ಆನ್‌ಲೈನ್ ಮೂಲಕ ಹೊಸ ಪಾಸ್‌ಪೋರ್ಟ್ ಪಡೆಯುವುದು – ಸಂಪೂರ್ಣ ಮಾಹಿತಿ
ಪಾಸ್‌ಪೋರ್ಟ್ (Passport) ನಮ್ಮ ಜೀವನದಲ್ಲಿ ಬಹುಮುಖ್ಯ ದಾಖಲೆಗಳಲ್ಲೊಂದು. ಇದು ಭಾರತದ ವಿದೇಶಾಂಗ ವ್ಯವಹಾರಗಳ ಸಚಿವಾಲಯ (Ministry of External Affairs) ನೀಡುವ ದಾಖಲೆಯಾಗಿದ್ದು, ವಿದೇಶಗಳಿಗೆ ಪ್ರವಾಸ ಮಾಡಲು ಹಾಗೂ ನಮ್ಮ ಗುರುತು ಮತ್ತು ದೇಶೀಯತೆಯನ್ನು ಪ್ರಮಾಣೀಕರಿಸಲು ಬಳಸಲಾಗುತ್ತದೆ. ಪಾಸ್‌ಪೋರ್ಟ್ ನಿಮ್ಮ ಹೆಸರಿನೊಂದಿಗೆ ಹುಟ್ಟಿದ ದಿನಾಂಕ, ಜಾತಿ, ಲಿಂಗ, ಮತ್ತು ಹುಟ್ಟಿದ ಸ್ಥಳ ಸೇರಿದಂತೆ ಮಹತ್ವದ ಮಾಹಿತಿಗಳನ್ನು ಒಳಗೊಂಡಿರುತ್ತದೆ.
ಈ ವರದಿಯಲ್ಲಿ, ಆನ್‌ಲೈನ್(Online) ಮೂಲಕ ಹೊಸ ಪಾಸ್‌ಪೋರ್ಟ್‌ಗೆ ಅರ್ಜಿ ಸಲ್ಲಿಸುವ ಸುಲಭವಾದ ವಿಧಾನ, ಬೇಕಾಗುವ ದಾಖಲೆಗಳು, ಅರ್ಹತೆಗಳು ಹಾಗೂ ಪ್ರಕ್ರಿಯೆಯ ವಿವರಗಳನ್ನು ನೀಡಲಾಗಿದೆ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ
ಪಾಸ್‌ಪೋರ್ಟ್ ಪಡೆಯಲು ಅರ್ಹತೆಗಳು
ಭಾರತದಲ್ಲಿ ಪಾಸ್‌ಪೋರ್ಟ್‌ಗೆ ಅರ್ಜಿ ಸಲ್ಲಿಸಲು ನೀವು ಈ ಕೆಳಗಿನ ಅರ್ಹತಾ ಮಾನದಂಡಗಳನ್ನು ಪೂರೈಸಬೇಕು:
ಭಾರತೀಯ ಪ್ರಜೆ: ಪಾಸ್‌ಪೋರ್ಟ್ ಅರ್ಜಿದಾರನು ಭಾರತೀಯ ಪ್ರಜೆಯಾಗಿರಬೇಕು.
ವಯಸ್ಸು: ಕನಿಷ್ಠ 18 ವರ್ಷ ವಯಸ್ಸು ಹೊಂದಿರುವ ಪ್ರೌಢ ವಯಸ್ಕನಾಗಿರಬೇಕು. ಆದರೆ, 18 ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳಿಗಾಗಿ ಪೋಷಕರ ಅನುಮತಿ ಅಗತ್ಯವಿರುತ್ತದೆ.
ದಾಖಲೆಗಳ ಪ್ರಾಮಾಣಿಕತೆ: ಸಲ್ಲಿಸುವ ಎಲ್ಲಾ ದಾಖಲೆಗಳು ಪ್ರಾಮಾಣಿಕವಾಗಿರಬೇಕು ಮತ್ತು ಅಪ್‌ಡೇಟ್ ಆಗಿರಬೇಕು.
