ಪ್ರತಿ ದಿನ ಈ ಅಭ್ಯಾಸ ಮಾಡಿಕೊಳ್ಳಿ,  ಹಾರ್ಟ್ ಅಟ್ಯಾಕ್ ಭಯವೇ ಇರಲ್ಲ..ಇಲ್ಲಿದೆ ಮಾಹಿತಿ

IMG 20250115 WA0002

ಹೃದಯ ಕಾಯಿಲೆಗಳಿಂದ(heart diseases) ಸುರಕ್ಷಿತರಾಗಲು ಅನುಸರಿಸಬೇಕಾದ ಆರೋಗ್ಯಕರ ಜೀವನಶೈಲಿ ಹವ್ಯಾಸಗಳು ಹೀಗಿವೆ :

ನಮ್ಮ ದಿನನಿತ್ಯದ ಜೀವನಶೈಲಿಯಲ್ಲಿ ಮಾಡುವ ಕೆಲವು ಸಾಮಾನ್ಯ ತಪ್ಪುಗಳು, ಹೃದಯ ಸಂಬಂಧಿ ಕಾಯಿಲೆಗಳ ಅಪಾಯವನ್ನು ಹೆಚ್ಚಿಸುತ್ತವೆ ಎಂಬುದು ನಮ್ಮಿಗೆ ತಿಳಿಯದು. ಊಟದ ಪದ್ದತಿ, ದೈಹಿಕ ಚಟುವಟಿಕೆ, ಮದ್ಯಪಾನ, ಧೂಮಪಾನ ಮತ್ತು ನಿದ್ದೆಯ ಅವ್ಯವಸ್ಥೆ ಹೃದಯದ ಮೇಲೆ ನೇರ ಪರಿಣಾಮ ಬೀರುತ್ತವೆ. ಪ್ರಪಂಚದಲ್ಲಿ ಪ್ರತಿವರ್ಷ ಲಕ್ಷಾಂತರ ಜನರು ಹೃದಯಾಘಾತದಿಂದ(heart attack) ಸಾವನ್ನಪ್ಪುತ್ತಿದ್ದಾರೆ. ತಜ್ಞರ ಪ್ರಕಾರ, ಆರೋಗ್ಯಕರ ಜೀವನಶೈಲಿಯನ್ನು ಪಾಲಿಸಿದರೆ ಈ ಅಪಾಯವನ್ನು ಶೇಕಡಾ 50ರಷ್ಟು ಕಡಿಮೆ ಮಾಡಬಹುದು. ಆರೋಗ್ಯಕರ ಜೀವನಶೈಲಿಯನ್ನು  ಪಾಲಿಸುವುದು ಹೇಗೆ ಎಂಬ ಸಂಪೂರ್ಣ ಮಾಹಿತಿಯನ್ನು ತಿಳಿದುಕೊಳ್ಳೋಣ ಬನ್ನಿ. ಇದೇ ರೀತಿಯ ಎಲ್ಲಾ ಸರ್ಕಾರಿ ಸೌಲಭ್ಯಗಳ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲುಇಲ್ಲಿ ಕ್ಲಿಕ್ ಮಾಡಿ

ಹೃದಯವನ್ನು ಆರೋಗ್ಯಕರವಾಗಿರಿಸಿಕೊಳ್ಳಲು ನಿರ್ದಿಷ್ಟವಾದ ಕೆಲವು ಪದ್ದತಿಗಳನ್ನು ಪಾಲಿಸಬೇಕು. ಹೃದಯಾಘಾತದ ಅಪಾಯವನ್ನು ಕಡಿಮೆ ಮಾಡುವ ಅತ್ಯಾವಶ್ಯಕ ನಾಲ್ಕು ಆರೋಗ್ಯಕರ ಅಭ್ಯಾಸಗಳನ್ನು ಈ ಕೆಳಗ ವಿವರಿಸಲಾಗಿದೆ.

