ಬ್ಯಾಂಕ್ ಗಳಿಗೆ (Bank) ಹೋಗುವ ಮುನ್ನ ಎಚ್ಚರ : ಅಕ್ಟೋಬರ್ (October) ತಿಂಗಳು 15 ದಿನಗಳು ಬ್ಯಾಂಕ್ ಗಳು ರಜೆಯಲ್ಲಿರುತ್ತವೆ.
ವಾಸ್ತವವಾಗಿ ರಜೆ ಎಂದರೆ ಎಲ್ಲರಿಗೂ ಖುಷಿಕೊಡುವ ಸಂಗತಿ ಆದರೆ ಕೆಲವೊಮ್ಮೆ ಕೆಲವೊಬ್ಬರಿಗೆ ಈ ರಜೆ ಯಾಕೆ ಆದ್ರೂ ಬಂತೋ ಅನ್ನಿಸಿ ಬಿಡುತ್ತದೆ. ಅದರಲ್ಲೂ ಬ್ಯಾಂಕ್ ರಜೆಗಳು. ಯಾಕೆಂದರೆ ಯಾವಾಗ, ಯಾವ ಸಂದರ್ಭದಲ್ಲಿಯಾದರೂ ತುರ್ತು ಸಂದರ್ಭಗಳು ಎದುರಾಗಬಹುದು. ಆದರೆ ಇಂದು ನಾವು ಟೆಕ್ನಾಲಜಿಯನ್ನು ಬಳಕೆ ಮಾಡಿಕೊಳ್ಳುತ್ತಿರುವುದರಿಂದ ಬ್ಯಾಂಕ್ ಅವಶ್ಯಕತೆ ಹೆಚ್ಚೇನೂ ಇರುವುದಿಲ್ಲ ಎಂದು ಅನಿಸುವುದುಂಟು. ಆದರೆ ಕೆಲವೊಮ್ಮೆ ಬಹಳ ಮುಖ್ಯವಾದ ಕೆಲಸಗಳಿಗೆ ಬ್ಯಾಂಕ್ ಗಳಿಗೆ ತೆರಳುವ ಸಂದರ್ಭ ಎದುರಾಗಿಯೇ ಎದುರಾಗುತ್ತದೆ. ಈ ನಿಟ್ಟಿನಲ್ಲಿ ನೋಡುವುದಾದರೆ ಅಕ್ಟೋಬರ್ ತಿಂಗಳು ಹೆಚ್ಚು ದಿನಗಳು ಬ್ಯಾಂಕ್ ರಜೆಯಲ್ಲಿರುತ್ತವೆ. ಎಷ್ಟು ದಿನಗಳು ಬ್ಯಾಂಕ್ ರಜೆಯಲ್ಲಿ ಇರುತ್ತವೆ? ಯಾವ ಯಾವ ದಿನ? ಎಂಬ ಸಂಪೂರ್ಣ ಮಾಹಿತಿಯನ್ನು ತಿಳಿದುಕೊಳ್ಳೋಣ ಬನ್ನಿ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ
ಹೌದು, ಆರ್‌ಬಿಐ (RBI) ರಜೆಯ ಕ್ಯಾಲೆಂಡರ್ ಪ್ರಕಾರ, ಈ ತಿಂಗಳಲ್ಲಿ (ಅಕ್ಟೋಬರ್)ನಲ್ಲಿ ಸುಮಾರು 15 ದಿನ ಬ್ಯಾಂಕುಗಳು ಮುಚ್ಚಿರಲಿವೆ. ಹೀಗಾಗಿ ನಿಮಗೆ ಬ್ಯಾಂಕ್ ಗೆ ಸಂಬಂಧಿಸಿದ ಯಾವುದೇ ಕೆಲಸವಿದ್ದರೂ ಈ ರಜೆಗಳನ್ನು ಒಮ್ಮೆ ಗಮನದಲ್ಲಿಟ್ಟುಕೊಳ್ಳಿ. ಅಕ್ಟೋಬರ್ ತಿಂಗಳಲ್ಲಿ ಇರುವ 30 ದಿನಗಳಲ್ಲಿ 15 ದಿನ ಬ್ಯಾಂಕುಗಳಿಗೆ ರಜೆ ಇದೆ. ಕೆಲವೆಡೆ ಸತತ ಐದು ದಿನ ಬ್ಯಾಂಕ್ ಗಳು ರಜೆಯಲ್ಲಿರುತ್ತವೆ. ಕರ್ನಾಟಕದಲ್ಲಿ ಅಕ್ಟೋಬರ್ನಲ್ಲಿ 12 ಬ್ಯಾಂಕ್ ರಜಾದಿನಗಳಿವೆ(Bank Holidays). ಇದರಲ್ಲಿ ಎರಡು ಶನಿವಾರ ಮತ್ತು ನಾಲ್ಕು ಭಾನುವಾರದ ರಜೆಗಳೂ ಸೇರಿಕೊಂಡಿವೆ.