ಪಾಸ್‌ಪೋರ್ಟ್ ಪಡೆಯಲು ಬೇಕಾದ ದಾಖಲೆಗಳು :
ಪಾಸ್‌ಪೋರ್ಟ್ ಪಡೆಯಲು ನೀವು ನಿಮ್ಮ ಗುರುತಿನ ಹಾಗೂ ವಿಳಾಸದ ಪುರಾವೆಗಳೊಂದಿಗೆ ಅರ್ಜಿ ಸಲ್ಲಿಸಬಹುದು. ಈ ದಾಖಲೆಗಳು:
ಗುರುತಿನ ಪುರಾವೆ:
ಆಧಾರ್ ಕಾರ್ಡ್(Aadhar Card)
ಪ್ಯಾನ್ ಕಾರ್ಡ್(PAN card)
ಮತದಾರರ ಗುರುತಿನ ಚೀಟಿ
ಜನನ ಪ್ರಮಾಣಪತ್ರ
ವಿಳಾಸ ಪುರಾವೆ:
ಆಧಾರ್ ಕಾರ್ಡ್
ವಿದ್ಯುತ್ ಬಿಲ್(Electric bill)
ಬ್ಯಾಂಕ್ ಪಾಸ್‌ಬುಕ್
ಗೃಹ ಬಾಡಿಗೆಯ ಒಪ್ಪಂದ ಪತ್ರ
ಪಾಸ್ಪೋರ್ಟ್ ಫಾರ್ಮ್‌ನಲ್ಲಿ ನಮೂದಿಸಿದ ವಿಳಾಸಕ್ಕೆ ಸಂಬಂಧಿಸಿದ ಇತರ ದಾಖಲೆಗಳು
ಫೋಟೋ(Photo):
4.5 cm x 3.5 cm ಗಾತ್ರದ ಬಿಳಿ ಹಿನ್ನೆಲೆ(White background) ಯಲ್ಲಿನ ಕಲರ್ಫುಲ್ ಪಾಸ್‌ಪೋರ್ಟ್ ಫೋಟೋ (ನಿಮ್ಮ ಸದ್ಯದ ದೃಶ್ಯವನ್ನು ಪ್ರತಿಬಿಂಬಿಸಬೇಕು).
ಆನ್‌ಲೈನ್ ಮೂಲಕ ಪಾಸ್‌ಪೋರ್ಟ್‌ಗೆ ಅರ್ಜಿ ಸಲ್ಲಿಸುವುದು :
ಆನ್‌ಲೈನ್ ಮೂಲಕ ಪಾಸ್‌ಪೋರ್ಟ್ ಅರ್ಜಿ ಸಲ್ಲಿಸಲು ನೀವು ಹೀಗೆ ಮುಂದುವರೆಯಬಹುದು:
ನೋಂದಣಿ ಮಾಡಿ:
ಪಾಸ್‌ಪೋರ್ಟ್ ಸೇವಾ ಪೋರ್ಟಲ್ https://www.passportindia.gov.in (Passport Seva Portal) ಗೆ ಭೇಟಿ ನೀಡಿ.
ಹೊಸ ಖಾತೆ ನಿರ್ಮಾಣ ಮಾಡಬೇಕು. ನೋಂದಾಯಿತ ಲಾಗಿನ್ ಐಡಿ ಮತ್ತು ಪಾಸ್ವರ್ಡ್ ಅನ್ನು ಸೃಜಿಸಿ.
ಅರ್ಜಿಯ ನಮೂನೆ ಭರ್ತಿ ಮಾಡಿ:
ಲಾಗಿನ್ ಮಾಡಿದ ನಂತರ “Apply for Fresh Passport” ಅಥವಾ “Re-issue Passport” ಆಯ್ಕೆಯನ್ನು ಆಯ್ಕೆಮಾಡಿ.
ನಮೂನೆಯಲ್ಲಿ ನಿಮ್ಮ ವೈಯಕ್ತಿಕ ಮಾಹಿತಿ, ವಿಳಾಸ, ಮತ್ತು ಇತರ ಅಗತ್ಯ ವಿವರಗಳನ್ನು ತುಂಬಿ.
