2025ರ ಕ್ಯಾಲೆಂಡರ್(2025 calendar) ಪ್ರಕಾರ ಹಲವು ಸರ್ಕಾರಿ ರಜೆಗಳು ಭಾನುವಾರದಂದೇ ಇವೆ. ಕ್ಯಾಲೆಂಡರ್ ಬಹಿಷ್ಕರಿಸಿದ ಸರ್ಕಾರಿ ನೌಕರರು?
2025ರ ಸರ್ಕಾರಿ ರಜಾದಿನಗಳ(Government holidays) ಪಟ್ಟಿಯನ್ನು ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಹಂಚಿಕೊಂಡಿದ್ದು, ಈ ಬಾರಿ ಬಹುತೇಕ ಪ್ರಮುಖ ರಜಾದಿನಗಳು ಭಾನುವಾರ ಅಥವಾ ಇತರ ವಾರಾಂತ್ಯಗಳಿಗೆ ಬಿದ್ದಿರುವುದು ಸರ್ಕಾರಿ ನೌಕರರಲ್ಲಿ ಅಸಮಾಧಾನಕ್ಕೆ ಕಾರಣವಾಗಿದೆ. ಈ ತೀರ್ಮಾನದ ವಿರುದ್ಧ ಅವರು ತಮ್ಮ ಬೇಸರವನ್ನು ವ್ಯಕ್ತಪಡಿಸಿದ್ದಾರೆ. ನೌಕರರ ಪ್ರಕಾರ, ಹಬ್ಬದ ರಜಾದಿನಗಳು ಕೆಲಸದ ಒತ್ತಡವನ್ನು ಕಡಿಮೆ ಮಾಡುತ್ತವೆ ಮತ್ತು ಕುಟುಂಬದೊಂದಿಗೆ ಸಮಯ ಕಳೆಯಲು ಅವಕಾಶ ನೀಡುತ್ತವೆ. ಆದರೆ, ಈ ಬಾರಿ ಹೆಚ್ಚಿನ ರಜಾದಿನಗಳು ವಾರಾಂತ್ಯಕ್ಕೆ ಸೇರುವುದರಿಂದ ಅವರು ಈ ಸೌಲಭ್ಯವನ್ನು ಕಳೆದುಕೊಳ್ಳುತ್ತಿರುವಂತೆ ಕಾಣಿಸುತ್ತಿದೆ. 2025 ರ ರಜಾ ದಿನಗಳ ಬೆಗ್ಗೆ ಸಂಪೂರ್ಣ ಮಾಹಿತಿಯನ್ನು ತಿಳಿದುಕೊಳ್ಳೋಣ ಬನ್ನಿ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ
2025ರ ರಜಾಪಟ್ಟಿಯಲ್ಲಿ ಹಲವು ಸರ್ಕಾರಿ ರಜೆಗಳು ಭಾನುವಾರ ಬಂದಿವೆ. ಒಟ್ಟಾರೆಯಾಗಿ ಶನಿವಾರ ಮತ್ತು ಭಾನುವಾರವೇ 7 ಸರ್ಕಾರಿ ರಜೆಗಳು(7 Government Holidays) ಬಂದಿವೆ. ಈ ವಿಚಾರವಾಗಿ ಎಲ್ಲಾ ಸರ್ಕಾರಿ ನೌಕರರು ಬೇಸರ ವ್ಯಕ್ತಪಡಿಸುತ್ತಿದ್ದು, ಶಿಕ್ಷಕರು ಸೇರಿದಂತೆ ಸರ್ಕಾರಿ ನೌಕರರ ಅಸಮಾಧಾನದ ಹೊರಹಾಕುತ್ತಿದ್ದಾರೆ. ಇನ್ನು ಕ್ಯಾಲೆಂಡರ್ ಬಹಿಷ್ಕರಿಸೋಣ(calendar ban) ಎಂಬ ಶೀರ್ಷಿಕೆಯಡಿಯಲ್ಲಿ ಕೆಲವೊಂದು ಪೋಸ್ಟ್‌ಗಳು(posts) ಸಾಮಾಜಿಕ ಜಾಲತಾಣದಲ್ಲಿ(social media) ವೈರಲ್ ಆಗುತ್ತಿವೆ.
