ರೈತರೇ ಗಮನಿಸಿ -ಹೈನುಗಾರಿಕೆ  ಮಾಡಲು 40 ಸಾವಿರ ಸಹಾಯಧನ! ಹೀಗೆ ಅಪ್ಲೈ ಮಾಡಿ

IMG 20241017 WA0001

ಹೈನುಗಾರಿಕೆ ಮಾಡ ಬಯಸುವ ರೈತರಿಗೆ ಸಿಹಿ ಸುದ್ದಿ, ರೈತರಿಗೆ ದೊರೆಯಲಿದೆ 40 ಸಾವಿರ ಸಹಾಯಧನ…!

ಇಂದು ರೈತರು ಬಹಳ ಸಂಕಷ್ಟಕ್ಕೆ ಸಿಲುಕ್ಕಿದ್ದಾರೆ. ಸರಿಯಾದ ಸಮಯಕ್ಕೆ ಮಳೆ ಇಲ್ಲ. ಹವಾಮಾನ ವೈಪರಿತ್ಯವು (Climate change) ರೈತರ ಬದುಕನ್ನು ಅಲ್ಲೋಲ ಕಲ್ಲೋಲ ಮಾಡಿ ಬಿಟ್ಟಿದೆ. ಇಂದು ರೈತರು ಬೆಳೆ ಬೆಳೆಯುದಕ್ಕೆ ಮುಂದಾದರೆ ಬಹಳ ಕಷ್ಟ ಅನುಭವಿಸುತ್ತಾನೆ. ಬೆಳೆ ಅಥವಾ ಕೃಷಿಯ ಜೊತೆ ಜೊತೆಗೆ ಕೃಷಿ ಉಪಕಸುಬುಗಳಾದ ಹೈನುಗಾರಿಕೆ (Dairy farm), ಮೀನುಗಾರಿಕೆ (Fish farming), ಕೋಳಿ ಸಾಕಾಣಿಕೆ (poultry farm) ಮತ್ತು ಕುರಿ/ಆಡು( sheep and goat farming) ಸಾಕಾಣಿಕೆಯಲ್ಲಿಯು ತೊಡಗಿಕೊಳ್ಳುವುದು ಅತ್ಯಗತ್ಯವಾಗಿದೆ. ಈ ಹೈನುಗಾರಿಕೆಯಲ್ಲಿ ತೊಡಗಿರುವ ಅಥವಾ ಹೊಸದಾಗಿ ಹೈನುಗಾರಿಕೆ ಮಾಡ ಬಯಸುವ ರೈತರಿಗೆ ಸಹಾಯ ಧನ ದೊರೆಯಲಿದೆ ಅದರ ಬಗ್ಗೆ ಸಂಪೂರ್ಣ ಮಾಹಿತಿಯನ್ನು ತಿಳಿದುಕೊಳ್ಳೋಣ ಬನ್ನಿ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ

ಕೃಷಿ ಇಲಾಖೆಯಿಂದ ಹೈನುಗಾರಿಕೆ (Dairy farming) ಯಲ್ಲಿ ತೊಡಗಿರುವವರಿಗೆ ಆರ್ಥಿಕ ನೆರವು :

ಇದೀಗ ಹೈನುಗಾರಿಕೆ ಮಾಡುವವರಿಗೆ ಸರ್ಕಾರದಿಂದ ಸಿಹಿ ಸುದ್ದಿ ತಿಳಿದು ಬಂದಿದೆ. ಹೌದು, ಹೊಸದಾಗಿ ಹೈನುಗಾರಿಕೆಯನ್ನು ಪ್ರಾರಂಭಿಸುವವರು ಅಥವಾ ಈಗಾಗಲೇ ಹೈನುಗಾರಿಕೆಯಲ್ಲಿ ತೊಡಗಿಕೊಂಡಿರುವವರು ಕೃಷಿ ಇಲಾಖೆಯಿಂದ ಈ ಯೋಜನೆಯಡಿ ಹಸು/ಎಮ್ಮೆ ಸಾಕಾಣಿಕೆಗೆ 40 ಸಾವಿರ ಅರ್ಥಿಕ ನೆರವನ್ನು (Dairy farm subsidy scheme) ಪಡೆಯಬಹುದು.

