ಅಯ್ಯಪ್ಪ ಸ್ವಾಮಿ ಭಕ್ತರಿಗೆ ಗುಡ್ ನ್ಯೂಸ್! 3 ತಿಂಗಳು ವಿಶೇಷ ರೈಲು ವ್ಯವಸ್ಥೆ.
ನಮ್ಮ ಭಾರತ ದೇಶದಲ್ಲಿ ಕಲೆ (Art), ಸಂಸ್ಕೃತಿ (Culture) ಹಾಗೆ ಧಾರ್ಮಿಕ ಪೂಜೆ ಪುನಸ್ಕಾರಗಳು ಎಂದರೆ ಎಲ್ಲರಿಗೂ ಹರುಷ. ಕರ್ನಾಟಕದ ಜನತೆಗೆ ಬಹಳ ಇಷ್ಟವಾಗುವಂತಹ ಕೆಲವೊಂದು ಧಾರ್ಮಿಕ ಹಬ್ಬಗಳಿಗೆ ಜನರು ಊರಿನಿಂದ ಊರಿಗೆ ಓಡಾಡುವ ಪರಿಸ್ಥಿತಿ ನಿರ್ಮಾಣವಾಗುತ್ತದೆ. ಪ್ರತಿ ವರ್ಷ ಅಯ್ಯಪ್ಪ (Ayyappa) ನ ದರ್ಶನ ಪಡೆಯಲು ಶಬರಿಮಲೆಗೆ (Shabarimale) ಕೋಟ್ಯಂತರ ಭಕ್ತರು ಆಗಮಿಸುತ್ತಾರೆ. ಇನ್ನು ಅಯ್ಯಪ್ಪ ದೇವಾಲಯದಲ್ಲಿ ಎರಡು ತಿಂಗಳ ದೀರ್ಘ ಯಾತ್ರೆಯು ನವೆಂಬರ್ ಮಧ್ಯದಲ್ಲಿ ಶುರವಾಗಲಿದ್ದು, ಜನವರಿಯವರೆಗೂ ಮರೆವಣಿಗೆ ನಡೆಯುತ್ತದೆ. ಆದ್ದರಿಂದ ಜನ ದಟ್ಟಣೆ ಹೆಚ್ಚಾಗಲಿದ್ದು, ಬೇರೆ ಬೇರೆ ಕಡೆಯಿಂದ ದರ್ಶನಕ್ಕೆ ಹೋಗುವ ಭಕ್ತಾದಿಗಳಿಗೆ ಸಹಾಯವಾಗಲಿ ಎಂದು ರೈಲ್ವೆ ಇಲಾಖೆ (Railway Department) ಯಿಂದ ವಿಶೇಷ ರೈಲು ವ್ಯವಸ್ಥೆ ಮಾಡಿಕೊಡಲಾಗಿದೆ. ಇದರ ಬಗ್ಗೆ ಸಂಪೂರ್ಣ ಮಾಹಿತಿಯನ್ನು ತಿಳಿದುಕೊಳ್ಳೋಣ ಬನ್ನಿ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ
ಹೌದು, ನವೆಂಬರ್ ಮಧ್ಯದಲ್ಲಿ ಶಬರಿಮಲೆ ಹೋಗುವ ಭಕ್ತರ ಸಂಖ್ಯೆ ಹೆಚ್ಚಾಗುತ್ತದೆ. ಲಕ್ಷಾಂತರ ಭಕ್ತರು ಮಾಲೆ ಧರಿಸಿ ಇರುಮುಡಿ ಕಟ್ಟಿಕೊಂಡು ದೇವರ ದರ್ಶನಕ್ಕೆ ಹೊರಟಿರುತ್ತಾರೆ. ಆದ್ದರಿಂದ ಭಕ್ತಾದಿಗಳು ನಿರ್ಭೀತಿಯಿಂದ ದೇವರ ದರ್ಶನಕ್ಕೆ ಹೋಗಲು ಸಹಾಯ ಮಾಡುವುದಕ್ಕಾಗಿ ರೈಲ್ವೆ ಇಲಾಖೆಯಿಂದ ವಿಶೇಷ ರೈಲು (Speciale train) ವ್ಯವಸ್ಥೆ ಮಾಡಿದ್ದು, ಮೂರೂ ತಿಂಗಳು ಈ ವಿಶೇಷ ರೈಲು ಸಂಚರಿಡುತ್ತದೆ. ಹಾಗೂ ಪ್ರಯಾಣಿಕರಿಗೆ ಹೆಚ್ಚು ಉಪಯೋಗವಾಗಲಿದ್ದು, ಸರ್ ಎಂ. ವಿಶ್ವೇಶ್ವರಯ್ಯ ಟರ್ಮಿನಲ್(Sir. M. Vishweshwarayya Terminal) ಬೆಂಗಳೂರು ನಿಲ್ದಾಣಗಳ ನಡುವೆ ದಕ್ಷಿಣ ರೈಲ್ವೆ ವಿಶೇಷ ರೈಲುಗಳ ಸೇವೆಯನ್ನು ಕಲ್ಪಿಸಲಾಗಿದೆ ಎಂದು ನೈರುತ್ಯ ರೈಲ್ವೆ ಮಾಹಿತಿ ನೀಡಿದೆ.
