ಜೋಳ, ಕಡಲೆ, ಹಾಗೂ ಇತರ ಪ್ರಮುಖ ಬೆಳೆಗಳಿಗೆ ಆರ್ಥಿಕ ಸುರಕ್ಷತೆ ನೀಡುವ ಉದ್ದೇಶದಿಂದ ಪ್ರಸ್ತುತ ಸಾಲಿನ ಕರ್ನಾಟಕ ರೈತ ಸುರಕ್ಷಾ ಪ್ರಧಾನ ಮಂತ್ರಿ ಫಸಲ್ ಬಿಮಾ ಯೋಜನೆ (PM Pasal Bhima Yojana) ಅಡಿಯಲ್ಲಿ ರೈತರಿಗೆ ಹಿಂಗಾರು ಹಾಗೂ ಮುಂಗಾರು ಹಂಗಾಮಿನ ಬೆಳೆ ವಿಮೆ(Crop insurance)ಗೆ ನೋಂದಾಯಿಸಲು ಅವಕಾಶ ಕಲ್ಪಿಸಲಾಗಿದೆ. ಈ ಕಾರ್ಯಕ್ರಮವು ರಾಜ್ಯದ ಜಂಟಿ ಕೃಷಿ ನಿರ್ದೇಶಕರ ಪ್ರಕಟಣೆಯ ಮೂಲಕ ಘೋಷಿಸಲಾಗಿದೆ, ಇದರಲ್ಲಿ ಬೆಳೆ ಸಾಲ(crop loan) ಪಡೆದ ಹಾಗು ಬೆಳೆ ಸಾಲ ಪಡೆಯದ ರೈತರು ಸಮಾನ ಅವಕಾಶವನ್ನು ಹೊಂದಿದ್ದಾರೆ.
ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ
ಹಿಂಗಾರು ಹಾಗೂ ಬೇಸಿಗೆ ಹಂಗಾಮಿನ ಬೆಳೆಗಳು ಹಾಗೂ ಅವುಗಳಿಗೆ ಸಂಬಂಧಿಸಿದ ಕೊನೆಯ ದಿನಾಂಕಗಳು:
ಈ ಬಿಮಾ ಯೋಜನೆಯಡಿ, ಹಿಂಗಾರು ಮತ್ತು ಬೇಸಿಗೆ ಹಂಗಾಮಿನಲ್ಲಿ ಬೆಳೆವ ಜೋಳ, ಕಡಲೆ, ಸೂರ್ಯಕಾಂತಿ, ಕುಸುಮೆ, ಈರುಳ್ಳಿ, ನೆಲಗಡಲೆ (ಶೇಂಗಾ) ಮುಂತಾದ ಬೆಳೆಗಳಿಗೆ ರೈತರು ವಿಮೆ (Insurance) ಮಾಡಿಸಬಹುದು. ಪ್ರತಿ ಬೆಳೆಕ್ಕಾಗಿಯೂ ನೋಂದಣಿಗಾಗಿ ಅಂತಿಮ ದಿನಾಂಕವನ್ನು ನಿರ್ಧರಿಸಲಾಗಿದೆ:
ಹಿಂಗಾರು ಹಂಗಾಮಿನ ಕೊನೆಯ ದಿನಾಂಕಗಳು:
ಜೋಳ, ಮುಸುಕಿನ ಜೋಳ, ಸೂರ್ಯಕಾಂತಿ, ಕುಸುಮೆ ಬೆಳೆಗಳಿಗೆ: ಡಿಸೆಂಬರ್ 16
ಮಳೆಯಾಶ್ರಿತ ಜೋಳಕ್ಕೆ: ನವೆಂಬರ್ 15
ಕಡಲೆ ಬೆಳೆ: ಡಿಸೆಂಬರ್ 31
ಈರುಳ್ಳಿ ಬೆಳೆ: ನವೆಂಬರ್ 30
ಬೇಸಿಗೆ ಹಂಗಾಮಿನ ಕೊನೆಯ ದಿನಾಂಕಗಳು:
