LIC ಕಡೆಯಿಂದ ಬಂಪರ್ ಗುಡ್ ನ್ಯೂಸ್! ಮನೆಯಿಂದ ಈ ಕೆಲಸ ಮಾಡಿ, ಪ್ರತಿ ತಿಂಗಳು ₹7000/- ಪಡೆಯಿರಿ

1000344809

ಮನೆಯಲ್ಲಿಯೇ ಕುಳಿತು ಎಲ್‌ಐಸಿ ಭೀಮಾ ಸಖಿ ಯೋಜನೆಯಿಂದ ಪಡೆಯಿರ 7000 ರೂಪಾಯಿ ಸಂಬಳ! ಇದರ ಬಗ್ಗೆ ಸಂಪೂರ್ಣ ಮಾಹಿತಿ ಇಲ್ಲಿದೆ…!

ಲೈಫ್ ಇನ್ಶುರೆನ್ಸ್ ಕಾರ್ಪೊರೇಷನ್ ಆಫ್ ಇಂಡಿಯಾ ( LIC ) ಮುಂಬೈನಲ್ಲಿ ಪ್ರಧಾನ ಕಚೇರಿಯನ್ನು ಹೊಂದಿರುವ ಭಾರತೀಯ ಬಹುರಾಷ್ಟ್ರೀಯ ಸಾರ್ವಜನಿಕ ವಲಯದ ಜೀವ ವಿಮಾ ಕಂಪನಿಯಾಗಿದೆ.
ಅಷ್ಟೇ ಅಲ್ಲದೆ ಇದು ಬೃಹತ್ ಗ್ರಾಹಕರ ನೆಲೆಯನ್ನು ಹೊಂದಿದೆ. LIC ತನ್ನ ಗ್ರಾಹಕರ ವಿವಿಧ ಬೇಡಿಕೆಗಳನ್ನು ಪೂರೈಸುವ ವಿವಿಧ ಶ್ರೇಣಿಯ ವಿಮಾ ಪೋರ್ಟ್‌ಫೋಲಿಯೊಗಳನ್ನು ಒದಗಿಸುತ್ತದ

LIC ಭಾರತದ ಅತ್ಯಂತ ವಿಶ್ವಾಸಾರ್ಹ ಮತ್ತು ದೊಡ್ಡ ಕಂಪನಿಗಳಲ್ಲಿ ಒಂದಾಗಿದ್ದು, ಅನೇಕ ಜನರು ಈ ಸಂಸ್ಥೆಯಲ್ಲಿ ಉದ್ಯೋಗ (Job) ಪಡೆಯಲು ಬಯಸುತ್ತಾರೆ. ಅಂಥವರಿಗಾಗಿ ಕೇಂದ್ರ ಸರ್ಕಾರ ಇದೀಗ ಸಿಹಿಸುದ್ದಿ ನೀಡಿದೆ. ಪ್ರಧಾನಿ ನರೇಂದ್ರ ಮೋದಿ (PM Narendra Modi) ಅವರು ಇತ್ತೀಚೆಗೆ ಎಲ್‌ಐಸಿ ಭೀಮಾ ಸಖಿ ಯೋಜನೆ (LIC Bhima Shakhi Scheme) ಎಂಬ ಹೊಸ ಯೋಜನೆಯನ್ನು ಪ್ರಾರಂಭಿಸಿದ್ದು, ಇದರ ಬಗ್ಗೆ ಸಂಪೂರ್ಣ ಮಾಹಿತಿಯನ್ನು  ತಿಳಿದುಕೊಳ್ಳೋಣ ಬನ್ನಿ.

ಈ ಯೋಜನೆಯಿಂದ ಹಲವಾರು ಜನರಿಗೆ ಉದ್ಯೋಗ ದೊರಕಿದೆ :

ಸರ್ಕಾರ ಜಾರಿಗೆ ತಂದಿರುವ ಈ ಯೋಜನೆಯಿಂದ ಮೊದಲ ವರ್ಷದಲ್ಲಿ ಒಂದು ಲಕ್ಷ ಮಹಿಳೆಯರಿಗೆ ಉದ್ಯೋಗ ದೊರೆಯಲಿದೆ. ಮುಖ್ಯವಾಗಿ ಈ ಕೆಲಸ ಪಡೆಯಲು10ನೇ ತರಗತಿ ಪಾಸ್‌ ಆಗಿರಬೇಕು. ಎಲ್‌ಐಸಿಯಲ್ಲಿ ಭೀಮಾ ಸಖಿಯಾಗಿ ಮೂರು ವರ್ಷಗಳ ತರಬೇತಿ ನೀಡಲಾಗುತ್ತದೆ. ತರಬೇತಿ ಅವಧಿಯಲ್ಲಿ ಪ್ರತಿ ತಿಂಗಳು ಸ್ಟೇಫಂಡ್ (Stayfund) ಕೂಡ ನೀಡಲಾಗುತ್ತದೆ.

