ಶುರುವಾಗಿದೆ ಮೈ ಕೊರೆಯುವ ಚಳಿ! ದಾಖಲೆ ಸೃಷ್ಟಿಸಿದ ಚಳಿ, ಈ ಜಿಲ್ಲೆಯಲ್ಲಿ ಹೆಚ್ಚಿನ ಶೀತ ಗಾಳಿಯಿಂದ ರೆಡ್ ಅಲರ್ಟ್ ಘೋಷಣೆ!!

256 scaled 1

ಶುರುವಾಗಿದೆ ಮೈ ಕೊರೆಯುವ ಚಳಿ..! ಇರಲಿ ಇದರ ಬಗ್ಗೆ ಎಚ್ಚರ! ಇಂತಹ ಚಳಿಗಾಲದಲ್ಲಿ ನಿಮ್ಮನ್ನು ರಕ್ಷಿಸಿಕೊಳ್ಳಲು ಇಲ್ಲಿವೆ ಮುನ್ನೆಚ್ಚರಿಕೆಗಳು..!

ಮಳೆಗಾಲ ಮುಗಿದು ಚಳಿಗಾಲ (winter season) ಶುರುವಾಗಿದೆ. ಪ್ರತಿದಿನ ಬೆಳಿಗ್ಗೆ ಬೇಗನೆ ಎದ್ದು ದಿನನಿತ್ಯದ ಕೆಲಸ ಕಾರ್ಯಗಳನ್ನು ಮಾಡಲು ಬಹಳ ಕಷ್ಟವಾಗುತ್ತದೆ. ಇಂತಹ ಚಳಿಗಾಲದಲ್ಲಿ ಜನರು ಹಲವಾರು ದೇಹದ ಸಮಸ್ಯೆಗಳನ್ನು ಎದುರಿಸುತ್ತಾರೆ. ಕೆಲವೊಬ್ಬರು ಇಂತಹ ಮೈ ಕೊರೆಯುವ ಚಳಿಯಲ್ಲಿಯೂ ಬೆಳಗ್ಗೆ ಬೇಗನೆ ಎದ್ದು ವಾಕಿಂಗ್ (walking) ಮತ್ತು ವಿವಿಧ ಕೆಲಸಗಳಲ್ಲಿ ತೊಡಗಿ ಕೊಳ್ಳುತ್ತಾರೆ. ಇಂತಹ ಚಳಿಯಲ್ಲಿ ನಮ್ಮ ಮೈಯನ್ನು ಬೆಚ್ಚಗೆ ಇಡದಿದ್ದರೆ. ಹಲವಾರು ಸಮಸ್ಯೆಗಳನ್ನು ನಾವು ಎದುರಿಸುತ್ತೇವೆ.

ಇಂತಹ ಮೈ ಕೊರೆಯುವ ಚಳಿಗಾಲದಲ್ಲಿ ನಿಮ್ಮನ್ನು ರಕ್ಷಿಸಿಕೊಳ್ಳಲು ಅಗತ್ಯ ಮುನ್ನೆಚ್ಚರಿಕೆಗಳನ್ನು (precautions) ತೆಗೆದುಕೊಳ್ಳುವುದು ಅನಿವಾರ್ಯವಾಗಿದೆ. ಶೀತ ತಾಪಮಾನಕ್ಕೆ ದೀರ್ಘಕಾಲದವರೆಗೆ ಒಡ್ಡಿಕೊಳ್ಳುವುದರಿಂದ ಲಘೂಷ್ಣತೆ, ಫ್ರಾಸ್ಬೈಟ್ ಮತ್ತು ಉಸಿರಾಟದ ತೊಂದರೆಗಳು ಕಾಣಿಸಿಕೊಳ್ಳುತ್ತವೆ. ಚಳಗಾಲವನ್ನು ಸಂತೋಷದಿಂದ ಕಳೆಯೋಣ ಎಂದುಕೊಂಡರೆ ನೀವು ಕೆಲವು ಸಲಹೆಗಳನ್ನು ಪಾಲಿಸಬೇಕು. ಹಾಗಾದರೆ, ಈ ಸಮಯದಲ್ಲಿ ನಾವು ಹೇಗಿರಬೇಕು? ಯಾವ ರೀತಿಯ ಆಹಾರ ಸೇವಿಸಬೇಕು?  ಎಂಬ ಸಂಪೂರ್ಣ ಮಾಹಿತಿಯನ್ನು ತಿಳಿದುಕೊಳ್ಳೋಣ ಬನ್ನಿ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ

14 ವರ್ಷಗಳ ದಾಖಲೆಯನ್ನು ಮುರಿದು ಹೊಸ ದಾಖಲೆ (new record) ಬರೆದ ಚಳಿ :

ಭಾರತೀಯ ಹವಾಮಾನ ಇಲಾಖೆ (IMD) ಇಂದು ರಾತ್ರಿ ಕನಿಷ್ಠ ತಾಪಮಾನ ಅಂದರೆ 12.4 ° C ತಲುಪಬಹುದು ತಿಳಿದುಬಂದಿದೆ. ಇದು 14 ವರ್ಷಗಳ ದಾಖಲೆಯನ್ನು ಮುರಿಯುತ್ತದೆ. ಡಿಸೆಂಬರ್ 24, 2011 ರಂದು ತಾಪಮಾನ 12.8 ° C ಗೆ ಕುಸಿದಿತ್ತು. ಇದೇ ದಾಖಲೆ ಈಗ ಮರುಕಳಿಸಲಿದೆ. ವಿಶಿಷ್ಟವಾಗಿ, ಬೆಂಗಳೂರಿನ ಡಿಸೆಂಬರ್ ರಾತ್ರಿಗಳು ಸರಾಸರಿ ಕನಿಷ್ಠ 15.7 ° C ಯ ಸುತ್ತ ಸುತ್ತುತ್ತವೆ ಎನ್ನಲಾಗಿದೆ. ಆದರೆ, ಭಾನುವಾರ ನಗರದಲ್ಲಿ ಕನಿಷ್ಠ 15.5 ಡಿಗ್ರಿ ಸೆಲ್ಸಿಯಸ್ ದಾಖಲಾಗಿದೆ. ಎಚ್‌ಎಎಲ್ ವಿಮಾನ ನಿಲ್ದಾಣದ ಪ್ರದೇಶದಲ್ಲಿ 14.7 ಡಿಗ್ರಿ ಸೆಲ್ಸಿಯಸ್ ಇದ್ದರೆ, ಬೆಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ತಾಪಮಾನ 14.5 ಡಿಗ್ರಿ ಸೆಲ್ಸಿಯಸ್‌ಗೆ ಇಳಿದಿದೆ.

ರಾಜ್ಯಾದ್ಯಂತ (state) ಶುರುವಾಗಿದೆ ಮೈ ಕೊರೆಯುವ ಚಳಿ :

ಇಂದು ರಾಜ್ಯದಲ್ಲಿ ಮಳೆಯ ಪ್ರಭಾವ ಕಡಿಮೆಯಾಗಿ ಮೈ ಕೊರೆಯುವ ಚಳಿಯ ವಾತಾವರಣ ಸೃಷ್ಟಿಯಾಗಿದೆ ಹವಾಮಾನ ಇಲಾಖೆಯ ವರದಿಯ (weather telecast report) ಪ್ರಕಾರ ಮುಂದಿನ 24 ಗಂಟೆಗಳಲ್ಲಿ ವಿಜಯಪುರ, ಕಲಬುರಗಿ, ಬೀದರ್ ನಲ್ಲಿ ಚಳಿ ಹೆಚ್ಚಾಗಲಿದ್ದು ರೆಡ್ ಅಲರ್ಟ್  (Red alert) ಘೋಷಿಸಲಾಗಿದೆ. ಅಷ್ಟೇ ಅಲ್ಲದೆ ಯಾದಗಿರಿ, ರಾಯಚೂರು,ಬಾಗಲಕೋಟೆ ಜೆಲ್ಲೆಗೆ ಯೆಲ್ಲೋ ಅಲರ್ಟ್  (yellow alert) ಘೋಷಿಸಲಾಗಿದೆ.

