ಸುಲಭವಾಗಿ ಡಿಜಿಟಲ್ ರೇಷನ್ ಕಾರ್ಡ್(Digital Ration Card) ಡೌನ್‌ಲೋಡ್ ಮಾಡಿಕೊಳ್ಳಿ!. ಡೌನ್‌ಲೋಡ್ ಮಾಡುವುದು ಹೇಗೆ ? ಇಲ್ಲಿದೆ ಸಂಪೂರ್ಣ ಮಾಹಿತಿ.
ಭಾರತದಲ್ಲಿ ರೇಷನ್ ಕಾರ್ಡ್ ಮುಖ್ಯ ದಾಖಲೆಗಳಲ್ಲಿ ಒಂದಾಗಿದೆ. ಇದು ಆಹಾರ, ಇಂಧನ, ಮತ್ತು ಇತರ ಪ್ರಮುಖ ಅಗತ್ಯ ವಸ್ತುಗಳನ್ನು ಸರ್ಕಾರದ ಸಹಾಯಧನದೊಂದಿಗೆ ಜನರಿಗೆ ತಲುಪಿಸಲು ಪ್ರಮುಖ ಸಾಧನವಾಗಿದೆ. ಈಗ, ಡಿಜಿಟಲ್ ತಂತ್ರಜ್ಞಾನವನ್ನು(Digital technology) ಬಳಸಿಕೊಂಡು, ರೇಷನ್ ಕಾರ್ಡ್ ವ್ಯವಸ್ಥೆಯನ್ನೂ ಸ್ಮಾರ್ಟ್(Smart) ಮತ್ತು ಪಾರದರ್ಶಕಗೊಳಿಸಲು(transparent) ಸರಕಾರ ಡಿಜಿಟಲ್ ರೇಷನ್ ಕಾರ್ಡ್ ಪರಿಚಯಿಸಿದೆ. ಭಾರತ ಸರ್ಕಾರವು ಡಿಜಿಟಲ್ ಇಂಡಿಯಾ ಅಭಿಯಾನದಡಿ ಹಲವು ಸೇವೆಗಳನ್ನು ನೀಡುತ್ತಿದ್ದು, ಅದರಲ್ಲಿ ಡಿಜಿಟಲ್ ರೇಷನ್ ಕಾರ್ಡ್ ಕೂಡ ಒಂದು. ಸಾರ್ವಜನಿಕರಿಗೆ ನೇರವಾಗಿ ಅನುಕೂಲ ಮಾಡಿಕೊಡುವ ಉದ್ದೇಶದಿಂದ ಎಲ್ಲಾ ರೀತಿಯ ಡೇಟಾ ಆನ್‌ಲೈನ್(online)ನಲ್ಲಿ ಲಭ್ಯವಾಗುವಂತೆ ಮಾಡುತ್ತಿದೆ. ದೇಶದಲ್ಲಿ ಒಂದು ರಾಷ್ಟ್ರ ಒಂದು ಪಡಿತರ ಚೀಟಿ ಯೋಜನೆಯನ್ನು ಜಾರಿಗೆ ತರಲು ಪ್ರಯತ್ನಿಸಲಾಗುತ್ತಿದ್ದು, ಪಡಿತರ ಚೀಟಿ ಡಿಜಿಟಲ್ ರೂಪದಲ್ಲಿ ದೊರೆಯುವಂತೆ ಮಾಡುವಲ್ಲಿ ಸರಕಾರ ಯಶಸ್ವಿಯಾಗಿದೆ. ಡಿಜಿಟಲ್ ರೇಷನ್ ಕಾರ್ಡ್ ಎಂದರೇನು? ಇದನ್ನು ಡೌನ್ಲೋಡ್ ಮಾಡುವುದು ಹೇಗೆ ಎಂಬ ಸಂಪೂರ್ಣ ಮಾಹಿತಿಯನ್ನು ತಿಳಿದುಕೊಳ್ಳೋಣ ಬನ್ನಿ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ
ಡಿಜಿಟಲ್ ರೇಷನ್ ಕಾರ್ಡ್ ಎಂದರೇನು?:
ಡಿಜಿಟಲ್ ರೇಷನ್ ಕಾರ್ಡ್ ಹೊಸ ತಂತ್ರಜ್ಞಾನವನ್ನು ಬಳಸಿಕೊಂಡು ರೇಷನ್ ಕಾರ್ಡ್ ಮಾಹಿತಿಯನ್ನು ಡಿಜಿಟಲ್ ಮಾದರಿಯಲ್ಲಿಟ್ಟುಕೊಳ್ಳುವ ವ್ಯವಸ್ಥೆಯಾಗಿದೆ. ಇದರಲ್ಲಿ ಜನರು ತಮ್ಮ ಕಾರ್ಡ್ ಮಾಹಿತಿಯನ್ನು ಆನ್‌ಲೈನ್‌ನಲ್ಲಿ ನೋಡಲು, ಡೌನ್‌ಲೋಡ್ ಮಾಡಿಕೊಳ್ಳಲು ಹಾಗೂ ಮುದ್ರಿಸಿಕೊಳ್ಳಲು ಸಾಧ್ಯವಿದೆ. ಇನ್ನು ಡಿಜಿಟಲ್ ಅಪ್ಲಿಕೇಶನ್ ಬಳಸಿಕೊಂಡು ಯಾವುದೇ ರೀತಿಯ ರೇಷನ್ ಕಾರ್ಡ್ ಡೌನ್ಲೋಡ್ ಮಾಡಿಕೊಳ್ಳಬಹುದು. ಅಂದರೆ ಬಿಪಿಎಲ್(BPL), ಎಪಿಎಲ್(APL), ಎಎವೈ(AAY) ರೇಷನ್ ಕಾರ್ಡ್ ಗಳನ್ನು ಡೌನ್ಲೋಡ್ ಮಾಡಬಹುದು.
ಡಿಜಿಟಲ್ ಪಡಿತರ ಚೀಟಿಯನ್ನು ಹೇಗೆ ಡೌನ್ಲೋಡ್ ಮಾಡುವುದು?:
ಡಿಜಿಟಲ್ ಪಡಿತರ ಚೀಟಿಯನ್ನು ಆನ್‌ಲೈನ್ ಅಥವಾ ಮೇರಾ ರೇಷನ್ 2.0 (Mera Ration 2.0)ಅಪ್ಲಿಕೇಶನ್ ಮೂಲಕ ಸುಲಭವಾಗಿ ಡೌನ್‌ಲೋಡ್ ಮಾಡಬಹುದು. ಮೇರಾ ರೇಷನ್ 2.0 ಎಂದರೆ ಭಾರತ ಸರ್ಕಾರದಿಂದ ಬಿಡುಗಡೆಯಾದ ಮೊಬೈಲ್ ಅಪ್ಲಿಕೇಶನ್ ಆಪ್ ಆಗಿದೆ. ಸಾರ್ವಜನಿಕ ವಿತರಣಾ ವ್ಯವಸ್ಥೆ (ಪಿಡಿಎಸ್) ಅಡಿಯಲ್ಲಿ ಸಬ್ಸಿಡಿ ಆಹಾರ ಧಾನ್ಯಗಳನ್ನು ಪಡೆಯಲು ಫಲಾನುಭವಿಗಳಿಗೆ ಅನುಕೂಲವಾಗುವ ಎಲೆಕ್ಟ್ರಾನಿಕ್ ದಾಖಲೆಯಾಗಿದೆ. ಆನ್‌ಲೈನ್ ಅಥವಾ ಮೇರಾ ರೇಷನ್ 2.0 ಅಪ್ಲಿಕೇಶನ್ ಮೂಲಕ ಡಿಜಿಟಲ್ ಪಡಿತರ ಚೀಟಿಯನ್ನು ಸುಲಭವಾಗಿ ಡೌನ್‌ಲೋಡ್ ಮಾಡಬಹುದು. ಇದು ಆಹಾರದ ವಿತರಣೆ ಸೇವೆಗಳನ್ನು ಡಿಜಿಟಲೀಕರಣಗೊಳಿಸುವ ಮಹತ್ವಪೂರ್ಣ ಹೆಜ್ಜೆಯಾಗಿದೆ.
ಡಿಜಿಟಲ್ ರೇಷನ್ ಕಾರ್ಡ್‌ನ ಉದ್ದೇಶಗಳು:
ಪಾರದರ್ಶಕತೆ: ರೇಷನ್ ವಿತರಣಾ ಪ್ರಕ್ರಿಯೆಯಲ್ಲಿ ಪಾರದರ್ಶಕತೆಯನ್ನು(Transparency) ಹೆಚ್ಚಿಸಲು ಡಿಜಿಟಲ್ ರೇಷನ್ ಕಾರ್ಡ್ ಸಹಾಯ ಮಾಡುತ್ತದೆ.
