ರಾಜ್ಯದ ಈ ರೈತರಿಗೆ ಮಿನಿ ಪವರ್ ಟಿಲ್ಲರ್ ಖರೀದಿಗೆ ಸರ್ಕಾರ ನೀಡುತ್ತಿದೆ ಶೇ.90ರಷ್ಟು ಸಹಾಯಧನ.! ಈಗಲೇ ಅಪ್ಲೈ ಮಾಡಿ

WhatsApp Image 2024 11 23 at 17.11.46

ರಾಜ್ಯದ ರೈತರಿಗೆ ಬಂಪರ್ ಗುಡ್ ನ್ಯೂಸ್, ಕೃಷಿ ಚಟುವಟಿಕೆಗಳಲ್ಲಿ ಆಧುನಿಕತೆ ತರಲು ರಾಜ್ಯ ಮತ್ತು ಕೇಂದ್ರ ಸರ್ಕಾರದಿಂದ ಕೃಷಿ ಯಂತ್ರೋಪಕರಣಗಳ ಖರೀದಿಗೆ ಭರ್ಜರಿ ಸಬ್ಸಿಡಿ ನೀಡುತ್ತಿದ್ದು. ಬೀಜ ಗೊಬ್ಬರ ಖರೀದಿಗೆ ಪ್ರೋತ್ಸಾಹ ಧನ ಸೇರಿದಂತೆ ಹಲವಾರು ರೈತಪರ ಯೋಜನೆಗಳನ್ನ ಜಾರಿಗೆ ತರಲಾಗಿದ್ದು. ಮಾಹಿತಿಯ ಕೊರತೆಯಿಂದಾಗಿ ರೈತರಿಗೆ ಯೋಜನೆಗಳ ಸೌಲಭ್ಯಗಳು ಸಿಗುತ್ತಿಲ್ಲ. ಆದ್ದರಿಂದ ಈ ವರದಿಯಲ್ಲಿ ಸಂಪೂರ್ಣವಾದ ಮಾಹಿತಿ ಕೆಳಗೆ ಕೊಡಲಾಗಿದ್ದು, ನೀವು ಓದಿದ ನಂತರ ನಿಮ್ಮ ಸ್ನೇಹಿತ ಮಿತ್ರರಿಗೂ ಕೂಡ ಶೇರ್ ಮಾಡಿ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ

ಕೃಷಿ ಯಂತ್ರೋಪಕರಣಗಳ ಖರೀದಿಗೆ ಶೇ.90ರಷ್ಟು ಸಹಾಯಧನ

ಸಾಮಾನ್ಯ ವರ್ಗದ ರೈತರಿಗೆ ಶೇ. 50ರ ರಿಯಾಯಿತಿ ಮತ್ತು ಪರಿಶಿಷ್ಟ ಜಾತಿ/ಪಂಗಡದ ರೈತರಿಗೆ ಶೇ. 90ರ ರಿಯಾಯಿತಿಯಲ್ಲಿ ಕೃಷಿ ಯಂತ್ರೋಪಕರಣಗಳನ್ನು ಖರೀದಿಸಲು ಅವಕಾಶವಿದೆ. ಈ ಯೋಜನೆಯಡಿ ರೈತರು ಈ ಕೆಳಗಿನ ಸಾಧನಗಳನ್ನು ರಿಯಾಯಿತಿಯಲ್ಲಿ ಪಡೆದುಕೊಳ್ಳಬಹುದು: ಕೃಷಿ ಇಲಾಖೆ ಹಾಗೂ ತೋಟಗಾರಿಕೆ ಇಲಾಖೆಯಿಂದ ಲಭ್ಯತೆ ಆಧಾರದ ಮೇಲೆ ಕೃಷಿ. ಯಂತ್ರೋಪಕರಣಗಳನ್ನು ರೈತರಿಗೆ ನೀಡಲಾಗುವುದು

ಮಿನಿ ಟ್ರ್ಯಾಕ್ಟರ್ (Mini Tractor)
ಪವರ್ ಟಿಲ್ಲರ್ (Power Tiller)
ಕಳೆ ಕೊಚ್ಚುವ ಯಂತ್ರಗಳು (Weeding machines)
ಪವರ್ ಸ್ಪ್ರೇಯರ್ (Power Sprayer)
ಡೀಸೆಲ್ ಪಂಪ್‍ಸೆಟ್ (Desiel Pumpset)
ರೋಟೋವೇಟರ್ (Rotovator)
ಯಂತ್ರ ಚಾಲಿತ ಮೋಟೋಕಾರ್ಟ್ (motorized motokart)
ಹೆಚ್‍ಡಿಪಿಇ ಪೈಪ್ಸ್ (ತುಂತುರು ನೀರಾವರಿ ಘಟಕ)
ಈ ಸಾಧನಗಳು ರೈತರಿಗೆ ಕೃಷಿ ಕಾರ್ಯವನ್ನು ಸುಲಭಗೊಳಿಸುವಷ್ಟೇ ಅಲ್ಲದೆ, ಉತ್ಪಾದನೆಯ ಮಟ್ಟವನ್ನು ಹೆಚ್ಚಿಸಲು ಸಹಕಾರಿಯಾಗಲಿವೆ.

ಯಾವ ಕೃಷಿ ಯಂತ್ರೋಪಕರಣಕ್ಕೆ ಎಸ್ಟು ಸಹಾಯಧನ?

