ಕರ್ನಾಟಕ ರಾಜ್ಯದಲ್ಲಿ ಬಿಪಿಎಲ್ (below poverty line) ಕಾರ್ಡ್‌ಗಳ ರದ್ದು ವಿಷಯವು ಭಾರೀ ರಾಜಕೀಯ ಚರ್ಚೆಗೆ ಗ್ರಾಸವಾಗಿದೆ. ಈ ನಿರ್ಧಾರದಿಂದ ಹಿಂದೆ ಸರಿಯುವ ಮೂಲಕ ರಾಜ್ಯ ಕಾಂಗ್ರೆಸ್ ಸರ್ಕಾರವು ತನ್ನ ಮೂಲ ನಿಲುವಿಗೆ ಯೂಟರ್ನ್ (Uturn) ತೆಗೆದುಕೊಂಡಿದೆ. ಇದರಿಂದಾಗಿ ಎಷ್ಟೋ ಕಾರ್ಡ್ಗಳನ್ನು ಕಳೆದುಕೊಂಡ ಜನರು ಕಣ್ಣೀರಿಟ್ಟಿದ್ದರು, ಆದರೆ ಇದೀಗ ಅರ್ಹರ ಕಾರ್ಡ್ಗಳನ್ನು ವಾಪಸ್ ಮಾಡುತ್ತೇವೆ ಎಂದು ಹೇಳಿದ ತಕ್ಷಣ ಕಚೇರಿಗಳಲ್ಲಿ ಸಾಲುಗಟ್ಟಲೆ ಕ್ಯೂ ಶುರುವಾಗಿದೆ. ಹಾಗಾದರೆ ಮತ್ತೆ ನಿಮ್ಮ ರೇಷನ್ ಕಾರ್ಡುಗಳನ್ನು ಪಡೆಯುವುದು ಹೇಗೆ ಎಂಬ ಮಾಹಿತಿಯನ್ನು ತಿಳಿಯಬೇಕಾದಲ್ಲಿ ಈ ವರದಿಯನ್ನು ಸಂಪೂರ್ಣವಾಗಿ ಓದಿ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ
ಸೋಮವಾರದಿಂದ ಬಿಪಿಎಲ್ ಕಾರ್ಡ್ ತಿದ್ದುಪಡಿ ಪ್ರಕ್ರಿಯೆ ಆರಂಭ :
ಬಿಪಿಎಲ್ ಕಾರ್ಡ್ ಒಂದಿದ್ದರೆ ಸಾಕು, ಆಸ್ಪತ್ರೆಯಲ್ಲಿ ಉಚಿತ ಚಿಕಿತ್ಸೆ, ಅನ್ನ ಹಾಗೂ ಧವಸ ಧಾನ್ಯಗಳು ಕೂಡ ಉಚಿತ ಅಷ್ಟೇ ಅಲ್ಲದೆ ಗೃಹಲಕ್ಷ್ಮಿ ಯೋಜನೆಯ ಹಣವು ಕೂಡ ಬರುತ್ತದೆ. ಹೀಗಿರುವಾಗ ರಾತ್ರೋರಾತ್ರಿ ನಡೆದ ಆಪರೇಷನ್ ನಲ್ಲಿ ಬಿಪಿಎಲ್ ಕಾರ್ಡ್ಗಳನ್ನು ರದ್ದು ಮಾಡಲಾಗಿತ್ತು, ಅಕ್ರಮವಾಗಿ ಕಾರ್ಡನ್ನು ಮಾಡಿಸಿಕೊಂಡಿದ್ದ ಜನರು ಸುಮ್ಮನಿದ್ದರೂ ಕೂಡ ಅರ್ಹ ಫಲಾನುಭವಿಗಳು ಕಣ್ಣೀರಿಟ್ಟಿದ್ದರು. ಇದರಿಂದಾಗಿ ಎಷ್ಟು ಅರ್ಹ ಫಲಾನುಭವಿಗಳ ಕಾರ್ಡ್ ಗಳು ಕೂಡ ರದ್ದಾಗಿದ್ದರಿಂದ ಬಿಜೆಪಿ ಸರ್ಕಾರವು ಆಕ್ರೋಶಗೊಂಡಿತ್ತು. ಆಕ್ರೋಶಕ್ಕೆ ಮರುಗಿದ ಕಾಂಗ್ರೆಸ್ ಸರ್ಕಾರ ಮತ್ತೆ ಮರಳಿ ಸೋಮವಾರದಿಂದ ಬಿಪಿಎಲ್ ಕಾರ್ಡ್ಗಳನ್ನು ಹಿಂತಿರುಗಿಸಲಾಗುವುದು ಎಂದು ಹೇಳಿದ ತಕ್ಷಣವೇ ಸರ್ಕಾರಿ ಕಚೇರಿಗಳ ಮುಂದೆ ಜನರು ಸಾಲುಗಟ್ಟಲು ಮುಂದಾಗಿದ್ದಾರೆ.