ದಕ್ಷಿಣ ಕರ್ನಾಟಕದ (south Karnataka) ಹಲವು ಭಾಗಗಳಲ್ಲಿ ಡಿಸೆಂಬರ್ 21ರ ನಂತರ ಮಳೆಯಾಗುವ ಸಾಧ್ಯತೆ :

ಚಿಕ್ಕಬಳ್ಳಾಪುರ, ಚಿಕ್ಕಮಗಳೂರು, ಚಿತ್ರದುರ್ಗ, ದಾವಣಗೆರೆ, ಹಾಸನ, ಕೊಡಗು, ಕೋಲಾರ, ಮಂಡ್ಯ, ಮೈಸೂರು, ರಾಮನಗರ, ಶಿವಮೊಗ್ಗ, ತುಮಕೂರು, ವಿಜಯನಗರ, ಉತ್ತರ ಕನ್ನಡ, ದಕ್ಷಿಣ ಕನ್ನಡ, ಉಡುಪಿ ಜಿಲ್ಲೆಗಳಲ್ಲಿ ಡಿಸೆಂಬರ್ 21ರ ಬಳಿಕ ಮಳೆಯಾಗಲಿದೆ.

ಕರ್ನಾಟಕದ ಜಿಲ್ಲೆಗಳಲ್ಲಿ ದಾಖಲಾಗಿರುವ ಉಷ್ಣಾಂಶದ ವಿವರ ಹೀಗಿದೆ  :

ಬೀದರ್, ವಿಜಯಪುರ, ಕಲಬುರಗಿ ಜಿಲ್ಲೆಗಳಲ್ಲಿ ತೀವ್ರ ಶೀತ ಅಲೆ ಇರಲಿದ್ದು, ತಾಪಮಾನವು 6-7 ಡಿಗ್ರಿ ಸೆಲ್ಸಿಯಸ್  ನಷ್ಟು ಕಡಿಮೆಯಾಗುವ ಸಾಧ್ಯತೆ ಇದೆ. ಬೀದರ್ ನಲ್ಲಿ 7.5 ಡಿಗ್ರಿ ಸೆಲ್ಸಿಯಸ್  ಅತ್ಯಂತ ಕನಿಷ್ಠ ಉಷ್ಣಾಂಶ ದಾಖಲಾಗಿದೆ. ಎಚ್ ಎಎಲ್ ನಲ್ಲಿ 26.0 ಡಿಗ್ರಿ ಸೆಲ್ಸಿಯಸ್ ಗರಿಷ್ಠ ಉಷ್ಣಾಂಶ, 14.7 ಡಿಗ್ರಿ ಸೆಲ್ಸಿಯಸ್ ಕನಿಷ್ಠ ಉಷ್ಣಾಂಶ, ನಗರದಲ್ಲಿ 26.6 ಡಿಗ್ರಿ ಸೆಲ್ಸಿಯಸ್ ಗರಿಷ್ಠ ಉಷ್ಣಾಂಶ, 15.5 ಡಿಗ್ರಿ ಸೆಲ್ಸಿಯಸ್ ಕನಿಷ್ಠ ಉಷ್ಣಾಂಶ, ಕೆಐಎಎಲ್ ನಲ್ಲಿ 26.2 ಡಿಗ್ರಿ ಸೆಲ್ಸಿಯಸ್ ಗರಿಷ್ಠ ಉಷ್ಣಾಂಶ, 14.5 ಡಿಗ್ರಿ ಸೆಲ್ಸಿಯಸ್ ಕನಿಷ್ಠ ಉಷ್ಣಾಂಶ, ಜಿಕೆವಿಕೆಯಲ್ಲಿ 28.0 ಡಿಗ್ರಿ ಸೆಲ್ಸಿಯಸ್ ಗರಿಷ್ಠ ಉಷ್ಣಾಂಶ, 18.8 ಡಿಗ್ರಿ ಸೆಲ್ಸಿಯಸ್ ಕನಿಷ್ಠ ಉಷ್ಣಾಂಶ ದಾಖಲಾಗಿದೆ.