ಯಾವ ದಿನಾಂಕದವರೆಗೆ ಸಂಚರಿಸಲಿವೆ ಈ ವಿಶೇಷ ರೈಲುಗಳು?:
ಒಟ್ಟಾರೆಯಾಗಿ ಮುಂದಿನ ಮೂರು ತಿಂಗಳು ಈ ವಿಶೇಷ ರೈಲುಗಳ ವ್ಯವಸ್ಥೆ ಮಾಡಲಾಗಿದ್ದು, ಭಕ್ತರ ಅನುಕೂಲಕ್ಕಾಗಿ ವಿಶೇಷ ರೈಲು ಓಡಿಸಲಾಗುತ್ತದೆ ಎಂದು ರೈಲ್ವೆ ಅಧಿಕಾರಿಗಳು ತಿಳಿಸಿದ್ದಾರೆ. ನವೆಂಬರ್ 12ರಿಂದ ಮುಂದಿನ ವರ್ಷ ಜನವರಿ 28ರವರೆಗೆ ಈ ಕರ್ನಾಟಕ-ಶಬರಿಮಲೈ ವಿಶೇಷ ರೈಲುಗಳು ಸಂಚಾರ ಸೇವೆ ನೀಡಲಿದ್ದು, ವಿಶೇಷ ರೈಲುಗಳು ಕರ್ನಾಟಕದಿಂದ ಕೇರಳ ರಾಜ್ಯದ ಕೊಚುವೆಲ್ಲಿ ರೈಲು ನಿಲ್ದಾಣಕ್ಕೆ ತಲುಪಲಿವೆ. ಪ್ರತಿಯೊಂದು ದಿಕ್ಕಿನಲ್ಲಿ ಒಟ್ಟು 12 ಟ್ರಿಪ್‌ಗಳು ಹೊಗಳಿದ್ದು, ವಾರಕ್ಕೆ ಒಮ್ಮೆಯಂತೆ ಮುಂದಿನ ಮೂರು ತಿಂಗಳು 12 ವಾರ ಈ ಸಾಪ್ತಾಹಿಕ ರೈಲು ಸಂಚರಿಸಲಿವೆ ಹಾಗೂ ಪ್ರಯಾಣಿಕರಿಗೆ ಅನುಕೂಲ ಮಾಡಿಕೊಡಲಿವೆ.
ವಿಶೇಷ ರೈಲುಗಳ ವಿವರ ಹೀಗಿವೆ:
ಕೊಚುವೇಲಿ-ಎಸ್ಎಂವಿಟಿ ಬೆಂಗಳೂರು ಸಾಪ್ತಾಹಿಕ ಎಕ್ಸ್ ಪ್ರೆಸ್ (ರೈಲು ಸಂಖ್ಯೆ 06083) ವಿಶೇಷ ರೈಲು ವಾರದ ಮಂಗಳವಾರ ಕೊಚುವೇಲಿ ನಿಲ್ದಾಣದಿಂದ ಸಂಜೆ 18:05 ಗಂಟೆಗೆ ಹೊರಟು, ಮರುದಿನ ದಿನ ಬೆಳಗ್ಗೆ 10:55 ಗಂಟೆಗೆ ಎಸ್‌ಎಂಐಟಿ( SMVT) ಬೆಂಗಳೂರು ನಿಲ್ದಾಣಕ್ಕೆ ತಲುಪುತ್ತದೆ.
