ಬಿಎಸ್ಎನ್ಎಲ್ ತನ್ನ ಗ್ರಾಹಕರಿಗೆ ಗುಡ್ ನ್ಯೂಸ್ ನೀಡಿದೆ, ಕೇವಲ ರೂಪಾಯಿ 91ಕ್ಕೆ ಸಿಗಲಿದೆ 90 ದಿನಗಳ ಸೇವೆ..!
ಭಾರತ್ ಸಂಚಾರ್ ನಿಗಮ್ ಲಿಮಿಟೆಡ್ (Bharat Sanchar Nigam Limited) ಭಾರತೀಯ ಸರ್ಕಾರಿ ಸ್ವಾಮ್ಯದ ದೂರಸಂಪರ್ಕ ಸೇವಾ ಪೂರೈಕೆದಾರ ಸಂಸ್ಥೆಯಾಗಿದೆ. ಇದು ಭಾರತದಾದ್ಯಂತ ತನ್ನ ರಾಷ್ಟ್ರವ್ಯಾಪಿ ದೂರಸಂಪರ್ಕ ಜಾಲದ ಮೂಲಕ ಮೊಬೈಲ್ ಧ್ವನಿ ಮತ್ತು ಇಂಟರ್ನೆಟ್ ಸೇವೆ(Internet service)ಗಳನ್ನು ಒದಗಿಸುತ್ತದೆ. ಇಂದಿಗೂ ಕೂಡ ಹೆಚ್ಚು ಗ್ರಾಹಕರನ್ನು ಹೊಂದಿದ್ದು, ಸಮಯಕ್ಕೆ ತಕ್ಕಂತೆ ತನ್ನ ಹೊಸ ಯೋಜನೆಗಳು, ರಿಯಾಯಿತಿಯನ್ನು ನೀಡುತ್ತಿದೆ. ಇದೀಗ ತನ್ನ ಹೊಸ ಪ್ಲಾನ್ ಒಂದನ್ನು ಬಿಡುಗಡೆ ಮಾಡಿ ಗ್ರಾಹಕರಿಗೆ ಸಂತಸ ಮೂಡಿಸಿದೆ. ಬಿಎಸ್ಎನ್ಎಲ್ (BSNL) ಮತ್ತು ಟಾಟಾ ಗ್ರೂಪ್ (Tata group) ಬಿಡುಗಡೆ ಮಾಡಿದ ಪ್ಲಾನ್ ಯಾವುದು? ಏನೆಲ್ಲಾ ಪ್ರಯೋಜನಗಳಿವೆ ಎಂಬುದರ ಬಗ್ಗೆ ಸಂಪೂರ್ಣ ಮಾಹಿತಿಯನ್ನು ತಿಳಿದುಕೊಳ್ಳೋಣ ಬನ್ನಿ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ
ಹೊಸ ಯೋಜನೆಯನ್ನು ಬಿಡುಗಡೆ ಗೊಳಿಸಿದ ಭಾರತ್ ಸಂಚಾರ್ ನಿಗಮ ಲಿಮಿಟೆಡ್ (BSNL) :
ಭಾರತ್ ಸಂಚಾರ್ ನಿಗಮ ಲಿಮಿಟೆಡ್ (BSNL) ಮತ್ತು ಟಾಟಾ ಗ್ರೂಪ್ ಮಧ್ಯ ಒಪ್ಪಂದ ಆದಾಗಿನಿಂದ ತನ್ನ ಗ್ರಾಹಕರಿಗೆ ಸಿಹಿ ಸುದ್ದಿಗಳನ್ನು ನೀಡುತ್ತಾ ಬಂದಿದೆ. ಕೇಂದ್ರ ಸರ್ಕಾರಿ ವ್ಯಾಪ್ತಿಯ ಬಿಎಎಸ್‌ಎನ್‌ಎಲ್ ಕಡಿಮೆ ಬೆಲೆಯ ಹಾಗೂ ಜಿಯೋ, ಏರ್‌ಟೆಲ್ ಮತ್ತು ವಡಾಫೋನ್‌ಗಿಂತಲೂ ಉತ್ತಮ ರಿಚಾರ್ಜ್ ಪ್ಲಾನ್ ಗಳನ್ನು ತನ್ನ ಗ್ರಾಹಕರಿಗೆ ನೀಡಿದೆ. ಇಂದು ಜಿಯೋ ಹಾಗೂ ಏರ್‌ಟೆಲ್ ಸೇರಿದಂತೆ ಖಾಸಗಿ ಟೆಲಿಕಾಂ ಸಂಸ್ಥೆಗಳ (Telecom companies) ರಿಚಾರ್ಜ್ ಪ್ಲಾನ್ ಹೆಚ್ಚಿದ ಕಾಲದಲ್ಲಿ ಸರ್ಕಾರಿ ಸಂಸ್ಥೆಯ ಬಿಎಸ್‌ಎನ್‌ಎಲ್ ಅಗ್ಗದ ಬೆಲೆಗೆ ಯೋಜನೆ ನೀಡುತ್ತಿದೆ. ಇದೀಗ ಹೊಸ ಯೋಜನೆಯನ್ನು ಬಿಎಸ್ಎನ್ಎಲ್ ಪರಿಚಯಿಸಿದೆ.
