Personal Loan : ಪರ್ಸನಲ್ ಲೋನ್ ಪಡೆಯಲು ಹೊಸ ನಿಯಮ..! ತಪ್ಪದೇ ತಿಳಿದುಕೊಳ್ಳಿ.

IMG 20241021 WA0002

ವೈಯಕ್ತಿಕ ಸಾಲ (personal loan) ಪಡೆಯುವ ಮುನ್ನ ಎಚ್ಚರ!. ಈ ಅಂಶಗಳನ್ನು ಗಮನಿಸದಿದ್ದರೆ ಆರ್ಥಿಕ ನಷ್ಟವಾಗಬಹುದು (financial loss.)

ಜೀವನದಲ್ಲಿ ಆರ್ಥಿಕ ನಿರ್ವಹಣೆಯನ್ನು(Financial management) ಮಾಡುವುದು ಬಹಳ ಕಷ್ಟ. ನಾವು ಒಳ್ಳೆಯ ಕೆಲಸದಲ್ಲಿದ್ದರೂ ಕೂಡ ಒಳ್ಳೆಯ ಸಂಬಳವನ್ನು ತೆಗೆದುಕೊಳ್ಳುತ್ತಿದ್ದರೂ ಕೂಡ ಆ ಸಂಬಳ ಮನೆಯ ಎಲ್ಲಾ ಖರ್ಚಿಗೆ ಸಾಲುವುದಿಲ್ಲ. ಆದ್ದರಿಂದ ಜನರು ಬ್ಯಾಂಕುಗಳಿಂದ(bank) ಅಥವಾ ಬೇರೆ ಸಂಘ ಸಂಸ್ಥೆಗಳಿಂದ ಸಾಲ(loan) ಪಡೆಯಲು ಮುಂದಾಗುತ್ತಾರೆ. ಬ್ಯಾಂಕುಗಳಲ್ಲಿ ವಿದ್ಯಾಭ್ಯಾಸ(Education), ಮನೆ ಹಾಗೂ ವಾಹನ ಹೀಗೆ ಹಲವಾರು ರೀತಿಯ ಸಾಲ ಸೌಲಭ್ಯವನ್ನು ಕಲ್ಪಿಸಲಾಗಿದೆ. ಈ ಎಲ್ಲಾ ಸಾಲವನ್ನು ಹೊರತುಪಡಿಸಿ ಜನರು ವೈಯಕ್ತಿಕ ಸಾಲ ವನ್ನೂ ಕೂಡ ಪಡೆಯಬಹುದು. ಆದರೆ ವೈಯಕ್ತಿಕ ಸಾಲವನ್ನು ಪಡೆಯುವ ಮುನ್ನ ಜನರು ಕೆಲವೊಂದು ಎಚ್ಚರಿಕೆ ನಿಯಮಗಳನ್ನು ಕೇಳಿದಿರಬೇಕಾಗುತ್ತದೆ. ಒಂದು ವೇಳೆ ಈ ಅಂಶಗಳತ್ತ ಗಮನಹರಿಸಲಿಲ್ಲವೆಂದರೆ ದೊಡ್ಡ ಮಟ್ಟದ ಆರ್ಥಿಕ ಸಂಕಷ್ಟವನ್ನು ಎದುರಿಸಬೇಕಾಗಬಹುದು. ವೈಯಕ್ತಿಕ ಸಾಲವನ್ನು ಪಡೆಯುವ ಮುಂಚೆ ಯಾವ ಅಂಶಗಳನ್ನು ಪರಿಗಣಿಸಬೇಕು ಎಂಬ ಸಂಪೂರ್ಣ ಮಾಹಿತಿಯನ್ನು ತಿಳಿದುಕೊಳ್ಳೋಣ ಬನ್ನಿ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ

ಹೌದು, ವೈಯಕ್ತಿಕ ಸಾಲ ಅಥವಾ ಇತರೆ ಯಾವುದೇ ರೀತಿಯ ಸಾಲವನ್ನು ತೆಗೆದುಕೊಳ್ಳಬೇಕೆಂದರು ಕೂಡ ಸರಿಯಾದ ಯೋಜನೆ ಬಹಳ ಮುಖ್ಯ. ಅದರಲ್ಲೂ ವೈಯಕ್ತಿಕ ಸಾಲವನ್ನು ಮನೆಯಲ್ಲಿ ಆಗುವಂತಹ ಕೆಲವೊಂದಷ್ಟು ಆರ್ಥಿಕ ತೊಂದರೆಗಳಿಂದ(financial difficulties) ತಪ್ಪಿಸಿಕೊಳ್ಳಲು ತೆಗೆದುಕೊಳ್ಳುತ್ತಾರೆ. ಆರ್ಥಿಕ ತೊಂದರೆ ಜಾಸ್ತಿ ಇದೆ ಎಂದು ಹೆಚ್ಚಿನ ಮಟ್ಟದಲ್ಲಿ ಸಾಲವನ್ನು ಪಡೆಯುತ್ತಿದ್ದರೆ ಮುಂದೆ ಪಶ್ಚಾತಾಪ ಪಡಬೇಕಾಗುತ್ತದೆ. ಎಷ್ಟು ಸಾಲ ಪಡೆಯಬೇಕು ಎಂಬುದನ್ನು ಮುಂಚೆಯೇ ನಿರ್ಧರಿಸಬೇಕು. ಇದರ ಜೊತೆಯಲ್ಲಿ ಇನ್ನು ಕೆಲವೊಂದುಷ್ಟು ವಿಷಯಗಳನ್ನು ಗಮನದಲ್ಲಿಟ್ಟುಕೊಂಡು ವಯಕ್ತಿಕ ಸಾಲವನ್ನು ಪಡೆದುಕೊಂಡರೆ ಅನುಕೂಲವಾಗಬಹುದು.

ವೈಯಕ್ತಿಕ ಸಾಲ ಪಡೆಯಬೇಕೆಂದರೆ ಯಾವ ಯಾವ ವಿಷಯಗಳನ್ನು ಗಮನಿಸಬೇಕು:

ಆದಾಯ
ಉದ್ಯೋಗ ಇತಿಹಾಸ
ಸಾಲದ ಉದ್ದೇಶ
ಬಡ್ಡಿದರಗಳನ್ನು ಎಚ್ಚರಿಕೆಯಿಂದ ಪರಿಶೀಲಿಸಿ
ನಿಮ್ಮ ಕ್ರೆಡಿಟ್ ಇತಿಹಾಸ
ಸಾಲದಿಂದ ಆದಾಯದ ಅನುಪಾತ

ಆದಾಯ(Income):

ನಮ್ಮ ಆದಾಯವನ್ನು ನೆನಪಿನಲ್ಲಿಟ್ಟುಕೊಂಡು ವೈಯಕ್ತಿಕ ಸಾಲವನ್ನು ಪಡೆಯಲು ಮುಂದೆ ಹೋಗಬೇಕು. ಒಂದು ವೇಳೆ ನೀವೇನಾದರೂ ಹೆಚ್ಚಿನ ಆದಾಯವನ್ನು ಪಡೆಯುತ್ತಿದ್ದರೆ ವೈಯಕ್ತಿಕ ಸಾಲದ ಮೇಲಿನ ಬಡ್ಡಿ(Interest) ದರವು ಕಡಿಮೆ ಇರುತ್ತದೆ. ಹಾಗೂ ಸಂಬಳ ಹೆಚ್ಚಿಗೆ ಬರುತ್ತಿದೆ ಎಂದರೆ ಸಾಲವನ್ನು ನೀಡುವವರು ನಿಮ್ಮನ್ನು ಹೆಚ್ಚು ನಂಬುತ್ತಾರೆ. ಹಾಗೂ ಗ್ರಾಹಕನ ಆದಾಯವು ತಾವು ವಿನಂತಿಸಿದ ಸಾಲದ ಮೊತ್ತಕ್ಕಿಂತ ಕನಿಷ್ಠ 1.5 ಪಟ್ಟು ಹೆಚ್ಚು ಆದಾಯ ಇರಬೇಕು.

ಉದ್ಯೋಗ ಇತಿಹಾಸ(Employment history):

ವೈಯಕ್ತಿಕ ಸಾಲವನ್ನು ಪಡೆಯಲು ವಿನಂತಿಸಿರುವ ಗ್ರಾಹಕರು ತಾವು ಉದ್ಯೋಗವನ್ನು ಮಾಡುತ್ತಿರುವಂತಹ ಕಂಪನಿಯ(company) ವಿವರಗಳನ್ನು ಲಗತ್ತಿಸಬೇಕು. ಹಾಗೂ ನೀವು ಎಷ್ಟು ಸಮಯ ಕೆಲಸ ಮಾಡುತ್ತೀರಾ? ನೀವು ಕಂಪನಿಗೆ ಎಷ್ಟು ವಿಶ್ವಾಸಾರ್ಹ ಉದ್ಯೋಗಿ ಎಂಬುದನ್ನು ತಿಳಿಸಬೇಕು. ತಮ್ಮ ಉದ್ಯೋಗ ಇತಿಹಾಸವನ್ನು ನೀಡಿದರೆ ನಿಮ್ಮ ವೈಯಕ್ತಿಕ ಸಾಲವನ್ನು ನೀಡಲು ಹೆಚ್ಚು ನಂಬಿಕೆ ಬರುತ್ತದೆ.

