3 ದಿನಗಳ ದೀಪಾವಳಿ ಹಬ್ಬದ (Diwali festival) ಪ್ರಯುಕ್ತ ಬ್ಯಾಂಕುಗಳಿಗೆ(banks) ಎಂದು ಸಾರ್ವಜನಿಕ ರಜೆ ಘೋಷಣೆಯಾಗಿದೆ?.
ಹಿಂದುಗಳ ಪ್ರಮುಖ ಹಬ್ಬಗಳಲ್ಲಿ ದೀಪಾವಳಿ ಹಬ್ಬವನ್ನು(Diwali festival) ಜನರು ಹೆಚ್ಚು ಇಷ್ಟಪಡುತ್ತಾರೆ. ಕಾರಣ ಈ ಹಬ್ಬದಲ್ಲಿ ಬಗೆ ಬಗೆಯ ದೀಪಗಳನ್ನು ಹಚ್ಚಿ ಬೆಳಕಿನ ಹಬ್ಬವನ್ನಾಗಿ ಆಚರಿಸಲಾಗುತ್ತದೆ. ಆದ್ದರಿಂದ ದೀಪಾವಳಿ ಹಬ್ಬವೆಂದರೆ ಎಲ್ಲರಿಗೂ ಅಚ್ಚುಮೆಚ್ಚು. ಸಾಮಾನ್ಯವಾಗಿ ಈ ಹಬ್ಬಗಳಲ್ಲಿ ಮಕ್ಕಳು ಹೆಚ್ಚಾಗಿ ಪಟಾಕಿಯನ್ನು ಹಚ್ಚುತ್ತಾರೆ. ಬಗೆ ಬಗೆಯ ದೀಪಗಳನ್ನು ಕೂಡ ಮಕ್ಕಳು ಬೆಳಗುತ್ತಾರೆ. ಆ ಮಕ್ಕಳ ಖುಷಿಯನ್ನು ನೋಡಲು ಪೋಷಕರು ತಮ್ಮ ಕೆಲಸಗಳಿಗೆ ರಜೆ ಮಾಡಿ ಹಬ್ಬದ ದಿನದಂದು ಮನೆಯಲ್ಲಿಯೇ ಉಳಿಯುತ್ತಾರೆ. ಈ ಬಾರಿಯ ದೀಪಾವಳಿ ಹಬ್ಬಕ್ಕೆ ಕ್ಷಣಗಣನೆ ಶುರುವಾಗಿದೆ. ಅದರಲ್ಲೂ ಮೂರು ದಿನಗಳ ದೀಪಾವಳಿ ಹಬ್ಬದಲ್ಲಿ ಬ್ಯಾಂಕ್ ಗಳಿಗೆ ಎಂದು ಸಾರ್ವಜನಿಕ ರಜೆ ಘೋಷಿಸಲಾಗಿದೆ ಎಂಬ ಸಂಪೂರ್ಣ ಮಾಹಿತಿಯನ್ನು ತಿಳಿದುಕೊಳ್ಳೋಣ ಬನ್ನಿ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ
ಹೌದು, ಬ್ಯಾಂಕ್ ಗಳಲ್ಲಿ ಕೆಲಸ ಮಾಡುವ ಉದ್ಯೋಗಿಗಳಿಗೆ(employees) ಈ ಬಾರಿಯ ಮೂರು ದಿನಗಳ ದೀಪಾವಳಿ ಹಬ್ಬದಲ್ಲಿ ಕೇವಲ ಒಂದು ದಿನ ಸಾರ್ವಜನಿಕ ರಜೆಯನ್ನು ಘೋಷಿಸಲಾಗಿದೆ. ಬ್ಯಾಂಕ್ ನೀಡುವ ಆ ಒಂದು ದಿನದ ರಜೆಯಲ್ಲಿ ಅವರೂ ಕೂಡ ಮನೆಯಲ್ಲಿ ಇರುವ ಕಾರಣ ಮನೆಯಲ್ಲಿ ಮನೆಯವರ ಜೊತೆ ಹಾಗೂ ಮಕ್ಕಳ ಜೊತೆ ಅದ್ದೂರಿಯಾಗಿ ದೀಪಾವಳಿ ಹಬ್ಬವನ್ನು ಆಚರಿಸಬಹುದು.
