ಆರ್‌ಬಿಐ(RBI) ಹೊಸ ನಿಯಮಗಳು:
ಪರ್ಸನಲ್ ಲೋನ್(Personal Loan) ಪಡೆಯಲು ಈಗ ಇನ್ನೊಂದು ಬದಲಾವಣೆ? ಆರ್‌ಬಿಐ ಹೊಸ ಗೈಡ್‌ಲೈನ್ಸ್ ಗೊತ್ತಾ?:
ಇತ್ತೀಚಿನ ವರ್ಷಗಳಲ್ಲಿ ಸಾಲ ಪಡೆಯುವವರ ಸಂಖ್ಯೆಯಲ್ಲಿ ಗಣನೀಯವಾದ ವೃದ್ಧಿ ಕಂಡುಬಂದಿದ್ದು, ಅದರಲ್ಲಿ ಪರ್ಸನಲ್ ಲೋನ್‌ಗಳು ಪ್ರಮುಖ ಪಾತ್ರ ವಹಿಸುತ್ತಿವೆ. ಬ್ಯಾಂಕ್‌ಗಳು ಮತ್ತು ಹಣಕಾಸು ಸಂಸ್ಥೆಗಳು ಗ್ರಾಹಕರಿಗೆ ವಿವಿಧ ರೀತಿಯ ಸಾಲವನ್ನು ನೀಡುತ್ತಿದ್ದು, ಆಕಸ್ಮಿಕ ಚಟುವಟಿಕೆಗಳಾದ ದೀರ್ಘಾವಧಿ ಚಿಕಿತ್ಸೆಯ ವೆಚ್ಚ, ಮದುವೆ ಖರ್ಚು, ಶೈಕ್ಷಣಿಕ ಉದ್ದೇಶಗಳು ಅಥವಾ ಯಾವುದೇ ತುರ್ತು ಸಂದರ್ಭಗಳಿಗೆ(emergency situation) ಪರ್ಸನಲ್ ಲೋನ್‌ಗಳನ್ನು ಪಡೆಯಲು ಮುಂದಾಗುತ್ತಾರೆ.
ಆದರೆ, ಪರ್ಸನಲ್ ಲೋನ್ ಪಡೆಯುವ ಮೊದಲು, ಗ್ರಾಹಕರು ತಮ್ಮ ಮರುಪಾವತಿ ಸಾಮರ್ಥ್ಯ, ಬಡ್ಡಿ ದರಗಳು(Interest rate), ಶುಲ್ಕ ಮತ್ತು ಷರತ್ತುಗಳನ್ನು ಸಂಪೂರ್ಣವಾಗಿ ಪರಿಶೀಲಿಸುವುದು ಮುಖ್ಯ. ಮುಂದಾಲೋಚನೆ ಇಲ್ಲದೆ ಲೋನ್ ಪಡೆಯಲು ಪ್ರಯತ್ನಿಸುವವರು ಮುಂದೆ ದಿವಾಳಿಯಾಗುವ ಸಂಭವವಿದೆ. ಈ ಹಿಂದಿನ ಅನುಭವಗಳಿಂದ ಪಾಠ ಕಲಿತ ಭಾರತೀಯ ರಿಸರ್ವ್ ಬ್ಯಾಂಕ್ (RBI), ಪರ್ಸನಲ್ ಲೋನ್ ಸಂಬಂಧಿಸಿದಂತೆ ಹೊಸ ಕಠಿಣ ನಿಯಮಗಳನ್ನು ಜಾರಿಗೊಳಿಸಿದೆ. ಯಾವೆಲ್ಲಾ ನಿಯಮಗಳನ್ನು ಜಾರಿಗೊಳಿಸಿದೆ ಎಂಬ ಸಂಪೂರ್ಣ ಮಾಹಿತಿಯನ್ನು ತಿಳಿದುಕೊಳ್ಳೋಣ ಬನ್ನಿ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ
RBI ನಿಂದ ಹೊಸ ನಿಯಮಗಳು: ಮುಖ್ಯ ಬದಲಾವಣೆಗಳು ಹೀಗೆವೆ :
ಸಾಲದ ಮಾಹಿತಿಯ ತ್ವರಿತ ನವೀಕರಣ:
ಹೊಸ ನಿಯಮಗಳ ಪ್ರಕಾರ, ಸಾಲ ನೀಡುವ ಬ್ಯಾಂಕ್‌ಗಳು(Bank) ಅಥವಾ ಹಣಕಾಸು ಸಂಸ್ಥೆಗಳು, ಸಾಲ ಪಡೆದ ವ್ಯಕ್ತಿಯ ಮಾಹಿತಿಗಳನ್ನು (ಉದಾ: ಸಾಲದ ಮೊತ್ತ, ಸಿಬಿಲ್ ಸ್ಕೋರ್) 15 ದಿನಗಳ ಒಳಗೆ(Within 15 days) ನವೀಕರಿಸಲು ಬದ್ಧವಾಗಿದ್ದು, ಹಿಂದಿನ ನಿಯಮದಂತೆ ಈ ಸಮಯ 30 ದಿನಗಳವರೆಗೆ ವಿಸ್ತರಿಸಲಾಗಿತ್ತು, ಆದರೆ ಇದೀಗ ಅದನ್ನು 15 ದಿನಗಳಿಗೆ ಮೀಸಲಿಡಲಾಗಿದೆ.