ಮೈ ಕೊರೆಯುವ ಚಳಿಗಾಲದಲ್ಲಿ ನಮ್ಮ ಆರೋಗ್ಯದ (health) ಬಗ್ಗೆ ವಹಿಸಬೇಕಾದ ಮುನ್ನೆಚ್ಚರಿಕೆ ಕ್ರಮಗಳ ವಿವರಗಳು ಹೀಗಿದೆ :
ಚಳಿಗಾಲದಲ್ಲಿ ಹೃದಯದ (heart) ಆರೋಗ್ಯದ ಬಗ್ಗೆ ಎಚ್ಚರವಿರಲಿ :

ಹೆಚ್ಚಾಗಿ ಚಳಿಗಾಲದಲ್ಲಿ ಹೃದಯ ಸಂಬಂಧಿತ ಖಾಯಿಲೆಗಳು ಎದುರಾಗುತ್ತವೆ. ಇದಕ್ಕೆಲ್ಲ ಕಾರಣ ಮೈ ಕೊರೆಯುವಂತಹಾ ಚಳಿ. ಹೆಚ್ಚಿನ ಚಳಿ ಸಂದರ್ಭದಲ್ಲಿ ಹೃದಯದ ಅಪಧಮನಿಗಳು ಪೆಡಸಾಗುತ್ತವೆ. ಆಗ ರಕ್ತದೊತ್ತಡ ಮತ್ತು ಪ್ರೊಟೀನ್ (protein) ಪ್ರಮಾಣ ಕಡಿಮೆ ಆಗಲಿದೆ. ಈ ಮೂಲಕ ರಕ್ತ ಹೆಪ್ಪುಗಟ್ಟುತ್ತದೆ. ಅದರಲ್ಲೂ ಅಸ್ತಮಾ ರೋಗಿಗಳು ಈ ಸಮಯದಲ್ಲಿ ಹೆಚ್ಚಿನ ಸಮಸ್ಯೆಗೆ ಒಳಗಾಗುತ್ತಾರೆ. ಪರಿಣಾಮ 60 ವರ್ಷ ಮೇಲ್ಪಟ್ಟವರು ಜೊತೆಗೆ ಆರು ವರ್ಷದ ಒಳಗಿನ ಮಕ್ಕಳು ಈ ಸಮಯದಲ್ಲಿ ಭಾರೀ ಎಚ್ಚರಿಕೆಯಿಂದ ಇರಬೇಕಿದೆ.

ಮೈ ಕೊರೆಯುವ ಚಳಿಗೆ ವಾಕಿಂಗ್ ಹೋಗುವಾಗ ಅಗತ್ಯವಿಲ್ಲ :

ಬೆಳಿಗ್ಗೆ ಬೇಗನೆ ಎದ್ದು ವಾಕಿಂಗ್ ಹೋಗುವ ಅಭ್ಯಾಸವಿದ್ದರೆ ಸ್ವಲ್ಪ ದಿನಗಳವರೆಗೆ ನಿಲ್ಲಿಸಿಬಿಡಿ. ಯಾಕೆಂದರೆ, ಚಳಿಗಾಲದಲ್ಲಿ ಹೃದಯಾಘಾತಗಳು ಹೆಚ್ಚಾಗಿ ಸಂಭವಿಸುತ್ತವೆ. ಬೆಳಗ್ಗೆ ಹಾಗೂ ಸಂಜೆ 6:00 ಮೇಲೆ ವಾಕಿಂಗ್ ಹೋಗುವವರು  ಸ್ವಲ್ಪ ದಿನಗಳ ಮಟ್ಟಿಗೆ ವಾಕಿಂಗ್ ಅನ್ನು ನಿಲ್ಲಿಸಿ ಮನೆಯಲ್ಲಿ ವ್ಯಾಯಾಮ ಮಾಡುವುದು ಉತ್ತಮ. ಮನೆ ಒಳಗಡೆ ಇದ್ದು, ಆದಷ್ಟು ನಿಮ್ಮ ದೇಹವನ್ನು ಬೆಚ್ಚಗೆ ಇಟ್ಟುಕೊಳ್ಳಿ.

