ಬ್ಯಾಂಕಿಂಗ್ ಕಾಯ್ದೆಗೆ ತಿದ್ದುಪಡಿ ಆದೇಶ, ಬ್ಯಾಂಕ್ ಖಾತೆ ಇದ್ದವರು ತಪ್ಪದೇ ತಿಳಿದುಕೊಳ್ಳಿ!

IMG 20241205 WA0004

ಬ್ಯಾಂಕಿಂಗ್ ಕಾಯ್ದೆ ತಿದ್ದುಪಡಿ ಮಸೂದೆಗೆ ಸೂಚನೆ: ನಿರ್ಮಲಾ ಸೀತಾರಾಮನ್(Nirmala Sitharaman)

ಇಂದು ಎಲ್ಲರ ಬಳಿಯೂ ಬ್ಯಾಂಕ್ ಅಕೌಂಟ್(Bank account) ಇದೆ. ಆದರೆ ನಾವು ಬ್ಯಾಂಕ್ ನಲ್ಲಿ ಖಾತೆ ತೆರೆಯುವಾಗ ಗ್ರಾಹಕನ ಸುರಕ್ಷತೆ ವಿಚಾರವಾಗಿ ಹಲವಾರು ನಿಯಮಗಳನ್ನು ಪಾಲಿಸಬೇಕು. ಖಾತೆದಾರರ ನಂತರ ಯಾರು ಖಾತೆಯ ಅಧಿಕಾರವನ್ನು ಹೊಂದಬೇಕು ಎಂದು ನಾಮಿನಿ( nominee ) ಅವಕಾಶವನ್ನು ಮಾಡಿಕೊಡಲಾಗಿತ್ತು. ಇದೀಗ ಆ ನಾಮಿನಿ ದಾರರ ಸಂಖ್ಯೆಯನ್ನು ಹೆಚ್ಚಿಸಲು ಸರ್ಕಾರ ಮುಂದಾಗಿದೆ. ಬ್ಯಾಂಕಿಂಗ್ ಸಂಬಂಧಿತ ಕಾಯ್ದೆಗಳಿಗೆ ಕೇಂದ್ರ ಸರ್ಕಾರ(Central government) ತಿದ್ದುಪಡಿ ತರುತ್ತಿದ್ದು, ಈ ತಿದ್ದುಪಡಿ ಮಸೂದೆಗಳನ್ನು ಸಂಸತ್​ನಲ್ಲಿ ಮಂಡಿಸಲಾಗಿದೆ. ಇದರಲ್ಲಿ ಒಟ್ಟು 19 ತಿದ್ದುಪಡಿ ತರಲಾಗಿದೆ ಎಂದು ನಿರ್ಮಲಾ ಸೀತಾರಾಮನ್ ತಿಳಿಸಿದ್ದಾರೆ. ಒಟ್ಟು ಎಷ್ಟು ತಿದ್ದುಪಡಿಗಳನ್ನು ಪ್ರಸ್ತಾಪಿಸಲಾಗಿದೆ? ಅವು ಯಾವುವು? ಎಂಬ ಸಂಪೂರ್ಣ ಮಾಹಿತಿಯನ್ನು ತಿಳಿದುಕೊಳ್ಳೋಣ ಬನ್ನಿ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ

ಈ ಹಿಂದೆ ಬ್ಯಾಂಕ್ ಖಾತೆದಾರರಿಗೆ(bank account holders) ಕೇವಲ ಎರಡು ನಾಮಿನಿಗಳನ್ನು(Two nominees) ನೇಮಕ ಮಾಡುವ ಅವಕಾಶ ಕಲ್ಪಿಸಲಾಗಿತ್ತು, ಇದೀಗ ಬ್ಯಾಂಕಿಂಗ್ ಕಾನೂನುಗಳಿಗೆ ತಿದ್ದುಪಡಿ ತರುವ ಮಸೂದೆ ರೂಪಿಸಲಾಗಿದ್ದು, ತಿದ್ದುಪಡಿ ಮಸೂದೆಯನ್ನು ಲೋಕಸಭೆಯಲ್ಲಿ ಹಣಕಾಸು ಸಚಿವೆ(Finance Minister) ನಿರ್ಮಲಾ ಸೀತಾರಾಮನ್(Nirmala Sitharaman) ಮಂಡಿಸಿದ್ದಾರೆ. ಇದರಿಂದ ಭಾರತದ ಬ್ಯಾಂಕಿಂಗ್ ಸೆಕ್ಟರ್ ಮತ್ತಷ್ಟು ಬಲಗೊಳ್ಳುವ ಜೊತೆಗೆ ಹೂಡಿಕೆದಾರರ ಹಿತಾಸಕ್ತಿಯೂ ಸುರಕ್ಷಿತವಾಗಿರುತ್ತದೆ ಆದ್ದರಿಂದ ಬ್ಯಾಂಕಿಂಗ್‌ ಕಾಯ್ದೆ ತಿದ್ದುಪಡಿ ಮಸೂದೆಗೆ ಮಾಡಿಸಲಾಗಿದೆ.

