5 ಲಕ್ಷ ರೂ. ವರೆಗೆ ಚಿಕಿತ್ಸೆ & ವಿಮಾ ಸೌಲಭ್ಯದ ‘ಆಯುಷ್ಮಾನ್’ ನೋಂದಣಿ ಈಗಲೇ ಮಾಡಿ

IMG 20241003 WA0001

5 ಲಕ್ಷ ರೂ. ವರೆಗೆ ಚಿಕಿತ್ಸೆ ಪ್ರತ್ಯೇಕ ವಿಮಾ ಸೌಲಭ್ಯವನ್ನು (Insurance facility) ಆಯುಷ್ಮಾನ್ ಯೋಜನೆಯಲ್ಲಿ ಪಡೆಯಬಹುದು.

ಪ್ರಧಾನ ಮಂತ್ರಿ ಜನ ಆರೋಗ್ಯ ಯೋಜನೆ (PMJAY) ಎಂದೂ ಕರೆಯಲ್ಪಡುವ ಆಯುಷ್ಮಾನ್ ಭಾರತ್ ಯೋಜನೆಯು (Ayushman Bharat Scheme) ಆರೋಗ್ಯ ಸೌಲಭ್ಯಗಳ ಅಗತ್ಯವಿರುವ ಸಮಾಜದ ಆರ್ಥಿಕವಾಗಿ ದುರ್ಬಲ ವರ್ಗಕ್ಕೆ ಸಹಾಯ ಮಾಡುವ ಗುರಿಯನ್ನು ಹೊಂದಿರುವ ಯೋಜನೆಯಾಗಿದೆ. PMJAY ಯೋಜನೆಯನ್ನು ಪ್ರಧಾನ ಮಂತ್ರಿಯವರು ಆರಂಭಿಸಿದ್ದು, ಈ ಆರೋಗ್ಯ ವಿಮಾ ಯೋಜನೆಯು ಭಾರತದಲ್ಲಿ ಸುಮಾರು ಐವತ್ತು ಕೋಟಿ ನಾಗರಿಕರನ್ನು ಒಳಗೊಂಡಿದೆ. ಆಯುಷ್ಮಾನ್ ಕಾರ್ಡ್ ಈಗಾಗಲೇ ಹಲವಾರು ಜನರ ಬಾಳಿನಲ್ಲಿ ಬೆಳಕಾಗಿದೆ. PMJAY ಯೋಜನೆಯಲ್ಲಿ ಹಲವು ಸೌಲಭ್ಯಗಳಿದ್ದು, ಇದೀಗ 70 ವರ್ಷಕ್ಕಿಂತ ಮೇಲ್ಪಟ್ಟ ಎಲ್ಲಾ ಹಿರಿಯ ನಾಗರಿಕರಿಗೆ ಈ ಯೋಜನೆಯಿಂದ ಸಿಹಿ ಸುದ್ದಿ ತಿಳಿದು ಬಂದಿದೆ. ಅದರ ಬಗ್ಗೆ ಸಂಪೂರ್ಣ ಮಾಹಿತಿಯನ್ನು ತಿಳಿದುಕೊಳ್ಳೋಣ ಬನ್ನಿ.