ಹೆಚ್ಚಾಗಿ ಮಾಂಸಾಹಾರ (nonveg) ಸೇವನೆ ಬೇಡ :

ಈ ಸಮಯದಲ್ಲಿ ಸಾಮಾನ್ಯವಾಗಿ ಹೊರಗಿನ ತಿನಿಸಿಗೆ ಜನರು ಮಾರು ಹೋಗುತ್ತಾರೆ. ಆದರೆ ಈ ಕೆಲಸ ಮಾಡಬೇಡಿ. ಅದರಲ್ಲೂ ಮಾಂಸಹಾರ ಸೇವನೆ ಹೆಚ್ಚಾಗಿ ಮಾಡಬಾರದು. ಬದಲಾಗಿ ತರಕಾರಿಗಳು, ಹಣ್ಣು, ಕಾಳಿನ ಪದಾರ್ಥ ಸೇವನೆ ಮಾಡಿ.

ಬೆಚ್ಚಗಿನ ಉಡುಗೆ ತೊಟ್ಟು ನಿಮ್ಮ ದೇಹವನ್ನು ರಕ್ಷಿಸಿಕೊಳ್ಳಿ :

ಚಳಿಗಾಲ ಶುರುವಾಗಿದ್ದರಿಂದ ನೀವು ಬೆಚ್ಚಗಿನ ಉಡುಪುಗಳನ್ನು ಖರೀದಿಸಬೇಕಾಗುತ್ತದೆ. ಟೋಪಿ, ಕೈಗವಸುಗಳು ಮತ್ತು ಸ್ಕಾರ್ಫ್ ಸೇರಿದಂತೆ ಉಸಿರಾಡುವ ಬಟ್ಟೆಯ ಲೇಯರ್‌ಗಳನ್ನು ಮುಂತಾದವುಗಳನ್ನು ಧರಿಸಿ. ಅತಿಯಾದ ಚಳಿ ಇದ್ದರೆ ಇದು ಬೆಚ್ಚಗಿನ ಗಾಳಿಯನ್ನು ಹಿಡಿದಿಟ್ಟುಕೊಳ್ಳಲು ಸಹಾಯ ಮಾಡುತ್ತದೆ ಮತ್ತು ನಿಮ್ಮನ್ನು ನಿರೋಧಿಸುತ್ತದೆ. ನಿರ್ಜಲೀಕರಣವನ್ನು ತಪ್ಪಿಸಲು ಸಾಕಷ್ಟು ನೀರು ಕುಡಿಯಿರಿ.

ಚಳಿಯಿಂದ ನಿಮ್ಮ ಚರ್ಮವನ್ನು (Skin) ರಕ್ಷಿಸಿಕೊಳ್ಳಿ :

ಚಳಿಗಾಲದಲ್ಲಿ ಅತಿಯಾಗಿ ನಮ್ಮ  ಮೈಯ ಚರ್ಮವು ಒಡೆಯುತ್ತದೆ. ಚರ್ಮವನ್ನು ರಕ್ಷಿಸಿಕೊಳ್ಳಲು, ಮಾಯಿಶ್ಚರೈಸರ್ ಅನ್ನು ಹಚ್ಚಿಕೊಳ್ಳಿ. ಮತ್ತು ಗಾಳಿಯಿಂದ ರಕ್ಷಿಸಲು ಸನ್‌ಸ್ಕ್ರೀನ್ ಬಳಸಿ. ಮರಗಟ್ಟುವಿಕೆ, ಜುಮ್ಮೆನಿಸುವಿಕೆ ಅಥವಾ ಬಣ್ಣಬಣ್ಣದಂತಹ ಫ್ರಾಸ್‌ಬೈಟ್‌ನ ಚಿಹ್ನೆ ಏನಾದರೂ ಕಂಡರೆ ತಕ್ಷಣವೇ ವೈದ್ಯಕೀಯ ಚಿಕಿತ್ಸೆ ಪಡೆದು ನಿಮ್ಮ  ಚರ್ಮವನ್ನು ರಕ್ಷಿಸಿಕೊಳ್ಳಿ.

