ಗುಡ್ ನ್ಯೂಸ್ : ನೀವು ಕೇಂದ್ರ ಸರ್ಕಾರಿ ಉದ್ಯೋಗಿಯಾಗಿದ್ದರೆ, ಈ ಸುದ್ದಿ ನಿಮಗೆ ಬಹಳ ಮುಖ್ಯವಾಗಿರುತ್ತದೆ. 18 ತಿಂಗಳ ಡಿಎ (DA) ಬಾಕಿ ಕುರಿತು ಹಾಗೂ ಡಿಆರ್(ಡೆರ್‌ನೆಸ್ ರಿಲೀಫ್) ಒಟ್ಟಿಗೆ ಬಿಡುಗಡೆ ಮಾಡಲು ಮುಂದಾಗಿದೆ. ಮತ್ತೊಮ್ಮೆ ಚರ್ಚೆಗಳು ತೀವ್ರಗೊಂಡಿವೆ. ಹೊಸ ವರ್ಷಕ್ಕೂ ಮುನ್ನ ಕೋಟ್ಯಂತರ ನೌಕರರು ಮತ್ತು ಪಿಂಚಣಿದಾರರಿಗೆ ಬಿಗ್ ರಿಲೀಫ್ ನೀಡಲು ಸರ್ಕಾರ ಮುಂದಾಗಿದೆ ಎಂದು ಮೂಲಗಳು ತಿಳಿಸಿವೆ.
ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ
DA/DR ಹೆಚ್ಚಳ:
ಒಂದು ಕೋಟಿಗೂ ಹೆಚ್ಚು ಕೇಂದ್ರ ಸರ್ಕಾರಿ ನೌಕರರು ಮತ್ತು ಪಿಂಚಣಿದಾರರ ಡಿಎ/ಡಿಆರ್ ಅನ್ನು ಶೇಕಡಾ ಮೂರರಷ್ಟು ಹೆಚ್ಚಿಸಲಾಗಿದೆ. ತುಟ್ಟಿಭತ್ಯೆಯ ದರವನ್ನು ಈಗ ಶೇಕಡಾ 53 ಕ್ಕೆ ಹೆಚ್ಚಿಸಲಾಗಿದೆ. ಕೊರೊನಾ ಅವಧಿಯಲ್ಲಿ ತಡೆಹಿಡಿಯಲಾದ ಶೇಕಡಾ 18 ರಷ್ಟು ‘ಡಿಎ’ ಬಾಕಿಯ ಬಗ್ಗೆ ಸರ್ಕಾರ ಏನನ್ನೂ ಹೇಳಲಿಲ್ಲ, ಕರೋನಾ ಸಮಯದಲ್ಲಿ ಇಡೀ ದೇಶವು ಬಿಕ್ಕಟ್ಟನ್ನು ಎದುರಿಸುತ್ತಿರುವಾಗ ನೌಕರರ ಡಿಎ ಮೊತ್ತವನ್ನ ಕಲ್ಯಾಣ ಯೋಜನೆಗಳಿಗೆ ಮತ್ತು ಬಡ ಜನರಿಗೆ ಸಹಾಯ ಮಾಡಲು ಬಳಸಲಾಯಿತು. ಸಂಪುಟ ಸಭೆಯ ನಿರ್ಧಾರಗಳ ಕುರಿತು ಮಾಹಿತಿ ನೀಡಿದ ಕೇಂದ್ರ ಸಚಿವ ಅಶ್ವನಿ ವೈಷ್ಣವ್, ಈಗ ಡಿಎ ಮತ್ತು ಡಿಆರ್ ದರಗಳನ್ನು ಶೇಕಡಾ ಮೂರರಷ್ಟು ಹೆಚ್ಚಿಸಲಾಗಿದೆ ಎಂದು ತಿಳಿಸಿದ್ದಾರೆ.
2025ರ ಬಜೆಟ್‌ನಲ್ಲಿ ಈ ಮೊತ್ತ ಪ್ರಕಟಣೆಯಾದರೆ ಜೂನ್ ಅಥವಾ ಜುಲೈ ವೇಳೆಗೆ ನೌಕರರ ಖಾತೆಗೆ ಮೊತ್ತ ಜಮೆ ಆಗಲಿದೆ. 18 ತಿಂಗಳ ಮೊತ್ತ ಬಾಕಿ ಇರುವ ಕಾರಣ ಒಂದೇ ಬಾರಿ ದೊಡ್ಡ ಪ್ರಮಾಣದಲ್ಲಿ ಮೊತ್ತ ಜಮೆ ಮಾಡವು ಬದಲು 3 ಹಂತದಲ್ಲಿ ಹಣ ಬಿಡುಗಡೆ ಮಾಡಲು ಸರ್ಕಾರ ಮುಂದಾಗಿದೆ. ಇದರಿಂದ ಕೇಂದ್ರ ಸರ್ಕಾರಕ್ಕೂ ಹೆಚ್ಚಿನ ಹೊರೆ ತಪ್ಪಲಿದೆ ಅನ್ನೋದು ಲೆಕ್ಕಾಚಾರ. ಈ ಕುರಿತು ಕೇಂದ್ರ ಸರ್ಕಾರ ಅಧಿಕೃತ ಪ್ರಕಟಣೆ ಹೊರಡಿಸುವ ಸಾಧ್ಯತೆ ಇದೆ. ಹಾಗಾಗಿ ಈ ಹೊಸ ವರ್ಷದಲ್ಲಿ ಡಿಎ ಖಾತೆಗೆ ತಲುಪುವ ಎಲ್ಲಾ ಸಾಧ್ಯತೆಗಳು ಇದೆ.
ಈ ಮಾಹಿತಿಗಳನ್ನು ಓದಿ
ದಯವಿಟ್ಟು ಗಮನಿಸಿ: ನೀಡ್ಸ್ ಆಫ್ ಪಬ್ಲಿಕ್ ತನ್ನ ಓದುಗರಿಗೆ ನಿಖರವಾದ ಮತ್ತು ಅಧಿಕೃತ ಮಾಹಿತಿಗಳನ್ನು ಮಾತ್ರ ಪ್ರಕಟಿಸುತ್ತದೆ. ಇಲ್ಲಿ ನಾವು ಯಾವುದೇ ಅನಧಿಕೃತ ಮತ್ತು ಸುಳ್ಳು ಮಾಹಿತಿಯನ್ನು ಬಿತ್ತರಿಸುವುದಿಲ್ಲ.