ಜಿಯೋ(Jio) ಗ್ರಾಹಕರಿಗೆ 1 ವರ್ಷ ವ್ಯಾಲಿಟಿಡಿಯ(1 year validity) ಭರ್ಜರಿ ಆಫರ್!. ಈ ಆಫರ್ ನಲ್ಲಿ ಸಿಗುತ್ತದೆ ಪ್ರತಿ ದಿನ 2.5 ಜಿಬಿ, ಅನ್‌ಲಿಮಿಟೆಡ್ ಕಾಲ್.
ಇತ್ತೀಚಿನ ದಿನಗಳಲ್ಲಿ ಮೊಬೈಲ್ (mobile) ಇಲ್ಲದೆ ಬದಕುಲು ಸಾಧ್ಯವಿಲ್ಲ ಎಂಬಂತಾಗಿದೆ. ನಾವು ಬಳಸುವ ಸ್ಮಾರ್ಟ್ ಫೋನ್ ಗಳು ಇಂಟರ್ನೆಟ್ ಅಥವಾ ಡಾಟಾ ಇಲ್ಲದೆ ಕೆಲಸ ಮಾಡುವುದಿಲ್ಲ. ಕರೆನ್ಸಿ (currency) ಹಾಗೂ ಡೇಟಾವನ್ನು (data) ಹಾಕಿಸಿಕೊಳ್ಳಲೆಂದೇ ಹಣವನ್ನು ಕೂಡಿಡುತ್ತಿರುತ್ತಾರೆ. ಎಲ್ಲರೂ ದಸರಾ ಹಬ್ಬದ ಸಂಭ್ರಮದಲ್ಲಿದ್ದಾರೆ. ಅದರಲ್ಲೂ ಇಂದು ಆಯುಧ ಪೂಜೆ. ಆಯುಧ ಪೂಜೆಯೆಂದು ಭಾರತದ ಟೆಲಿಕಾಂ ಕ್ಷೇತ್ರದಲ್ಲಿ ಅತ್ಯಂತ ಜನಪ್ರಿಯತೆಯನ್ನು (popularity) ಹೊಂದಿರುವ ಜಿಯೋ (Jio) ಜಿಯೋ ಕಂಪನಿ ತನ್ನ ಗ್ರಾಹಕರಿಗೆ ರಿಲಯನ್ಸ್ ಜಿಯೋ ಧಮಾಕ ಆಫರ್ ಘೋಷಿಸಿದೆ. ಈ ಆಫರ್ ನಲ್ಲಿ ಗ್ರಾಹಕರಿಗೆ 1ವರ್ಷ ವ್ಯಾಲಿಡಿಟಿಯಲ್ಲಿ ಹಲವಾರು ಆಫರ್ ಗಳು ಸಿಗಲಿವೆ. ಯಾವೆಲ್ಲ ಆಫರ್ ಗಳು ಸಿಗಲಿವೆ ಎಂಬ ಸಂಪೂರ್ಣ ಮಾಹಿತಿಯನ್ನು ತಿಳಿದುಕೊಳ್ಳೋಣ ಬನ್ನಿ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ
ಹೌದು, ದಸರಾ ಹಬ್ಬದಲ್ಲಿ ಖುಷಿ ಖುಷಿಯಿಂದ ಇರುವಂತಹ ಗ್ರಾಹಕರಿಗೆ ಇದೀಗ ಮತ್ತಷ್ಟು ಖುಷಿ ಸಿಗಲಿದೆ. ವಿಶೇಷವಾಗಿ ಆಯುಧ ಪೂಜೆಯಲ್ಲಿ ಎಲ್ಲಾ ಕಂಪನಿಗಳು ಕೂಡ ತಮ್ಮ ಗ್ರಾಹಕರಿಗೆ (customers) ಅಥವಾ ಉದ್ಯೋಗಿಗಳಿಗೆ(employees) ಒಳ್ಳೆ ಒಳ್ಳೆ ಆಫರ್ ಗಳನ್ನು ನೀಡುತ್ತವೆ. ರಿಲಿಯನ್ಸ್ ಜಿಯೋ(Reliance Jio) ಕೂಡ ತನ್ನ ಗ್ರಾಹಕರಿಗಾಗಿ ಎಲ್ಲಾ ಹಬ್ಬಗಳಲ್ಲೂ ಕೂಡ ವಿವಿಧ ರೀತಿಯ ಆಫರ್ ಗಳನ್ನು(Offers) ನೀಡುತ್ತಲೇ ಬಂದಿದೆ. ಅದೇ ರೀತಿಯಾಗಿ ದಸರಾ ಆಯುಧ, ಪೂಜೆಯ ಹಬ್ಬದಲ್ಲಿ ಜಿಯೋಧಮಾಕ ಆಫರ್ ಘೋಷಿಸಿದೆ. ಈಗಾಗಲೇ ರಿಲಿಯನ್ಸ್ ಜಿಯೋ ಇಂದ ಗ್ರಾಹಕರು 5ಜಿ ಡೇಟಾ ಸೇರಿದಂತೆ ಹಲವು ಒಟಿಟಿ ಪ್ಲಾಟ್‌ಫಾರ್ಮ್ ಗಳ(OTT platform) ಆಫರ್ ಗಳನ್ನು ಕೂಡ ನೀಡಿದೆ ಹಾಗೂ ಅದರ ಸೌಲಭ್ಯವನ್ನು ಈಗಾಗಲೇ ಗ್ರಾಹಕರು ಪಡೆದುಕೊಳ್ಳುತ್ತಿದ್ದಾರೆ. ಇದೀಗ ರಿಲಿಯನ್ಸ್ ಜಿಯೋ(Reliance Jio) ಘೋಷಿಸಿರುವ ಜಿಯೋ ಧಮಾಕ ಆಫರ್ ನಲ್ಲಿ ಗ್ರಾಹಕರು 1 ವರ್ಷ ವ್ಯಾಲಿಡಿಟಿ ಪ್ಲಾನ್ ನಲ್ಲಿ(1 year validity plan) ಹಲವು ಆಫರ್ ಗಳನ್ನು ಪಡೆದುಕೊಳ್ಳಲಿದ್ದಾರೆ.
ಜಿಯೋ ಧಮಾಕ ಆಫರ್ ನಲ್ಲಿ ಸಿಗುವ ಸೌಲಭ್ಯಗಳು:
ಜಿಯೋ ಧಮಾಕ ಆಫರ್ ಅಡಿಯಲ್ಲಿ ಗ್ರಾಹಕರು ಒಮ್ಮೆ ರಿಚಾರ್ಜ್ (Recharge) ಮಾಡಿಸಿದರೆ ಒಂದು ವರ್ಷ ನಿಶ್ಚಿಂತೆಯಿಂದ ಇರಬಹುದು. ಒಂದು ವರ್ಷದಲ್ಲಿ 365 ದಿನಗಳು ಬರುತ್ತದೆ ಆ 365 ದಿನಗಳಲ್ಲಿ ಗ್ರಾಹಕರಿಗೆ ಅನ್ಲಿಮಿಟೆಡ್ ಕಾಲ್, ಪ್ರತಿದಿನ 100 ಎಸ್‌ಎಂಎಸ್(sms) ಹಾಗೂ ಪ್ರತಿ ದಿನ 2.5 ಜಿಬಿ ಡೇಟಾ ಅಂದರೆ ಒಂದು ವರ್ಷಕ್ಕೆ ಒಟ್ಟು 912.5 ಜಿಬಿ ಡೇಟಾ ಸೌಲಭ್ಯವನ್ನು ಗ್ರಾಹಕರು ಪಡೆದುಕೊಳ್ಳಬಹುದು.