ಪ್ರತಿ ವರ್ಷವೂ ಕೇಂದ್ರ ಸರ್ಕಾರ (Central government) ರಜೆಯ ಕ್ಯಾಲೆಂಡರ್ ಬಿಡುಗಡೆ ಮಾಡುತ್ತದೆ. ಈ ಕುರಿತು 2025 ರ ಸಾರ್ವಜನಿಕ ರಜಾದಿನಗಳ ಪಟ್ಟಿಯನ್ನು ಗುರುವಾರ ಪ್ರಕಟ ಮಾಡಿದೆ. ಕೇಂದ್ರ ಸರ್ಕಾರ ಬಿಡುಗಡೆ ಮಾಡಿರುವ ಪಟ್ಟಿ ಪ್ರಕಾರ, 17 ಗೆಜೆಟೆಡ್ ಮತ್ತು 34 ನಿರ್ಬಂಧಿತ ರಜೆಗಳು ಸೇರಿವೆ. ಗೆಜೆಟೆಡ್ ರಜಾ ದಿನಗಳು (Gazetted Holidays) ಎಂದರೆ ಸಾರ್ವಜನಿಕ ರಜಾ ದಿನಗಳು ಅಥವಾ ಸರ್ಕಾರಿ ಕ್ಯಾಲೆಂಡರ್ನಲ್ಲಿನ ಕಡ್ಡಾಯ ರಜಾದಿನಗಳಾಗಿವೆ. ಹಾಗೂ ನಿರ್ಬಂಧಿತ ರಜಾದಿನಗಳೆಂದರೆ ನೌಕರರು ತಮ್ಮ ಆದ್ಯತೆಯ ಪ್ರಕಾರ ಆಯ್ಕೆ ಮಾಡಬಹುದಾದಂತಹ ರಜಾ ದಿನಗಳಾಗಿವೆ. ಸರ್ಕಾರದ ರಜಾ ಕ್ಯಾಲೆಂಡರ್ ಎಲ್ಲಾ ಸರ್ಕಾರಿ ಕಚೇರಿಗಳಿಗೆ ಅನ್ವಯಿಸುತ್ತದೆ.
2025ನೇ ವರ್ಷದ ಕೇಂದ್ರ ಸರ್ಕಾರದ ಸಾರ್ವತ್ರಿಕ ರಜೆ ದಿನಗಳು :
ಜನವರಿ 26 (ಭಾನುವಾರ)ಗಣರಾಜ್ಯೋತ್ಸವ.
ಫೆಬ್ರವರಿ 26 (ಬುಧವಾರ)ಮಹಾ ಶಿವರಾತ್ರಿ .
ಮಾರ್ಚ್ 14 (ಶುಕ್ರವಾರ)ಹೋಳಿ.
ಮಾರ್ಚ್ 31 (ಸೋಮವಾರ)ಈದ್-ಉಲ್-ಫಿತರ್.
ಏಪ್ರಿಲ್ 10 (ಗುರುವಾರ)ಮಹಾವೀರ ಜಯಂತಿ.
ಏಪ್ರಿಲ್ 18 (ಶುಕ್ರವಾರ)ಗುಡ್ ಪ್ರೈಡೆ.
ಮೇ 12 (ಸೋಮವಾರ)ಬುದ್ಧ ಪೂರ್ಣಿಮಾ.
ಜೂನ್ 7 (ಶನಿವಾರ)ಈದ್-ಉಲ್-ಜುಹಾ (ಬಕ್ರೀದ್).
ಜುಲೈ 6 (ಭಾನುವಾರ) ಮೊಹರಂ.
ಆಗಸ್ಟ್ 15 (ಶುಕ್ರವಾರ) ಸ್ವಾತಂತ್ರ್ಯ ದಿನ.
ಆಗಸ್ಟ್ 16 (ಶನಿವಾರ):ಕೃಷ್ಣ ಜನ್ಮಾಷ್ಟಮಿ
ಸೆಪ್ಟೆಂಬರ್ 5 (ಶುಕ್ರವಾರ)ಮಿಲಾದ್-ಉನ್-ನಬಿ (ಈದ್-ಎ-ಮಿಲಾದ್).
ಅಕ್ಟೋಬರ್ 2 (ಗುರುವಾರ)ಮಹಾತ್ಮ ಗಾಂಧಿಯವರ ಜನ್ಮದಿ.
ಅಕ್ಟೋಬರ್ 2 (ಗುರುವಾರ)ದಸರಾ?
ಅಕ್ಟೋಬರ್ 20 (ಸೋಮವಾರ) ದೀಪಾವಳಿ.
ನವೆಂಬರ್ 5 (ಬುಧವಾರ)ಗುರುನಾನಕ್ ಜಯಂತಿ.
ಡಿಸೆಂಬರ್ 25 (ಗುರುವಾರ) ಕ್ರಿಸ್ಮಸ್
2025ನೇ ವರ್ಷದ ಕೇಂದ್ರ ಸರ್ಕಾರದ ಐಚ್ಛಿಕ ರಜಾದಿನಗಳು :
ಜನವರಿ 1 (ಬುಧವಾರ)ಹೊಸ ವರ್ಷದ ದಿನ/ಗುರು ಗೋವಿಂದ್ ಸಿಂಗ್ ಜಯಂತಿ.