ಈ ಬದಲಾವಣೆ ಮೂಲಕ, ಒಬ್ಬ ವ್ಯಕ್ತಿ ಒಂದೇ ಸಮಯದಲ್ಲಿ ವಿಭಿನ್ನ ಬ್ಯಾಂಕ್‌ಗಳಲ್ಲಿ ಪರ್ಸನಲ್ ಲೋನ್ ಪಡೆಯಲು ಸಾಧ್ಯವಾಗದಂತೆ ತಡೆಯಲಾಗುತ್ತದೆ. ಹಿಂದಿನ ಪರಿಸ್ಥಿತಿಯಲ್ಲಿ, ಸಾಲ ಪಡೆದ 40 ದಿನಗಳ ಬಳಿಕವೇ ಈ ಮಾಹಿತಿ ಇನ್ನೊಂದು ಬ್ಯಾಂಕ್‌ಗೆ ಲಭ್ಯವಾಗುತ್ತಿತ್ತು. ಇದು ಆರ್ಥಿಕ ಶಿಸ್ತು ಮತ್ತು ಪಾರದರ್ಶಕತೆಯನ್ನು ಹೆಚ್ಚಿಸಲು ಸಹಾಯಕವಾಗುತ್ತದೆ.
ಏಕಕಾಲದಲ್ಲಿ ಒಂದಿಗಿಂತ ಹೆಚ್ಚು ಪರ್ಸನಲ್ ಲೋನ್ ನಿರಾಕರಣೆ:
ಈಗ, ಒಂದು ಪರ್ಸನಲ್ ಲೋನ್ ಎಕ್ಸಿಸ್ಟಿಂಗ್(Personal Loan Existing) ಇದ್ದರೆ ಮತ್ತೊಂದು ಬ್ಯಾಂಕ್‌ನಲ್ಲಿ ಅದೇ ವ್ಯಕ್ತಿಗೆ ಮತ್ತೊಂದು ಪರ್ಸನಲ್ ಲೋನ್ ನೀಡಲು ಅವಕಾಶವಿಲ್ಲ. ಆರ್‌ಬಿಐನ ಈ ಕ್ರಮವು ದಿವಾಳಿ ಮತ್ತು ಸಾಲದ ದುರುಪಯೋಗವನ್ನು ತಡೆಯುವ ಉದ್ದೇಶದಿಂದ ಜಾರಿಗೊಂಡಿದೆ.
ಇತರ ಸಾಲಗಳ ಮೇಲೆ ಪರಿಣಾಮ:
ಪರ್ಸನಲ್ ಲೋನ್ ಪಡೆದಿರುವ ವ್ಯಕ್ತಿ ಇನ್ನೂ ಇತರ ಸಾಲ (ಉದಾ: ಮನೆ ಸಾಲ, ವಾಹನ ಸಾಲ) ಪಡೆಯಲು ಅವಕಾಶವಿದೆ. ಆದರೆ ಇದಕ್ಕೆ ನಿರ್ಧಿಷ್ಟವಾದ ಷರತ್ತುಗಳು ಹೊಂದಿವೆ. ಬ್ಯಾಂಕ್‌ಗಳು ಗ್ರಾಹಕರ ಆದಾಯ, ಇತರ ಸಾಲಗಳ ಮರುಪಾವತಿ ಸಾಮರ್ಥ್ಯ ಮತ್ತು ಇಎಂಐ(EMI) ಸಂಬಂಧಿತ ನಿಯಮಾವಳಿಗಳನ್ನು ನೋಡಿಕೊಂಡು ಸಾಲ ವಿತರಣೆ ಮಾಡಬೇಕಾಗುತ್ತದೆ.