ಜಿಯೋ ಧಮಾಕ ಆಫರ್ ಬಳಸುವುದರಿಂದ ಆಗುವ ಪ್ರಯೋಜನ :
ಜಿಯೋ ಧಮಾಕ ಆಫರ್ ಬಳಸುವುದರಿಂದ ಗ್ರಾಹಕರು ತಿಂಗಳಿಗೊಮ್ಮೆ ರಿಚಾರ್ಜ್ (Recharge)ಮಾಡಿಸುವ ಕಿರಿಕಿರಿಯಿಂದ ತಪ್ಪಿಸಿಕೊಳ್ಳಬಹುದು. ಜಿಯೋ ಧಮಾಕ ಆಫರ್ ನಲ್ಲಿ ವರ್ಷಕ್ಕೆ ರಿಚಾರ್ಜ್ ಮಾಡಿಸಿದರೆ ಅದರ ಬೆಲೆ 3599 ರೂಪಾಯಿ. ಒಮ್ಮೆ ಯೋಚಿಸಿದರೆ ಇದು ದುಬಾರಿ ಎನಿಸಿಕೊಳ್ಳಬಹುದು. ಆದರೆ ಒಮ್ಮೆ ಯೋಚನೆ ಮಾಡಿ ಲೆಕ್ಕಾಚಾರದಿಂದ ನೋಡಿದರೆ ಈ ಆಫರ್ ಬಳಸುವುದರಿಂದ ತಿಂಗಳಿಗೆ 300 ರೂಪಾಯಿ ರಿಚಾರ್ಜ್ ಮಾಡಿಸಿದಂತಾಗುತ್ತದೆ. ಆದರೆ ನಾವು ತಿಂಗಳಿಗೊಮ್ಮೆ ರಿಚಾರ್ಜ್ ಮಾಡಿಸುತ್ತೇವೆ ಎಂದರೆ ಪ್ರತಿದಿನ 2.5 ಜಿಬಿ ಡೇಟಾ ಅನ್ಲಿಮಿಟೆಡ್ ಕಾಲ್, ನೂರು ಎಸ್ಎಮ್ಎಸ್ ಗಳಿಗೆ ಒಟ್ಟು 399 ರೂ. ಗಳಷ್ಟು ಹಣ ವನ್ನು ವ್ಯಯಿಸ ಬೇಕಾಗುತ್ತದೆ. ಹೀಗೆ ನೋಡುವುದಾದರೆ ಜಿಯೋ ಧಮಾಕ ಆಫರ್ ಬಳಸುವುದರಿಂದ ತಿಂಗಳಿಗೆ ನಾವು 99 ರೂಪಾಯಿಗಳನ್ನು ಉಳಿಸಬಹುದು. ಹಾಗೂ ಸಂಪೂರ್ಣ 5ಜಿ ನೆಟ್‌ವರ್ಕ್ ಸಿಗಲಿದ್ದು, 912.5 ಜಿಬಿ ಅಂದರೆ ಪ್ರತಿ ದಿನ 2.5 ಜಿಬಿ ಡೇಟಾ ಉಚಿತವಾಗಿ ಸಿಗಲಿದೆ. ಜಿಯೋ ಕಂಪನಿಯನ್ನು ಹೊರತಾಗಿ ಬೇರೆ ಯಾವ ಟೆಲಿಕಾಂ ಕಂಪನಿಗಳು ಈ ರೀತಿಯ ಆಫರ್ ಗಳನ್ನು ಗ್ರಾಹಕರಿಗೆ ನೀಡಿಲ್ಲ. ಆದ್ದರಿಂದ ರಿಲಯನ್ಸ್ ಜಿಯೋ ಘೋಷಿಸಿರುವ ಜಿಯೋ ಧಮಾಕ ಆಫರ್ ಗ್ರಾಹಕರಿಗೆ ಹೆಚ್ಚು ಇಷ್ಟವಾಗುವುದರಲ್ಲಿ ಆಶ್ಚರ್ಯವಿಲ್ಲ.
ಜಿಯೋ ಧಮಾಕ ಆಫರ್ ನಲ್ಲಿ ಸಿಗುವ ಇತರೆ ಸೌಲಭ್ಯಗಳು:
ಜಿಯೋ ಧಮಾಕ ಆಫರ್ ಅನ್ನು ಆಯ್ಕೆ ಮಾಡಿಕೊಂಡರೆ 2.5 ಜಿಬಿ ಡೇಟಾ ಹಾಗೂ ಅನ್ಲಿಮಿಟೆಡ್ ಕಾಲ್ ಮಾತ್ರವಲ್ಲ ಇದರ ಜೊತೆಯಲ್ಲಿ ಗ್ರಾಹಕರಿಗೆ ಜಿಯೋ ಸಿನಿಮಾ ಜಿಯೋ ಟಿವಿ ಹಾಗೂ ಜಿಯೋ ಕ್ಲೌಡ್ ಸಬ್‌ಸ್ಕ್ರಿಪ್ಶನ್ ಕೂಡ ಲಭ್ಯವಾಗಲಿದೆ.
ಈ ಮಾಹಿತಿಗಳನ್ನು ಓದಿ
ದಯವಿಟ್ಟು ಗಮನಿಸಿ: ನೀಡ್ಸ್ ಆಫ್ ಪಬ್ಲಿಕ್ ತನ್ನ ಓದುಗರಿಗೆ ನಿಖರವಾದ ಮತ್ತು ಅಧಿಕೃತ ಮಾಹಿತಿಗಳನ್ನು ಮಾತ್ರ ಪ್ರಕಟಿಸುತ್ತದೆ. ಇಲ್ಲಿ ನಾವು ಯಾವುದೇ ಅನಧಿಕೃತ ಮತ್ತು ಸುಳ್ಳು ಮಾಹಿತಿಯನ್ನು ಬಿತ್ತರಿಸುವುದಿಲ್ಲ.