ಈ ವರ್ಷದ ಆಯುಧ ಪೂಜೆ (Ayudha Puja) ಎಂದು? ಆಯುಧ ಪೂಜೆಯನ್ನು ಏಕೆ ಮತ್ತು ಹೇಗೆ ಆಚರಿಸಲಾಗುತ್ತದೆ?
ನಮ್ಮ ಹಿಂದೂ ಪುರಾಣದಲ್ಲಿ ಹಬ್ಬಗಳಿಗೆ ಭಾರಿ ಮಹತ್ವವನ್ನು ಕೊಡುತ್ತೇವೆ. ಹಬ್ಬಕ್ಕಾಗಿ ಎಲ್ಲಾ ತಯಾರಿಗಳನ್ನು ಒಂದು ತಿಂಗಳು ಅಥವಾ ಒಂದು ವಾರದ ಮುಂಚೆಯೇ ಮಾಡಿಕೊಳ್ಳಲು ಶುರುಮಾಡುತ್ತಾರೆ. ಕೆಲವು ಹಬ್ಬಗಳು ಕೆಲವರಿಗೆ ಪ್ರಿಯವಾಗಿರುತ್ತವೆ. ಅದರಲ್ಲೂ ವಿಜಯದಶಮಿ (Vijayadashami), ಆಯುಧ ಪೂಜೆ (Ayudha Puja) ಎಂದರೆ ಎಲ್ಲರಿಗೂ ಇಷ್ಟವಾದಂತಹ ಹಬ್ಬ. ಆಯುಧ ಪೂಜೆ ಹಿಂದೂ ಧರ್ಮದಲ್ಲಿ ವಿಶೇಷ ಪ್ರಾಮುಖ್ಯತೆಯನ್ನು ಹೊಂದಿರುವಂತಹ ಹಬ್ಬ. ಈ ಹಬ್ಬದಂದು ಜನರು ತಮ್ಮ ವೃತ್ತಿಗಳಿಗೆ ಬಳಸುವಂತಹ ಆಯುಧಗಳನ್ನು ಪೂಜೆ ಮಾಡುತ್ತಾರೆ. ಈ ಸಂಪ್ರದಾಯವನ್ನು ದಸರಾ ಹಬ್ಬದ ಒಂದು ದಿನ ಮೊದಲು ಆಚರಿಸಲಾಗುತ್ತದೆ. ಕೆಲವು ನಂಬಿಕೆಗಳ ಪ್ರಕಾರ ಇದನ್ನು ವಿಜಯದಶಮಿ ದಿನದಂದು ಸಹ ಆಚರಿಸಲಾಗುತ್ತದೆ. ಈ ದಿನದಂದು ಉಪಕರಣಗಳು ಮತ್ತು ಆಯುಧಗಳನ್ನು ಪೂಜಿಸುವುದು ವಿಜಯದ ಆಶೀರ್ವಾದವನ್ನು ತರುತ್ತದೆ ಎನ್ನುವ ನಂಬಿಕೆಯಿದೆ. ಈ ಭಾರಿ ಆಯುಧ ಪೂಜೆಯನ್ನು ಎಂದು ಆಚರಿಸಲಾಗುತ್ತದೆ? ಆಯುಧ ಪೂಜೆಯ ಹಿನ್ನಲೆ ಏನು? ಆಯುಧ ಪೂಜೆಯನ್ನು ಹೇಗೆ ಆಚರಿಸಲಾಗುತ್ತದೆ ಎಂಬ ಸಂಪೂರ್ಣ ಮಾಹಿತಿಯನ್ನು ತಿಳಿದುಕೊಳ್ಳೋಣ ಬನ್ನಿ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ
ಆಯುಧ ಪೂಜೆಯ ಇತಿಹಾಸ:
ಎಲ್ಲಾ ದೇವರು ಮತ್ತು ದೇವತೆಗಳು ರಾಕ್ಷಸ ಮಹಿಶಾಸುರನನ್ನು (Mahishasura)ಸಂಹಾರ ಮಾಡುವ ಉದ್ದೇಶಕ್ಕಾಗಿ ತಾವು ಬಳಸುತ್ತಿದ್ದಂತಹ ಆಯುಧಗಳನ್ನು ದುರ್ಗಾದೇವಿಗೆ (Durga Devi) ನೀಡುತ್ತಾರೆ. ಎಲ್ಲಾ ದೇವರುಗಳು ತಮ್ಮಲ್ಲಿದ್ದ ಆಯುಧಗಳನ್ನು ಕೊಡುವುದಲ್ಲದೆ, ತಮ್ಮಲ್ಲಿದ್ದಂತಹ ಎಲ್ಲಾ ಶಕ್ತಿಗಳನ್ನು