ನೀವು ರೈಲು ಮಿಸ್ ಮಾಡ್ಕೊಂಡ್ರಾ! ಹಾಗಿದ್ದರೆ ಅದೇ ಟಿಕೆಟ್ ನಲ್ಲಿ ಇನ್ನೊಂದು ರೈಲಿನಲ್ಲಿ ಪ್ರಯಾಣಿಸುವುದು ಹೇಗೆ ಇಲ್ಲಿದೆ ಮಾಹಿತಿ.
ಭಾರತೀಯ ರೈಲ್ವೆ (Indian Railway) ನಮ್ಮ ದೇಶದ ಜೀವನಾಡಿ ಎಂದು ಕರೆಯುತ್ತಾರೆ. ಪ್ರತಿನಿತ್ಯ ಲಕ್ಷಾಂತರ ಜನರು ರೈಲಿನಲ್ಲಿ ಪ್ರಯಾಣ ಮಾಡುತ್ತಾರೆ. ಈ ಪ್ರಯಾಣಿಕರಲ್ಲಿ ಕೆಲವರು ಕೆಲವು ಸಮಯದಲ್ಲಿ ಟಿಕೆಟ್ ಕಾಯ್ದಿರಿಸುತ್ತಾರೆ. ಇನ್ನು ಕೆಲವರು ಟ್ರೈನ್ ಟಿಕೆಟ್ (Train ticket) ಅನ್ನು ತೆಗೆದುಕೊಂಡು ಟ್ರೈನ್ ಮಿಸ್ ಮಾಡಿಕೊಳ್ಳುವುದನ್ನು ಕಾಣಬಹುದು. ಅದರಲ್ಲೂ ಟ್ರೈನ್ ಮಿಸ್ ಮಾಡಿಕೊಳ್ಳುವುದು ಈಗ ಕಾಮನ್ ವಿಷಯವಾಗಿದೆ. ಮನೆಯಿಂದ ಲೇಟಾಗಿ ಹೊರಡುವುದರಿಂದ ಹಿಡಿದು ಟ್ರಾಫಿಕ್ ನಲ್ಲಿ ಸಿಲುಕಿ ಕೊಳ್ಳುವುದು ಅಥವಾ ಇನ್ನೂ ಹಲವು ಕಾರಣಕ್ಕೆ ರೈಲು ಮಿಸ್ ಮಾಡಿಕೊಳ್ಳಬಹುದು. ಇದರಿಂದ ಪ್ರಯಾಣಿಕರಿಗೆ ಆರ್ಥಿಕ ನಷ್ಟ ಉಂಟಾಗುವ ಸಂಭವಗಳು ಹೆಚ್ಚಾಗಿ ಇರುತ್ತವೆ. ಭಾರತೀಯ ರೈಲ್ವೇಯಿಂದ ನವೀಕರಿಸಿದ ನಿಯಮಗಳ ಪ್ರಕಾರ ತಾವು ಹತ್ತಬೇಕಿದ್ದ ರೈಲು ಮಿಸ್ ಮಾಡಿಕೊಂಡರೆ ಆ ರೈಲಿನ ಟಿಕೆಟ್ ಹಣ ವಾಪಸ್ ಸಿಗಬಹುದು ಅಥವಾ ಬೇರೆ ರೈಲಿನಲ್ಲಿ ಪ್ರಯಾಣ ಮಾಡಬಹುದು. ರೈಲು ರದ್ದಾದರೆ ಪ್ರಯಾಣಿಕರು ಹಣ ವಾಪಸ್ ಪಡೆಯಬಹುದು ಎಂಬುದು ಬಹುತೇಕ ಎಲ್ಲರಿಗೂ ಗೊತ್ತಿರುವ ವಿಚಾರ. ಆದರೆ ನೀವು ನಿಮ್ಮ ರೈಲು ತಪ್ಪಿಸಿಕೊಂಡರೂ ಸಹ ಆರ್ಥಿಕ ನಷ್ಟ ಉಂಟಾಗುವುದರಿಂದ ತಪ್ಪಿಸಿಕೊಳ್ಳಬಹುದು. ಅದು ಹೇಗೆ ಎಂಬ ಸಂಪೂರ್ಣ ಮಾಹಿತಿಯನ್ನು ತಿಳಿದುಕೊಳ್ಳೋಣ ಬನ್ನಿ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ
ಹೌದು, ಭಾರತೀಯ ರೈಲ್ವೆಯಿಂದ ನವೀಕರಿಸಿದ ನಿಯಮಗಳ ಪ್ರಕಾರ ಪ್ರಯಾಣಿಕರು ಒಂದು ವೇಳೆ ರೈಲನ್ನು ಮಿಸ್ ಮಾಡಿಕೊಂಡರೆ ಅವರು ಅದೇ ಟಿಕೆಟ್ ನೊಂದಿಗೆ ಬೇರೆ ರೈಲಿನಲ್ಲಿ ಪ್ರಯಾಣ ಮಾಡಬಹುದು ಅಥವಾ ಆ ಟಿಕೆಟ್ ಹಣವನ್ನು (Ticket money) ಹಿಂಪಡೆಯಬಹುದು. ಸಾಮಾನ್ಯವಾಗಿ ಪ್ರಯಾಣಿಕರು ಎರಡು ರೀತಿಯಾದ ಟಿಕೆಟ್ ಗಳನ್ನು ಪಡೆದುಕೊಂಡಿರುತ್ತಾರೆ. ಒಂದು ಕಾಯ್ದಿರಿಸಿದ ಟಿಕೆಟ್ ಗಳು ಇನ್ನೊಂದು ಜನರಲ್ ಕೋಚ್ ಟಿಕೆಟ್ಗಳು (General coach tickets). ಕಾಯ್ದಿರಿಸಿದ ಟಿಕೆಟ್ ಗಳಲ್ಲಿ ಪ್ರಯಾಣಿಕರು ಅವರ ಸೀಟ್ ಗಳನ್ನು ಮೊದಲೇ ಬುಕ್ ಮಾಡಿಕೊಂಡಿರುತ್ತಾರೆ. ಆದರೆ ಜನರಲ್ ಕೋಚ್ ಟಿಕೆಟ್ ಗಳಲ್ಲಿ ಮೊದಲು ಟ್ರೈನ್ ಹತ್ತಿದ ಕೆಲವು ಪ್ರಯಾಣಿಕರಿಗೆ ಸೀಟ್ ಸಿಗುತ್ತದೆ. ಆದ್ದರಿಂದ ಪ್ರಯಾಣಿಕರು ರೈಲು ಹತ್ತುವ ಮುಂಚೆಯೇ ತಮಗೆ ಇಷ್ಟವಾದಂತಹ ಕೋಚ್ ಗಳಲ್ಲಿ ಟಿಕೆಟ್ ಗಳನ್ನು ಪಡೆದುಕೊಳ್ಳುತ್ತಾರೆ.
ಜನರಲ್ ಕೋಚ್ ಟಿಕೆಟ್ಗಳು:
ಪ್ರಯಾಣಿಕರು ಒಂದು ವೇಳೆ ಜನರಲ್ ಕೋಚ್ ಅಥವಾ ಸಾಮಾನ್ಯ ಕೋಚ್ ಟಿಕೆಟ್ ಹೊಂದಿದ್ದರೆ ಅಂತಹ ಪ್ರಯಾಣಿಕರು ತಪ್ಪಿಸಿಕೊಂಡಿರುವಂತಹ ರೈಲಿನ ಟಿಕೆಟ್ ಅನ್ನು ಬಳಸಿಕೊಂಡು ಇನ್ನೊಂದು ರೈಲಿನಲ್ಲಿ ಪ್ರಯಾಣ ಮಾಡಬಹುದು. ಆದರೆ ವಂದೇ ಭಾರತ್, ಸೂಪರ್ಫಾಸ್ಟ್ ಅಥವಾ ರಾಜಧಾನಿ ಎಕ್ಸ್ ಪ್ರೆಸ್ ನಂತಹ ಕೆಲವು ರೈಲುಗಳು ಸಾಮಾನ್ಯ ರೈಲುಗಳಿಗೆ ಹೋಲಿಸಿಕೊಂಡರೆ ಹೆಚ್ಚಿನ ನಿರ್ಬಂಧಗಳನ್ನು ಹೇರಿರುತ್ತವೆ ಹಾಗೂ ರೈಲಿನ ಪ್ರಯಾಣದ ದರಕ್ಕೆ ಹೋಲಿಸಿದರೆ ಭಾರಿ ವ್ಯತ್ಯಾಸಗಳನ್ನು ಕಾಣಬಹುದು. ಆದ್ದರಿಂದ ಈ ಸೂಕ್ಷ್ಮತೆಗಳನ್ನು ಗಮನದಲ್ಲಿಟ್ಟುಕೊಂಡು ರೈಲು ಮಿಸ್ (train miss) ಆದರೆ ಇನ್ನೊಂದು ಟ್ರೈನ್ ನಲ್ಲಿ ಪ್ರಯಾಣಿಕರು ಪ್ರಯಾಣಿಸಬಹುದು.
