ಕಾರ್ಮಿಕರಿಗೆ ಸರ್ಕಾರದಿಂದ ಸಿಹಿ ಸುದ್ದಿ, ಕೇಂದ್ರದಿಂದ ಕೃಷಿ ಹಾಗೂ ಕೈಗಾರಿಕಾ ಕಾರ್ಮಿಕರ ಕನಿಷ್ಠ ವೇತನ ಹೆಚ್ಚಳ, ಇಲ್ಲಿದೆ ಸಂಪೂರ್ಣ ಮಾಹಿತಿ…!
ಕೃಷಿ ಹಾಗೂ ಕೈಗಾರಿಕೆ (Agriculture and Industry) ಎರಡು ಕ್ಷೇತ್ರಗಳು ಬಹಳ ಮುಖ್ಯವಾದವು. ತಂತ್ರಜ್ಞಾನ ಹೆಚ್ಚಾದಂತೆ ಹಲವಾರು ಬದಲಾವಣೆಗಳನ್ನು ನಾವು ಈ ಎರಡು ಕ್ಷೇತ್ರಗಳಲ್ಲಿ ಕಾಣುತ್ತೆವೆ. ಹೌದು, ತಂತ್ರಜ್ಞಾನ (technology) ಮತ್ತು ಹೊಸ ಹೊಸ ಅವಿಸ್ಕಾರಗಳಿಂದ ಇಂದು ಮಾನವನ ಬದಲು ಮಿಷಿನ್ ಗಳು ಕೆಲಸ ಮಾಡುತ್ತಿವೆ. ಆದರೂ ಹಲವಾರು ಕಡೆಗಳಲ್ಲಿ ಮಿಷಿನ್ (Machines) ಹೊರತಗಿಯೂ ಕಾರ್ಮಿಕರು ದುಡಿಯುತ್ತಿದ್ದಾರೆ. ಅವರಿಗೆ ಎಲ್ಲಾ ರೀತಿಯ ಸೌಲಭ್ಯಗಳು ಜೊತೆಗೆ ದಿನೇದಿನೇ ಏರಿಕೆಯಾಗುತ್ತಿರುವ ಜೀವನ ವೆಚ್ಚವನ್ನು ನಿಭಾಯಿಸಲು ಕಾರ್ಮಿಕರಿಗೆ ನೆರವಾಗುವ ಸಲುವಾಗಿ ಕನಿಷ್ಠ ವೇತನ ದರವನ್ನು ಹೆಚ್ಚಳ ಮಾಡಿದೆ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ
ಕೇಂದ್ರ ಸರಕಾರವು (central government) ಕೃಷಿ ಹಾಗೂ ಕೈಗಾರಿಕಾ ಕಾರ್ಮಿಕರ ಕನಿಷ್ಠ ವೇತನವನ್ನು ಏರಿಕೆ ಮಾಡಿದೆ :
ಇದೀಗ ಕೃಷಿ ಹಾಗೂ ಕೈಗಾರಿಕಾ ಕಾರ್ಮಿಕರಿಗೆ ಸರ್ಕಾರದಿಂದ ಗುಡ್ ನ್ಯೂಸ್ ತಿಳಿದು ಬಂದಿದೆ. ಹೌದು,
ಕೇಂದ್ರ ಸರಕಾರವು ಕೃಷಿ ಹಾಗೂ ಕೈಗಾರಿಕಾ ಕಾರ್ಮಿಕರ ಕೇಂದ್ರೀಯ ಕನಿಷ್ಠ ವೇತನವನ್ನು (minimum wage) ಗುರುವಾರ ಏರಿಕೆ ಮಾಡಿದ್ದು, ಇದರ ಬಗ್ಗೆ ಕೇಂದ್ರ ಕಾರ್ಮಿಕ ಆಯುಕ್ತರು ಅಧಿಸೂಚನೆಯೊಂದನ್ನು ಹೊರಡಿಸಿದ್ದಾರೆ.