ಸಮಗ್ರ ಕೃಷಿ ಪದ್ದತಿ ಯೋಜನೆ (Karnataka Agriculture deparment IFS scheme) ಯಡಿ ರೈತರಿಗೆ ಅರ್ಥಿಕ ನೆರವು :

ಹೈನುಗಾರಿಕೆ ಎಂದರೆ, ಹಸು ಮತ್ತು ಎಮ್ಮೆ ಸಾಕಾಣಿಕೆಯಲ್ಲಿ ತೊಡಗಿಕೊಂಡಿರುವ ರೈತರಿಗೆ ಅರ್ಥಿಕವಾಗಿ ನೆರವಾಗಲು ಕೃಷಿ ಇಲಾಖೆ (Department of Agriculture) ಯಿಂದ ಕಳೆದ 2 ವರ್ಷದಿಂದ ಸಮಗ್ರ ಕೃಷಿ ಪದ್ದತಿ ಯೋಜನೆಯನ್ನು ಅನುಷ್ಥಾನ ಮಾಡಲಾಗುತ್ತಿದ್ದು. ಇದರಿಂದ ಅನೇಕ ರೈತರು ತಮ್ಮ ಬದುಕನ್ನು ಕಟ್ಟಿಕೊಂಡಿದ್ದಾರೆ.

ಸಮಗ್ರ ಕೃಷಿ ಪದ್ದತಿ ಯೋಜನೆಯ ಮುಖ್ಯ ಉದ್ದೇಶ (purpose) :

2022-23 ನೇ ಸಾಲಿನಲ್ಲಿ ರಾಷ್ಟ್ರೀಯ ಕೃಷಿ ವಿಕಾಸ್ ಯೋಜನೆ ಕಾರ್ಯಕ್ರಮದಡಿ ಕೃಷಿ ಮತ್ತು ಕೃಷಿ ಸಂಬಂಧಿತ ಚಟುವಟಿಕೆಗಳಾದ ತೋಟಗಾರಿಕೆ ಹಾಗೂ ಪಶುಸಂಗೋಪನೆಗಳನ್ನು ಒಗ್ಗೂಡಿಸಿ ಸಮಗ್ರ ಕೃಷಿ ಪದ್ದತಿ (Integrated Farming System) ಮೂಲಕ ರೈತನ ಆದಾಯ ಹೆಚ್ಚಳ ಮಾಡುವುದು ಹಾಗೂ ಅಳವಡಿಸಿದ ಪ್ರದೇಶದಲ್ಲಿ/ ಜಮೀನಿನಲ್ಲಿ ಬೆಳೆ ಉತ್ಪಾದಕತೆ, ಸುಸ್ಥಿರತೆ, ಸಮತೋಲನಾ ಆಹಾರ ಉತ್ಪಾದನೆ, ತಾಜ್ಯಗಳ ಮರುಬಳಕೆ ಹಾಗೂ ವರ್ಷಪೂರ್ತಿ ಆದಾಯ ಹೆಚ್ಚಿಸುವುದು ಈ ಯೋಜನೆಯ ಮುಖ್ಯ ಗುರಿಯಾಗಿರುತ್ತದೆ.

ಸಮಗ್ರ ಕೃಷಿ ಪದ್ದತಿ ಯೋಜನೆ ಉದ್ದೇಶಗಳು (Objectives) :

ಕೃಷಿ ಹಾಗೂ ಸಂಬಂಧಿತ ಕಾರ್ಯಕ್ಷೇತ್ರಗಳಲ್ಲಿ ಸಮಗ್ರ ಕೃಷಿ ಪದ್ದತಿ ಮಾದರಿಗಳನ್ನು ಸಿದ್ದಪಡಿಸಿದ್ದು, ಆಯಾ ಕ್ಷೇತ್ರಕ್ಕೆ ಸೂಕ್ತವಾಗುವಂತೆ ಅಳವಡಿಸುವುದು.

ಉತ್ತಮ ಬೇಸಾಯ ಪದ್ದತಿಗಳಾದ ನೂತನ ತಾಂತ್ರಿಕತೆಗಳು, ಅಧಿಕ ಇಳುವರಿ ಕೊಡುವ ತಳಿಗಳನ್ನು ಸಂಯೋಜನೆಯಲ್ಲಿ ಬಳಸುವುದು.