ಕೂಡ ನೀಡುತ್ತಾರೆ. ಆ ಎಲ್ಲಾ ಶಕ್ತಿಗಳನ್ನು ಒಟ್ಟುಗೂಡಿಸಿದಾಗ ದುರ್ಗಾದೇವಿಯು ಹತ್ತು ಕೈಗಳಿಂದ ಪ್ರಕಟಗೊಳ್ಳುತ್ತಾಳೆ. ಅವಳ ಆ 10 ಕೈಗಳಲ್ಲಿಯೂ ಕೂಡ ಒಂದೊಂದು ಆಯುಧಗಳನ್ನು ಹಿಡಿದುಕೊಳ್ಳುತ್ತಾಳೆ. ಮಹಿಷಾಸುರನ ಸಂಹಾರಕ್ಕಾಗಿ ದುರ್ಗಾ ದೇವಿ ಮತ್ತು ಮಹಿಷಾಸುರನ ನಡುವೆ 9 ದಿನಗಳ ಸುದೀರ್ಘ ಯುದ್ಧ ನಡೆಯಿತು. ಹತ್ತನೆಯ ದಿನದಂದು ದುರ್ಗಾದೇವಿಯು ಮಹಿಷಾಸುರನನ್ನು ಸಂಹಾರ ಮಾಡುತ್ತಾಳೆ. ಯುದ್ಧ ಮುಗಿದ ನಂತರ ಆಯುಧಗಳನ್ನು ಎಲ್ಲಾ ದೇವರಿಗಳಿಗೂ ಒಪ್ಪಿಸಬೇಕಾಗುತ್ತದೆ. ಆಯುಧಗಳನ್ನು ಶುದ್ಧಗೊಳಿಸುವುದು ತುಂಬಾ ಅವಶ್ಯಕ ಇರುತ್ತದೆ. ಈ ಕಾರಣಕ್ಕಾಗಿ ದುರ್ಗಾದೇವಿಯು ಬಳಸಿದ ಎಲ್ಲಾ ಆಯುಧಗಳನ್ನು ಸ್ವಚ್ಛಗೊಳಿಸಿ ನಂತರ ಅವುಗಳನ್ನು ಪೂಜಿಸಿ ಆಯುಧಗಳನ್ನು ದೇವರು ಹಿಂಪಡಿದುಕೊಳ್ಳುತ್ತಾರೆ. ಈ ಸನ್ನಿವೇಶದ ನೆನಪಿಗಾಗಿ ಆಯುಧ ಪೂಜೆಯನ್ನು ಮಾಡಲಾಗುತ್ತದೆ.
ಆಯುಧ ಪೂಜೆಯನ್ನು ಮಾಡುವುದು ಹೇಗೆ?:
ಆಯುಧ ಪೂಜೆಯ ದಿನ ಮುಂಜಾನೆ ಬೇಗ ಎದ್ದು ಸ್ನಾನ ಮಾಡಿ ಶುಭ್ರವಾದ ಬಟ್ಟೆಯನ್ನು ಧರಿಸಿಕೊಳ್ಳಿ.
ಪೂಜೆಯ ಶುಭಮಹೂರ್ತವನ್ನು ನೋಡಿಕೊಂಡು ಅದಕ್ಕೂ ಮುನ್ನ ಆಯ್ದ ಪೂಜೆಗೆ ಸಿದ್ಧತೆಗಳನ್ನು ಮಾಡಿಕೊಳ್ಳಿ.
ಪೂಜೆಗೂ ಮುನ್ನ ಆಯುಧಗಳನ್ನು ಚೆನ್ನಾಗಿ ಸ್ವಚ್ಛಗೊಳಿಸಿ ಅವುಗಳ ಮೇಲೆ ಹಸುವಿನ ಗಂಜಲವನ್ನು ಸಿಂಪಡಿಸಿ.
ಪೂಜೆ ಮಾಡುವವರು ಮಹಾಕಾಳಿ ಸ್ತೋತ್ರವನ್ನು ಪಠಿಸಿ.
ಎಲ್ಲಾ ಆಯುಧಗಳಿಗೂ ಕುಂಕುಮ ತಿಲಕ ಹಾಗೂ ಹರಿಶಿಣವನ್ನು ಹಚ್ಚಬೇಕು.
ಎಲ್ಲಾ ಕಾರ್ಯಗಳು ಯಶಸ್ವಿಯಾಗಲಿ ಎಂದು ಪ್ರಾರ್ಥಿಸಿಕೊಳ್ಳುತ್ತಾ ಎಲ್ಲಾ ಆಯುಧಗಳನ್ನು ಸಿಹಿ ಹಾಗೂ ಧೂಪವನ್ನು ತೋರಿಸಬೇಕು. ಆದರೆ ಆಯುಧ ಪೂಜೆಯನ್ನು ಮಾಡಿದ ದಿನ ನೀವು ಆ ಆಯುಧಗಳನ್ನು ಬಳಸಬಾರದು ಮರುದಿನ ಮತ್ತೊಮ್ಮೆ ಧೂಪ ದೀಪಗಳನ್ನು ಬೆಳಗಿದ ನಂತರ ಆಯುಧಗಳನ್ನು ಬಳಸಿ.
