Public Holidays: ಕೇಂದ್ರದಿಂದ 2025ನೇ ಸಾಲಿನ ಸಾರ್ವತ್ರಿಕ ರಜಾದಿನಗಳ ಪಟ್ಟಿ ಬಿಡುಗಡೆ.!

IMG 20241022 WA0000

2025 ನೇ ಸಾಲಿನ ಸಾರ್ವತ್ರಿಕ ರಜಾದಿನಗಳ ಪಟ್ಟಿಯನ್ನು ಕೇಂದ್ರ ಸರ್ಕಾರ ಬಿಡುಗಡೆ ಮಾಡಿದೆ.

ರಜೆ (Holiday) ಎಂದರೆ ಯಾರಿಗೆ ಇಷ್ಟ ಇಲ್ಲ ಹೇಳಿ? ಶಾಲೆಗೆ ಹೋಗುವ ಮಕ್ಕಳಿಂದ ಹಿಡಿದು ಕೆಲಸಕ್ಕೆ ಹೋಗುವ ವೃತ್ತಿಪರ ಕೆಲಸಗಾರರಿಗೂ ಕೂಡ ರಜೆ ಎಂದರೆ ಬಹಳ ಇಷ್ಟ. ಯಾವ ದಿನ ರಜೆ ಸಿಗುತ್ತದೆ ಎಂದು ಕಾಯುತ್ತಾ ಕುಳಿತಿರುತ್ತಾರೆ. ರಜೆಯ ದಿನ ಪ್ರವಾಸಕ್ಕೆ (Tour) ಹೋಗುವುದು ಅಥವಾ ಬೇರೆ ಬೇರೆ ರೀತಿಯ ಯೋಜನೆಗಳನ್ನು ಮಾಡಿಟ್ಟುಕೊಂಡಿರುತ್ತಾರೆ. ಅದರಲ್ಲೂ 2024ನೇ ವರ್ಷ ಮುಗಿಯುತ್ತಾ ಬಂತು. 2025 ನೇ ವರ್ಷದಲ್ಲಿ ಯಾವೆಲ್ಲ ಕೆಲಸಗಳನ್ನು ಮಾಡಬೇಕು, ಹಾಗೂ ಎಷ್ಟು ರಜೆಗಳು ಸಿಗುತ್ತವೆ, ಆ ರಜಾ ದಿನಗಳಲ್ಲಿ ಸಾಧ್ಯವಾದಷ್ಟು ಪ್ರವಾಸ ಮಾಡಬೇಕು ಹೀಗೆ ಹಲವಾರು ಯೋಜನೆಗಳನ್ನು ಮಾಡಿಟ್ಟುಕೊಂಡಿರುತ್ತಾರೆ. ಅಂಥವರಿಗೆ ಸರ್ಕಾರ ಮಾಹಿತಿಯನ್ನು ನೀಡಲು 2025ನೇ ಸಾಲಿನ ಸಾಮಾನ್ಯ ಮತ್ತು ನಿರ್ಬಂಧಿತ ರಜೆಗಳ ಪಟ್ಟಿಯನ್ನು (Holidays list) ಬಿಡುಗಡೆ ಮಾಡಿದೆ. ಇದರ ಬಗ್ಗೆ ಸಂಪೂರ್ಣ ಮಾಹಿತಿಯನ್ನು ತಿಳಿದುಕೊಳ್ಳೋಣ ಬನ್ನಿ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ

ಪ್ರತಿ ವರ್ಷವೂ ಕೇಂದ್ರ ಸರ್ಕಾರ (Central government) ರಜೆಯ ಕ್ಯಾಲೆಂಡರ್ (Calendar) ಬಿಡುಗಡೆ ಮಾಡುತ್ತದೆ. ಈ ಕುರಿತು 2025 ರ ಸಾರ್ವಜನಿಕ ರಜಾದಿನಗಳ ಪಟ್ಟಿಯ ಕುರಿತು ಕೇಂದ್ರ ಸರ್ಕಾರ ಪ್ರಕಟಣೆಯನ್ನು ಹೊರಡಿಸಿದೆ. ಹಾಗೂ ಕೇಂದ್ರ ಸರ್ಕಾರದ ಎಲ್ಲಾ ಇಲಾಖೆಗಳಿಗೂ ಒಂದೇ ಕ್ಯಾಲೆಂಡರ್ ಅನ್ವಯಿಸುತ್ತದೆ.