ರೈತರ ಆದಾಯ ಹೆಚ್ಚಿಸಲು ಕೃಷಿ ಜೊತೆಗೆ ಇತರೆ ಆದಾಯ ಬರುವ ಉದ್ದಿಮೆಗಳನ್ನು ಅಳವಡಿಸಲು ಪ್ರೇರೇಪಿಸುವುದು.

ಈ ಯೋಜನೆಯಡಿ ಯಾವ ಯಾವ ಕೃಷಿ ಚಟುವಟಿಕೆಗಳಿಗೆ ಆರ್ಥಿಕ ನೆರವು (Economic help) ಪಡೆಯಬಹುದು ?

ಕೃಷಿ ಹೊಂಡ ನಿರ್ಮಾಣ/Farm pond
ಹಸು/ಎಮ್ಮೆ ಸಾಕಾಣಿಕೆಗೆ ಅರ್ಥಿಕ ನೆರವು/Dairy farm
ಎರೆಹುಳು ಗೊಬ್ಬರ ತಯಾರಿಕೆ ಘಟಕ/Vermicompost
ಅಜೋಲ್ಲಾ ಘಟಕ-Azolla bed
ಸಣ್ಣ ಪ್ರಮಾಣದ ಮೇವಿನ ಬೆಳೆಗೆ ನೆರವು/Fodder seeds
ಕೈತೋಟ ನಿರ್ಮಾಣಕ್ಕೆ ನೆರವು/Kitchen garden
ಮರ ಆಧಾರಿತ ಕೃಷಿಗೆ ನೆರವು/Forestry crops
ಮೀನು ಸಾಕಾಣಿಕೆ/Fish farming

ರೈತರಿಗೆ ದೊರೆಯುವ ಘಟಕವಾರು ಅರ್ಥಿಕ (Dairy farming subsidy) ನೆರವಿನ ವಿವರ ಹೀಗಿದೆ:

ಘಟಕಸಹಾಯ ಧನ :

ನೀರು ಸಂರಕ್ಷಣೆ: ವಿವಿಧ ಅಳತೆಗಳ ಚಿಕ್ಕ ಹೊಂಡಗಳು (ಲೈನಿಂಗ್ ಸಹಿತ/ ಲೈನಿಂಗ್ ರಹಿತ) (ರಿಯಾಯಿತಿ ಶೇ. 50 ರಂತೆ)
10*10*3 – 13,173 ರೂ.
12*12*3 – 16,508 ರೂ.
15*15*3 – 22,808 ರೂ.
18*18*3 – 30,665 ರೂ.
21*21*3 – 40,041 ರೂ.
ಲೈನಿಂಗ್ ವೆಚ್ಚ – 25000 ರೂ.
ಸಸ್ಯಬೇಲಿ – 2500 ರೂ.
ಬದುಗಳು/ಟ್ರೆಂಚ್ ಗಳು- 2000 ರೂ.
ಬೆಳೆ ಪದ್ದತಿ ಆಧಾರಿತ ಸಮಗ್ರ ಬೆಳೆ ಪ್ರಾತ್ಯಕ್ಷತೆ (ನೂತನ ತಳಿಗಳೊಂದಿಗೆ) – 15000 ರೂ.
ಸಣ್ಣ ಪ್ರಮಾಣದ ಕುರಿ/ಮೇಕೆ/ಕೋಳಿ ಹಾಗೂ ಮೇವಿನ ಬೆಳೆಗಳು -10000 ರೂ.
ಎರೆಹುಳು ಗೊಬ್ಬರ- 8500 ರೂ.
ಅಜೋಲ್ಲಾ – 1000 ರೂ.
ಮರ ಆಧಾರಿತ  ಕೃಷಿ- 1000 ರೂ.
ಕೈ ತೋಟ – 1000 ರೂ.
ಮೀನುಗಾರಿಕೆ – 2500 ರೂ.
ಹಸು/ಎಮ್ಮೆ (2 ಸಂಖ್ಯೆ) ಖರೀದಿ, ಹೈಬ್ರಿಡ್ ನೇಪಿಯರ್/ ಗಿನಿ ಹುಲ್ಲು ಹಾಗೂ ಅವಶ್ಯಕವಿರುವ ಪಶು ಆಹಾರ -40,000 ರೂ.