ಆರ್‌ಬಿಐ ತನ್ನ ನಿಯಮಗಳನ್ನು ಪರಿಷ್ಕರಿಸಲು ಕಾರಣವೇನು?:
ಸಾಲದ ನಿಯಮದಲ್ಲಿ ಸಣ್ಣ ಲೋಪಗಳನ್ನು ಬಳಸಿಕೊಂಡು ಕೆಲವುವರು ಒಂದೇ ಸಮಯದಲ್ಲಿ ವಿವಿಧ ಬ್ಯಾಂಕ್‌ಗಳಿಂದ ಹೆಚ್ಚು ಮೊತ್ತದ ಸಾಲಗಳನ್ನು ಪಡೆದು ದಿವಾಳಿಯಾಗುವ ಅಥವಾ ಮರುಪಾವತಿ ಮಾಡಲು ವಿಫಲವಾಗುವ ಘಟನೆಗಳು ಹೆಚ್ಚಳವಾಗಿದ್ದವು. ಈ ದುರುಪಯೋಗವನ್ನು ತಡೆಯುವ ಉದ್ದೇಶದಿಂದ ಆರ್‌ಬಿಐ ತನ್ನ ನಿಯಮಗಳನ್ನು ಪರಿಷ್ಕರಿಸಿದೆ.
ಸಾಲಗಾರರಿಗೆ ಮಹತ್ವದ ಸಲಹೆ:
ಪರ್ಸನಲ್ ಲೋನ್ ತೆಗೆದುಕೊಳ್ಳುವ ಮೊದಲು ನಿಮ್ಮ ಮರುಪಾವತಿ ಸಾಮರ್ಥ್ಯವನ್ನು ಸಂಪೂರ್ಣವಾಗಿ ಪರಿಶೀಲಿಸಿ.
ಅನಗತ್ಯ ಸಾಲಗಳಿಂದ ದೂರವಿರಿ.
ನಿಮ್ಮ ಸಿಬಿಲ್ ಸ್ಕೋರ್(Sybil Score) ಅನ್ನು ಉತ್ತಮವಾಗಿ ನಿರ್ವಹಿಸಿ, ಏಕೆಂದರೆ ಇದನ್ನು ಸಾಲ ಮಂಜೂರಾತಿಯ ಪ್ರಮುಖ ಅಂಶವಾಗಿ ಪರಿಗಣಿಸಲಾಗುತ್ತದೆ.
RBI ಯ ನಿಯಮಗಳಿಗೆ ಅನುಗುಣವಾಗಿ ನಡವಳಿಕೆ ರೂಢಿಸಿಕೊಳ್ಳುವುದು ಆರ್ಥಿಕ ಶಿಸ್ತು ಮತ್ತು ಯಶಸ್ಸಿಗೆ ದಾರಿ ಮಾಡಿಸುತ್ತದೆ.
ಈ ಹೊಸ ನಿಯಮಗಳು, ಭಾರತದ ಆರ್ಥಿಕ ವ್ಯವಸ್ಥೆಗೆ ಶಿಸ್ತು ಮತ್ತು ದಿಟ್ಟತೆಯನ್ನು ತಂದುಕೊಡುವಲ್ಲಿ ದೊಡ್ಡ ಪಾತ್ರವನ್ನು ವಹಿಸಲಿವೆ.
ಈ ಮಾಹಿತಿಗಳನ್ನು ಓದಿ
ದಯವಿಟ್ಟು ಗಮನಿಸಿ: ನೀಡ್ಸ್ ಆಫ್ ಪಬ್ಲಿಕ್ ತನ್ನ ಓದುಗರಿಗೆ ನಿಖರವಾದ ಮತ್ತು ಅಧಿಕೃತ ಮಾಹಿತಿಗಳನ್ನು ಮಾತ್ರ ಪ್ರಕಟಿಸುತ್ತದೆ. ಇಲ್ಲಿ ನಾವು ಯಾವುದೇ ಅನಧಿಕೃತ ಮತ್ತು ಸುಳ್ಳು ಮಾಹಿತಿಯನ್ನು ಬಿತ್ತರಿಸುವುದಿಲ್ಲ.