ಬೆಂಗಳೂರಿನಲ್ಲಿ ಬಾಡಿಗೆ ಮನೆಯಲ್ಲಿ ವಾಸಿಸುತ್ತಿರುವವರಿಗೆ ಶುಭ ಸುದ್ದಿ ಬಂದಿದೆ. ಎಲ್ಲರೂ ಕೂಡ ತಮಗೊಂದು ಸ್ವಂತ ಸೂರಿದ್ದರೆ ಚಂದ ಎಂದು, ಅದಕ್ಕಾಗಿಯೇ ಕಷ್ಟ ಪಟ್ಟು ದುಡಿಯುತ್ತಿರುತ್ತಾರೆ. ಇದೀಗ ಬೆಂಗಳೂರಿನ ಹೊರಹೊಲೆಯದಲ್ಲಿ ಮನೆ ಖರೀದಿಸುವ ಅವಕಾಶ ಒದಗಿಬಂದಿದೆ. ಈ ಅವಕಾಶವನ್ನು ಕಲ್ಪಿಸಿ ಕೊಟ್ಟಿರುವವರು ಬಿಡಿಎ (BDA). ಕಾರ್ನರ್ ಸೈಟ್, ಮಧ್ಯಂತರ ನಿವೇಶನ, ಫ್ಲಾಟ್ಗಳನ್ನ ಹರಾಜು ಹಾಕುತ್ತಿದ್ದ ಬಿಡಿಎ ಸದ್ಯ ವಿಲ್ಲಾಗಳ(Villa’s) ಹರಾಜು(Auction) ಹಾಕುವ ಮೂಲಕ ಹೊಸ ಹೆಜ್ಜೆ ಇಟ್ಟಿದೆ. ಈ ವಿಲ್ಲಗಳನ್ನು ಹೇಗೆ ಖರೀದಿಸುವುದು?, ಎಂಬುವುದರ ಸಂಪೂರ್ಣ ಮಾಹಿತಿಯನ್ನು ತಿಳಿದುಕೊಳ್ಳಲು ಈ ವರದಿಯನ್ನು ಕೊನೆವರೆಗೂ ಓದಿ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ
ಬೆಂಗಳೂರಿನಲ್ಲಿ ಸುಮಾರು 25 ವಿಲ್ಲಗಳ ಹರಾಜು :
ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರವು (ಬಿಡಿಎ) ತುಮಕೂರು ರಸ್ತೆಯ ಹುಣ್ಣಿಗೆರೆಯಲ್ಲಿರುವ 25 ವಿಲ್ಲಾಗಳನ್ನು ಡಿಸೆಂಬರ್ 16 ರಂದು ಇ-ಹರಾಜು ಮಾಡಲಿದೆ. 1,269 ಚದರ ಅಡಿಯಿಂದ 1,804 ಚದರ ಅಡಿಗಳವರೆಗಿನ ಒಟ್ಟು ಬಿಲ್ಟ್-ಅಪ್ ಪ್ರದೇಶವನ್ನು ಹೊಂದಿರುವ ವಿಲ್ಲಾದ ಕನಿಷ್ಠ ಬೆಲೆ 76.50 ಲಕ್ಷದಿಂದ 1.11 ಕೋಟಿ ರೂಪಾಯಿಗಳ ನಡುವೆ ಇರುತ್ತದೆ.
ವಿಲ್ಲಾ ಎಸ್ಟೇಟ್‌ಗೆ ಕನ್ನಡ ಚಿತ್ರರಂಗದ ದಿವಂಗತ ಪುನೀತ್ ರಾಜ್‌ಕುಮಾರ್ (Puneet Raj Kumar) ಅವರ ಹೆಸರನ್ನು ಇಡಲಾಗಿದೆ. ಇ-ಹರಾಜಿನ ನೋಂದಣಿಗಳು ನವೆಂಬರ್ 29 ರಂದು ಪ್ರಾರಂಭವಾಗುತ್ತದೆ ಮತ್ತು ನೋಂದಾಯಿಸಲು ಕೊನೆಯ ದಿನಾಂಕ ಡಿಸೆಂಬರ್ 13. ಇ-ಹರಾಜಿನಲ್ಲಿ ಭಾಗವಹಿಸಲು ಆಸಕ್ತಿಯುಳ್ಳವರು 4 ಲಕ್ಷ ರೂಪಾಯಿಗಳನ್ನು ಮರುಪಾವತಿಸಬಹುದಾದ ಠೇವಣಿ ಮಾಡಬೇಕು.
ಲೈವ್ ಬಿಡ್ಡಿಂಗ್ ಡಿಸೆಂಬರ್ 16 ರಂದು ಬೆಳಿಗ್ಗೆ 11 ಗಂಟೆಗೆ ಪ್ರಾರಂಭವಾಗುತ್ತದೆ ಮತ್ತು ಡಿಸೆಂಬರ್ 17 ರಂದು ಸಂಜೆ 5 ಗಂಟೆಗೆ ಮುಕ್ತಾಯಗೊಳ್ಳುತ್ತದೆ. ಬಿಡ್ ಬೆಲೆಯಲ್ಲಿ ಕನಿಷ್ಠ ಹೆಚ್ಚಳವು 1 ಲಕ್ಷ ರೂ. ವಿವರಗಳಿಗಾಗಿ, ಬಿಡಿಎ ಅಧಿಕೃತ ವೆಬ್‌ಸೈಟ್‌ಗೆ ಭೇಟಿ ನೀಡಿ.
ನಿರ್ಮಾಣವಾಗಿರುವ 243 ವಿಲ್ಲಾಗಳಲ್ಲಿ ಕೇವಲ 25 ವಿಲ್ಲಾಗಳನ್ನಷ್ಟೇ ಬಿಡಿಎ ಹರಾಜು ಹಾಕುತ್ತಿದೆ. ನೀವು ದಾಖಲೆ ಪತ್ರಗಳ ರಗಳೆ ಇಲ್ಲದ ಬಿಡಿಎ ಮನೆಯನ್ನು ಖರೀದಿ ಮಾಡುವ ಯೋಚನೆಯಲ್ಲಿದ್ದರೆ ಹರಾಜಿನಲ್ಲಿ ಭಾಗವಹಿಸಬಹುದು. ಈಗಿನ ಬೆಲೆಯ ಅಬ್ಬರದಲ್ಲಿ ಕಡಿಮೆ ಬೆಲೆಯಲ್ಲಿ ನೀವು ಸ್ವಂತ ಮನೆಯನ್ನು ನಿಮ್ಮದಾಗಿಸಿಕೊಳ್ಳುವ ಸುವರ್ಣ ಅವಕಾಶವನ್ನು ಕಳೆದುಕೊಳ್ಳಬೇಡಿ.
ಈ ಮಾಹಿತಿಗಳನ್ನು ಓದಿ
ದಯವಿಟ್ಟು ಗಮನಿಸಿ: ನೀಡ್ಸ್ ಆಫ್ ಪಬ್ಲಿಕ್ ತನ್ನ ಓದುಗರಿಗೆ ನಿಖರವಾದ ಮತ್ತು ಅಧಿಕೃತ ಮಾಹಿತಿಗಳನ್ನು ಮಾತ್ರ ಪ್ರಕಟಿಸುತ್ತದೆ. ಇಲ್ಲಿ ನಾವು ಯಾವುದೇ ಅನಧಿಕೃತ ಮತ್ತು ಸುಳ್ಳು ಮಾಹಿತಿಯನ್ನು ಬಿತ್ತರಿಸುವುದಿಲ್ಲ.