ಸಾಲದ ಉದ್ದೇಶ(Purpose of loan):

ವೈಯಕ್ತಿಕ ಸಾಲವನ್ನು ಪಡೆಯಬೇಕಾದರೆ ನೀವು ಯಾವುದರ ಸಲುವಾಗಿ ವೈಯಕ್ತಿಕ ಸಾಲವನ್ನು ಪಡೆಯುತ್ತಿದ್ದೀರಿ ಎಂಬುದನ್ನು ನಿರ್ದಿಷ್ಟವಾಗಿ ಹೇಳಬೇಕಾಗುತ್ತದೆ. ಸಾಲದ ಉದ್ದೇಶವನ್ನು ತಿಳಿಸುವುದರಿಂದ ನಿಮಗೆ ಹೆಚ್ಚಿನ ಸಾಲವನ್ನು ನೀಡುವ ಸಾಧ್ಯತೆ ಇರುತ್ತದೆ. ಆದ್ದರಿಂದ ನೀವು ವೈಯಕ್ತಿಕ ಸಾಲವನ್ನು ಯಾವ ಉದ್ದೇಶಕ್ಕಾಗಿ ಪಡೆಯುತ್ತಿದ್ದೀರಿ ಎಂಬುದನ್ನು ತಿಳಿಸಬೇಕಾಗುತ್ತದೆ.

ಬಡ್ಡಿದರಗಳನ್ನು(Interest rates) ಎಚ್ಚರಿಕೆಯಿಂದ ಪರಿಶೀಲಿಸಿ:

ವೈಯಕ್ತಿಕ ಸಾಲವನ್ನು ಪಡೆಯುವ ಸಂದರ್ಭದಲ್ಲಿ ನಾವು ಯಾವ ಬ್ಯಾಂಕ್  ಎಷ್ಟು ಬಡ್ಡಿ ದರದಲ್ಲಿ ಸಾಲವನ್ನು ನೀಡುತ್ತಿದೆ ಎಂಬುದನ್ನು ತಿಳಿದುಕೊಳ್ಳಬೇಕು. ಬಡ್ಡಿ ದರಗಳನ್ನು ಎಚ್ಚರಿಕೆಯಿಂದ ಪರಿಶೀಲಿಸಿ, ನಿಮಗೆ ಸರಿ ಹೊಂದುವಂತಹ ಬ್ಯಾಂಕ್ ಗಳಲ್ಲಿ ಸಾಲ ಪಡೆಯಬೇಕು.

ನಿಮ್ಮ ಕ್ರೆಡಿಟ್ ಇತಿಹಾಸ(Credit history):

ಯಾವುದೇ ಸಾಲಗಾರನ ತಾನು ಪಡೆದುಕೊಂಡಿರುವ ಸಾಲವನ್ನು ಎಷ್ಟರಮಟ್ಟಿಗೆ ನಿಭಾಯಿಸಬಲ್ಲ ಎಂಬುದನ್ನು ಕ್ರೆಡಿಟ್ ಇತಿಹಾಸ ತಿಳಿಸಿಕೊಡುತ್ತದೆ. ಕ್ರೆಡಿಟ್ ಸ್ಕೋ‌ರ್ ಅನ್ನು ಸರಿಯಾಗಿ ನಿರ್ವಹಿಸುವುದು ಅತೀ ಮುಖ್ಯವಾಗಿರುವ ಅಂಶ. ಒಂದುವೇಳೆ ನೀವು ಉತ್ತಮ ಅಂಕಗಳನ್ನು ಹೊಂದಿದ್ದರೆ, ನಿಮಗೆ ಕಡಿಮೆ ಬಡ್ಡಿ ದರದಲ್ಲಿ ದೊಡ್ಡ ಮೊತ್ತದ ಸಾಲವನ್ನು ನೀಡಲಾಗುತ್ತದೆ.

ಸಾಲದಿಂದ ಆದಾಯದ ಅನುಪಾತ:

ವೈಯಕ್ತಿಕ ಸಾಲವನ್ನು ಪಡೆಯಬೇಕು ಎಂಬುವವರು ಈಗಾಗಲೇ ನೀವು ತೆಗೆದುಕೊಂಡಿರುವ ಸಾಲಗಳು ಬಗ್ಗೆ ಗಮನವಿರಬೇಕು. ಏಕೆಂದರೆ ನೀವು ಈಗಾಗಲೇ ಕೆಲಸ ಮಾಡಿ ತೆಗೆದುಕೊಳ್ಳುತ್ತಿರುವ ಸಂಬಳದಲ್ಲಿ ಈಗಾಗಲೇ ತೆಗೆದುಕೊಂಡಿರುವ ಸಾಲಗಳು ನಿಮ್ಮ ಸಂಬಳದ ಒಂದು ಭಾಗವನ್ನು ತಿನ್ನುತ್ತವೆ. ಆದ್ದರಿಂದ ವೈಯಕ್ತಿಕ ಸಾಲಗಳನ್ನು ನೀಡುವಲ್ಲಿ ಸಾಲ ಕೊಡುವವರು ನಿಮ್ಮನ್ನು ಹೆಚ್ಚಿನ ಅಪಾಯದ ವ್ಯಕ್ತಿ ಎಂದು ಪರಿಗಣಿಸಬಹುದು ಹಾಗೂ ಬಡ್ಡಿದರ ಸೇರಿದಂತೆ ನಿಮ್ಮ ವೈಯಕ್ತಿಕ ಸಾಲದ ಅರ್ಹತೆಯ ಮೇಲೂ ಪರಿಣಾಮ ಬೀರಬಹುದು.   

ವೈಯಕ್ತಿಕ ಸಾಲವನ್ನು ಹೇಗೆ ಪಡೆಯುವುದು?:

ವೈಯಕ್ತಿಕ ಸಾಲವನ್ನು ಪಡೆಯಬೇಕು ಎಂಬುವವರು ತಮಗೆ ಸರಿಹೊಂದುವಂತಹ ಬ್ಯಾಂಕ್ ಯಾವುದು ಎಂದು ತಿಳಿದುಕೊಂಡು ಆ ಬ್ಯಾಂಕ್ ನ ಅಧಿಕೃತ ವೆಬ್ಸೈಟ್ ಅಥವಾ ಶಾಖೆಗೆ ಭೇಟಿ ನೀಡಿ ಅರ್ಜಿಯನ್ನು ಸಲ್ಲಿಸಬಹುದು.

ವೈಯಕ್ತಿಕ ಸಾಲಕ್ಕೆ ಅರ್ಜಿ ಹಾಕುವ ಮುನ್ನ ಯಾವ ಬ್ಯಾಂಕುಗಳು ಉತ್ತಮ ಎಂಬುದನ್ನು ಪರಿಶೀಲಿಸಿ :

ವೈಯಕ್ತಿಕ ಸಾಲಕ್ಕೆ ಅರ್ಜಿ ಹಾಕುವ ಮುನ್ನ ಈಗಾಗಲೇ ಮಾರುಕಟ್ಟೆಯಲ್ಲಿ(market) ಲಭ್ಯವಿರುವ ಡೀಲ್‌ಗಳು ಮತ್ತು ಆಫರ್‌ಗಳ (Deals and Offers)ಬಗ್ಗೆ ಗಮನಹರಿಸಿ. ವಿವಿಧ ಬ್ಯಾಂಕುಗಳು ವೈಯಕ್ತಿಕ ಸಾಲಗಳ ಮೇಲೆ ವಿಭಿನ್ನ ಬಡ್ಡಿ ದರಗಳು ಮತ್ತು ಷರತ್ತುಗಳನ್ನು ನೀಡುತ್ತವೆ. ಎಲ್ಲಾ ಬ್ಯಾಂಕುಗಳು ನೀಡುವ ಬಡ್ಡಿ ದರಗಳನ್ನು ಸರಿಯಾದ ರೀತಿಯಲ್ಲಿ ಸಂಶೋಧನೆ ಮಾಡಿದ ಬಳಿಕ ವೈಯಕ್ತಿಕ ಸಾಲಕ್ಕೆ ಅರ್ಜಿ ಹಾಕಿ.

ಈ ಮಾಹಿತಿಗಳನ್ನು ಓದಿ

 


ದಯವಿಟ್ಟು ಗಮನಿಸಿ: ನೀಡ್ಸ್ ಆಫ್ ಪಬ್ಲಿಕ್ ತನ್ನ ಓದುಗರಿಗೆ ನಿಖರವಾದ ಮತ್ತು ಅಧಿಕೃತ ಮಾಹಿತಿಗಳನ್ನು ಮಾತ್ರ ಪ್ರಕಟಿಸುತ್ತದೆ. ಇಲ್ಲಿ ನಾವು ಯಾವುದೇ ಅನಧಿಕೃತ ಮತ್ತು ಸುಳ್ಳು ಮಾಹಿತಿಯನ್ನು ಬಿತ್ತರಿಸುವುದಿಲ್ಲ.

WhatsApp Group Join Now
Telegram Group Join Now

Related Posts

Leave a Reply

Your email address will not be published. Required fields are marked *

error: Content is protected !!