ಭತ್ತ, ನೆಲಗಡಲೆ (ಶೇಂಗಾ), ಸೂರ್ಯಕಾಂತಿ ಮತ್ತು ಈರುಳ್ಳಿ ಬೆಳೆಗಳಿಗೆ: 2025ರ ಫೆಬ್ರವರಿ 28
ಹೆಚ್ಚಿನ ಮಾಹಿತಿಗೆ ಸಂಪರ್ಕಿಸಲು ವ್ಯವಸ್ಥೆಗಳು:
ಈ ಯೋಜನೆಯ ಸದುಪಯೋಗವನ್ನು ಪಡೆಯಲು, ರೈತರು ತಮ್ಮ ಸ್ಥಳೀಯ ಬ್ಯಾಂಕ್ (Near Bank) ಅಥವಾ ಸಾರ್ವಜನಿಕ ಸೇವಾ ಕೇಂದ್ರಗಳನ್ನು ಸಂಪರ್ಕಿಸಬಹುದು. ರೈತ ಸಂಪರ್ಕ ಕೇಂದ್ರಗಳು, ಸಹಾಯಕ ಕೃಷಿ ನಿರ್ದೇಶಕರ ಕಚೇರಿ, ಹಾಗೂ ಜಂಟಿ ಕೃಷಿ ನಿರ್ದೇಶಕರ ಕಚೇರಿಗಳು ಯೋಜನೆಗೆ ಸಂಬಂಧಿಸಿದ ಪ್ರಶ್ನೆಗಳಿಗೆ ಸ್ಪಷ್ಟನೆ ನೀಡಲು ಸಹಕಾರಿಯಾಗಿವೆ.
ಯೋಜನೆಯ ಮಹತ್ವ:
ಈ ಫಸಲ್ ಬಿಮಾ ಯೋಜನೆ (PM Pasal Bhima Yojana) Karnataka ರಾಜ್ಯದ ರೈತರ ಆರ್ಥಿಕ ಹಿತವನ್ನು ಗುರಿಯಾಗಿಸಿಕೊಂಡಿದ್ದು, ಮಾರುಕಟ್ಟೆ ಪೈಪೋಟಿಯಿಂದ ಮತ್ತು ಹವಾಮಾನ ಒತ್ತಡಗಳಿಂದ ಸೃಷ್ಟಿಯಾಗುವ ಅಪಾಯಗಳ ವಿರುದ್ಧ ರೈತರ ಬೆಳೆಗಳಿಗೆ ವಿಮಾ ರಕ್ಷಣೆಯನ್ನು ಒದಗಿಸುತ್ತದೆ. ಈ ಕ್ರಮವು ಬರಗಾಲ, ಪ್ರವಾಹ ಮತ್ತು ಇತರ ಅನಾಹುತಗಳಿಂದ ಉಂಟಾಗುವ ಹಾನಿಯನ್ನು ತಡೆಹಿಡಿಯುವಲ್ಲಿ ನೆರವಾಗುತ್ತದೆ. ಮತ್ತು ಇಂತಹ ಉತ್ತಮವಾದ ಮಾಹಿತಿ ಹೊಂದಿದ ಈ ವರದಿಯನ್ನು ಕೂಡಲೇ ನಿಮ್ಮೆಲ್ಲಾ ಸ್ನೇಹಿತರೊಂದಿಗೆ ಹಾಗೂ ಬಂಧುಗಳಿಗೆ ಶೇರ್ ಮಾಡಿ, ಧನ್ಯವಾದಗಳು.
ಈ ಮಾಹಿತಿಗಳನ್ನು ಓದಿ
ದಯವಿಟ್ಟು ಗಮನಿಸಿ: ನೀಡ್ಸ್ ಆಫ್ ಪಬ್ಲಿಕ್ ತನ್ನ ಓದುಗರಿಗೆ ನಿಖರವಾದ ಮತ್ತು ಅಧಿಕೃತ ಮಾಹಿತಿಗಳನ್ನು ಮಾತ್ರ ಪ್ರಕಟಿಸುತ್ತದೆ. ಇಲ್ಲಿ ನಾವು ಯಾವುದೇ ಅನಧಿಕೃತ ಮತ್ತು ಸುಳ್ಳು ಮಾಹಿತಿಯನ್ನು ಬಿತ್ತರಿಸುವುದಿಲ್ಲ.