ಹೌದು, 70 ವರ್ಷ ಮೇಲ್ಪಟ್ಟ ಹಿರಿಯ ನಾಗರಿಕರಿಗೆ ಕೇಂದ್ರ ಸರ್ಕಾರವು ಸಿಹಿಸುದ್ದಿ ನೀಡಿದ್ದು, ಈ ಸಿಹಿ ಸುದ್ದಿಯಿಂದ 70 ವರ್ಷ ಮೇಲ್ಪಟ್ಟ ಹಿರಿಯರಿಗೆ 5 ಲಕ್ಷ ರೂಪಾಯಿವರೆಗೆ ಉಚಿತ ಚಿಕಿತ್ಸೆ ನೀಡಲಾಗುವುದು. ನಿಮ್ಮ ಕುಟುಂಬವು ಯೋಜನೆಗೆ ಅರ್ಹವಾಗಿದೆಯೇ ಅಥವಾ ಇಲ್ಲವೇ ಎಂಬುದರ ಹೊರತಾಗಿಯೂ, ಹಿರಿಯ ನಾಗರಿಕರು ಇದರ ಪ್ರಯೋಜನವನ್ನು ಪಡೆಯುತ್ತಾರೆ. ಕೇಂದ್ರ ಸರ್ಕಾರದಿಂದ ಪರಿಷ್ಕೃತ ಆಯುಷ್ಮಾನ್ ಯೋಜನೆಯಡಿ ಹಿರಿಯರಿಗೆ 5 ಲಕ್ಷ ರೂ.ವರೆಗೆ ಪ್ರತ್ಯೇಕ ವಿಮಾ ಸೌಲಭ್ಯವನ್ನು (A separate insurance facility) ಮಾಡಿಕೊಡಲಾಗಿದೆ.

ಹಿರಿಯರು ಈ ಸೌಲಭ್ಯವನ್ನು ಪಡೆಯಬೇಕೆಂದರೆ ಮೊದಲು ಅವರು ಯೋಜನೆಯಲ್ಲಿ ನೋಂದಣಿ ಮಾಡಿಕೊಳ್ಳಬೇಕು. ನೋಂದಣಿ ಮಾಡಿಕೊಂಡ ನಂತರ ಹಿರಿಯ ನಾಗರಿಕರಿಗೆ ಹೊಸ ಕಾರ್ಡ್ (New card) ನೀಡಲಾಗುತ್ತದೆ. ಆಯುಷ್ಮಾನ್ ಭಾರತ್ ಯೋಜನೆಯಡಿ ಉಚಿತ ಚಿಕಿತ್ಸೆ ಪಡೆಯಲು, ನೋಂದಣಿ ಅತ್ಯಗತ್ಯ. ಈ ಯೋಜನೆಯ ಲಾಭವನ್ನು ಕೇವಲ ಬಡವರಷ್ಟೇ ಅಲ್ಲ ಶ್ರೀಮಂತರು ಕೂಡ ಪಡೆಯಬಹುದು.

ಈ ಯೋಜನೆಯಡಿ ಯಾವ ಯಾವ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯಬಹುದು?:

ಆಯುಷ್ಮಾನ್ ಕಾರ್ಡ್‌ಗಳ ಸಂಖ್ಯೆ ವೇಗವಾಗಿ ಹೆಚ್ಚುತ್ತಿದ್ದು, ಸರ್ಕಾರ ನೀಡಿರುವ ಅಂಕಿ ಅಂಶಗಳ ಪ್ರಕಾರ ಈಗಾಗಲೇ 34 ಕೋಟಿಗು ಹೆಚ್ಚು ಆಯುಷ್ಮಾನ್ ಕಾರ್ಡ್ ಗಳನ್ನು ನೀಡಲಾಗಿದೆ. ಅದರಲ್ಲೂ ಜೂನ್ 30, 2024 ರವೇಳೆಯಲ್ಲಿ 1 ಲಕ್ಷ ಕೋಟಿ ರೂಪಾಯಿ ಮೌಲ್ಯದ 7.37 ಕೋಟಿ ರೋಗಿಗಳನ್ನು ಆಸ್ಪತ್ರೆಗೆ ದಾಖಲಿಸಲು ಅನುಮೋದನೆ ನೀಡಲಾಗಿದ್ದು, ಅರ್ಹ ಫಲಾನುಭವಿಗಳು ದೇಶದಾದ್ಯಂತ 29,000 ಕ್ಕೂ ಹೆಚ್ಚು ಪಟ್ಟಿ ಮಾಡಲಾದ ಆಸ್ಪತ್ರೆಗಳಲ್ಲಿ ನಗದುರಹಿತ ಮತ್ತು ಕಾಗದರಹಿತ ಆರೋಗ್ಯ ಸೇವೆಗಳನ್ನು ಪಡೆಯಬಹುದು.