ಹೊಸ ವೇತನ ಜಾರಿಯಿಂದ ನೌಕರರಿಗೆ ಹಲವು ರೀತಿಯ ಅನುಕೂಲವಾಗಲಿದೆ :
ಹೊಸ ವೇತನವನ್ನು ಕೌಶಲ್ಯ, ಭೌಗೋಳಿಕ ಪ್ರದೇಶದ ಆಧಾರದಲ್ಲಿ ನಿಗದಿಪಡಿಸಲಾಗುತ್ತದೆ ಎಂದು ಕೇಂದ್ರ ಸರ್ಕಾರ ಹೇಳಿದೆ. ಇದರಿಂದಾಗಿ ಕಟ್ಟಡ ನಿರ್ಮಾಣ, ಲೋಡಿಂಗ್, ಕಾವಲು, ಗುಡಿಸುವುದು, ಸ್ವಚ್ಛಗೊಳಿಸುವುದು, ಮನೆಗೆಲಸ, ಗಣಿಗಾರಿಕೆ ಮತ್ತು ಕೃಷಿ ಸೇರಿದಂತೆ ವಿವಿಧ ಅಸಂಘಟಿತ ವಲಯದ ನೌಕರರಿಗೆ ಅನುಕೂಲವಾಗಲಿದೆ. ವಿಡಿಎ (VDA) ಅನ್ನು ಕೇಂದ್ರ ಸರ್ಕಾರ ಗ್ರಾಹಕ ಬೆಲೆ ಸೂಚ್ಯಂಕದ ಆಧಾರದಲ್ಲಿ 6 ತಿಂಗಳ ಅವಧಿಗೆ ಅನ್ವಯಿಸುವಂತೆ ವರ್ಷದಲ್ಲಿ 2 ಬಾರಿ (ಏ.1 ಮತ್ತು ಅ.1) ಪರಿಷ್ಕರಿಸುತ್ತದೆ.
ಲೋಡಿಂಗ್ ಹಾಗೂ ಅನ್‌ಲೋಡಿಂಗ್ ಮತ್ತು ಇತರ ಕುಶಲತೆ ರಹಿತ ಕಾರ್ಮಿಕರ ವೇತನ ಕೂಡ ಹೆಚ್ಚಳ :
ನೂತನ ವೇತನ ಪರಿಷ್ಕರಣೆಯಿಂದಾಗಿ ಕಟ್ಟಡ ನಿರ್ಮಾಣ, ಗುಡಿಸುವಿಕೆ, ಸ್ವಚ್ಥತೆ, ಲೋಡಿಂಗ್ ಹಾಗೂ ಅನ್‌ಲೋಡಿಂಗ್‌ನಂತಹ ಕುಶಲತೆ ರಹಿತ ಕಾರ್ಮಿಕರ (unskilled labour) ವೇತನವನ್ನು ದಿನಕ್ಕೆ 783 ರೂ.ಅಥವಾ ತಿಂಗಳಿಗೆ 20,358 ರೂ., ಇವುಗಳಲ್ಲಿ ಯಾವುದು ಅಧಿಕವೋ ಅದು ಕನಿಷ್ಠ ವೇತನವಾಗಿರುವುದು ಎಂದು ಅಧಿಸೂಚನೆ ತಿಳಿಸಿದೆ.