ಈ ಕೆಲಸದಲ್ಲಿ ಇರುವ ನಿಯಮಗಳು (Rules) :

ಎಲ್‌ಐಸಿಯಲ್ಲಿ ವಿಮಾ ಸಹಕಿ ಏಜೆಂಟ್‌ಗಳಾಗಿ ತರಬೇತಿ ಪಡೆಯುವವರು ಮನೆ ಹತ್ತಿರವೇ ಇರುತ್ತದೆ.
ಎಲ್‌ಐಸಿ ಪಾಲಿಸಿಗಳನ್ನು ಮಾರಾಟ ಮಾಡಬೇಕಾಗುತ್ತದೆ.
ಯಾವ ಪಾಲಿಸಿಯನ್ನು ಹೇಗೆ, ಯಾರು ತೆಗೆದುಕೊಳ್ಳಲು ಸೂಕ್ತ ಎಂದು ತಿಳಿಯುವುದು, ಪಾಲಿಸಿಗಳ ಬಗ್ಗೆ ವಿವರಿಸಲು ಬೇಕಾದ ಮಾರ್ಗದರ್ಶಿ ಎಲ್ಲವನ್ನೂ ಎಲ್‌ಐಸಿ ಸಂಸ್ಥೆ ತರಬೇತಿ ನೀಡುತ್ತದೆ.
ಇದರಿಂದ ಜನರು ಪಾಲಿಸಿಗಳನ್ನು ತೆಗೆದುಕೊಳ್ಳಲು ಪ್ರೇರೇಪಿಸುವುದು ಸುಲಭವಾಗುತ್ತದೆ.

ಅಷ್ಟೇ ಅಲ್ಲದೆ ಈ ಕೆಲಸದಲ್ಲಿ ಕಮಿಷನ್‌ (Commission) ರೂಪದಲ್ಲಿ ಹಣ ದೊರೆಯುತ್ತದೆ :

ಈ ಕೆಲಸದಲ್ಲಿ ಸ್ಟೈಪೆಂಡ್‌ ಜೊತೆಗೆ, ಪ್ರತಿಯೊಂದು ಪಾಲಿಸಿಗೂ ಆಯ್ಕೆ ಮಾಡಿದ ಪ್ರಕಾರ ಕಮಿಷನ್‌ ದೊರೆಯುತ್ತದೆ. ಈಗಾಗಲೇ ಇಂತಹ ಕೆಲಸಗಳನ್ನು ಪುರುಷರು, ಎಲ್‌ಐಸಿ ಏಜೆಂಟ್‌ (LIC Agent) ಗಳಾಗಿ ಮಾಡುತ್ತಿದ್ದಾರೆ. ಆದರೆ, ಈ ಹೊಸ ಉದ್ಯೋಗದಲ್ಲಿ ತರಬೇತಿ ನೀಡುತ್ತಾ ಕಾರ್ಯನಿರ್ವಹಿಸಲು ಅವಕಾಶ ನೀಡಲಾಗುತ್ತದೆ. ಈ ಕಾರಣದಿಂದ ಮಹಿಳೆಯರು ಹೆಚ್ಚು ಪಾಲಿಸಿಗಳನ್ನು ಮಾರಾಟ ಮಾಡಲು ಸಾಧ್ಯವಾಗುತ್ತದೆ. ಇದರಿಂದ ಉತ್ತಮ ಸಂಭಾವನೆಯನ್ನು ಅತೀ ಸುಲಭವಾಗಿ ಪಡೆಯಬಹುದಾಗಿದೆ.

ತರಬೇತಿಯ ನಂತರ ಏನು ಮಾಡಬೇಕು?

ಮೂರು ವರ್ಷಗಳ ತರಬೇತಿ ಮುಗಿದ ನಂತರ ಎಸ್‌ಎಸ್‌ಎಲ್‌ಸಿ ಪಾಸಾಗಿದೆಯೋ ಇಲ್ಲವೋ ಎಂಬುದನ್ನು ಮತ್ತೊಮ್ಮೆ ಪರಿಶೀಲಿಸಲಾಗುತ್ತದೆ. ಎಲ್‌ಐಸಿ ವಿಮಾ ಏಜೆಂಟ್ ಆಗಿ ನೇಮಕ ಮಾಡಲಾಗುತ್ತೆ. ಡಿಗ್ರಿ (Degree) ಮುಗಿಸಿದ್ದರೆ ಅಂತಹ ಮಹಿಳೆಯರಿಗೆ ಎಲ್‌ಐಸಿ ಡೆವಲಪ್‌ಮೆಂಟ್ ಆಫೀಸರ್ (LIC Development Officer) ಆಗಿ ಬಡ್ತಿ ನೀಡಲಾಗುತ್ತದೆ. ಹಾಗಾಗಿ ಮಹಿಳೆಯರಿಗೆ ಈ ಯೋಜನೆಯು ಒಂದು ಉತ್ತಮ ಅವಕಾಶವಾಗುತ್ತದೆ.