ಹಿರಿಯರ ಹಿತದೃಷ್ಟಿಯಿಂದ ಸರ್ಕಾರ (governament) ಈ ನಿರ್ಧಾರ ಕೈಗೊಂಡಿದೆ:

ಸಂಪುಟ ಸಭೆಯ ನಿರ್ಧಾರಗಳನ್ನು ಪ್ರಕಟಿಸಿದ ಕೇಂದ್ರ ಸಚಿವ ಅಶ್ವಿನಿ ವೈಷ್ಣವ್, 70 ವರ್ಷಕ್ಕಿಂತ ಮೇಲ್ಪಟ್ಟ ವೃದ್ಧರನ್ನು ಸಹ ಸೇರಿಸುವುದು ಮತ್ತು 4.5 ರ 6 ಕೋಟಿ ಹಿರಿಯ ನಾಗರಿಕರಿಗೆ ಪ್ರಯೋಜನಗಳನ್ನು ಒದಗಿಸುವ ಉದ್ದೇಶದಿಂದ ಆಯುಷ್ಮಾನ್ ಭಾರತ್ ಯೋಜನಾ ನಿಯಮದ ಬದಲಾವಣಾ ನಿರ್ಧಾರ ತೆಗೆದುಕೊಳ್ಳಲಾಗಿದೆ. ಕೋಟ್ಯಾಂತರ ಕುಟುಂಬಗಳು 5 ಲಕ್ಷದ ಉಚಿತ ಆರೋಗ್ಯ ವಿಮೆಯ ಪ್ರಯೋಜನ ಪಡೆಯಲಿವೆ.

ಈ ಯೋಜನೆಯಡಿ ಪ್ರತ್ಯೇಕ ವಿಮಾ ಸೌಲಭ್ಯವು ಕೂಡ ಸಿಗಲಿದೆ :

ಈಗಾಗಲೇ ನೀಡಿರುವ ಆಯುಷ್ಮಾನ್ ಕಾರ್ಡಿನಲ್ಲಿ ಸಮೂಹ ವಿಮಾ ಸೌಲಭ್ಯವಿದ್ದು, ಈ ಯೋಜನೆಗೆ ನೋಂದಣಿ ಮಾಡಿಕೊಳ್ಳುವ ಮುಖಾಂತರ ಇವರಿಗೆ ಪ್ರತ್ಯೇಕ ಆಯುಷ್ಮಾನ್ ಕಾರ್ಡ್ ನೀಡಲಾಗುತ್ತಿದೆ. ಇದರಿಂದ ಇಡೀ ಕುಟುಂಬಕ್ಕೆ 5 ಲಕ್ಷ ರೂ ಲಭಿಸುವ ಜೊತೆ ಜೊತೆಯಲ್ಲಿ ಹಿರಿಯರಿಗೆ ಪ್ರತ್ಯೇಕವಾಗಿ 5 ಲಕ್ಷ ರೂ. ವಿಮೆ ಕೂಡ ಲಭಿಸುತ್ತದೆ. ಈಗಾಗಲೇ ಹಿರಿಯರು ಪ್ರತ್ಯೇಕ ರಾಜ್ಯ ಸರ್ಕಾರಿ ವಿಮೆ ಹೊಂದಿದ್ದರೆ ಅವರು ಆಯುಷ್ಮಾನ್ ಅಥವಾ ರಾಜ್ಯ ಸರ್ಕಾರಿ ವಿಮೆ ಆಯ್ಕೆ ಮಾಡಿಕೊಳ್ಳಬೇಕು. ಆದರೆ ಅವರು ಎರಡರ ಸೌಲಭ್ಯವನ್ನು ಪಡೆದುಕೊಳ್ಳಲು ಸಾಧ್ಯವಿಲ್ಲ. ಒಂದು ವೇಳೆ ಹಿರಿಯರು ಖಾಸಗಿ ಆರೋಗ್ಯ ವಿಮೆ ಹೊಂದಿದ್ದರೆ ಅವರಿಗೆ ಈ ಷರತ್ತು ಅನ್ವಯಿಸುವುದಿಲ್ಲ.