ಜನವರಿ 6 (ಸೋಮವಾರ) ಮಕರ ಸಂಕ್ರಾಂತಿ / ಮಾಫ್ ಬಿಹು / ಪೊಂಗಲ್.
ಜನವರಿ 14 (ಮಂಗಳವಾರ)ಮಕರ ಸಂಕ್ರಾಂತಿ/ಪೊಂಗಲ್/ಮಾಘ ಬಿಹು.
ಫೆಬ್ರವರಿ 2 (ಭಾನುವಾರ) ಗುರು ರವಿದಾಸ್ ಜಯಂತಿ.
ಫೆಬ್ರವರಿ 12 (ಬುಧವಾರ) ಶಿವಾಜಿ ಜಯಂತಿ.
ಫೆಬ್ರವರಿ 19 (ಬುಧವಾರ) ಸ್ವಾಮಿ ದಯಾನಂದ ಸರಸ್ವತಿ ಜಯಂತಿ.
ಫೆಬ್ರವರಿ 23 (ಭಾನುವಾರ) ಹೋಳಿ.
ಮಾರ್ಚ್ 13 (ಗುರುವಾರ) ಡೋಲ್ ಯಾತ್ರಾ.
ಮಾರ್ಚ್ 14 (ಶುಕ್ರವಾರ) ರಾಮನವಮಿ.
ಏಪ್ರಿಲ್ 16 (ಭಾನುವಾರ) ಜನ್ಮಾಷ್ಟಮಿ (ಸ್ಮಾರ್ಟ್).
ಆಗಸ್ಟ್ 2 (ಶುಕ್ರವಾರ) ಗಣೇಶ ಚತುರ್ಥಿ ಅಥವಾ ತಿರುಓಣಂ.
ಸೆಪ್ಟೆಂಬರ್ 5 (ಶುಕ್ರವಾರ) ದಸರಾ (ಸಪ್ತಮಿ).
ಸೆಪ್ಟೆಂಬರ್ 29 (ಸೋಮವಾರ) ದಸರಾ (ಮಹಾಷ್ಟಮಿ).
ಸೆಪ್ಟೆಂಬರ್ 30 (ಮಂಗಳವಾರ) ದಸರಾ (ಮಹಾನವಮಿ).
ಅಕ್ಟೋಬರ್ 1 (ಬುಧವಾರ) ಮಹರ್ಷಿ ವಾಲ್ಮೀಕಿ ಜಯಂತಿ.
ಅಕ್ಟೋಬರ್ 7 (ಮಂಗಳವಾರ) ಕರ ಚತುರ್ಥಿ (ಕರ್ವಾ ಚೌತ್).
ಅಕ್ಟೋಬರ್ 10 (ಶುಕ್ರವಾರ) ನರಕ ಚತುರ್ದಶಿ.
ಅಕ್ಟೋಬರ್ 20 (ಸೋಮವಾರ) ಗೋವರ್ಧನ ಪೂಜೆ.
ಅಕ್ಟೋಬರ್ 22 (ಬುಧವಾರ) ಭಾಯಿ ದೂಜ್.
ಅಕ್ಟೋಬರ್ 23 (ಗುರುವಾರ) ಪ್ರತಿಹಾರ್ ಷಷ್ಠಿ ಹಾಗೂ ಸೂರ್ಯ ಷಷ್ಠಿ (ರ್ಛ ಪೂಜಾ) ಬುಧವಾರ.
ಅಕ್ಟೋಬರ್ 28 (ಮಂಗಳವಾರ)ಛತ್ ಪೂಜಾ.
ನವೆಂಬರ್ (ಸೋಮವಾರ)ಗುರು ತೇಜ್ ಬಹದ್ಧೂರ್ ಜಯಂತಿ.
ಡಿಸೆಂಬರ್ 24(ಬುಧವಾರ) ಕ್ರಿಸ್ಮಸ್ ಸಂಜೆ.
ಶನಿವಾರ ಮತ್ತು ಭಾನುವಾರ ಬಂದಿರುವ ರಜಾದಿನಗಳ ಪಟ್ಟಿ ಹೀಗಿದೆ :
ಜನವರಿ 26 (ಭಾನುವಾರ) ಗಣರಾಜ್ಯೋತ್ಸವದ ಅಂಗವಾಗಿ ಸಾರ್ವತ್ರಿಕ ರಜೆ.
ಮಾರ್ಚ್ 30(ಭಾನುವಾರ) ಯುಗಾದಿ ಅಂಗವಾಗಿ ಸಾರ್ವತ್ರಿಕ ರಜೆ.