ಈ ಉದ್ಯೋಗವನ್ನು ಪಡೆಯಲು ಇರಬೇಕಾದ ಅರ್ಹತೆಗಳು (Qualifications) :

ಈ ಉದ್ಯೋಗಗಳು ಮಹಿಳೆಯರಿಗೆ ಮಾತ್ರ.
10ನೇ ತರಗತಿ ಉತ್ತೀರ್ಣರಾಗಿರಬೇಕು.
ವಯಸ್ಸು 18 ರಿಂದ 70 ವರ್ಷಗಳ ನಡುವೆ ಇರಬಹುದು.

ಈ ಉದ್ಯೋಗದಲ್ಲಿ ದೊರೆಯುವ ಸಂಬಳದ ಲೆಕ್ಕಾಚಾರಗಳ ವಿವರ ಹೀಗಿದೆ :

ಸಂಬಳವನ್ನು ನೇರವಾಗಿ ಬ್ಯಾಂಕ್ ಖಾತೆಗೆ (Bank Account) ಜಮಾ ಮಾಡಲಾಗುತ್ತದೆ.

1ನೇ ವರ್ಷ: ತಿಂಗಳಿಗೆ ರೂ.7,000 ಸ್ಟೈಫಂಡ್ ನೀಡಲಾಗುವುದು.
2ನೇ ವರ್ಷ: ತಿಂಗಳಿಗೆ ರೂ.6,000 ಸ್ಟೈಫಂಡ್ ನೀಡಲಾಗುವುದು.
3ನೇ ವರ್ಷ: ತಿಂಗಳಿಗೆ ರೂ.5,000 ಸ್ಟೈಫಂಡ್ ನೀಡಲಾಗುವುದು.
ಈ ಆದಾಯವನ್ನು ಹೆಚ್ಚಿಸಲು ಪ್ರತಿ ಪಾಲಿಸಿಗೆ ಕಮಿಷನ್ ಬರುತ್ತದೆ. ಪಾಲಿಸಿಗಳು ಹೆಚ್ಚಾದಂತೆ, ನೀವು ಆಯೋಗಗಳ ರೂಪದಲ್ಲಿ ಹೆಚ್ಚು ಗಳಿಸಬಹುದು.

ಅರ್ಜಿ ಸಲ್ಲಿಸುವುದು ಹೇಗೆ (How apply application) ?

ಮೊದಲು ಈ ಲಿಂಕ್‌ಗೆ ಹೋಗಿ (https://agencycareer.licindia.in/agt_req/New_Lead_Sakhi_Candidate_Data_entry_For_NewWeb.php). ಇದರಲ್ಲಿ ನಿಮ್ಮ ಹೆಸರು, ಮೊಬೈಲ್ ಸಂಖ್ಯೆ, ಇಮೇಲ್ ಐಡಿ, ವಿಳಾಸ, ಪಿನ್ ಕೋಡ್ ಮುಂತಾದ ವಿವರಗಳನ್ನು ನೀಡಬೇಕು. ಕ್ಯಾಪ್ಚಾ ಕೋಡ್ ಅನ್ನು ನಮೂದಿಸಿ ಮತ್ತು ಸಲ್ಲಿಸು ಕ್ಲಿಕ್ ಮಾಡಿ. ಅಲ್ಲದೆ, ಯಾವುದೇ ದಾಖಲೆಗಳು ಅಗತ್ಯವಿದ್ದರೆ, ಅವುಗಳನ್ನು ಅಪ್ಲೋಡ್ ಮಾಡಬೇಕು.

ಈ ಕೆಲಸದ ಕಂಡೀಷನ್ಸ್‌ (Conditions) ಹೀಗಿವೆ!

ಈಗಾಗಲೇ ಎಲ್‌ಐಸಿಯಲ್ಲಿ ಏಜೆಂಟ್‌ಗಳಾಗಿ ಕೆಲಸ ಮಾಡುತ್ತಿರುವ ಅವರ ಕುಟುಂಬದ ಸದಸ್ಯರು ಈ ಕೆಲಸಕ್ಕೆ ಅರ್ಜಿ ಸಲ್ಲಿಸಲು ಅರ್ಹರಲ್ಲ.

ಈ ಮಾಹಿತಿಗಳನ್ನು ಓದಿ

 


ದಯವಿಟ್ಟು ಗಮನಿಸಿ: ನೀಡ್ಸ್ ಆಫ್ ಪಬ್ಲಿಕ್ ತನ್ನ ಓದುಗರಿಗೆ ನಿಖರವಾದ ಮತ್ತು ಅಧಿಕೃತ ಮಾಹಿತಿಗಳನ್ನು ಮಾತ್ರ ಪ್ರಕಟಿಸುತ್ತದೆ. ಇಲ್ಲಿ ನಾವು ಯಾವುದೇ ಅನಧಿಕೃತ ಮತ್ತು ಸುಳ್ಳು ಮಾಹಿತಿಯನ್ನು ಬಿತ್ತರಿಸುವುದಿಲ್ಲ.

WhatsApp Group Join Now
Telegram Group Join Now

Related Posts

Leave a Reply

Your email address will not be published. Required fields are marked *

error: Content is protected !!