ಹಿರಿಯರು ಈ ಯೋಜನೆಗೆ ನೋಂದಣಿ ಮಾಡಿಕೊಳ್ಳುವುದು ಹೇಗೆ?:

ಆಯುಷ್ಮಾನ್ ಆಯಪ್ ಅಥವಾ beneficiary.nha.gov.in ವೆಬ್ ಪೋರ್ಟಲ್ ನಲ್ಲಿ ಬದಲಾವಣೆ ಮಾಡಿ 70 ವರ್ಷ ಹಾಗೂ 70 ವರ್ಷಕ್ಕಿಂತ ಮೇಲ್ಪಟ್ಟವರಿಗೆ ಪ್ರತ್ಯೇಕ ಮಾಡ್ಯೂಲ್ ನೀಡಲಾಗಿದೆ. ಅದರಲ್ಲಿ ಈ ವಯೋಮಾನದ ವೃದ್ಧರನ್ನು ನೋಂದಣಿ ಮಾಡಿಕೊಳ್ಳುವಂತೆ ಸರ್ಕಾರ ತಿಳಿಸಿದ್ದು, ಇವರಿಗೆ ಪ್ರತ್ಯೇಕ ಆಯುಷ್ಮಾನ್ ಕಾರ್ಡ್ ನೀಡಲಾಗುವುದು.

ಮೊದಲಿಗೆ ‘Ayushman’ ಅಪ್ಲಿಕೇಶನ್ ಅನ್ನು ಡೌನ್‌ಲೋಡ್ ಮಾಡಿ ಅಥವಾ https://beneficiary.nha.gov.in ಗೆ ಭೇಟಿ ನೀಡಿ.
ಬಳಕೆದಾರ ಲಾಗಿನ್ ರಚಿಸಲು ನಿಮ್ಮ ಮೊಬೈಲ್ ಸಂಖ್ಯೆಯನ್ನು ನಮೂದಿಸಿ.
ನಿಮ್ಮ ಫೋನ್‌ನಲ್ಲಿ ಸ್ವೀಕರಿಸಿದ OTP ಅನ್ನು ನಮೂದಿಸಿ.
ನಿಮ್ಮ ಹೆಸರು, ಆಧಾರ್ ಸಂಖ್ಯೆ ಅಥವಾ ಪಡಿತರ ಚೀಟಿಯನ್ನು ಬಳಸಿಕೊಂಡು ಅರ್ಹತೆಯನ್ನು ಪರಿಶೀಲಿಸಿ.
ಅರ್ಹತೆ ಇದ್ದರೆ ಆಧಾರ್ ಇ-ಕೆವೈಸಿ ಜೊತೆಗೆ ವಿವರಗಳನ್ನು ಪರಿಶೀಲಿಸಿ.
ಎಲ್ಲಾ ವಿವರಗಳನ್ನು ಭರ್ತಿ ಮಾಡಿದ ನಂತರ ನಿಮ್ಮ ಇತ್ತೀಚಿನ ಫೋಟೋವನ್ನು ಅಪ್‌ಲೋಡ್ ಮಾಡಿ. ನಂತರ, ನಿಮ್ಮ ಆಯುಷ್ಮಾನ್ ಭಾರತ್ ಕಾರ್ಡ್ ಅನ್ನು ಡೌನ್‌ಲೋಡ್ ಮಾಡಿ.