ದುರೋಪಯೋಗವನ್ನು ತಡೆಯುವುದು: ನಕಲಿ ರೇಷನ್ ಕಾರ್ಡ್ ಗಳನ್ನು(Fake ration cards) ತಡೆಯಲು ಇದು ಪರಿಣಾಮಕಾರಿ ಸಾಧನವಾಗಿದೆ.
ಸುಲಭವಾಗಿ ರೇಷನ್ ಕಾರ್ಡ್ ಸಿಗುತ್ತದೆ : ಜನರು ಯಾವುದೇ ಸ್ಥಳದಿಂದ ತಮ್ಮ ಡಿಜಿಟಲ್ ರೇಷನ್ ಕಾರ್ಡ್‍ನ ಮಾಹಿತಿಯನ್ನು ಪಡೆಯಲು ಈ ವ್ಯವಸ್ಥೆ ಸಹಾಯವಾಗುತ್ತದೆ.
ಆಧಾರ್ ಸಂಪರ್ಕ: ಡಿಜಿಟಲ್ ರೇಷನ್ ಕಾರ್ಡ್‍ನ್ನು ಆಧಾರ್ ಕಾರ್ಡ್‍ಗೆ(Aadhaar Card) ಲಿಂಕ್ ಮಾಡುವ ಮೂಲಕ ಇದನ್ನು ಇನ್ನು ಹೆಚ್ಚು ಸುರಕ್ಷಿತಗೊಳಿಸಲಾಗಿದೆ.
ಡಿಜಿಟಲ್ ರೇಷನ್ ಕಾರ್ಡ್‌ನ ಪ್ರಯೋಜನಗಳು:
ಈ ಕಾರ್ಡ್‍ನಲ್ಲಿ QR ಕೋಡ್ ಇದ್ದು, ಅದನ್ನು ಸ್ಕ್ಯಾನ್ ಮಾಡುವ ಮೂಲಕ ಕಾರ್ಡ್‍ನ ಪ್ರಾಮಾಣಿಕತೆಯನ್ನು ತಿಳಿದುಕೊಳ್ಳ ಬಹುದು.
ಡಿಜಿಟಲ್ ಮಾದರಿಯ ಕಾರಣದಿಂದ ಕಾಗದದ ಉಳಿತಾಯ ಮಾಡಬಹುದು.
ಇದನ್ನು ಮೊಬೈಲ್, ಲ್ಯಾಪ್‌ಟಾಪ್ ಅಥವಾ ಡಿಜಿಟಲ್ ಪ್ಲಾಟ್‌ಫಾರ್ಮ್‌ನಲ್ಲಿ(digital platform) ಸುರಕ್ಷಿತವಾಗಿ ಇಡಬಹುದು. ಇದರಿಂದ ಕಾರ್ಡ್ ಕಳೆದುಕೊಳ್ಳುವ ಭಯವಿಲ್ಲ.
ಹಾಗೆ ಪಡಿತರ ವಿತರಣೆ ಶುದ್ಧ ಮತ್ತು ನಿಷ್ಪಕ್ಷಪಾತವಾಗುತ್ತದೆ.
ಡಿಜಿಲಾಕರ್ ಅಪ್ಲಿಕೇಶನ್(DigiLocker app) ಮೂಲಕ ಆನ್‌ಲೈನ್‌ನಲ್ಲಿ ರೇಷನ್ ಕಾರ್ಡ್ ಡೌನ್‌ಲೋಡ್ ಮಾಡಲು ಕರ್ನಾಟಕ ರಾಜ್ಯದ ಆಹಾರ, ನಾಗರಿಕ ಸರಬರಾಜು ಮತ್ತು ಗ್ರಾಹಕರ ವ್ಯವಹಾರಗಳ ಇಲಾಖೆಯು ಅನುಕೂಲ ಮಾಡಿಕೊಟ್ಟಿದ್ದು, ಯಾವುದೇ ಶುಲ್ಕವನ್ನು ಪಾವತಿಸದೆ ತಮ್ಮ ರೇಷನ್ ಕಾರ್ಡ್‌ಗಳನ್ನು ಆನ್‌ಲೈನ್‌ನಲ್ಲಿ ಡೌನ್‌ಲೋಡ್(online download) ಮಾಡಬಹುದು.