ಜೂನ್ 07(ಶನಿವಾರ) ಬಕ್ರೀದ್ ಅಂಗವಾಗಿ ಸಾರ್ವತ್ರಿಕ ರಜೆ.
ಜುಲೈ 06 (ಭಾನುವಾರ) ಮೊಹರಂ ಅಂಗವಾಗಿ ಸಾರ್ವತ್ರಿಕ ರಜೆ.
ಸೆಪ್ಟೆಂಬರ್ 21(ಭಾನುವಾರ) ಮಹಾಲಯ ಅಮವಾಸ್ಯೆ ಪ್ರಯುಕ್ತ ಸಾರ್ವತ್ರಿಕ ರಜೆ.
ನವೆಂಬರ್ 1(ಶನಿವಾರ) ಕನ್ನಡ ರಾಜ್ಯೋತ್ಸವದ ಪ್ರಯುಕ್ತ ಸಾರ್ವತ್ರಿಕ ರಜೆ.
ನವೆಂಬರ್ 8 (ಶನಿವಾರ) ಕನಕದಾಸ ಜಯಂತಿ ಪ್ರಯುಕ್ತ ಸಾರ್ವತ್ರಿಕ ರಜೆ.
ಈ ವಿಚಾರವಾಗಿ ಸರ್ಕಾರ ಹೇಗೆ ಪ್ರತಿಕ್ರಿಯೆ ನೀಡಿದೆ :
ಈ ವಿಚಾರವಾಗಿ ಸರ್ಕಾರ ತನ್ನ ನಿಲುವನ್ನು ತೆಗೆದುಕೊಂಡಿದ್ದು, ನಾವು ರಜಾದಿನಗಳ ಆಯ್ಕೆಯಲ್ಲಿ ಎಚ್ಚರಿಕೆ ವಹಿಸಿದ್ದೇವೆ, ಮತ್ತು ಇದು ಬಹುಪಾಲು ರಾಜ್ಯಗಳ ಮತ್ತು ಕೇಂದ್ರದ ಚರ್ಚೆಯ ಆಧಾರಿತ ತೀರ್ಮಾನವಾಗಿದೆ ಎಂದು ಹೇಳಿದೆ. ಆದರೆ, ಈ ದೀರ್ಘಾವಧಿ ಸಮಸ್ಯೆಗೆ ಶಾಶ್ವತ ಪರಿಹಾರವನ್ನು ಪಡೆಯಲು ಮುಂದಿನ ವರ್ಷದಿಂದ ರಜಾದಿನಗಳ ಪರಿಷ್ಕರಣೆ ಮಾಡಲಾಗಬಹುದು ಎಂಬ ಮಾತು ಕೇಳಿಬರುತ್ತಿದೆ.
ಸರ್ಕಾರಿ ನೌಕರರು ಈ ರಚನೆಯನ್ನು “ಅನ್ಯಾಯಕಾರಿ” ಎಂದು ಆರೋಪಿಸುತ್ತಿದ್ದಾರೆ. ಅವರು ತಮ್ಮ ಕುಟುಂಬದೊಂದಿಗೆ ಹಬ್ಬವನ್ನು ಶಾಂತವಾಗಿ ಆಚರಿಸುವ ಹಕ್ಕು ಕಳೆದುಕೊಂಡಿದ್ದಾರೆ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಕೆಲವು ನೌಕರರು ಈ ಬದಲಾವಣೆಯ ವಿರುದ್ಧ ಪ್ರತಿಭಟನೆ ನಡೆಸುವ ಮತ್ತು ಹೊಸ ರಜಾ ದಿನಗಳ ಪರಿಷ್ಕರಣೆಗಾಗಿ ಮನವಿ ಸಲ್ಲಿಸುವ ಯೋಜನೆ ಮಾಡುತ್ತಿದ್ದಾರೆ.
ಈ ಮಾಹಿತಿಗಳನ್ನು ಓದಿ
ದಯವಿಟ್ಟು ಗಮನಿಸಿ: ನೀಡ್ಸ್ ಆಫ್ ಪಬ್ಲಿಕ್ ತನ್ನ ಓದುಗರಿಗೆ ನಿಖರವಾದ ಮತ್ತು ಅಧಿಕೃತ ಮಾಹಿತಿಗಳನ್ನು ಮಾತ್ರ ಪ್ರಕಟಿಸುತ್ತದೆ. ಇಲ್ಲಿ ನಾವು ಯಾವುದೇ ಅನಧಿಕೃತ ಮತ್ತು ಸುಳ್ಳು ಮಾಹಿತಿಯನ್ನು ಬಿತ್ತರಿಸುವುದಿಲ್ಲ.