ಒಟ್ಟಾರೆಯಾಗಿ ಎಷ್ಟು ತಿದ್ದುಪಡಿಗಳನ್ನು ಪ್ರಸ್ತಾಪಿಸಲಾಗಿದೆ?:

ಇನ್ನು ಕೇಂದ್ರ ಸರ್ಕಾರ ಮಂಗಳವಾರ ಅಂದರೆ ಡಿಸೆಂಬರ್(December) 3, 2024ರಲ್ಲಿ ಬ್ಯಾಂಕಿಂಗ್ ಕಾನೂನುಗಳ ತಿದ್ದುಪಡಿ ಮಸೂದೆ ಅನ್ನು ಲೋಕಸಭೆಯಲ್ಲಿ(Lok Sabha) ಮಂಡಿಸಿದ್ದು, ಇದರ ಅಂಗವಾಗಿ ಬ್ಯಾಂಕ್ ಖಾತೆದಾರರು ನಾಲ್ಕು ನಾಮಿನಿಗಳನ್ನು(Four nominees) ನೇಮಕ ಮಾಡುವ ಅವಕಾಶ ಒದಗಿಸಲಾಗಿದ್ದು, ಇದರ ಜೊತೆಯಲ್ಲಿ ಹಲವು ಅಂಶಗಳನ್ನು ಹೊಂದಿರುವ ಬ್ಯಾಂಕಿಂಗ್‌ ಕಾಯ್ದೆಗಳ ತಿದ್ದುಪಡಿ ಮಸೂದೆಯನ್ನು ಲೋಕಸಭೆ ಅಂಗೀಕರಿಸಿದೆ. 1934ರ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ಕಾಯ್ದೆ(Reserve bank of India act), 1949ರ ಬ್ಯಾಂಕಿಂಗ್ ರೆಗ್ಯುಲೇಶನ್ ಕಾಯ್ದೆ(Banking regulation act), 1955ರ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಕಾಯ್ದೆ(State bank of india act ), 1970ರ ಬ್ಯಾಂಕಿಂಗ್ ಕಂಪನೀಸ್ ಕಾಯ್ದೆ(Banking companies act), 1980ರ ಬ್ಯಾಂಕಿಂಗ್ ಕಂಪನೀಸ್ ಕಾಯ್ದೆಗಳಲ್ಲಿ ಈ 19 ತಿದ್ದುಪಡಿಗಳನ್ನು ತರಲಾಗಿದೆ.

ತಿದ್ದುಪಡಿಯ ಮುಖ್ಯ ಅಂಶಗಳು:

ನಾಮಿನಿಗಳ ಸಂಖ್ಯೆಯಲ್ಲಿ ಹೆಚ್ಚುವರಿ ಅವಕಾಶ:
ಈಗಾಗಲೇ ಇರುವ ನಿಯಮದ ಪ್ರಕಾರ, ಬ್ಯಾಂಕ್ ಖಾತೆಗೆ ಒಂದು ಅಥವಾ ಗರಿಷ್ಠ ಎರಡು ನಾಮಿನಿಗಳನ್ನು ಮಾತ್ರ ಸೇರ್ಪಡೆಗೊಳಿಸಲು ಅವಕಾಶವಿತ್ತು. ಆದರೆ, ಹೊಸ ತಿದ್ದುಪಡಿ ಪ್ರಕಾರ, ಖಾತೆದಾರರು ನಾಲ್ಕು ನಾಮಿನಿಗಳನ್ನು ನೇಮಿಸಬಹುದು. ಇದು, ಕುಟುಂಬ ಸದಸ್ಯರ ಮಧ್ಯೆ ಆಸ್ತಿಯ ಹಕ್ಕನ್ನು ನಿರ್ವಿಘ್ನವಾಗಿ ಹಂಚಲು ನೆರವಾಗುತ್ತದೆ.

ಅನಾತಿ ಹಣದ ನಿರ್ವಹಣೆ:

ಅನಾತಿ (Unclaimed) ಹಣದ ಹಕ್ಕು ದೃಢಪಡಿಸಲು ಈ ನಿಯಮ ಸಹಾಯ ಮಾಡಲಿದೆ. ಹಲವಾರು ಖಾತೆಗಳಲ್ಲಿ, ನಾಮಿನಿ ಇಲ್ಲದ ಕಾರಣದಿಂದ ಹಣವನ್ನು ತೆಗೆಯಲು ಬಿಕ್ಕಟ್ಟು ಉಂಟಾಗುತ್ತದೆ ಆದರೆ ಈ ತಿದ್ದುಪಡಿಯಿಂದ ಉಪಯೋಗವಾಗಲಿದೆ.

