ಹಿರಿಯ ನಾಗರಿಕರಿಗೆ ಸಿಹಿ ಸುದ್ದಿ! ಕೇಂದ್ರ ಸರ್ಕಾರ(central government)ವು ವೃದ್ಧಾಪ್ಯದಲ್ಲಿ ಹೆಚ್ಚಿನ ಆರ್ಥಿಕ ಸಹಾಯವನ್ನು ಒದಗಿಸಲು ಮುಂದಾಗಿದೆ. 80 ವರ್ಷಕ್ಕಿಂತ ಹೆಚ್ಚಿನ ಎಲ್ಲಾ ಪಿಂಚಣಿದಾರರು ಇನ್ನು ಮುಂದೆ ‘ಅನುಕಂಪ ಭತ್ಯೆ’ ಎಂದು ಕರೆಯಲ್ಪಡುವ ಹೆಚ್ಚುವರಿ ಪಿಂಚಣಿಯನ್ನು ಪಡೆಯಲಿದ್ದಾರೆ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ
ಕೇಂದ್ರ ಸರ್ಕಾರವು 80 ವರ್ಷ ಮತ್ತು ಆಹೋವಿನ ಪಿಂಚಣಿದಾರರಿಗೆ ಹೆಚ್ಚುವರಿಯಾಗಿ ಅನುಕಂಪದ ಭ್ಯತೆ (Compassionate Allowance) ಎಂಬ ಹೆಸರಿನಲ್ಲಿ ಹೆಚ್ಚಿನ ಹಣಕಾಸಿನ ಸಹಾಯವನ್ನು ಒದಗಿಸಲು ಹೊಸ ಆದೇಶವನ್ನು ಪ್ರಕಟಿಸಿದೆ. ಕೇಂದ್ರ ಪಿಂಚಣಿ ಮತ್ತು ಪಿಂಚಣಿದಾರರ ಕಲ್ಯಾಣ ಇಲಾಖೆಯ (Union Department of Pension and Pensioners Welfare, DoPPW) ಇತ್ತೀಚಿನ ಆದೇಶವು ಹಿರಿಯ ಪಿಂಚಣಿದಾರರ ಆರ್ಥಿಕ ಭದ್ರತೆಯನ್ನು ಸುಧಾರಿಸುವ ಗುರಿಯನ್ನು ಹೊಂದಿದೆ. ಈ ಮಾರ್ಗಸೂಚಿಗಳು 80 ವರ್ಷ ಪೂರೈಸಿದವರಿಗಿಂತ ಹೆಚ್ಚಿನ ವಯಸ್ಸಿನ ಪಿಂಚಣಿದಾರರಿಗೆ ಅವರ ಪಿಂಚಣಿ(Pension)ಗೆ ಹೆಚ್ಚುವರಿಯಾಗಿ ಅನುಕಂಪದ ಭತ್ಯೆಯನ್ನು ಒದಗಿಸುತ್ತವೆ.
80 ವರ್ಷ ಮತ್ತು ಅದಕ್ಕಿಂತ ಮೇಲ್ಪಟ್ಟವರಿಗೆ ಹೆಚ್ಚುವರಿಯಾಗಿ ‘ಅನುಕಂಪದ ಭತ್ಯೆ’
ಹಿರಿಯ ಪಿಂಚಣಿದಾರರು ತಮ್ಮ ವಯಸ್ಸಿನೊಂದಿಗೆ ಬರುವ ನೈಜ ಆರ್ಥಿಕ ಅವಶ್ಯಕತೆಗಳನ್ನೆಣಿಸಿ, 80 ವರ್ಷ ಪೂರೈಸಿದ ಕೇಂದ್ರ ಸರ್ಕಾರದ ಪಿಂಚಣಿದಾರರಿಗೆ 20% ಹೆಚ್ಚುವರಿ ಪಿಂಚಣಿಯನ್ನು ನೀಡಲಾಗುತ್ತದೆ. ವಯಸ್ಸು ಹೆಚ್ಚಾದಂತೆ ಈ ಪ್ರಮಾಣವು ಸಹ ಹೆಚ್ಚುತ್ತದೆ.