ಈ ಪಟ್ಟಿಯ ಪ್ರಕಾರ 17 ಗೆಜೆಟೆಡ್ ಮತ್ತು 34 ನಿರ್ಬಂಧಿತ ರಜಾದಿನಗಳಿವೆ. ಗೆಜೆಟೆಡ್ ರಜಾ ದಿನಗಳು (Gazetted Holidays) ಎಂದರೆ ಸಾರ್ವಜನಿಕ ರಜಾ ದಿನಗಳು ಅಥವಾ ಸರ್ಕಾರಿ ಕ್ಯಾಲೆಂಡರ್ನಲ್ಲಿನ ಕಡ್ಡಾಯ ರಜಾದಿನಗಳಾಗಿವೆ. ಹಾಗೂ ನಿರ್ಬಂಧಿತ ರಜಾದಿನಗಳೆಂದರೆ ನೌಕರರು ತಮ್ಮ ಆದ್ಯತೆಯ ಪ್ರಕಾರ ಆಯ್ಕೆ ಮಾಡಬಹುದಾದಂತಹ ರಜಾ ದಿನಗಳಾಗಿವೆ. ಸರ್ಕಾರದ ರಜಾ ಕ್ಯಾಲೆಂಡರ್ ಎಲ್ಲಾ ಸರ್ಕಾರಿ ಕಚೇರಿಗಳಿಗೆ ಅನ್ವಯಿಸುತ್ತದೆ.

2025ನೇ ವರ್ಷದ ಕೇಂದ್ರ ಸರ್ಕಾರದ `ಸಾರ್ವತ್ರಿಕ ರಜೆ’ ದಿನಗಳು :

ಜನವರಿ 26 (ಭಾನುವಾರ)ಗಣರಾಜ್ಯೋತ್ಸವ.
ಫೆಬ್ರವರಿ 26 (ಬುಧವಾರ)ಮಹಾ ಶಿವರಾತ್ರಿ  .
ಮಾರ್ಚ್ 14 (ಶುಕ್ರವಾರ)ಹೋಳಿ.
ಮಾರ್ಚ್ 31 (ಸೋಮವಾರ)ಈದ್-ಉಲ್-ಫಿತರ್.
ಏಪ್ರಿಲ್ 10 (ಗುರುವಾರ)ಮಹಾವೀರ ಜಯಂತಿ.  
ಏಪ್ರಿಲ್ 18 (ಶುಕ್ರವಾರ)ಗುಡ್ ಪ್ರೈಡೆ. 
ಮೇ 12 (ಸೋಮವಾರ)ಬುದ್ಧ ಪೂರ್ಣಿಮಾ. 
ಜೂನ್ 7 (ಶನಿವಾರ)ಈದ್-ಉಲ್-ಜುಹಾ (ಬಕ್ರೀದ್).  
ಜುಲೈ 6 (ಭಾನುವಾರ) ಮೊಹರಂ.  
ಆಗಸ್ಟ್ 15 (ಶುಕ್ರವಾರ) ಸ್ವಾತಂತ್ರ್ಯ ದಿನ.  
ಆಗಸ್ಟ್ 16 (ಶನಿವಾರ):ಕೃಷ್ಣ ಜನ್ಮಾಷ್ಟಮಿ  
ಸೆಪ್ಟೆಂಬರ್ 5 (ಶುಕ್ರವಾರ)ಮಿಲಾದ್-ಉನ್-ನಬಿ (ಈದ್-ಎ-ಮಿಲಾದ್).
ಅಕ್ಟೋಬ‌ರ್ 2 (ಗುರುವಾರ)ಮಹಾತ್ಮ ಗಾಂಧಿಯವರ ಜನ್ಮದಿ.
ಅಕ್ಟೋಬರ್ 2 (ಗುರುವಾರ)ದಸರಾ?
ಅಕ್ಟೋಬ‌ರ್ 20 (ಸೋಮವಾರ) ದೀಪಾವಳಿ.
ನವೆಂಬ‌ರ್ 5  (ಬುಧವಾರ)ಗುರುನಾನಕ್ ಜಯಂತಿ.
ಡಿಸೆಂಬರ್ 25  (ಗುರುವಾರ) ಕ್ರಿಸ್ಮಸ್

2025ನೇ ವರ್ಷದ ಕೇಂದ್ರ ಸರ್ಕಾರದ ಐಚ್ಛಿಕ ರಜಾದಿನಗಳು :