ಡಿಜಿಟಲ್ ರೇಷನ್ ಕಾರ್ಡ್ ಡೌನ್‌ಲೋಡ್ ಮಾಡುವುದು ಹೇಗೆ ?:
ಮೊದಲಿಗೆ ಡಿಜಿಲಾಕರ್ ಮೊಬೈಲ್ ಅಪ್ಲಿಕೇಶನ್ ಅನ್ನು ಪ್ಲೇ ಸ್ಟೋರ್‌ನಿಂದ (Android mobile) ಅಥವಾ ಆಪ್ ಸ್ಟೋರ್‌ನಿಂದ (iPhone mobile) ಡೌನ್‌ಲೋಡ್ ಮಾಡಬಹುದು. ನಂತರ ನಿಮ್ಮ ಆಧಾರ್ ಕಾರ್ಡ್ ವಿವರಗಳನ್ನು ನಮೂದಿಸುವ ಮೂಲಕ ಡಿಜಿಲಾಕರ್ ಬಳಕೆದಾರರ ಪ್ರೊಫೈಲ್ ಅನ್ನು ರಚಿಸಿಕೊಳ್ಳಬೇಕು.
ನಂತರ ಡಿಜಿಲಾಕರ್ ಅಪ್ಲಿಕೇಶನ್‌ಗೆ ಲಾಗ್ ಇನ್ ಮಾಡಿ ಮತ್ತು ಹೋಮ್ ಸ್ಟ್ರೀನ್‌ನಲ್ಲಿ ಕೆಳಗಿನ ಮೆನು ಬಾರ್‌ನಲ್ಲಿರುವ (Search) ಹುಡುಕಾಟ ಐಕಾನ್ ಮೇಲೆ ಕ್ಲಿಕ್ ಮಾಡಬೇಕು.
ಈಗ ರಾಜ್ಯಗಳು(States) ವಿಭಾಗದ ಅಡಿಯಲ್ಲಿ ಇನ್ನಷ್ಟು ಅನ್ವೇಷಿಸಿ (Explore More ) ಅನ್ನು ಕ್ಲಿಕ್ ಮಾಡಿ, ತದನಂತರ ಮೇಲಿನ ಬಲ ಮೂಲೆಯಲ್ಲಿರುವ (Search) ಹುಡುಕಾಟ ಐಕಾನ್ ಅನ್ನು ಆಯ್ಕೆ ಮಾಡಿ.
ಸರ್ಚ್ ಬಾರ್‌ನಲ್ಲಿ, ರಾಜ್ಯದ ಹೆಸರನ್ನು ನಮೂದಿಸಿ, ತದನಂತರ ಕರ್ನಾಟಕ ರಾಜ್ಯದ ಲೋಗೋ ಮೇಲೆ ಕ್ಲಿಕ್ ಮಾಡಬೇಕು.
ಈಗ, ರೇಷನ್ ಕಾರ್ಡ್ ಡೌನ್‌ಲೋಡ್‌ಗಾಗಿ ಮತ್ತೊಮ್ಮೆ ಮೇಲಿನ ಬಲ ಮೂಲೆಯಲ್ಲಿ ಲಭ್ಯವಿರುವ ಸರ್ಚ್ ಐಕಾನ್ ಮೇಲೆ ಕ್ಲಿಕ್ ಮಾಡಿ, ಸರ್ಚ್ ಬಾರ್‌ನಲ್ಲಿ ರೇಷನ್ ಕಾರ್ಡ್ ration Card ಎಂದು ಟೈಪ್ ಮಾಡಿ ಈಗ ರೇಷನ್ ಕಾರ್ಡ್ ಆಯ್ಕೆ ಕಾಣಿಸಿಕೊಳ್ಳುತ್ತದೆ. ಅದರ ಮೇಲೆ ಕ್ಲಿಕ್ ಮಾಡಬೇಕು.
ಈಗ ನಿಮ್ಮ ಆಧಾರ್ ವಿವರಗಳ ಪ್ರಕಾರ ನಿಮ್ಮ ಹೆಸರನ್ನು ಪ್ರದರ್ಶಿಸಲಾಗುತ್ತದೆ. ನಿಮ್ಮ ರೇಷನ್ ಕಾರ್ಡ್ ಸಂಖ್ಯೆಯನ್ನು ನಮೂದಿಸಿ ಮತ್ತು Get Document ಬಟನ್ ಕ್ಲಿಕ್ ಮಾಡಿಕೊಳ್ಳಬೇಕು.