ಹೈನುಗಾರಿಕೆಗೆ 50 ಸಾವಿರ ಸಹಾಯಧನ (Diary farming loan) :

ಈ ಯೋಜನೆಯಲ್ಲಿ ಮೇಲಿನ ಟೇಬಲ್ ನಲ್ಲಿ ಹಾಕಿರುವ ಅಂಕಿ-ಅಂಶದ ಪ್ರಕಾರ ಹೈನುಗಾರಿಕೆ ಘಟಕಕ್ಕೆ ಅಂದರೆ 2 ಹಸು ಅಥವಾ ಎಮ್ಮೆ ಸಾಕಾಣಿಕೆಗೆ ರೂ 50,000 ಸಾವಿರದವರೆಗೆ ನೀರಾವರಿ ಪ್ರದೇಶದ ರೈತರು ಸಹಾಯಧನವನ್ನು ಪಡೆಯಬಹುದು.

ಈ ಯೋಜನೆಗೆ ಅರ್ಜಿಯನ್ನು ಸಲ್ಲಿಸುವ ವಿಧಾನ (How to apply application) :

ರೈತರು ಅಗತ್ಯ ದಾಖಲಾತಿಗಳನ್ನು ಸಿದ್ದಪಡಿಸಿಕೊಂಡು ನಿಮ್ಮ ಹಳ್ಳಿಯ ಹೋಬಳಿ ಮಟ್ಟದ ರೈತ ಸಂಪರ್ಕ ಕೇಂದ್ರವನ್ನು ಭೇಟಿ ಮಾಡಿ ಅರ್ಜಿಯನ್ನು ಸಲ್ಲಿಸಬೇಕು.

ಅರ್ಜಿ ಸಲ್ಲಿಸಲು ಅಗತ್ಯವಿರುವ ದಾಖಲೆಗಳು : (Documents for IFS yojana)

ಅರ್ಜಿದಾರರ ಅಧಾರ್ ಕಾರ್ಡ (Aadhar card)
ಅರ್ಜಿದಾರರ ಪೋಟೋ (Photo)
ಜಮೀನಿನ ಪಹಣಿ (RTC)
ಬ್ಯಾಂಕ್ ಪಾಸ್ ಬುಕ್ ಪ್ರತಿ (Bank pass book)
ಅರ್ಜಿ ನಮೂನೆ (ರೈತ ಸಂಪರ್ಕ ಕೇಂದ್ರದಲ್ಲಿ ಲಭ್ಯವಿರುತ್ತದೆ)
ಮೊಬೈಲ್ ನಂಬರ್ (Mobile number)

ಗಮನಿಸಿ (Notice) :

ಅನುದಾನ ಲಭ್ಯತೆ ಆಧಾರದ ಮೇಲೆ ಫಲಾನುಭವಿಗಳನ್ನು ಆಯ್ಕೆ ಮಾಡಲಾಗುತ್ತದೆ. ಒಬ್ಬ ರೈತರು ಮಳೆಯಾಶ್ರಿತ ಪ್ರದೇಶದ ಸಮಗ್ರ ಕೃಷಿ ಪದ್ದತಿ ಯೋಜನೆಯಡು ಒಟ್ಟು ಎಲ್ಲಾ ಘಟಕಗಳ ಸಹಾಯದನ ಗರಿಷ್ಠ ರೂ 1,25,000/- ದ ವರೆಗೆ ಸಹಾಯಧನ ಪಡೆಯಲು ಅವಕಾಶವಿರುತ್ತದೆ.

ಈ ಮಾಹಿತಿಗಳನ್ನು ಓದಿ

 


ದಯವಿಟ್ಟು ಗಮನಿಸಿ: ನೀಡ್ಸ್ ಆಫ್ ಪಬ್ಲಿಕ್ ತನ್ನ ಓದುಗರಿಗೆ ನಿಖರವಾದ ಮತ್ತು ಅಧಿಕೃತ ಮಾಹಿತಿಗಳನ್ನು ಮಾತ್ರ ಪ್ರಕಟಿಸುತ್ತದೆ. ಇಲ್ಲಿ ನಾವು ಯಾವುದೇ ಅನಧಿಕೃತ ಮತ್ತು ಸುಳ್ಳು ಮಾಹಿತಿಯನ್ನು ಬಿತ್ತರಿಸುವುದಿಲ್ಲ.

WhatsApp Group Join Now
Telegram Group Join Now

Related Posts

Leave a Reply

Your email address will not be published. Required fields are marked *

error: Content is protected !!