ಎಸ್‌ಎಂವಿಟಿ ಬೆಂಗಳೂರು-ಕೊಚುವೇಲಿ ಸಾಪ್ತಾಹಿಕ ಎಕ್ಸ್ ಪ್ರೆಸ್ (ರೈಲು ಸಂಖ್ಯೆ 06084)ವಿಶೇಷ ರೈಲು ವಾರದ ಬುಧವಾರ ಎಸ್‌ಎಂವಿಟಿ ಬೆಂಗಳೂರು ನಿಲ್ದಾಣದಿಂದ 12:45 ಗಂಟೆಗೆ ಹೊರಟು, ಮರುದಿನ ದಿನ 06:45 ಗಂಟೆಗೆ ಕೊಚುವೇಲಿ (Kochuveli) ನಿಲ್ದಾಣಕ್ಕೆ ತಲುಪುತ್ತದೆ.
ಈ ರೈಲು ಎರಡು ದಿಕ್ಕಿನ ಮಾರ್ಗದಲ್ಲಿ, ಕೊಲ್ಲಂ, ಕಾಯಂಕುಳಂ, ಪಾಲಕಾಡ್, ಪೊದನೂರ್, ಈರೋಡ್, ಸೇಲಂ, ಜೋಲಾರ್ ಪೆಟ್ನಾಯ್, ಜಂಕ್ಷನ್ ಗಳ ನಡುವೆ ಸಂಚರಿಸಲಿದ್ದು, ಶಬರಿಮಲೆಗೆ ತೆರಳುವ ಭಕ್ತರು ಚೆಂಗನೂರು ಬಳಿಯೇ ಇಳಿದು ಪಂಪಾಗೆ ಬಸ್ ಮೂಲಕ ಪ್ರಯಾಣಿಸಬೇಕು.
ಗಮನಿಸಿ (Notice) :
ರೈಲುಗಳಿಗೆ ಸಂಬಂಧಿಸಿದ ಮಾಹಿತಿಯನ್ನು ಮಡೆದುಕೊಳ್ಳಲು 139ಕ್ಕೆ ಕರೆ ಮಾಡಬಹುದು. ಹಾಗೂ ಅಧಿಕೃತ ರೈಲ್ವೆ ವೆಬ್ಸೈಟ್ (Website) www.enquiry.indianrail.gov.in. ಗೆ ಭೇಟಿ ನೀಡುವ ಮೂಲಕ ರೈಲುಗಳ ಪ್ರತಿ ನಿಲ್ದಾಣದ ಆಗಮನ ಹಾಗೂ ನಿರ್ಗಮನವಾಗುವ ಸಮಯದ ವಿವರವನ್ನು ಪಡೆಯಬಹುದು.
ಈ ಮಾಹಿತಿಗಳನ್ನು ಓದಿ
ದಯವಿಟ್ಟು ಗಮನಿಸಿ: ನೀಡ್ಸ್ ಆಫ್ ಪಬ್ಲಿಕ್ ತನ್ನ ಓದುಗರಿಗೆ ನಿಖರವಾದ ಮತ್ತು ಅಧಿಕೃತ ಮಾಹಿತಿಗಳನ್ನು ಮಾತ್ರ ಪ್ರಕಟಿಸುತ್ತದೆ. ಇಲ್ಲಿ ನಾವು ಯಾವುದೇ ಅನಧಿಕೃತ ಮತ್ತು ಸುಳ್ಳು ಮಾಹಿತಿಯನ್ನು ಬಿತ್ತರಿಸುವುದಿಲ್ಲ.