ಕಡಿಮೆ ಬೆಲೆಗೆ ಲಭ್ಯವಿರುವ ಈ ಯೋಜನೆ ಗ್ರಾಹಕರಿಗೆ ಹೆಚ್ಚು ದಿನಗಳ ಪ್ರಯೋಜನ ನೀಡಲಿದೆ :
ಬಿಎಸ್‌ಎನ್‌ಎಲ್ ರೂಪಾಯಿ 91ಕ್ಕೆ ಹೆಚ್ಚು ದಿನಗಳ ಮೊಬೈಲ್ ರಿಚಾರ್ಜ್ ಪ್ಲಾನ್ ಘೋಷಿಸಿದ್ದು, ಈ ಒಂದು ಹೊಸ ಯೋಜನೆ ಇದುವರೆಗೂ ಟೆಲಿಕಾಂ ಸಂಸ್ಥೆಗಳು ನೀಡದ ಕೊಡುಗೆಯಾಗಿದೆ. ಕಡಿಮೆ ಬೆಲೆಗೆ (Low price) ಲಭ್ಯವಿರುವ ಈ ಒಂದು ಯೋಜನೆಯಿಂದ ಗ್ರಾಹಕರಿಗೆ ಹೆಚ್ಚು ದಿನಗಳ ಪ್ರಯೋಜನ ಸಿಗಲಿದೆ.
BSNL ಹೊಸ ಪ್ಲಾನ್ ನ ಬೆಲೆ ಕೇವಲ 91 ರೂ. :
ಭಾರತ್ ಸಂಚಾರ್ ನಿಗಮ ಲಿಮಿಟೆಡ್ (BSNL) ತನ್ನ ಪೋರ್ಟ್‌ಫೋಲಿಯೊಗೆ ಹೊಸ ಪ್ರಿಪೇಯ್ಡ್ ಯೋಜನೆ (Prepaid scheme) ಸೇರ್ಪಡೆ ಮಾಡಿಕೊಂಡಿದ್ದು. ಈ ಒಂದು ಹೊಸ ಪ್ಲಾನ್ ಗಾಗಿ ಕೇವಲ ರೂ. 91 ನೀಡಿದರೆ 90 ದಿನಗಳ ಮಾನ್ಯತೆಯೊಂದಿಗೆ ಸೇವೆ ಗ್ರಾಹಕರಿಗೆ ಲಭ್ಯವಾಗಲಿದೆ.
BSNL ನ 91 ರೂಪಾಯಿಯ ಹೊಸ ಪ್ಲಾನ್ ವಿಶೇಷತೆಗಳು :
BSNL ನ ಹೊಸ ಯೋಜನೆಯಾದ 91 ರೂಪಾಯಿಯ ಈ ರಿಚಾರ್ಜ್ (Recharge) ಮಾಡಿಕೊಂಡರೆ, ಇದರಿಂದ ನಿಮ್ಮ ಸಿಮ್ ಬರೋಬ್ಬರಿ ಎರಡು ತಿಂಗಳು ಅಂದರೆ 60 ದಿನಗಳ ವರೆಗೆ ಸಕ್ರಿಯವಾಗಿರುತ್ತದೆ. ಅಷ್ಟೇ ಅಲ್ಲದೆ ಪ್ರತಿದಿನ 2GB ಇಂಟರ್‌ನೆಟ್ ಡೇಟಾ ಸಹ ಬಳಸಬಹುದಾಗಿದೆ. ಎರಡು ಸಿಮ್ (Dual sim) ಹೊಂದಿದ್ದು, ಅದರಲ್ಲಿ ಒಂದು ಸಿಮ್ ಅನ್ನು ಸಕ್ರಿಯವಾಗಿಡಲು ಈ ಬಿಎಸ್‌ಎನ್‌ಎಲ್ 91 ರೂ. ಪ್ಲಾನ್ ಬಹಳ ಉಪಯುಕ್ತವಾಗಿದೆ. ಮುಖ್ಯವಾಗಿ ಯಾರು ತಮ್ಮ ಸಿಮ್ ಅನ್ನು ಸಕ್ರಿಯವಾಗಿ ಇರಿಸಿಕೊಳ್ಳಲು ಬಯಸುತ್ತಾರೋ ಅವರಿಗೆ ಈ ಯೋಜನೆ ಉತ್ತಮವಾಗಿದೆ.
ಗಮನಿಸಿ (Notice) :
ಬಿಎಸ್‌ಎನ್‌ಎಲ್ ಈ ಯೋಜನೆಯಿಂದ ದೂರವಾಣಿ ಕರೆ, SMS ಸ್ವೀಕರಿಸಲು ಸಾಧ್ಯವಾಗುತ್ತದೆ. ಆದರೆ ಮರಳಿ ನಿಮ್ಮಿಂದ ಫೋನ್ ಕಾಲ್, ಸಂದೇಶ ಕಳುಹಿಸಲು ಸಾಧ್ಯವಿರುವುದಿಲ್ಲ. ಈ ಸೇವೆಗೆ ನೀವು ಪ್ರತ್ಯೇಕ ರೀಚಾರ್ಜ್ ಮಾಡಿಕೊಳ್ಳಬೇಕಾಗುತ್ತದೆ ಎಂದು ಬಿಎಎಸ್‌ಎನ್‌ಎಲ್ ತಿಳಿಸಿದೆ.
ಈ ಮಾಹಿತಿಗಳನ್ನು ಓದಿ
ದಯವಿಟ್ಟು ಗಮನಿಸಿ: ನೀಡ್ಸ್ ಆಫ್ ಪಬ್ಲಿಕ್ ತನ್ನ ಓದುಗರಿಗೆ ನಿಖರವಾದ ಮತ್ತು ಅಧಿಕೃತ ಮಾಹಿತಿಗಳನ್ನು ಮಾತ್ರ ಪ್ರಕಟಿಸುತ್ತದೆ. ಇಲ್ಲಿ ನಾವು ಯಾವುದೇ ಅನಧಿಕೃತ ಮತ್ತು ಸುಳ್ಳು ಮಾಹಿತಿಯನ್ನು ಬಿತ್ತರಿಸುವುದಿಲ್ಲ