Healthy Heart Habits to Follow Dr Sanjay Kumar
ಪ್ರತಿದಿನ 40 ನಿಮಿಷ ವ್ಯಾಯಾಮ(exercise):

ಪ್ರಸ್ತುತ ಜೀವನಶೈಲಿಯಲ್ಲಿ ಉತ್ತಮ ಆರೋಗ್ಯ ಕಾಯ್ದುಕೊಳ್ಳಲು ಪ್ರತಿದಿನ 40 ನಿಮಿಷ ವ್ಯಾಯಾಮ ಅತ್ಯವಶ್ಯಕವಾಗಿದೆ. ವಾರಕ್ಕೆ 5 ದಿನ(5 days a week) ಈ ಚಟುವಟಿಕೆಯನ್ನು ನಡೆಸುವುದರಿಂದ ಹೃದಯ ಸಂಬಂಧಿತ ಕಾಯಿಲೆಗಳ ಅಪಾಯ ಶೇಕಡಾ 30(30%) ರಷ್ಟು ಕಡಿಮೆಯಾಗುತ್ತದೆ. ಇದು ತೂಕ ನಿಯಂತ್ರಣ, ರಕ್ತದ ಸಕ್ಕರೆ ಮಟ್ಟ, ರಕ್ತದೊತ್ತಡ, ಮತ್ತು ಕೊಲೆಸ್ಟ್ರಾಲ್ ಮಟ್ಟವನ್ನು ಸುಧಾರಿಸಲು ಸಹಾಯಕವಾಗುತ್ತದೆ. ನಿಯಮಿತ ವ್ಯಾಯಾಮ ಶಾರೀರಿಕ ಹಾಗೂ ಮಾನಸಿಕ ಆರೋಗ್ಯವನ್ನು ವೃದ್ಧಿಸಲಿದೆ. ಈ ಚಟುವಟಿಕೆ ದೀರ್ಘಕಾಲದ ಆರೋಗ್ಯ ಸಮಸ್ಯೆಗಳನ್ನು ತಡೆಹಿಡಿಯಲು ಸಹಾಯ ಮಾಡುತ್ತದೆ. ಸುಸ್ತು ಕಡಿಮೆ, ಚುರುಕುತನ ಹೆಚ್ಚಿಸುವ ಈ ಪದ್ಧತಿ ದೈನಂದಿನ ಜೀವನವನ್ನು ಉತ್ತಮಗೊಳಿಸುತ್ತದೆ.

ಧನಾತ್ಮಕ ಮನೋಭಾವ ಮತ್ತು ಸಂತೋಷ

ಸದಾ ಸಂತೋಷದಿಂದಿರುವುದು ದೈಹಿಕ ಮತ್ತು ಮಾನಸಿಕ ಆರೋಗ್ಯಕ್ಕಾಗಿ ಬಹಳ ಮುಖ್ಯ. ಸಂತೋಷದಿಂದಿದ್ದಾಗ ದೇಹದಲ್ಲಿ ಎಂಡಾರ್ಫಿನ್ ಹಾರ್ಮೋನ್‌ಗಳ(endorphin hormones) ಉತ್ಪತ್ತಿ ಹೆಚ್ಚಾಗುತ್ತದೆ, ಇದು ರಕ್ತದೊತ್ತಡವನ್ನು ಕಡಿಮೆ ಮಾಡುವುದು ಮತ್ತು ರಕ್ತ ಪರಿಚಲನೆ ಸುಧಾರಿಸಲು ಸಹಾಯ ಮಾಡುತ್ತದೆ. ಯೋಗ ಮತ್ತು ಧ್ಯಾನ ಮಾಡುವುದು ಸಂತೋಷವನ್ನು ಅನುಭವಿಸಲು ಪರಿಣಾಮಕಾರಿಯಾಗಿದೆ. ಈ ರೀತಿಯ ಕ್ರಮಗಳು ಮನಸ್ಸನ್ನು ಶಾಂತಗೊಳಿಸುವುದಲ್ಲದೆ  ಬೇರೆಯವರಿಗೂ ಹಿತಕರ ವಾತಾವರಣವನ್ನು ಸೃಷ್ಟಿಸಿ  ಕೊಡುತ್ತವೆ. ಉತ್ತಮ ಸಂಬಂಧಗಳು, ಧನಾತ್ಮಕ ಚಿಂತನೆ ಮತ್ತು ಆರೋಗ್ಯಕರ ಜೀವನಶೈಲಿಯು ಸಂತೋಷವನ್ನು ಹೆಚ್ಚಿಸುತ್ತದೆ. ಸದಾ ಸಂತೋಷದಿಂದ ಇರುವುದರಿಂದ ದೀರ್ಘಕಾಲದ ಆರೋಗ್ಯ ಸಮಸ್ಯೆಗಳನ್ನು ತಡೆಗಟ್ಟಲು ಮತ್ತು ಉತ್ತಮ ಜೀವನಮಟ್ಟವನ್ನು ಸಾಧಿಸಲು ಸಾಧ್ಯ.