ಕ್ರ. ಸ

ಯಂತ್ರೋಪಕರಣ

ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ

ಸಾಮಾನ್ಯ ವರ್ಗ

1

ಮಿನಿ ಟ್ರ್ಯಾಕ್ಟರ್

3 ಲಕ್ಷ ರೂಪಾಯಿಯವರೆಗೆ ಸಹಾಯಧನ

75 ಸಾವಿರ ರೂಪಾಯಿಯವರೆಗೆ ಸಹಾಯಧನ

2

ಪವರ್ ಟಿಲ್ಲರ್

ಶೇ. 90ರಷ್ಟು ಸಹಾಯಧನ, ಗರಿಷ್ಠ 1 ಲಕ್ಷ ರೂಪಾಯಿಯವರೆಗೆ ಸಹಾಯಧನ

ಶೇ. 50 ರಷ್ಟು ಸಹಾಯಧನ ಗರಿಷ್ಠ 72500 ರೂಪಾಯಿವರೆಗೆ

3

ಟ್ರ್ಯಾಕ್ಟರ್ ಚಾಲಿತ ಎಂ.ಬಿ. ಫ್ಲೋ ಫಿಕ್ಸ್ಡ್‌

ಎಂ.ಬಿ. ಫ್ಲೋ 25830 ರೂಪಾಯಿ, ರಿವರ್ಸಿಬಲ್ ಎಂ.ಬಿ. ಫ್ಲೋ ಗೆ 51,300 ರೂಪಾಯಿ ಸಹಾಯಧನ 

14100 ರೂಪಾಯಿ ರಿವರ್ಸಿಬಲ್ ಎಂ.ಬಿ. ಫ್ಲೋ ಗೆ 25,800 ರೂಪಾಯಿ ಸಹಾಯಧನ 

4

ಟ್ರ್ಯಾಕ್ಟರ್ ಚಾಲಿತ ಡಿಸ್ಕ್ ಫ್ಲೋ

52200 ರೂಪಾಯಿಯಿಂದ 65700 ರೂಪಾಯಿಯವರೆಗೆ ಸಹಾಯಧನ

29000ದಿಂದ 36500 ರೂಪಾಯಿಯವರೆಗೆ

5

ಟ್ರ್ಯಾಕ್ಟರ್ ಚಾಲಿತ ಡಿಸ್ಕ್ ಹ್ಯಾರೋ

 52,200 ದಿಂದ 63000 ರೂಪಾಯಿವರೆಗೆ ಸಹಾಯಧನ

29000-35000 ರೂಪಾಯಿಯವರೆಗೆ ಸಹಾಯಧನ


ಅರ್ಜಿಯ ವಿಧಾನ :

ಅರ್ಜಿ ಸಲ್ಲಿಸಲು ರೈತರು ಈ ದಾಖಲೆಗಳನ್ನು ತಯಾರಿಸಬೇಕು:

ಪಹಣಿ (RTC)
ಆಧಾರ್ ಕಾರ್ಡ್(Adhar card)
ಬ್ಯಾಂಕ್ ಪಾಸ್ ಪುಸ್ತಕ ಜೆರಾಕ್ಸ್(Bank passbook)
ಎರಡು ಭಾವಚಿತ್ರ(Photos)
ರೂ. 100ರ ಛಾಪಾ ಕಾಗದ
ಈ ದಾಖಲೆಗಳೊಂದಿಗೆ ಹೋಬಳಿ ಮಟ್ಟದ ರೈತ ಸಂಪರ್ಕ ಕೇಂದ್ರ ಅಥವಾ ಸಹಾಯಕ ಕೃಷಿ ನಿರ್ದೇಶಕರ ಕಚೇರಿಗೆ ಭೇಟಿ ನೀಡಿ ಅರ್ಜಿ ಸಲ್ಲಿಸಬಹುದು.

ಅನುದಾನವು ರೈತರಿಗೆ ಹೇಗೆ ಸಹಾಯ ಮಾಡುತ್ತದೆ?

ಈ ಯೋಜನೆಗಳು ರೈತರ ಆರ್ಥಿಕ ಚಟುವಟಿಕೆಯನ್ನು ಉತ್ತೇಜಿಸುತ್ತವೆ. ತುಂತುರು ನೀರಾವರಿ ಘಟಕಗಳ (sprinkler irrigation units) ಅನುಸ್ಥಾಪನೆಯಿಂದ ನೀರಿನ ಸಮರ್ಪಕ ಬಳಕೆಯನ್ನು ಸಾಧ್ಯವನ್ನಾಗಿಸುತ್ತದೆ. ಜೊತೆಗೆ, ಯಾಂತ್ರೀಕರಣದಿಂದ ಹಗ್ಗಾಯವಾಗುವ ಶ್ರಮವನ್ನು ಕಡಿಮೆ ಮಾಡಿ, ಉತ್ಪಾದಕತೆಯನ್ನು ಹೆಚ್ಚಿಸಲು ನೆರವಾಗುತ್ತದೆ.

ಈ ಮಾಹಿತಿಗಳನ್ನು ಓದಿ

 

 

ದಯವಿಟ್ಟು ಗಮನಿಸಿ: ನೀಡ್ಸ್ ಆಫ್ ಪಬ್ಲಿಕ್ ತನ್ನ ಓದುಗರಿಗೆ ನಿಖರವಾದ ಮತ್ತು ಅಧಿಕೃತ ಮಾಹಿತಿಗಳನ್ನು ಮಾತ್ರ ಪ್ರಕಟಿಸುತ್ತದೆ. ಇಲ್ಲಿ ನಾವು ಯಾವುದೇ ಅನಧಿಕೃತ ಮತ್ತು ಸುಳ್ಳು ಮಾಹಿತಿಯನ್ನು ಬಿತ್ತರಿಸುವುದಿಲ್ಲ.

WhatsApp Group Join Now
Telegram Group Join Now

Leave a Reply

Your email address will not be published. Required fields are marked *

error: Content is protected !!