ಕೆಲವು ಸಮಯಗಳ ಕಾಲ ನಿರೀಕ್ಷಿಸಿ, ನಂತರ ಕೆಳಗಿನ ಮೆನು ಬಾರ್‌ನಲ್ಲಿರುವ ಇಶ್ಯೂಡ್ ಮೆನು ಆಯ್ಕೆಯ ಮೇಲೆ ಕ್ಲಿಕ್ ಮಾಡಬೇಕು. ನಿಮ್ಮ ರೇಷನ್ ಕಾರ್ಡ್ ನೀವು My Issued Documents ಟ್ಯಾಬ್ ಅಡಿಯಲ್ಲಿ ಹುಡುಕಬಹುದು ಮತ್ತು ಡೌನ್‌ಲೋಡ್ ಮಾಡಬಹುದು.
ಬದಲಾವಣೆ ತಂದ ಡಿಜಿಟಲ್ ರೇಷನ್ ಕಾರ್ಡ್ :
ಡಿಜಿಟಲ್ ರೇಷನ್ ಕಾರ್ಡ್ ಪರಿಚಯವು ಜನಸಾಮಾನ್ಯರ ಬದುಕಿನಲ್ಲಿ ದೊಡ್ಡ ಬದಲಾವಣೆಯನ್ನು ತಂದಿದೆ. ಗ್ರಾಮೀಣ ಪ್ರದೇಶದ ಜನರು ಸಹ ಇದರಿಂದ ಪಡಿತರ ವಿತರಣೆಯಲ್ಲಿ ಸುಲಭತೆ ಮತ್ತು ಪಾರದರ್ಶಕತೆಯನ್ನು ಅನುಭವಿಸುತ್ತಿದ್ದಾರೆ. ಡಿಜಿಟಲ್ ಸೌಲಭ್ಯಗಳು ಗ್ರಾಮೀಣ ಪ್ರದೇಶಗಳಲ್ಲಿ(rural areas) ಸಹ ಸಿಗಲು ಅನುಕೂಲಕರ ತಂತ್ರಜ್ಞಾನ ಬಳಕೆ ಅಗತ್ಯವಾಗಿದೆ. ಸರ್ಕಾರದ ಈ ಹೊಸ ತಂತ್ರಜ್ಞಾನವು ಗ್ರಾಮೀಣ ಮತ್ತು ನಗರ ಭಾಗಗಳ ಅಂತರವನ್ನು ಕಡಿಮೆ ಮಾಡುತ್ತದೆ. ಇದು ಡಿಜಿಟಲ್ ಇಂಡಿಯಾ(Digital India) ಅಭಿಯಾನಕ್ಕೆ ನೇರ ಉದಾಹರಣೆಯಾಗಿದ್ದು, ಭವಿಷ್ಯದಲ್ಲಿ ನಮ್ಮ ದೇಶದ ಪಡಿತರ ವ್ಯವಸ್ಥೆಯನ್ನು ಇನ್ನಷ್ಟು ಪಾರದರ್ಶಕ ಮತ್ತು ನವೀನಗೊಳಿಸಲು ಸಹಾಯ ಮಾಡುವ ನಿರೀಕ್ಷೆ ಇದ್ದು, ಸರ್ಕಾರದ ಈ ಹೊಸ ಯೋಜನೆಯ ಯಶಸ್ಸು ಅದನ್ನು ಜನರು ಎಷ್ಟು ಪರಿಣಾಮಕಾರಿಯಾಗಿ ಬಳಸುತ್ತಾರೆ ಎಂಬುದರ ಮೇಲೆ ಅವಲಂಬಿತವಾಗಿರುತ್ತದೆ.
ಈ ಮಾಹಿತಿಗಳನ್ನು ಓದಿ
ದಯವಿಟ್ಟು ಗಮನಿಸಿ: ನೀಡ್ಸ್ ಆಫ್ ಪಬ್ಲಿಕ್ ತನ್ನ ಓದುಗರಿಗೆ ನಿಖರವಾದ ಮತ್ತು ಅಧಿಕೃತ ಮಾಹಿತಿಗಳನ್ನು ಮಾತ್ರ ಪ್ರಕಟಿಸುತ್ತದೆ. ಇಲ್ಲಿ ನಾವು ಯಾವುದೇ ಅನಧಿಕೃತ ಮತ್ತು ಸುಳ್ಳು ಮಾಹಿತಿಯನ್ನು ಬಿತ್ತರಿಸುವುದಿಲ್ಲ.