ದೀಪಾವಳಿ ಹಬ್ಬದ ಪ್ರಯುಕ್ತ ಬ್ಯಾಂಕ್ ಗಳಿಗೆ ಎಂದು ಸಾರ್ವಜನಿಕ ರಜೆಯನ್ನು ಘೋಷಿಸಲಾಗಿದೆ:
ನಮಗೆಲ್ಲ ಈಗಾಗಲೇ ತಿಳಿದಿರುವಂತೆ ಬ್ಯಾಂಕುಗಳಿಗೆ ಎರಡನೇ ಶನಿವಾರ (Second Saturday) ಹಾಗೂ ನಾಲ್ಕನೇ ಶನಿವಾರ(Fourth Saturday) ಬ್ಯಾಂಕ್ ಗಳಿಗೆ ರಜೆ ಇರುತ್ತದೆ. ಇದರ ಜೊತೆಯಲ್ಲಿ ತಿಂಗಳಲ್ಲಿ ಬರುವಂತಹ ಎಲ್ಲಾ ಭಾನುವಾರದಂದು(Sunday) ಸರ್ಕಾರಿ ರಜೆ(Government holiday) ಇರುತ್ತದೆ. ಈ ಬಾರಿಯ ದೀಪಾವಳಿ ಹಬ್ಬ ಅಕ್ಟೋಬರ್ 31(October 31) ರಿಂದ ನವೆಂಬರ್ 02ರವರೆಗೆ(November 02) ಆಚರಿಸಲಾಗುತ್ತದೆ. ಈ ಸಂದರ್ಭದಲ್ಲಿ ನವಂಬರ್ 1 (November 1) ರಂದು ಈಗಾಗಲೇ ಸರ್ಕಾರಿ ರಜೆ ಇದೆ. ಇನ್ನು ಈ ಬಾರಿಯ ದೀಪಾವಳಿ ಹಬ್ಬಕ್ಕೆ ಎಲ್ಲಾ ಬ್ಯಾಂಕ್ ಗಳಿಗೆ ಅಕ್ಟೋಬರ್ 31 ರಂದು ರಜೆ ಘೋಷಿಸಲಾಗಿದೆ.
ದೀಪಾವಳಿ ಹಬ್ಬವನ್ನು ಎಂದು ಆಚರಿಸಲಾಗುತ್ತದೆ :
ಪ್ರತಿ ವರ್ಷ ಆಶ್ವಯುಜ ಮಾಸದ ಅಮಾವಾಸ್ಯೆಯಂದು ದೀಪಾವಳಿಯನ್ನು ಆಚರಿಸಲಾಗುತ್ತದೆ. ಈ ಹಬ್ಬವನ್ನು ಧನ ತ್ರಯೋದಶಿಯಿಂದ ಭಾಯಿ ದೂಜ್ವರೆಗೆ ಆಚರಿಸಲಾಗುತ್ತದೆ. ದೃಕ್ ಪಂಚಾಂಗದ ಪ್ರಕಾರ ಈ ವರ್ಷ ದೀಪಾವಳಿ ಹಬ್ಬವನ್ನು ಕಾರ್ತಿಕ ಮಾಸದ ಅಮವಾಸ್ಯೆ ತಿಥಿಯಂದು ಅಂದರೆ ಅಕ್ಟೋಬರ್ 31ರಂದು(31st October) ಆಚರಿಸಲಾಗುವುದು. ಆದರೆ ನವೆಂಬರ್ 1ರಂದು(November 1) ಸಹ ದೀಪಾವಳಿ ಹಬ್ಬವನ್ನು ಕೆಲವು ಕಡೆ ವಿಜೃಂಭಣೆಯಿಂದ ಆಚರಿಸುತ್ತಾರೆ.