ಉದಾಹರಣೆಗೆ, 85 ವರ್ಷ ಪೂರೈಸಿದವರಿಗೆ 30%, 90 ವರ್ಷ ಪೂರೈಸಿದವರಿಗೆ 40% ಆಗಿ, 95 ವರ್ಷ ಪೂರೈಸಿದವರಿಗೆ 50% ಆಗಿ ಏರುತ್ತದೆ. ಅಂತಿಮವಾಗಿ, 100 ವರ್ಷ ಮತ್ತು ಹೆಚ್ಚಿನ ವಯಸ್ಸಿನವರಿಗೆ ಅವರ ಮೂಲ ಪಿಂಚಣಿಯ ಪೂರ್ಣ 100% ಹೆಚ್ಚುವರಿಯಾಗಿ ನೀಡಲಾಗುತ್ತದೆ.
ಪಿಂಚಣಿದಾರರು ಈ ಅನುಕಂಪದ ಭತ್ಯೆಗೆ ಹೇಗೆ ಅರ್ಹರಾಗುತ್ತಾರೆ?
ಈ ಹೆಚ್ಚುವರಿ ಪಿಂಚಣಿ ಪಡೆಯಲು, 80 ವರ್ಷ ಪೂರೈಸಿದ ತಕ್ಷಣವೇ ಅಥವಾ ಅವರಿಗೆ ಹುಟ್ಟುಹಬ್ಬದ ತಿಂಗಳ ಮೊದಲ ದಿನದಿಂದ ಈ ಅನುಕಂಪದ ಭತ್ಯೆ ಸಿಗಲು ಪ್ರಾರಂಭವಾಗುತ್ತದೆ. ಉದಾಹರಣೆಗೆ, ಪಿಂಚಣಿದಾರರು ಆಗಸ್ಟ್ 20, 1942 ರಂದು ಜನಿಸಿದರೆ, ಅವರ 80ನೇ ಹುಟ್ಟುಹಬ್ಬದ ಮೊದಲ ದಿನವಾದ 2022 ರ ಆಗಸ್ಟ್ 1 ರಿಂದ ಹೆಚ್ಚುವರಿ ಪಿಂಚಣಿಯನ್ನು ಪಡೆಯಲು ಅರ್ಹರಾಗುತ್ತಾರೆ.
ಹಿರಿಯ ಪಿಂಚಣಿದಾರರ ಪಿಂಚಣಿ ವ್ಯವಸ್ಥೆಯಲ್ಲಿ ಈ ನವೀಕರಣದ ಮಹತ್ವ
ಈ ಹೆಚ್ಚುವರಿ ಪಿಂಚಣಿ ವ್ಯವಸ್ಥೆವು ಕೇಂದ್ರ ಸರ್ಕಾರದ ಹಿರಿಯ ನಾಗರಿಕರು ಮತ್ತು ಅವರ ಕುಟುಂಬದವರು ಆರ್ಥಿಕ ಶಾಂತಿಯನ್ನು ಪಡೆಯಲು ಸಹಾಯ ಮಾಡುತ್ತದೆ. ವಯಸ್ಸು ಹೆಚ್ಚಾಗುತ್ತಿದ್ದಂತೆ ಅವರ ವೈದ್ಯಕೀಯ ಮತ್ತು ಬಾಳು ಖರ್ಚು ಸಹ ಏರಿಕೆಯಾಗುತ್ತದೆ. ಆರ್ಥಿಕ ಬೆಂಬಲದ ಮೂಲಕ ಇವರಿಗೆ ಸಹಾಯ ಮಾಡುವ ಗುರಿಯನ್ನು ಹೊಂದಿದ್ದು, ಕೇಂದ್ರ ಸರ್ಕಾರವು ಈ ನವೀಕರಣದ ಮೂಲಕ ಪ್ರಮುಖ ಹೆಜ್ಜೆ ಇಟ್ಟಿದೆ.
ಈ ಮಾಹಿತಿಗಳನ್ನು ಓದಿ
ದಯವಿಟ್ಟು ಗಮನಿಸಿ: ನೀಡ್ಸ್ ಆಫ್ ಪಬ್ಲಿಕ್ ತನ್ನ ಓದುಗರಿಗೆ ನಿಖರವಾದ ಮತ್ತು ಅಧಿಕೃತ ಮಾಹಿತಿಗಳನ್ನು ಮಾತ್ರ ಪ್ರಕಟಿಸುತ್ತದೆ. ಇಲ್ಲಿ ನಾವು ಯಾವುದೇ ಅನಧಿಕೃತ ಮತ್ತು ಸುಳ್ಳು ಮಾಹಿತಿಯನ್ನು ಬಿತ್ತರಿಸುವುದಿಲ್ಲ.