ಜನವರಿ 1 (ಬುಧವಾರ)ಹೊಸ ವರ್ಷದ ದಿನ/ಗುರು ಗೋವಿಂದ್ ಸಿಂಗ್ ಜಯಂತಿ.
ಜನವರಿ 6 (ಸೋಮವಾರ) ಮಕರ ಸಂಕ್ರಾಂತಿ / ಮಾಫ್ ಬಿಹು / ಪೊಂಗಲ್.
ಜನವರಿ 14 (ಮಂಗಳವಾರ)ಬಸಂತ್ ಪಂಚಮಿ.
ಫೆಬ್ರವರಿ 2 (ಭಾನುವಾರ) ಗುರು ರವಿದಾಸ್ ಜಯಂತಿ.
ಫೆಬ್ರವರಿ 12 (ಬುಧವಾರ) ಶಿವಾಜಿ ಜಯಂತಿ.
ಫೆಬ್ರವರಿ 19 (ಬುಧವಾರ) ಸ್ವಾಮಿ ದಯಾನಂದ ಸರಸ್ವತಿ ಜಯಂತಿ.
ಫೆಬ್ರವರಿ 23 (ಭಾನುವಾರ) ಹೋಳಿ.
ಮಾರ್ಚ್ 13 (ಗುರುವಾರ) ಡೋಲ್ ಯಾತ್ರಾ.
ಮಾರ್ಚ್ 14 (ಶುಕ್ರವಾರ) ರಾಮನವಮಿ.
ಏಪ್ರಿಲ್ 16 (ಭಾನುವಾರ) ಜನ್ಮಾಷ್ಟಮಿ (ಸ್ಮಾರ್ಟ್).
ಆಗಸ್ಟ್ 2 (ಶುಕ್ರವಾರ) ಗಣೇಶ ಚತುರ್ಥಿ ಅಥವಾ ತಿರುಓಣಂ.
ಸೆಪ್ಟೆಂಬರ್ 5 (ಶುಕ್ರವಾರ) ದಸರಾ (ಸಪ್ತಮಿ).
ಸೆಪ್ಟೆಂಬರ್ 29 (ಸೋಮವಾರ) ದಸರಾ (ಮಹಾಷ್ಟಮಿ).
ಸೆಪ್ಟೆಂಬರ್ 30 (ಮಂಗಳವಾರ) ದಸರಾ (ಮಹಾನವಮಿ).
ಅಕ್ಟೋಬರ್ 1 (ಬುಧವಾರ) ಮಹರ್ಷಿ ವಾಲ್ಮೀಕಿ ಜಯಂತಿ.
ಅಕ್ಟೋಬರ್ 7 (ಮಂಗಳವಾರ) ಕರ ಚತುರ್ಥಿ (ಕರ್ವಾ ಚೌತ್).
ಅಕ್ಟೋಬರ್ 10 (ಶುಕ್ರವಾರ) ನರಕ ಚತುರ್ದಶಿ.
ಅಕ್ಟೋಬರ್ 20 (ಸೋಮವಾರ) ಗೋವರ್ಧನ ಪೂಜೆ.
ಅಕ್ಟೋಬರ್ 22 (ಬುಧವಾರ) ಭಾಯಿ ದೂಜ್.
ಅಕ್ಟೋಬರ್ 23 (ಗುರುವಾರ) ಪ್ರತಿಹಾರ್ ಷಷ್ಠಿ ಹಾಗೂ ಸೂರ್ಯ ಷಷ್ಠಿ (ರ್ಛ ಪೂಜಾ) ಬುಧವಾರ.

ಈ ಮಾಹಿತಿಗಳನ್ನು ಓದಿ

 

ದಯವಿಟ್ಟು ಗಮನಿಸಿ: ನೀಡ್ಸ್ ಆಫ್ ಪಬ್ಲಿಕ್ ತನ್ನ ಓದುಗರಿಗೆ ನಿಖರವಾದ ಮತ್ತು ಅಧಿಕೃತ ಮಾಹಿತಿಗಳನ್ನು ಮಾತ್ರ ಪ್ರಕಟಿಸುತ್ತದೆ. ಇಲ್ಲಿ ನಾವು ಯಾವುದೇ ಅನಧಿಕೃತ ಮತ್ತು ಸುಳ್ಳು ಮಾಹಿತಿಯನ್ನು ಬಿತ್ತರಿಸುವುದಿಲ್ಲ.

WhatsApp Group Join Now
Telegram Group Join Now

Related Posts

Leave a Reply

Your email address will not be published. Required fields are marked *

error: Content is protected !!