ಕಾಯ್ದಿರಿಸಿದ ಟಿಕೆಟ್ಗಳು:
ಆದರೆ ಪ್ರಯಾಣಿಕರು ಒಂದು ವೇಳೆ ತಮ್ಮ ಸೀಟ್ (seat) ಗಳನ್ನು ಕಾಯ್ದಿರಿಸಲು ಕಾಯ್ದಿರಿಸಿದ ಟಿಕೆಟ್ ಗಳನ್ನು ಹೊಂದಿದ್ದರೆ ಅಂತಹ ಪ್ರಯಾಣಿಕರಿಗೆ ಇನ್ನೊಂದು ರೈಲ್ ನಲ್ಲಿ ಅದೇ ಟಿಕೆಟ್ ಬಳಸಿಕೊಂಡು ಪ್ರಯಾಣಿಸುವ ಅವಕಾಶ ಇಲ್ಲ. ಒಂದು ವೇಳೆ ಪ್ರಯಾಣಿಕರು ಬೇರೆ ರೈಲಿನ ಟಿಕೆಟ್ ನೊಂದಿಗೆ ಇನ್ನೊಂದು ರೈಲಿನಲ್ಲಿ ಪ್ರಯಾಣಿಸಿದರೆ ದಂಡ ಕಟ್ಟ ಬೇಕಾಗಬಹುದು.
ನೀವು ಪ್ರಯಾಣಿಸಬೇಕಿದ್ದ ರೈಲು ಮಿಸ್ ಆದರೆ ಟಿಕೆಟ್ ಹಣ ಮರುಪಾವತಿಗೂ ಕೂಡ ಅವಕಾಶ ಕಲ್ಪಿಸಲಾಗಿದೆ:
ಒಂದು ವೇಳೆ ನೀವು ನೀವು ಪ್ರಯಾಣಿಸಬೇಕಿದ್ದಂತಹ ರೈಲು ಮಿಸ್ ಮಾಡಿಕೊಂಡರೆ ಅಥವಾ ಅದೇ ಟಿಕೆಟ್ ನಿಂದ ಇನ್ನೊಂದು ರೈಲಿನಲ್ಲಿ ಪ್ರಯಾಣ ಮಾಡಲು ಸಾಧ್ಯವಾಗದಿದ್ದರೆ ಅಂತಹ ಪ್ರಯಾಣಿಕರು ಮರುಪಾವತಿಗೆ ಅರ್ಜಿ ಸಲ್ಲಿಸಲು ಅರ್ಹರಾಗಿರುತ್ತಾರೆ.