ಈ ತಿಂಗಳು ಬ್ಯಾಂಕ್ ಗಳಿಗೆ ಹೋಗದೆ ನಿಮ್ಮ ಕಾರ್ಯಗಳನ್ನು ಮುಂದೂಡಿದ್ದೀರಾ? ನಿಮ್ಮ ಕೆಲಸ ಕಾರ್ಯಗಳಿಗೆ ಬ್ಯಾಂಕ್ ಗಳನ್ನು ಅವಲಂಬಿಸಿದ್ದರೆ ಬ್ಯಾಂಕ್ ರಜಾ ದಿನಗಳ ಬಗ್ಗೆ ಎಚ್ಚರವಹಿಸಿ. ಅದರಲ್ಲೂ ಅಕ್ಟೋಬರ್ ತಿಂಗಳು ಬಹಳ ದಿನಗಳ ಕಾಲ ಬ್ಯಾಂಕ್ ರಜೆಗಳು ಬಂದಿರುವುದರಿಂದ ನೀವು ಯಾವ ದಿನ ಬ್ಯಾಂಕ್ ರಜೆ ಇದೆ ಎಂದು ತಿಳಿದುಕೊಂಡು ಬ್ಯಾಂಕ್ ಗಳಿಗೆ ಹೋಗುವುದು ಸೂಕ್ತ.
15 ದಿನಗಳು ರಜೆ :
ಅಕ್ಟೋಬರ್-1(ಮಂಗಳವಾರ): ಚುನಾವಣೆ ಹಿನ್ನೆಲೆ
ಅಕ್ಟೋಬರ್-2( ಬುಧವಾರ) : ಗಾಂಧಿ ಜಯಂತಿ, ಮಹಾಲಯ ಅಮಾವಾಸ್ಯೆ
ಅಕ್ಟೋಬರ್-3(ಗುರುವಾರ) : ನವರಾತ್ರಿ
ಅಕ್ಟೋಬರ್-10(ಗುರುವಾರ): ಮಹಾಸಪ್ತಮಿ
ಅಕ್ಟೋಬರ್-11(ಶುಕ್ರವಾರ) : ಮಹಾನವಮಿ
ಅಕ್ಟೋಬರ್-14(ಗುರುವಾರ) : ವಾಲ್ಮೀಕಿ ಜಯಂತಿ
ಅಕ್ಟೋಬರ್-16(ಬುಧವಾರ) : ಲಕ್ಷ್ಮಿ ಪೂಜೆ
ಅಕ್ಟೋಬರ್-17(ಗುರುವಾರ): ಮಹರ್ಷಿ ವಾಲ್ಮೀಕಿ ಜಯಂತಿ
ಅಕ್ಟೋಬರ್-31(ಗುರುವಾರ) : ದೀಪಾವಳಿ
ಇನ್ನು ನಮಗೆಲ್ಲರಿಗೂ ತಿಳಿದೇ ಇದೆ ಬ್ಯಾಂಕ್ ಗಳು ಭಾನುವಾರ ತೆರೆದಿರುವುದಿಲ್ಲ. ಈ ಎಲ್ಲಾ ಸರಕಾರಿ ಕೆಲಸಗಳಿಗೂ ರಜೆ ಇರುತ್ತದೆ. ಅದೇ ರೀತಿ ಎರಡನೇ ಹಾಗೂ ನಾಲ್ಕನೇ ಶನಿವಾರ ಕೂಡ ಬ್ಯಾಂಕ್ ಗಳು ತೆರೆದಿರುವುದಿಲ್ಲ ಎನ್ನುವ ವಿಷಯ ನಮಗೆ ತಿಳಿದೇ ಇದೆ. ಹಾಗೆ ಅಕ್ಟೋಬರ್ ತಿಂಗಳು 4 ಭಾನುವಾರ (ಅಕ್ಟೋಬರ್ 6, 13, 20, 27 ) ಹಾಗೂ 2 ಎರಡನೇ(ಅಕ್ಟೋಬರ್ 12) ಹಾಗೂ ನಾಲ್ಕನೇ ಶನಿವಾರ(ಅಕ್ಟೋಬರ್ 26) ಬಂದಿವೆ.