ಈ ಯೋಜನೆಗೆ ಅರ್ಜಿ ಸಲ್ಲಿಸಲು ಇರಬೇಕಾದ ದಾಖಲೆಗಳು (Documents) :

ಆಧಾರ್ ಸಂಖ್ಯೆ ಮತ್ತು ಆಧಾರ್ ಕಾರ್ಡ್‌ನ ಸ್ವಯಂ-ದೃಢೀಕರಿಸಿದ ಪ್ರತಿ (ಅರ್ಜಿದಾರರು ಅನಕ್ಷರಸ್ಥರಾಗಿದ್ದರೆ, ಅಂತಹ ಸಂದರ್ಭದಲ್ಲಿ ಅರ್ಜಿದಾರರ ಹೆಬ್ಬೆರಳಿನ ಗುರುತಿನೊಂದಿಗೆ ಒಪ್ಪಿಗೆ ಪತ್ರವನ್ನು ಪಡೆಯಬೇಕು).
ಜಾಬ್ ಕಾರ್ಡ್ (MGNREGA ಯಲ್ಲಿ ಸರಿಯಾಗಿ ನೋಂದಾಯಿಸಲಾಗಿದೆ).
ಬ್ಯಾಂಕ್ ಖಾತೆ ವಿವರಗಳು – ಮೂಲ ಮತ್ತು ನಕಲು ಎರಡೂ.
ಸ್ವಚ್ಛ ಭಾರತ್ ಮಿಷನ್ (SBM) ಸಂಖ್ಯೆ.
ಫಲಾನುಭವಿಗಳು ಅಥವಾ ಅವರ ಕುಟುಂಬದ ಸದಸ್ಯರು ಪಕ್ಕಾ ಮನೆ ಹೊಂದಿಲ್ಲ ಎಂದು ಹೇಳುವ ಅಫಿಡವಿಟ್.

ಯಾವ ರೋಗಗಳಿಗೆ ಚಿಕಿತ್ಸೆ ನೀಡಲಾಗುವುದು?:

ಈ ಯೋಜನೆಯ ಬಡವರಿಗೆ ಆರೋಗ್ಯ ಸೇವೆಗಳ ಪ್ರಯೋಜನವನ್ನು ನೀಡುವ ಜೊತೆಯಲ್ಲಿ ಜೀವನದ ಬಗ್ಗೆ ಹೊಸ ಭರವಸೆಯನ್ನು ಕೂಡ ಮೂಡಿಸುತ್ತಿದೆ. ಬಹುತೇಕ ಎಲ್ಲಾ ರೀತಿಯ ಗಂಭೀರ ಕಾಯಿಲೆಗಳಿಗೆ ಈ ಯೋಜನೆಯಡಿ ಚಿಕಿತ್ಸೆ ನೀಡಲಾಗುತ್ತದೆ. ಹೃದಯ ಶಸ್ತ್ರಚಿಕಿತ್ಸೆ, ಕ್ಯಾನ್ಸರ್ ಚಿಕಿತ್ಸೆ, ಮೂತ್ರಪಿಂಡ ಕಸಿ, ಕಣ್ಣು ಮತ್ತು ಕಿವಿ ಶಸ್ತ್ರಚಿಕಿತ್ಸೆಗಳು ಸೇರಿದಂತೆ 1,500 ಕ್ಕೂ ಹೆಚ್ಚು ವೈದ್ಯಕೀಯ ಪ್ರಕ್ರಿಯೆಗಳು ಈ ಯೋಜನೆಯಡಿಯಲ್ಲಿ ಒಳಗೊಂಡಿವೆ.

ಈ ಮಾಹಿತಿಗಳನ್ನು ಓದಿ

 


ದಯವಿಟ್ಟು ಗಮನಿಸಿ: ನೀಡ್ಸ್ ಆಫ್ ಪಬ್ಲಿಕ್ ತನ್ನ ಓದುಗರಿಗೆ ನಿಖರವಾದ ಮತ್ತು ಅಧಿಕೃತ ಮಾಹಿತಿಗಳನ್ನು ಮಾತ್ರ ಪ್ರಕಟಿಸುತ್ತದೆ. ಇಲ್ಲಿ ನಾವು ಯಾವುದೇ ಅನಧಿಕೃತ ಮತ್ತು ಸುಳ್ಳು ಮಾಹಿತಿಯನ್ನು ಬಿತ್ತರಿಸುವುದಿಲ್ಲ

WhatsApp Group Join Now
Telegram Group Join Now

Related Posts

Leave a Reply

Your email address will not be published. Required fields are marked *

error: Content is protected !!