ಸಹಕಾರಿ ಬ್ಯಾಂಕ್‌ಗಳ ಸುಧಾರಣೆ :

ಸಹಕಾರಿ ಬ್ಯಾಂಕ್‌ಗಳ ನಿರ್ದೇಶಕರ ಸೇವಾ ಅವಧಿಯನ್ನು 8 ವರ್ಷದಿಂದ 10 ವರ್ಷಕ್ಕೆ ವಿಸ್ತರಿಸಲಾಗಿದೆ.ಕೇಂದ್ರೀಯ ಸಹಕಾರಿ ಬ್ಯಾಂಕ್​ವೊಂದರ ನಿರ್ದೇಶಕರು ರಾಜ್ಯದ ಸಹಕಾರಿ ಬ್ಯಾಂಕ್​ನ ಮಂಡಳಿಯಲ್ಲಿ ಸೇವೆ ಸಲ್ಲಿಸಲು ಅವಕಾಶ ಸಿಗಲಿದೆ.

ಬ್ಯಾಂಕ್ ನಿರ್ದೇಶಕರಿಗೆ ಸಬ್​ಸ್ಟ್ಯಾನ್ಷಿಯಲ್ ಇಂಟರೆಸ್ಟ್ ಹೆಚ್ಚಳ :

ಬ್ಯಾಂಕ್ ನಿರ್ದೇಶಕರಿಗೆ ಸಂಬಂಧಿಸಿದ ‘ಸಬ್​ಸ್ಟ್ಯಾನ್ಷಿಯಲ್ ಇಂಟರೆಸ್ಟ್’ ಅಥವಾ ಪ್ರಮುಖ ಹಿತಾಸಕ್ತಿ ಪದಕ್ಕೆ ಮರು ವ್ಯಾಖ್ಯಾನ ಮಾಡಲಾಗಿದೆ. ಈ ಮುಂಚೆ ಒಂದು ಬ್ಯಾಂಕ್​ನಲ್ಲಿ ನಿರ್ದೇಶಕರ ಆಸ್ತಿ 5 ಲಕ್ಷ ರೂಗಿಂತ ಹೆಚ್ಚಿದ್ದರೆ ಸಬ್​ಸ್ಟ್ಯಾನ್ಷಿಯಲ್ ಇಂಟರೆಸ್ಟ್ ಎಂದು ಪರಿಗಣಿಸಲಾಗುತ್ತಿತ್ತು. ಈಗ ತಿದ್ದುಪಡಿಯಲ್ಲಿ ಆ ಮಿತಿಯನ್ನು 2 ಕೋಟಿ ರೂಗೆ ಏರಿಸಲಾಗಿದೆ.

ನಿಯಮಗಳ ಪಾಲನೆ ಸಂಬಂಧ ಆರ್​ಬಿಐಗೆ ಸಲ್ಲಿಸುತ್ತಿದ್ದ ವರದಿಯ ದಿನ ಬದಲಾವಣೆ :

ನಿಯಮಗಳ ಪಾಲನೆ ಸಂಬಂಧ ಆರ್​ಬಿಐಗೆ ಪ್ರತೀ ಎರಡನೇ ಮತ್ತು ನಾಲ್ಕನೇ ಶುಕ್ರವಾರ ವರದಿ ಸಲ್ಲಿಸಬೇಕಿತ್ತು. ಅದನ್ನು ತಿಂಗಳ 15ನೇ ತಾರೀಖು ಮತ್ತು ಕೊನೆಯ ತಾರೀಖಿಗೆ ಬದಲಾಯಿಸಲಾಗಿದೆ.