ಅಕ್ಟೋಬರ್-1: ಜಮ್ಮು & ಕಾಶ್ಮೀರ (Jammu & Kashmir)ವಿಧಾನಸಭಾ ಚುನಾವಣೆ ಹಿನ್ನೆಲೆ ಕಣಿವೆ ರಾಜ್ಯದಲ್ಲಿ ಬ್ಯಾಂಕ್‌ಗಳಿಗೆ ರಜೆ ಘೋಷಿಸಲಾಗಿತ್ತು.
ಅಕ್ಟೋಬರ್-2: ಮಹಾತ್ಮ ಗಾಂಧಿ ಜಯಂತಿ(Mahatma Gandhi Jayanti) & ಮಹಾಲಯ ಅಮಾವಾಸ್ಯೆ ಹಿನ್ನೆಲೆಯಲ್ಲಿ ಭಾರತದ ಎಲ್ಲಾ ರಾಜ್ಯಗಳಲ್ಲೂ ಬ್ಯಾಂಕ್‌ಗಳಿಗೆ ರಜೆ ಘೋಷಿಸಲಾಗಿತ್ತು.
ಅಕ್ಟೋಬರ್-3: ನವರಾತ್ರಿ (Navratri) ಹಿನ್ನೆಲೆಯಲ್ಲಿ ರಾಜಸ್ಥಾನ್ ರಾಜ್ಯದಲ್ಲಿ ಬ್ಯಾಂಕ್‌ಗಳಿಗೆ ರಜೆ ನೀಡಿದೆಡಿದೆ.
ಅಕ್ಟೋಬರ್-6: ಭಾನುವಾರ ಆಗಿರುವ ಹಿನ್ನೆಲೆ ಅಕ್ಟೋಬರ್ 6 ರಂದು ಬ್ಯಾಂಕ್‌ಗಳಿಗೆ ಮಾಮೂಲಿ ರಜೆ ಇರಲಿದೆ.
ಅಕ್ಟೋಬರ್-10: ಮಹಾ ಸಪ್ತಮಿ ಹಿನ್ನೆಲೆಯಲ್ಲಿ ತ್ರಿಪುರಾ, ಅಸ್ಸಾಂ, ನಾಗಾಲ್ಯಾಂಡ್ ಮತ್ತು ಪಶ್ಚಿಮ ಬಂಗಾಳ ರಾಜ್ಯಗಳಲ್ಲಿ ಬ್ಯಾಂಕ್‌ಗಳಿಗೆ ರಜೆ ಘೋಷಿಸಲಾಗಿದೆ.
ಅಕ್ಟೋಬರ್-11: ದಸರಾ & ಆಯುಧ ಪೂಜೆ ಸೇರಿದಂತೆ ದುರ್ಗಾಷ್ಟಮಿ ಹಿನ್ನೆಲೆ ಬ್ಯಾಂಕ್‌ಗೆ ರಜೆ ಇರುತ್ತದೆ.
ಅಕ್ಟೋಬರ್-12: ಎರಡನೇ ಶನಿವಾರ ಹಿನ್ನೆಲೆ, ಅಕ್ಟೋಬರ್ 12 ರಂದು ಬ್ಯಾಂಕ್‌ಗೆ ಮಾಮೂಲಿ ರಜೆ ಇರಲಿದೆ.
ಅಕ್ಟೋಬರ್-13: ಭಾನುವಾರ ಆಗಿರುವ ಹಿನ್ನೆಲೆಯಲ್ಲಿ ಅಕ್ಟೋಬರ್ 13ರಂದು ಬ್ಯಾಂಕ್‌ಗಳಿಗೆ ಮಾಮೂಲಿ ರಜೆ ಇರಲಿದೆ.
ಅಕ್ಟೋಬರ್-14: ದುರ್ಗಾ ಪೂಜೆ (ದಾಸೈನ್) ಪ್ರಯುಕ್ತ ಸಿಕ್ಕಿಂ ರಾಜ್ಯದಲ್ಲಿ ಬ್ಯಾಂಕ್‌ಗಳಿಗೆ ರಜೆ.
ಅಕ್ಟೋಬರ್-16: ಲಕ್ಷ್ಮಿ ಪೂಜೆ ಪ್ರಯುಕ್ತ ತ್ರಿಪುರಾ & ಬಂಗಾಳ ರಾಜ್ಯಗಳಲ್ಲಿ ಬ್ಯಾಂಕ್‌ಗಳ ರಜೆ.
ಅಕ್ಟೋಬರ್-17: ಮಹರ್ಷಿ ವಾಲ್ಮೀಕಿ ಜಯಂತಿ ಹಾಗೂ ಕತಿ ಬಿಹು ಹಿನ್ನೆಲೆಯಲ್ಲಿ ಕರ್ನಾಟಕ, ಅಸ್ಸಾಂ ಮತ್ತು ಹಿಮಾಚಲ ಪ್ರದೇಶದ ರಾಜ್ಯಗಳಲ್ಲಿ ಬ್ಯಾಂಕ್‌ಗಳಿಗೆ ರಜೆ.