ಆದಷ್ಟು ಬೆಚ್ಚಗಿನ ಊಟವನ್ನು ಸೇವಿಸಿ :

ಚಳಿಗಾಲದ ಸಮಯದಲ್ಲಿ ನಾವು ಆದಷ್ಟು ಬೆಚ್ಚಗಿನ ಊಟವನ್ನು ಸೇವಿಸಬೇಕಾಗುತ್ತದೆ. ಅಷ್ಟೇ ಅಲ್ಲದೆ ಹೆಚ್ಚು ಬಿಸಿ ನೀರನ್ನು ಕುಡಿಯಬೇಕಾಗುತ್ತದೆ. ಸೂಪ್‌ಗಳು, ಸ್ಟ್ಯೂಗಳು ಮತ್ತು ಹುರಿದ ತರಕಾರಿಗಳಂತಹ ಆರಾಮದಾಯಕ ಆಹಾರಗಳ ಸೇವನೆ ಉತ್ತಮ. ನಿಮ್ಮ ಶಕ್ತಿಯ ಮಟ್ಟವನ್ನು ಹೆಚ್ಚಿಸಲು ಸೀಡ್ಸ್‌ ಮತ್ತು ಒಣಗಿದ ಹಣ್ಣುಗಳನ್ನು ತಿನ್ನಿರಿ. ಹಾಗೆಯೇ ಒಳಗಿನಿಂದ ನಿಮ್ಮನ್ನು ಬೆಚ್ಚಗಾಗಲು ಬಿಸಿ ಚಾಕೊಲೇಟ್, ಚಹಾ ಅಥವಾ ಕಾಫಿಯನ್ನು ಕುಡಿದು ಚಳಿಗಾಲವನ್ನು ಆನಂದದಿಂದ ಎದುರಿಸಿ.

ಈ ಮೇಲಿನ ಎಲ್ಲ ಮುನ್ನೆಚ್ಚರಿಕೆ ಕ್ರಮಗಳನ್ನು ವಹಿಸುವ ಮೂಲಕ ಶೀತ ವಾತಾವರಣದಲ್ಲಿ ನಿಮ್ಮನ್ನು ಸುರಕ್ಷಿತವಾಗಿ ಮತ್ತು ಆರೋಗ್ಯಕರವಾಗಿ ಇರಿಸಿಕೊಳ್ಳಬಹುದು. ಹೆಚ್ಚಾಗಿ ನೀವು ನಿಮ್ಮ ಆರೋಗ್ಯದ ಯೋಗ ಕ್ಷೇಮದ ಬಗ್ಗೆ ಹೆಚ್ಚು ಗಮನಹರಿಸಬೇಕು. ಆರೋಗ್ಯದಲ್ಲಿ ಏನೇ ಏರುಪೇರು ಕಂಡರೂ ಮೊದಲು ವೈದ್ಯರ ಸಹಾಯವನ್ನು ಪಡೆಯಿರಿ.

ಈ ಮಾಹಿತಿಗಳನ್ನು ಓದಿ

 


ದಯವಿಟ್ಟು ಗಮನಿಸಿ: ನೀಡ್ಸ್ ಆಫ್ ಪಬ್ಲಿಕ್ ತನ್ನ ಓದುಗರಿಗೆ ನಿಖರವಾದ ಮತ್ತು ಅಧಿಕೃತ ಮಾಹಿತಿಗಳನ್ನು ಮಾತ್ರ ಪ್ರಕಟಿಸುತ್ತದೆ. ಇಲ್ಲಿ ನಾವು ಯಾವುದೇ ಅನಧಿಕೃತ ಮತ್ತು ಸುಳ್ಳು ಮಾಹಿತಿಯನ್ನು ಬಿತ್ತರಿಸುವುದಿಲ್ಲ.

WhatsApp Group Join Now
Telegram Group Join Now

Related Posts

Leave a Reply

Your email address will not be published. Required fields are marked *

error: Content is protected !!