ಸೋಮವಾರದಿಂದ ಬಿಪಿಎಲ್ ಕಾರ್ಡ್ಗಳ(BPL ration card) ತಿದ್ದುಪಡಿಯನ್ನು ಪ್ರಾರಂಭಿಸಲಾಗುತ್ತದೆ. ಆಹಾರ ಸಚಿವರು ಇದರ ಬಗ್ಗೆ ಸುದಿಪುಷ್ಟಿಯಲ್ಲಿ ಹೇಳಿಕೆ ನೀಡಿದ್ದಾರೆ. ಆಹಾರ, ನಾಗರಿಕ ಸರಬರಾಜು ಕಚೇರಿಯಲ್ಲಿ ತಿದ್ದುಪಡೆಯನ್ನು ಮಾಡಲಾಗುತ್ತದೆ. ಸೋಮವಾರ ಮಧ್ಯಾಹ್ನ 3 ಗಂಟೆಯ ನಂತರ ಈ ತಿದ್ದುಪಡಿಯ ಪ್ರಕ್ರಿಯೆ ಪ್ರಾರಂಭವಾಗಲಿದೆ. ಹಾಗಾಗಿ ಯಾರೆಲ್ಲಾ ಅರ್ಹ ಫಲಾನುಭವಿಗಳು ಬಿಪಿಎಲ್ ಕಾರ್ಡನ್ನು ಕಳೆದುಕೊಂಡಿದ್ದರೆ, ಕಚೇರಿಗೆ ಭೇಟಿ ನೀಡಿ ತಮ್ಮ ಕಾರ್ಡುಗಳನ್ನು ಹಿಂಪಡೆಯಬಹುದಾಗಿದೆ.
ಬಿಪಿಎಲ್ ಕಾರ್ಡ್ ಹಿಂಪಡೆಯಲು ಏನೆಲ್ಲಾ ಬೇಕು?:
ಇಂದು ಕೂಡ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಿಎಂ ಸಿದ್ದರಾಮಯ್ಯನವರು ಸರ್ಕಾರಿ ನೌಕರಿಗೆ ಹಾಗೂ ಇನ್ಕಮ್ ಟ್ಯಾಕ್ಸ್ ಕಟ್ಟುವವರಿಗೆ ಮಾತ್ರ ಬಿಪಿಎಲ್ ಕಾರ್ಡ್ ರದ್ದಾಗುತ್ತದೆ. ಇನ್ನೂ ಉಳಿದ ಎಲ್ಲಾ ಬಡ ಫಲಾನುಭವಿಗಳಿಗೆ ಬಿಪಿಎಲ್ ಕಾರ್ಡು ಸಿಗುತ್ತದೆ ಎಂದು ಆಶ್ವಾಸನೆ ನೀಡಿದ್ದಾರೆ. ಹಾಗಾಗಿ ತಾಲೂಕು ಕಚೇರಿಗಳಲ್ಲಿ ಕಾರ್ಡುಗಳ ತಿದ್ದುಪಡಿಗೆ ಅವಕಾಶ ನೀಡಲಾಗಿದೆ. ಹಾಗಾಗಿ ಕಚೇರಿಗೆ ತೆರಳಿ ನಿಮ್ಮ ರೇಷನ್ ಕಾರ್ಡ್, ಆಧಾರ್ ಕಾರ್ಡ್ ಹಾಗೂ ಆದಾಯದ ಬಗ್ಗೆ ಮಾಹಿತಿಯನ್ನು ನೀಡಬೇಕಾಗುತ್ತದೆ. ಅಷ್ಟೇ ಅಲ್ಲದೆ ನೀವೇನಾದರೂ ಸಾಲ(loan)ವನ್ನು ಮಾಡಿದ್ದರೆ ಅದರ ರಿಸಿಪ್ಟ್ ಅನ್ನು ನೀಡಬೇಕು. ಹೀಗೆ ನಿಮ್ಮ ಮಾಹಿತಿಗಳನ್ನು ತಿಳಿಸಿ ನಿಮ್ಮ ಕಾರ್ಡ್ಗಳನ್ನು ಪಡೆದುಕೊಳ್ಳುವ ಅವಕಾಶವಿದೆ.
ಈ ಮಾಹಿತಿಗಳನ್ನು ಓದಿ
ದಯವಿಟ್ಟು ಗಮನಿಸಿ: ನೀಡ್ಸ್ ಆಫ್ ಪಬ್ಲಿಕ್ ತನ್ನ ಓದುಗರಿಗೆ ನಿಖರವಾದ ಮತ್ತು ಅಧಿಕೃತ ಮಾಹಿತಿಗಳನ್ನು ಮಾತ್ರ ಪ್ರಕಟಿಸುತ್ತದೆ. ಇಲ್ಲಿ ನಾವು ಯಾವುದೇ ಅನಧಿಕೃತ ಮತ್ತು ಸುಳ್ಳು ಮಾಹಿತಿಯನ್ನು ಬಿತ್ತರಿಸುವುದಿಲ್ಲ.