ಧ್ವನಿಮತದ ಅಂಗೀಕಾರ:

ಆಗಸ್ಟ್ ನಲ್ಲಿ ರಾಜ್ಯಸಭೆಯಲ್ಲಿ ಮಂಡಿಸಲಾದ ತೈಲ ಕ್ಷೇತ್ರಗಳ (ನಿಯಂತ್ರಣ ಮತ್ತು ಅಭಿವೃದ್ಧಿ) ತಿದ್ದುಪಡಿ ಮಸೂದೆ-2024ನ್ನು ಧ್ವನಿಮತದಿಂದ ಅಂಗೀಕರಿಸಲಾಯಿತು. ಮಂಗಳವಾರ ರಾಜ್ಯಸಭೆಯಲ್ಲಿ ತೈಲ ಮತ್ತು ಅನಿಲದ ಪರಿಶೋಧನೆ, ಉತ್ಪಾದನೆಯನ್ನು ನಿಯಂತ್ರಿಸುವ ಕಾನೂನನ್ನು ತಿದ್ದುಪಡಿ ಮಾಡಲು ಮತ್ತು ವಲಯದಲ್ಲಿ ಹೂಡಿಕೆಯನ್ನು ಹೆಚ್ಚಿಸಲು ಗಣಿಗಾರಿಕೆ ಕಾರ್ಯಾಚರಣೆಗಳಿಂದ ಪೆಟ್ರೋಲಿಯಂ ಕಾರ್ಯಾಚರಣೆಗಳನ್ನು ಡಿ-ಲಿಂಕ್ ಮಾಡಲು ಪ್ರಯತ್ನಿಸುವ ಮಸೂದೆಯನ್ನು ಅಂಗೀಕರಿಸಿತು.

ಬ್ಯಾಂಕಿಂಗ್ ಕಾಯ್ದೆ ತಿದ್ದುಪಡಿಯ ಪ್ರಾಮುಖ್ಯತೆ:

ಕುಟುಂಬದ ಅವಿಭಜಿತ ಆಸ್ತಿಯ ನಿರ್ವಹಣೆ:
ಮರಣದ ನಂತರ ಹಣವರ್ಗಾವಣೆ ಮಾಡುವ ಸಂದರ್ಭದಲ್ಲಿ ತಕರಾರುಗಳನ್ನು ತಡೆಯಲು ಇದು ಬಹುಮುಖ್ಯವಾಗಿದೆ.

ಹಣಕಾಸು ತಂತ್ರಜ್ಞಾನದ ಪ್ರಗತಿ:
ನಾಮಿನಿ ವಿವರಣೆಗಳನ್ನು ಡಿಜಿಟಲ್ ರೂಪದಲ್ಲಿ ನಿರ್ವಹಿಸಲು ಬ್ಯಾಂಕುಗಳಿಗೆ ಸಹಾಯವಾಗಲಿದೆ.

ಖಾತೆದಾರರ ಭದ್ರತೆ:
ಖಾತೆದಾರರ ಹಿತ ಕಾಪಾಡಲು ಮತ್ತು ಅವರ ಹಣದ ಸ್ವಾತಂತ್ರ್ಯವನ್ನು ಹೆಚ್ಚಿಸಲು ಈ ತಿದ್ದುಪಡಿ ಪೂರಕವಾಗಿದೆ.

ಈ ಹೊಸ ತಿದ್ದುಪಡಿ, 2024ರ ಡಿಸೆಂಬರ್ 1ರಿಂದಲೇ ಜಾರಿಗೆ ಬರಳಿದ್ದು, ಇದು ಬ್ಯಾಂಕಿಂಗ್ ವಲಯದಲ್ಲಿ ಸಮಗ್ರ ಸುಧಾರಣೆಗಳಿಗೆ ದಾರಿ ಮೂಡಿಸಿದೆ.

ಗಮನಿಸಿ :

ಹೆಚ್ಚಿನ ವಿವರಗಳಿಗೆ ನಿಮ್ಮ ಬ್ಯಾಂಕಿನ ಶಾಖೆಯನ್ನು ಸಂಪರ್ಕಿಸಿ ಅಥವಾ ಸರ್ಕಾರದ ಅಧಿಕೃತ ವೆಬ್‌ಸೈಟ್‌ನಲ್ಲಿ ಪರಿಶೀಲಿಸಬಹುದು.

ಈ ಮಾಹಿತಿಗಳನ್ನು ಓದಿ

 


ದಯವಿಟ್ಟು ಗಮನಿಸಿ: ನೀಡ್ಸ್ ಆಫ್ ಪಬ್ಲಿಕ್ ತನ್ನ ಓದುಗರಿಗೆ ನಿಖರವಾದ ಮತ್ತು ಅಧಿಕೃತ ಮಾಹಿತಿಗಳನ್ನು ಮಾತ್ರ ಪ್ರಕಟಿಸುತ್ತದೆ. ಇಲ್ಲಿ ನಾವು ಯಾವುದೇ ಅನಧಿಕೃತ ಮತ್ತು ಸುಳ್ಳು ಮಾಹಿತಿಯನ್ನು ಬಿತ್ತರಿಸುವುದಿಲ್ಲ.

WhatsApp Group Join Now
Telegram Group Join Now

Related Posts

Leave a Reply

Your email address will not be published. Required fields are marked *

error: Content is protected !!