ಅರ್ಜಿಯನ್ನು ಸಲ್ಲಿಸಿ:
ಭರ್ತಿ ಮಾಡಿದ ನಂತರ, ಫಾರ್ಮ್ ಅನ್ನು ಸಲ್ಲಿಸಿ ಮತ್ತು ಅದಕ್ಕೆ ಸಂಬಂಧಿತ ದಾಖಲಾತಿಗಳನ್ನು ಅಪ್‌ಲೋಡ್ ಮಾಡಿ.
ಅಪಾಯಿಂಟ್‌ಮೆಂಟ್ ನಿಗದಿಪಡಿಸಿ:
“Pay and Schedule Appointment” ಆಯ್ಕೆಯ ಮೂಲಕ PSK ಅಥವಾ POPSK ಕಚೇರಿಗೆ ಭೇಟಿ ಮಾಡಲು ದಿನಾಂಕವನ್ನು ಆರಿಸಿ.
ಅಪಾಯಿಂಟ್‌ಮೆಂಟ್ ನಿಗದಿಪಡಿಸಲು ನೀವು ಡೆಬಿಟ್/ಕ್ರೆಡಿಟ್ ಕಾರ್ಡ್, ಬ್ಯಾಂಕ್ ಚಲನ್ ಅಥವಾ ಇಂಟರ್ನೆಟ್ ಬ್ಯಾಂಕಿಂಗ್ ಮೂಲಕ ಪಾವತಿಸಬಹುದು.
ಅಪಾಯಿಂಟ್‌ಮೆಂಟ್ ರಶೀದಿ ಮುದ್ರಿಸಿ:
ಪಾವತಿಸಿದ ನಂತರ, ಅಪ್ಲಿಕೇಶನ್ ರಶೀದಿಯನ್ನು ARN (Application Reference Number) ಸಹಿತ ಮುದ್ರಿಸಿ.
PSK/POPSK ಗೆ ಭೇಟಿ ನೀಡಿ:
ನಿಗದಿತ ದಿನಾಂಕದಂದು ನಿಮ್ಮ ಮೂಲ ದಾಖಲೆಗಳೊಂದಿಗೆ ನಿಗದಿತ ಪಾಸ್‌ಪೋರ್ಟ್ ಸೇವಾ ಕೇಂದ್ರಕ್ಕೆ ಭೇಟಿ ನೀಡಿ.
ನಿಮ್ಮ ದಾಖಲೆಗಳ ಪರಿಶೀಲನೆ ನಂತರ, ನಿಮ್ಮ ಬಯೋಮೆಟ್ರಿಕ್ ಮಾಹಿತಿಯನ್ನು ಸಂಗ್ರಹಿಸಲಾಗುತ್ತದೆ.
ಪಾಸ್‌ಪೋರ್ಟ್ ಪ್ರಕ್ರಿಯೆ ಸಂಪೂರ್ಣವಾದ ನಂತರ, ನಿಮ್ಮ ಫಾರ್ಮ್ ಪರಿಶೀಲನೆ ಹಾಗೂ ಮನ್ನಣೆಗೊಂಡ ನಂತರ, ಅದು ನೀವು ನೀಡಿದ ವಿಳಾಸಕ್ಕೆ ಹೋಂ ಡೆಲಿವರಿ ಮೂಲಕ ಕಳುಹಿಸಲಾಗುತ್ತದೆ. ಇದರಿಂದ, ಕಚೇರಿಗಳಿಗೆ ಪರದಾಡಬೇಕಾದ ಪರಿಸ್ಥಿತಿ ಇನ್ನು ಮುಂದೆ ಬೇಡ!
ಈ ಮಾಹಿತಿಗಳನ್ನು ಓದಿ
ದಯವಿಟ್ಟು ಗಮನಿಸಿ: ನೀಡ್ಸ್ ಆಫ್ ಪಬ್ಲಿಕ್ ತನ್ನ ಓದುಗರಿಗೆ ನಿಖರವಾದ ಮತ್ತು ಅಧಿಕೃತ ಮಾಹಿತಿಗಳನ್ನು ಮಾತ್ರ ಪ್ರಕಟಿಸುತ್ತದೆ. ಇಲ್ಲಿ ನಾವು ಯಾವುದೇ ಅನಧಿಕೃತ ಮತ್ತು ಸುಳ್ಳು ಮಾಹಿತಿಯನ್ನು ಬಿತ್ತರಿಸುವುದಿಲ್ಲ.