2024 ನೇ ವರ್ಷದ ಆಯುಧ ಪೂಜೆಯನ್ನು ಯಾವಾಗ ಆಚರಿಸಲಾಗುತ್ತದೆ :
ನವರಾತ್ರಿಯ (Navratri) 9ನೇ ದಿನದಂದು ಸಿದ್ದಿದಾತ್ರಿ ದೇವಿಯ (Siddidatri Devi) ಪೂಜೆಯನ್ನು ಮಾಡಲಾಗುತ್ತದೆ. ಈ ದಿನದಂದು ಆಯುಧ ಪೂಜೆಯನ್ನು ಬಹಳ ಅಚ್ಚುಕಟ್ಟಾಗಿ ಆಚರಿಸಲಾಗುತ್ತದೆ. ಈಗಾಗಲೇ ತಿಳಿಸಿರುವಂತೆ ಈ ದಿನ ಎಲ್ಲಾ ಆಯುಧಗಳನ್ನು ಪೂಜಿಸಲಾಗುತ್ತದೆ. ವೃತ್ತಿಗಳಿಗೆ ಸಂಬಂಧಿಸಿದಂತೆ ಆಯುಧಗಳನ್ನು ಆ ದಿನ ಪೂಜಿಸಲಾಗುತ್ತದೆ. ಲ್ಯಾಪ್‌ಟ್ಯಾಪ್, ಕೋವಿ, ಗುದ್ದಲಿ, ಕತ್ತಿ, ಗಾಡಿಗಳು ಹೀಗೆ ಕೃಷಿಗೆ ಬಳಸುವ, ತಾಂತ್ರಿಕ ಕೆಲಸಕ್ಕೆ ಬಳಸುವ ಎಲ್ಲಾ ವಸ್ತುಗಳನ್ನು ಪೂಜಿಸಲಾಗುತ್ತದೆ. ನವಮಿ ತಿಥಿಯು ಅಕ್ಟೋಬರ್ 11 ಮಧ್ಯಾಹ್ನ 12:06ಕ್ಕೆ ಪ್ರಾರಂಭವಾಗುತ್ತದೆ. ಅಕ್ಟೋಬರ್ 12 ಬೆಳಗ್ಗೆ 10:58ಕ್ಕೆ ನವಮಿ ತಿಥಿ ಮುಕ್ತಾಯವಾಗುತ್ತದೆ. ಇನ್ನು ಆಯುಧ ಪೂಜೆಯನ್ನು ಶನಿವಾರ ಆಚರಿಸಲಾಗುವುದು. ಆಯಧ ಪೂಜೆ ವಿಜಯ ಮುಹೂರ್ತ ಅಕ್ಟೋಬರ್ 12 ಮಧ್ಯಾಹ್ನ 02:05ರಿಂದ 02:52ರೊಳಗೆ ಪೂಜೆ ಸಲ್ಲಿಸಿಬೇಕು. ಒಟ್ಟಾರೆಯಾಗಿ ಆಯುಧ ಪೂಜೆ ಮಾಡಲು 48 ನಿಮಿಷಗಳು ಸಿಗುತ್ತದೆ.
ಅಕ್ಟೋಬರ್ 12 ರ ಪಂಚಾಂಗ:
ತಿಥಿ ನವಮಿ
ನಕ್ಷತ್ರ: ಶ್ರವಣ.
ಬ್ರಹ್ಮ ಮುಹೂರ್ತ: ಬೆಳಗ್ಗೆ 04:33ರಿಂದ 05:21.
ಗೋಧೂಳಿ ಮುಹೂರ್ತ: ಸಂಜೆ 06:02-06:26ರವರೆಗೆ ಇದೆ
ಇಡೀ ದಿನ ರವಿಯೋಗವಿರುತ್ತದೆ.
ವಿಜಯ ಮುಹೂರ್ತ: ಮಧ್ಯಾಹ್ನ 02:05ರಿಂದ 02:25ರವರೆಗೆ ಇದೆ.
ರಾಹುಕಾಲ: ಬೆಳಗ್ಗೆ 09:08ರಿಂದ 10:37ರವರೆಗೆ ಇದೆ.
ಈ ಮಾಹಿತಿಗಳನ್ನು ಓದಿ
ದಯವಿಟ್ಟು ಗಮನಿಸಿ: ನೀಡ್ಸ್ ಆಫ್ ಪಬ್ಲಿಕ್ ತನ್ನ ಓದುಗರಿಗೆ ನಿಖರವಾದ ಮತ್ತು ಅಧಿಕೃತ ಮಾಹಿತಿಗಳನ್ನು ಮಾತ್ರ ಪ್ರಕಟಿಸುತ್ತದೆ. ಇಲ್ಲಿ ನಾವು ಯಾವುದೇ ಅನಧಿಕೃತ ಮತ್ತು ಸುಳ್ಳು ಮಾಹಿತಿಯನ್ನು ಬಿತ್ತರಿಸುವುದಿಲ್ಲ