ರಾಜ್ಯ ಸರ್ಕಾರದಿಂದ ಪೋಷಕರಿಗೆ ಸಿಹಿ ಸುದ್ದಿ, ಇನ್ಮುಂದೆ 7 ದಿನದಲ್ಲೇ ಸಿಗಲಿದೆ ಜನನ ಪ್ರಮಾಣ ಪತ್ರ..!
ಜನನ ಪ್ರಮಾಣಪತ್ರ(birth certificate) ವು ವ್ಯಕ್ತಿಯ ಜನ್ಮವನ್ನು ದಾಖಲಿಸುವ ಪ್ರಮುಖ ದಾಖಲೆಯಾಗಿದೆ. ಜನನ ಪ್ರಮಾಣ ಪತ್ರವನ್ನು ನಾವು ಆಸ್ಪತ್ರೆಯಲ್ಲಿ ಪಡೆದುಕೊಳ್ಳುತ್ತೇವೆ. ಜನನದ ನಂತರ ಹಲವು ದಿನಗಳ ಕಾಲದ ಬಳಿಕ ಇದನ್ನು ಆಸ್ಪತ್ರೆ(Hospital)ಯಿಂದ ಪಡೆದುಕೊಳ್ಳಬೇಕು.
ಜನನ ಪ್ರಮಾಣ ಪತ್ರವು ಮುಖ್ಯವಾಗಿ ಹೆಸರು, ಸ್ಥಳ ಮತ್ತು ಜನ್ಮ ದಿನಾಂಕ, ಪೋಷಕರ ಮಾಹಿತಿ, ನೀಡಿದ ದಿನಾಂಕ, ನೋಂದಣಿ ದಿನಾಂಕ, ನೋಂದಣಿ ಸಂಖ್ಯೆ, ಪ್ರಮಾಣಪತ್ರ ಸಂಖ್ಯೆ ಮತ್ತು ಅಧಿಕೃತ ಸಹಿ(ಗಳು) ಒಳಗೊಂಡಿರುತ್ತದೆ. ಈ ಹಿಂದೆ ಜನನ ಪ್ರಮಾಣ ಪತ್ರವನ್ನು ಪಡೆಯಲು ಹಲವು ದಿನಗಳು ಅಥವಾ ತಿಂಗಳಾಗುತ್ತಿತ್ತು ಆದರೆ ಇದೀಗ ಚಿಂತಿಸುವ ಅಗತ್ಯವಿಲ್ಲ. ಸರ್ಕಾರ(government) ದಿಂದ ಇದೀಗ ಪೋಷಕರಿಗೆ ಸಿಹಿ ಸುದ್ದಿ ತಿಳಿದು ಬಂದಿದೆ. ಹೌದು, ಇನ್ನು ಮುಂದೆ 7 ದಿನದಲ್ಲೇ ಸಿಗಲಿದೆ ಜನನ ಪ್ರಮಾಣ ಪತ್ರ. ಅದರ ಬಗ್ಗೆ ಸಂಪೂರ್ಣ ಮಾಹಿತಿಯನ್ನು ತಿಳಿದುಕೊಳ್ಳೋಣ ಬನ್ನಿ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ
ಜನನ ಪ್ರಮಾಣ ಪತ್ರ ವಿತರಣೆ ಬಗ್ಗೆ ರಾಜ್ಯ ಸರ್ಕಾರದಿಂದ ಆದೇಶ :
ಹೌದು ಇದೀಗ ರಾಜ್ಯ ಸರ್ಕಾರವು (state government) ಜನನ ಪ್ರಮಾಣ ಪತ್ರ ಒದಗಿಸುವ ಬಗ್ಗೆ ಆದೇಶ ಹೊರಡಿಸಿದ್ದು, ಆಸ್ಪತ್ರೆಯಲ್ಲಿ ಜನನ ಪ್ರಮಾಣ ಪತ್ರವನ್ನು ವಿತರಿಸುವಾಗ ಇ- ಜನ್ಮ ತಂತ್ರಾಂಶದ ಸಕಾಲ ಮಿತಿಯನ್ನು 15 ರಿಂದ 7 ದಿನಗಳಿಗೆ ಕಡಿಮೆ ಮಾಡುವ ಕುರಿತು ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ.
ಸರ್ಕಾರ ಹೊರಡಿಸಿದ ಈ ಆದೇಶದಲ್ಲಿ ಏನಿದೆ ?
ಜನನ ಪ್ರಮಾಣ ಪತ್ರಕ್ಕೆ ಸಂಬಂಧಿಸಿದಂತೆ ಆಸ್ಪತ್ರೆಯಲ್ಲಿ ನೀಡುವ ಜನನ ಪ್ರಮಾಣ ಪತ್ರದ ವಿತರಣೆಯ ಕುರಿತು ಉಲ್ಲೇಖ (1) ರಂತೆ ಕರ್ನಾಟಕ ಆಡಳಿತ ಸುಧಾರಣಾ ಆಯೋಗ-2 ರ 4ನೇ ವರದಿಯ ಶಿಫಾರಸ್ಸು ಸಂಖ್ಯೆ 131 ಕೆ ಸಂಬಂಧಿಸಿದಂತೆ ಜನನ ಪತ್ರವನ್ನು ನೀಡುವಾಗ ಅಧಿಕಾರಿಗಳು ಯಾವುದೇ ತಪ್ಪುಗಳನ್ನು ಮಾಡಬಾರದು ಯಾಕೆಂದರೆ ತಪ್ಪು ಮಾಡಿದನ್ನು ಸರಿಪಡಿಸುವುದು ಕಷ್ಟಕರವಾಗಿದೆ.