ನೂತನ ವೇತನ ದರಗಳು 2024ರ ಆಕ್ಟೋಬರ್ 1ರಿಂದ ಜಾರಿಗೆ ಬರಲಿದೆ :
ಕನಿಷ್ಠ ವೇತನ ಕಾಯ್ದೆ 1948ರಡಿ ಕೇಂದ್ರ ಹಾಗೂ ರಾಜ್ಯ ಸರಕಾರಗಳು ತಮ್ಮ ಅಧಿಕಾರ ವ್ಯಾಪ್ತಿಯಡಿ ಬರುವ ವಲಯಗಳಲ್ಲಿ ಕೆಲಸ ಮಾಡುವ ಕಾರ್ಮಿಕರ ವೇತನಗಳನ್ನು ನಿಗದಿಪಡಿಸುವ, ಪರಾಮರ್ಶಿಸುವ ಹಾಗೂ ಪರಿಷ್ಕರಿಸುವ ಅಧಿಕಾರವನ್ನು ಹೊಂದಿದೆ. ಕನಿಷ್ಠ ವೇತನ ಏರಿಕೆಯ ಕಟ್ಟಡ ನಿರ್ಮಾಣ, ಲೋಡಿಂಗ್ ಹಾಗೂ ಅನ್‌ಲೋಡಿಂಗ್ ಕಾರ್ಮಿಕರು, ಸೆಕ್ಯುರಿಟಿ ಗಾರ್ಡ್‌ಗಳು, ಹೌಸ್‌ಕೀಪಿಂಗ್, ಗಣಿಗಾರಿಕೆ ಹಾಗೂ ಕೃಷಿ ಕ್ಷೇತ್ರದಲ್ಲಿ ತೊಡಗಿರುವ ಕಾರ್ಮಿಕರ ಕನಿಷ್ಠ ವೇತನದರದಲ್ಲಿ ಏರಿಕೆಯಾಗಲಿದೆ. ಈಗ ನೂತನ ವೇತನ ದರಗಳು 2024ರ ಆಕ್ಟೋಬರ್ 1ರಿಂದ ಜಾರಿಗೆ ಬರಲಿದೆ.
2024 ರಲ್ಲಿ ವೇತನ ಬದಲಾವಣೆ (update) ಮತ್ತು ಹೆಚ್ಚಳ :
ಈ ಮೊದಲು ಕೇಂದ್ರ ಸರಕಾರವು ಈ ವರ್ಷದ ಎಪ್ರಿಲ್‌ನಲ್ಲಿ (April) ಕನಿಷ್ಠ ವೇತನವನ್ನು ಹೆಚ್ಚಿಸಿತ್ತು. ಇದೀಗ 2024 ರ ಎರಡನೇ ವೇತನ ಬದಲಾವಣೆ ಮಾಡುತ್ತಿದೆ. ಕೈಗಾರಿಕಾ ಕಾರ್ಮಿಕರಿಗೆ ಗ್ರಾಹಕ ಬೆಲೆ ಸೂಚ್ಯಂಕದಲ್ಲಿನ ಏರಿಳಿತಗಳ ಆಧಾರದ ಮೇಲೆ ಸರ್ಕಾರವು ಏಪ್ರಿಲ್ ಮತ್ತು ಅಕ್ಟೋಬರ್‌ನಲ್ಲಿ VDA ಅನ್ನು ದ್ವೈವಾರ್ಷಿಕವಾಗಿ ಪರಿಷ್ಕರಿಸುತ್ತದೆ. ವಿವಿಧ ವಲಯಗಳು, ವರ್ಗಗಳು ಮತ್ತು ಪ್ರದೇಶಗಳಿಗೆ ನವೀಕರಿಸಿದ ವೇತನ ದರಗಳ ಕುರಿತು ಹೆಚ್ಚಿನ ವಿವರಗಳನ್ನು ಮುಖ್ಯ ಕಾರ್ಮಿಕ ಆಯುಕ್ತರ (central) ವೆಬ್‌ಸೈಟ್‌ನಲ್ಲಿ clc.gov.in ನಲ್ಲಿ ತಿಳಿಯಬಹುದು.
ಈ ಮಾಹಿತಿಗಳನ್ನು ಓದಿ
ದಯವಿಟ್ಟು ಗಮನಿಸಿ: ನೀಡ್ಸ್ ಆಫ್ ಪಬ್ಲಿಕ್ ತನ್ನ ಓದುಗರಿಗೆ ನಿಖರವಾದ ಮತ್ತು ಅಧಿಕೃತ ಮಾಹಿತಿಗಳನ್ನು ಮಾತ್ರ ಪ್ರಕಟಿಸುತ್ತದೆ. ಇಲ್ಲಿ ನಾವು ಯಾವುದೇ ಅನಧಿಕೃತ ಮತ್ತು ಸುಳ್ಳು ಮಾಹಿತಿಯನ್ನು ಬಿತ್ತರಿಸುವುದಿಲ್ಲ.