ದೀಪಾವಳಿ ಹಬ್ಬವನ್ನು ಕರ್ನಾಟಕವಲ್ಲದೆ ಬೇರೆ ಯಾವ ರಾಜ್ಯಗಳಲ್ಲಿ ಆಚರಿಸುತ್ತಾರೆ :
ಈಗಾಗಲೇ ತಿಳಿಸಿರುವಂತೆ ದೀಪಾವಳಿ ಹಬ್ಬ ಮಕ್ಕಳಿಂದ ಹಿಡಿದು ವಯಸ್ಸಾಗಿರುವ ಮುದುಕ ಮುದುಕಿಯರಿಗೂ ಇಷ್ಟವಾಗುವಂತಹ ಹಬ್ಬ. ಜನರು ದೀಪಾವಳಿಯ (Deepawali 2024) ಸಮಯದಲ್ಲಿ ಸಂಪತ್ತು ಮತ್ತು ಸಮೃದ್ಧಿಯ ದೇವತೆ ಲಕ್ಷ್ಮೀ ದೇವಿಯನ್ನು ಪೂಜಿಸುತ್ತಾರೆ (Lakshmi devi pooja). ಆದ್ದರಿಂದ 2024ರ ದೀಪಾವಳಿ ಹಬ್ಬದ ಬ್ಯಾಂಕ್ ರಜೆಯನ್ನು ಕೇವಲ ಕರ್ನಾಟಕಕಲ್ಲದೇ ನೆರೆಯ ರಾಜ್ಯಗಳಾದ ಗೋವಾ, ಕೇರಳ, ಆಂಧ್ರಪ್ರದೇಶ, ಪುದುಚೇರಿ, ತೆಲಂಗಾಣ ಮತ್ತು ತಮಿಳುನಾಡಿನಲ್ಲೂ ನೀಡಿದ್ದಾರೆ. ಕಾರಣ ಈ ರಾಜ್ಯಗಳನ್ನು ಸೇರಿ ಇನ್ನೂ ಹಲವು ರಾಜ್ಯಗಳು ದೀಪಾವಳಿ ಹಬ್ಬವನ್ನು ಬಹಳ ವಿಜೃಂಭಣೆಯಿಂದ ಆಚರಿಸುತ್ತಾರೆ. ಆದ್ದರಿಂದ ಅಕ್ಟೋಬರ್ 31 ರಂದು ಎಲ್ಲಾ ಬ್ಯಾಂಕ್ ಗಳಿಗೂ ಸಾರ್ವಜನಿಕ ರಜೆಯನ್ನು ಘೋಷಿಸಲಾಗಿದೆ.
ಇನ್ನು ದೀಪಾವಳಿ ಹಬ್ಬವನ್ನು ಆಚರಿಸುವ ಮೂರು ದಿನಗಳಲ್ಲಿ ನವಂಬರ್ 1 ಕನ್ನಡ ರಾಜ್ಯೋತ್ಸವ(Kannada Rajyotsava) ಆಚರಿಸುವ ಕಾರಣ ಕರ್ನಾಟಕದಲ್ಲಿ ಸಾರ್ವಜನಿಕ ರಜೆ ಇರುತ್ತದೆ. ಹಾಗೂ ನವೆಂಬರ್ 1 ರಂದು ಕೂಡ ಕೆಲವು ಕಡೆ ದೀಪಾವಳಿ ಹಬ್ಬವನ್ನು ಆಚರಿಸುವುದರಿಂದ ಕರ್ನಾಟಕವನ್ನು ಬಿಟ್ಟು ಕೆಲವು ಭಾಗಗಳಿಗೆ ಪ್ರಾದೇಶಿಕ ರಜೆ (Regional leave) ಸಿಗಲಿದೆ. ರಾಜಧಾನಿ ನವ ದೆಹಲಿ ಸೇರಿದಂತೆ ಮಹಾರಾಷ್ಟ್ರ, ಉತ್ತರ ಪ್ರದೇಶ, ಪಶ್ಚಿಮ ಬಂಗಾಳ ಸೇರಿ ಇನ್ನಿತರ ಕೆಲ ರಾಜ್ಯಗಳಿಗೆ ಪ್ರಾದೇಶಿಕ ರಜೆ ಸಿಗಲಿದೆ.
ಈ ಮಾಹಿತಿಗಳನ್ನು ಓದಿ
ದಯವಿಟ್ಟು ಗಮನಿಸಿ: ನೀಡ್ಸ್ ಆಫ್ ಪಬ್ಲಿಕ್ ತನ್ನ ಓದುಗರಿಗೆ ನಿಖರವಾದ ಮತ್ತು ಅಧಿಕೃತ ಮಾಹಿತಿಗಳನ್ನು ಮಾತ್ರ ಪ್ರಕಟಿಸುತ್ತದೆ. ಇಲ್ಲಿ ನಾವು ಯಾವುದೇ ಅನಧಿಕೃತ ಮತ್ತು ಸುಳ್ಳು ಮಾಹಿತಿಯನ್ನು ಬಿತ್ತರಿಸುವುದಿಲ್ಲ.