಯಸ್- 21 ಡಿಗ್ರಿ ಸೆಲ್ಸಿಯಸ್
ಚಿತ್ರದುರ್ಗ: 29 ಡಿಗ್ರಿ ಸೆಲ್ಸಿಯಸ್- 20 ಡಿಗ್ರಿ ಸೆಲ್ಸಿಯಸ್
ಹಾವೇರಿ: 29 ಡಿಗ್ರಿ ಸೆಲ್ಸಿಯಸ್- 21 ಡಿಗ್ರಿ ಸೆಲ್ಸಿಯಸ್
ಬಳ್ಳಾರಿ: 34 ಡಿಗ್ರಿ ಸೆಲ್ಸಿಯಸ್- 23 ಡಿಗ್ರಿ ಸೆಲ್ಸಿಯಸ್
ಗದಗ: 31 ಡಿಗ್ರಿ ಸೆಲ್ಸಿಯಸ್- 21 ಡಿಗ್ರಿ ಸೆಲ್ಸಿಯಸ್
ಕೊಪ್ಪಳ: 32 ಡಿಗ್ರಿ ಸೆಲ್ಸಿಯಸ್- 22 ಡಿಗ್ರಿ ಸೆಲ್ಸಿಯಸ್
ರಾಯಚೂರು: 33 ಡಿಗ್ರಿ ಸೆಲ್ಸಿಯಸ್- 24 ಡಿಗ್ರಿ ಸೆಲ್ಸಿಯಸ್
ಯಾದಗಿರಿ: 33 ಡಿಗ್ರಿ ಸೆಲ್ಸಿಯಸ್- 24 ಡಿಗ್ರಿ ಸೆಲ್ಸಿಯಸ್
ವಿಜಯಪುರ: 32 ಡಿಗ್ರಿ ಸೆಲ್ಸಿಯಸ್- 22 ಡಿಗ್ರಿ ಸೆಲ್ಸಿಯಸ್
ಬೀದರ್: 29 ಡಿಗ್ರಿ ಸೆಲ್ಸಿಯಸ್- 22 ಡಿಗ್ರಿ ಸೆಲ್ಸಿಯಸ್
ಕಲಬುರಗಿ: 33 ಡಿಗ್ರಿ ಸೆಲ್ಸಿಯಸ್- 23 ಡಿಗ್ರಿ ಸೆಲ್ಸಿಯಸ್
ಬಾಗಲಕೋಟೆ: 33 ಡಿಗ್ರಿ ಸೆಲ್ಸಿಯಸ್- 22 ಡಿಗ್ರಿ ಸೆಲ್ಸಿಯಸ್
ಈ ಮಾಹಿತಿಗಳನ್ನು ಓದಿ
ದಯವಿಟ್ಟು ಗಮನಿಸಿ: ನೀಡ್ಸ್ ಆಫ್ ಪಬ್ಲಿಕ್ ತನ್ನ ಓದುಗರಿಗೆ ನಿಖರವಾದ ಮತ್ತು ಅಧಿಕೃತ ಮಾಹಿತಿಗಳನ್ನು ಮಾತ್ರ ಪ್ರಕಟಿಸುತ್ತದೆ. ಇಲ್ಲಿ ನಾವು ಯಾವುದೇ ಅನಧಿಕೃತ ಮತ್ತು ಸುಳ್ಳು ಮಾಹಿತಿಯನ್ನು ಬಿತ್ತರಿಸುವುದಿಲ್ಲ.