ತುರ್ತು ಸಂದರ್ಭದಲ್ಲಿ (Emergency time) ಜನನ ಪ್ರಮಾಣ ಪತ್ರವನ್ನು ಒಂದು ದಿನದೊಳಗೆ ಒದಗಿಸುವುದು.
ಅರ್ಜಿದಾರರು ಒದಗಿಸಿದ ದಾಖಲೆಗಳನ್ನು ಸುರಕ್ಷಿತ ಕಸ್ಟಡಿಯಲ್ಲಿ ಇಡಬೇಕು ಮತ್ತು ಅವರು ಮತ್ತೆ ದಾಖಲೆಗಳನ್ನು ಸಲ್ಲಿಸುವಂತೆ ಕೇಳಬಾರದು.
ಅರ್ಜಿಯ ಪ್ರಕ್ರಿಯೆಯ ಹಂತದಲ್ಲಿ ಅರ್ಜಿದಾರರಿಗೆ ಎಸ್. ಎಮ್. ಎಸ್. ಕಳುಹಿಸಲು ಮತ್ತು ಸೇವೆಯನ್ನು ಅನುಮೋದಿಸಿದಾಗ ಆನ್ಲೈನ್ ಮೂಲಕ ಪ್ರಮಾಣ ಪತ್ರವನ್ನು ಡೌನ್ ಲೋಡ್ ಮಾಡಿಕೊಳ್ಳುವ ಆಯ್ಕೆಯನ್ನು ನೀಡಬೇಕು.
ಕರ್ನಾಟಕ ಆಡಳಿತ ಸುಧಾರಣಾ ಆಯೋಗ-2 ಶಿಫಾರಸ್ಸಿನ ಮಾಹಿತಿಗಳು ಹೀಗಿವೆ :
ಶಿಫಾರಸ್ಸು ಎರಡು ಸೇವೆಗಳಿಗೆ ಸಕಾಲದ ಸಮಯದ ಮಿತಿಯನ್ನು 15 ದಿನಗಳಿಂದ 07 ದಿನಗಳವರಗೆ ಕಡಿಮೆ ಮಾಡಬಹುದು ಎಂದು ಕರ್ನಾಟಕ ಆಡಳಿತ ಸುಧಾರಣಾ ಆಯೋಗ-2 ಶಿಫಾರಸ್ಸು ಮಾಡಿದೆ.
ಉಲ್ಲೇಖ (2) ರಲ್ಲಿ ಜನನ ಮರಣ ನೋಂದಣಿಯ ಪ್ರಕ್ರಿಯೆಯ ಹಂತದಲ್ಲಿ ಜನನ ಮರಣಗಳ ಮುಖ್ಯ ನೋಂದಣಾಧಿಕಾರಿಗಳು ಹಾಗೂ ಅವರ ನಿರ್ದೇಶಕರು ಆರ್ಥಿಕ ಮತ್ತು ಸಾಂಖ್ಯಿಕ ನಿರ್ದೇಶನಾಲಯದವರು ಈ ಕೆಳಗೆ ನೀಡಿರುವ ಕ್ರಮಗಳನ್ನು ವಹಿಸಲಾಗಿರುತ್ತದೆ.
ಜನನ ಪ್ರಮಾಣ ಪತ್ರವನ್ನು ವಿತರಿಸುವಾಗ ಅಧಿಕಾರಿಗಳು ಯಾವುದೇ ತಪ್ಪುಗಳನ್ನು ಮಾಡದಂತೆ ಎಚ್ಚರಿಕೆ ವಹಿಸುವುದು.
ನೋಂದಣಿ ಕುರಿತಂತೆ ಅರ್ಜಿದಾರರಿಗೆ ಎಸ್ ಎಮ್. ಎಸ್ (SMS) ಕಳುಹಿಸಲಾಗುತ್ತಿದೆ.
ಇ-ಜನ್ಮ ತಂತ್ರಾಂಶದಲ್ಲಿ ಅನುಮೋದನೆಯಾಗಿರುವ ಜನನ ಮರಣ ಪ್ರಮಾಣ ಪತ್ರದಲ್ಲಿ ಸೇವಾಸಿಂಧು ತಂತ್ರಾಂಶದ ಮೂಲಕ ಡೌನ್ ಲೋಡ್ (Download) ಮಾಡಿಕೊಳ್ಳುವ ಅವಕಾಶವನ್ನು ಕಲ್ಪಿಸಲಾಗಿದೆ.
ಸಕಾಲದಲ್ಲಿ ಜನನ, ಮರಣ ಪ್ರಮಾಣ ಪತ್ರಗಳನ್ನು ಪಡೆಯಲು 07 ದಿನಗಳ ಕಾಲಾವಧಿಯನ್ನು ನಿಗಧಿಪಡಿಸಲಾಗಿದೆ.
ಈ ಮಾಹಿತಿಗಳನ್ನು ಓದಿ
ದಯವಿಟ್ಟು ಗಮನಿಸಿ: ನೀಡ್ಸ್ ಆಫ್ ಪಬ್ಲಿಕ್ ತನ್ನ ಓದುಗರಿಗೆ ನಿಖರವಾದ ಮತ್ತು ಅಧಿಕೃತ ಮಾಹಿತಿಗಳನ್ನು ಮಾತ್ರ ಪ್ರಕಟಿಸುತ್ತದೆ. ಇಲ್ಲಿ ನಾವು ಯಾವುದೇ ಅನಧಿಕೃತ ಮತ್ತು ಸುಳ್ಳು ಮಾಹಿತಿಯನ್ನು ಬಿತ್ತರಿಸುವುದಿಲ್ಲ.