ಟಿಕೆಟ್ ರದ್ದತಿಗಾಗಿ (ticket cancel) ಮರುಪಾವತಿ ನಿಯಮಗಳು:
ಭಾರತೀಯ ರೈಲ್ವೆಯು ಈ ಕೆಳಗಿನ ಮರುಪಾವತಿ ರಚನೆಯನ್ನು ನೀಡುತ್ತದೆ. ಒಂದುವೇಳೆ ರೈಲು ಟಿಕೆಟ್ ಅನ್ನು ರದ್ದುಗೊಳಿಸಲು ನೀವು ನಿರ್ಧರಿಸಿದರೆ,
ನಿರ್ಗಮನಕ್ಕೆ 48-12 ಗಂಟೆಗಳ ಮೊದಲು ರದ್ದುಗೊಂಡ ದೃಢೀಕೃತ ಟಿಕೆಟ್ಗಳಿಗೆ: ಒಟ್ಟು ದರದಿಂದ 25% ಕಡಿತ ಮಾಡಿಕೊಳ್ಳಲಾಗುತ್ತದೆ.
ನಿರ್ಗಮನದ 12-4 ಗಂಟೆಗಳ ಮೊದಲು ರದ್ದುಗೊಂಡ ಟಿಕೆಟ್ಗಳಿಗೆ: ಒಟ್ಟು ದರದಿಂದ 50% ಕಡಿತ ಮಾಡಿಕೊಳ್ಳಲಾಗುತ್ತದೆ.
ವೇಟ್ಲಿಸ್ಟ್ ಮತ್ತು RAC ಟಿಕೆಟ್ಗಳಿಗಾಗಿ: ರೈಲು ಹೊರಡುವ ಕನಿಷ್ಠ 30 ನಿಮಿಷಗಳ ಮೊದಲು ಇವುಗಳನ್ನು ರದ್ದುಗೊಳಿಸಬೇಕು. ಇಲ್ಲದಿದ್ದರೆ, ಯಾವುದೇ ಮರುಪಾವತಿಯನ್ನು ನೀಡಲಾಗುವುದಿಲ್ಲ.
IRCTC ಅಪ್ಲಿಕೇಶನ್ ಮೂಲಕ ಮರುಪಾವತಿ ವಿನಂತಿಯನ್ನು ಸಲ್ಲಿಸಲು ತ್ವರಿತ ಮಾರ್ಗದರ್ಶಿ :
ನಿಮ್ಮ IRCTC ಖಾತೆಗೆ ಲಾಗ್ ಇನ್ ಮಾಡಿ.
“ಟ್ರೈನ್” ಆಯ್ಕೆಗೆ ಹೋಗಿ ಮತ್ತು “ಫೈಲ್ ಟಿಡಿಆರ್” (ಟಿಕೆಟ್ ಠೇವಣಿ ರಸೀದಿ) ಆಯ್ಕೆಮಾಡಿ.
ನಿಮ್ಮ ತಪ್ಪಿದ ರೈಲು ಟಿಕೆಟ್ ಅನ್ನು ಆಯ್ಕೆಮಾಡಿ ಮತ್ತು ಮರುಪಾವತಿಗಾಗಿ TDR ಅನ್ನು ಸಲ್ಲಿಸಲು ಪ್ರಾಂಪ್ಟ್ಗಳನ್ನು ಅನುಸರಿಸಿ.
ಗಮನಿಸಿ (notice) :
TDR ಅನ್ನು ಸಲ್ಲಿಸಿದ ನಂತರ, ಸಾಮಾನ್ಯವಾಗಿ 60 ದಿನಗಳಲ್ಲಿ ಮರುಪಾವತಿಗಳನ್ನು ಪ್ರಕ್ರಿಯೆಗೊಳಿಸಲಾಗುತ್ತದೆ.
ಈ ಮಾಹಿತಿಗಳನ್ನು ಓದಿ
ದಯವಿಟ್ಟು ಗಮನಿಸಿ: ನೀಡ್ಸ್ ಆಫ್ ಪಬ್ಲಿಕ್ ತನ್ನ ಓದುಗರಿಗೆ ನಿಖರವಾದ ಮತ್ತು ಅಧಿಕೃತ ಮಾಹಿತಿಗಳನ್ನು ಮಾತ್ರ ಪ್ರಕಟಿಸುತ್ತದೆ. ಇಲ್ಲಿ ನಾವು ಯಾವುದೇ ಅನಧಿಕೃತ ಮತ್ತು ಸುಳ್ಳು ಮಾಹಿತಿಯನ್ನು ಬಿತ್ತರಿಸುವುದಿಲ್ಲ