ಅಕ್ಟೋಬರ್-20: ಭಾನುವಾರ ಹಿನ್ನೆಲೆ ಅಕ್ಟೋಬರ್ 20 ರಂದು ಬ್ಯಾಂಕ್‌ಗಳಿಗೆ ಮಾಮೂಲಿ ರಜೆ.
ಅಕ್ಟೋಬರ್-26: ಜಮ್ಮು ಮತ್ತು ಕಾಶ್ಮೀರ ಭಾರತ ದೇಶದಲ್ಲಿ ವಿಲೀನವಾದ ದಿನದ ಪ್ರಯುಕ್ತ ಜಮ್ಮು ಮತ್ತು ಶ್ರೀನಗರದಲ್ಲಿ ಇರುವ ಬ್ಯಾಂಕುಗಳು ಬಂದ್ ಆಗಲಿವೆ.
ಅಕ್ಟೋಬರ್-27: ಭಾನುವಾರ ಹಿನ್ನೆಲೆ ಅಕ್ಟೋಬರ್ 27 ರಂದು ಬ್ಯಾಂಕ್‌ಗಳಿಗೆ ರಜೆ ಇದೆ.
ಅಕ್ಟೋಬರ್-31: ದೀಪಾವಳಿ & ನರಕ ಚತುರ್ದಶಿ ಮತ್ತು ಸರ್ದಾರ್ ವಲ್ಲಭಭಾಯಿ ಪಟೇಲ್ ಜಯಂತಿ ದಿನ ಬ್ಯಾಂಕ್ ಗೆ ರಜೆ ಸಿಗಲಿದೆ.
ಆದ್ದರಿಂದ ಬ್ಯಾಂಕ್ ಗಳಿಗೆ ಹೋಗಬೇಕು ಎಂದು ಆಲೋಚಿಸಿರುವ ಎಲ್ಲರೂ ಒಮ್ಮೆ ರಜಗಳ ಬಗ್ಗೆ ಅರಿತುಕೊಂಡು ಕೆಲಸಗಳನ್ನು ಮುನ್ನಾದಿನವೇ ಮುಗಿಸಿಕೊಳ್ಳುವುದು ಉತ್ತಮ.
ಗಮನಿಸಿ :
ಈ ರಜಾ ದಿನಗಳು ರಾಜ್ಯದಿಂದ ರಾಜ್ಯಕ್ಕೆ ಬದಲಾಗುತ್ತವೆ. ಈ ಕಾರಣದಿಂದಾಗಿ, ಸ್ಥಳೀಯ ಜನರು ತಮ್ಮ ತಮ್ಮ ಕೆಲಸಗಳನ್ನು ರಾಜ ದಿನಗಳೂ ಕೂಡ ಮಾಡಿಕೊಳ್ಳ ಬಹುದು. ಬ್ಯಾಂಕುಗಳು ಮುಚ್ಚಿದರೂ ಅದರ ಸರ್ವರ್ಗಳು ಚಾಲನೆಯಲ್ಲೇ ಇರುತ್ತವೆ. ಎಟಿಎಂ, ನೆಟ್ಬ್ಯಾಂಕಿಂಗ್, ಫೋನ್ ಬ್ಯಾಂಕಿಂಗ್, ಯುಪಿಐ ಇತ್ಯಾದಿ ನಿರಂತರವಾಗಿ ಲಭ್ಯ ಇರುತ್ತವೆ. ಹೆಚ್ಚಿನ ಹಣದ ವಹಿವಾಟಿಗೆ ಯಾವ ಅಡಚಣೆ ಆಗದು.
ಈ ಮಾಹಿತಿಗಳನ್ನು ಓದಿ
ದಯವಿಟ್ಟು ಗಮನಿಸಿ: ನೀಡ್ಸ್ ಆಫ್ ಪಬ್ಲಿಕ್ ತನ್ನ ಓದುಗರಿಗೆ ನಿಖರವಾದ ಮತ್ತು ಅಧಿಕೃತ ಮಾಹಿತಿಗಳನ್ನು ಮಾತ್ರ ಪ್ರಕಟಿಸುತ್ತದೆ. ಇಲ್ಲಿ ನಾವು ಯಾವುದೇ ಅನಧಿಕೃತ ಮತ್ತು ಸುಳ್ಳು ಮಾಹಿತಿಯನ್ನು ಬಿತ್ತರಿಸುವುದಿಲ್ಲ