ದೈಹಿಕ ಮತ್ತು ಮಾನಸಿಕ ಆರೋಗ್ಯಕ್ಕೆ ನಿದ್ದೆ ಬಹಳ ಮುಖ್ಯ :

ಸರಿಯಾದ ಪ್ರಮಾಣದಲ್ಲಿ ನಿದ್ರೆ(sleep) ಮಾಡುವುದು ದೈಹಿಕ ಮತ್ತು ಮಾನಸಿಕ ಆರೋಗ್ಯಕ್ಕೆ ಅತ್ಯಂತ ಅಗತ್ಯ. ಪ್ರತಿ ರಾತ್ರಿ 7 ರಿಂದ 8 ಗಂಟೆಗಳ ನಿದ್ದೆ ಮಾಡುವುದರಿಂದ ದೇಹದ ಪುನಶ್ಚೇತನ ಪ್ರಕ್ರಿಯೆ ಸುಗಮವಾಗುತ್ತದೆ. ಇದು ಹೃದಯ ಸಂಬಂಧಿ ಕಾಯಿಲೆಗಳ ಅಪಾಯವನ್ನು ಕಡಿಮೆ ಮಾಡುತ್ತವೆ ಮತ್ತು ದೀರ್ಘಕಾಲದ ಆರೋಗ್ಯವನ್ನು ಉತ್ತಮಗೊಳಿಸುತ್ತದೆ. ಸರಿಯಾದ ನಿದ್ರೆ ರೋಗ ನಿರೋಧಕ ಶಕ್ತಿ ಹೆಚ್ಚಿಸಲು, ಮನಸ್ಸಿನ ಶಾಂತಿಯನ್ನು ಕಾಪಾಡಲು, ಮತ್ತು ದಿನದ ಚಟುವಟಿಕೆಗಳಿಗೆ ಚುರುಕನ್ನು ನೀಡಲು ಸಹಕಾರಿಯಾಗಿದೆ. ನಿದ್ರೆ ಕೊರತೆ ದೈಹಿಕ ತೊಂದರೆಗಳು ಮತ್ತು ಮನೋವೈಕಲ್ಯಗಳಿಗೆ ಕಾರಣವಾಗಬಹುದು. ಆದ್ದರಿಂದ, ನಿದ್ರೆಯನ್ನು ಆದ್ಯತೆಯಾಗಿ ಪರಿಗಣಿಸಿ, ರಾತ್ರಿಯ ನಿದ್ದೆ ವಿಘ್ನವಿಲ್ಲದೆ ಇರಲು ಕ್ರಮಗಳನ್ನು ಕೈಗೊಳ್ಳುವುದು ಅಗತ್ಯ.

ಧೂಮಪಾನ(smoking) ಮತ್ತು ಮದ್ಯಪಾನದಿಂದ(drinking alcohol) ದೂರ ಇರಿ:

ಧೂಮಪಾನ ಮತ್ತು ಮದ್ಯಪಾನದಿಂದ ದೂರವಿರುವುದು ಆರೋಗ್ಯಕ್ಕೆ ತುಂಬಾ ಒಳ್ಳೆಯದು. WHO ಅಂಕಿಅಂಶಗಳ ಪ್ರಕಾರ, ಇವು ಹೃದಯ ಸಂಬಂಧಿ ಕಾಯಿಲೆಗಳ ಪ್ರಮಾಣವನ್ನು ಗಣನೀಯವಾಗಿ ಹೆಚ್ಚಿಸುತ್ತವೆ. ಧೂಮಪಾನ ಮತ್ತು ಮದ್ಯಪಾನದ ಪರಿಣಾಮವಾಗಿ ಹೃದ್ರೋಗದಿಂದ ಸಾವಿನ ಅಪಾಯ ಶೇಕಡಾ 50 ರಷ್ಟು(50%) ಹೆಚ್ಚಾಗುತ್ತದೆ. ಈ ಚಟುವಟಿಕೆಗಳು ಅಧಿಕ ರಕ್ತದೊತ್ತಡಕ್ಕೆ ಕಾರಣವಾಗಿ, ಪಾರ್ಶ್ವವಾಯು ಮತ್ತು ಹೃದಯ ವೈಫಲ್ಯದ ಅಪಾಯವನ್ನು ಉಂಟುಮಾಡುತ್ತವೆ. ಧೂಮಪಾನದಿಂದ ಲಂಗ್ಸ್(Lungs) ಸಮಸ್ಯೆ ಮತ್ತು ಮದ್ಯಪಾನದಿಂದ ಯಕೃತ್ತಿನ ತೊಂದರೆಗಳೂ ಉಂಟಾಗಬಹುದು. ಈ ಚಟುವಟಿಕೆಗಳಿಂದ ದೂರವಿದ್ದು ಆರೋಗ್ಯಕರ ಜೀವನಶೈಲಿ ಅನುಸರಿಸುವುದು ದೀರ್ಘಕಾಲದ ಆರೋಗ್ಯಕ್ಕೆ ಬಹಳ ಮುಖ್ಯ. ಆರೋಗ್ಯಕರ ಆಹಾರ, ವ್ಯಾಯಾಮ, ಮತ್ತು ಧನಾತ್ಮಕ ಚಟುವಟಿಕೆಗಳು ಇದಕ್ಕೆ ತುತ್ತಾಗದಂತೆ ತಡೆಯುತ್ತವೆ.

ಆಹಾರದಲ್ಲಿ ಎಣ್ಣೆ ಮತ್ತು ಕೊಬ್ಬು ನಿಯಂತ್ರಣ:

ಅಡುಗೆಯಲ್ಲಿ ಎಣ್ಣೆ(oil) ಬಳಕೆಯನ್ನು ಕಡಿಮೆ ಮಾಡುವುದು ಆರೋಗ್ಯಕರ ಜೀವನಶೈಲಿಗೆ ಸಹಾಯಕ. ಆಲಿವ್, ಕ್ಯಾನೋಲಾ, ಮತ್ತು ಅಗಸೆಬೀಜದಂತಹ ಉತ್ತಮ ಗುಣಮಟ್ಟದ ಎಣ್ಣೆಯನ್ನು ಪ್ರತಿ ತಿಂಗಳು ಅರ್ಧ ಲೀಟರ್‌ ಮಾತ್ರ ಬಳಸಿ. ಸ್ಯಾಚುರೇಟೆಡ್ ಕೊಬ್ಬು(Saturated fat) ಕಡಿಮೆ ಇರುವ ಎಣ್ಣೆ ಆಯ್ಕೆ ಮಾಡುವುದು ಹೃದಯ ಆರೋಗ್ಯಕ್ಕಾಗಿ ಉತ್ತಮ. ಬೀಜಗಳು ಮತ್ತು ಪ್ರೋಟೀನ್‌(Nuts and protein) ಸಮೃದ್ಧ ಆಹಾರಗಳನ್ನು ನಿಯಮಿತವಾಗಿ ಸೇವಿಸುವುದು ದೇಹಕ್ಕೆ ಅಗತ್ಯ ಪೋಷಕಾಂಶಗಳನ್ನು ನೀಡುತ್ತದೆ. ಬೀಜಗಳು, ಮಾಪನ ಪ್ರೋಟೀನ್, ಮತ್ತು ಸಮೃದ್ಧ ಪೋಷಕಾಂಶಗಳನ್ನು ಒಳಗೊಂಡ ಆಹಾರವನ್ನು ಸೇವಿಸುವ ಅಭ್ಯಾಸ ಬೆಳಸಿಕೊಳ್ಳಬೇಕು.

ಗಮನಹರಿಸಬೇಕಾದ ಆರೋಗ್ಯ ಪರೀಕ್ಷೆಗಳು:

ನಮ್ಮ ದೇಹದ ಆರೋಗ್ಯವನ್ನು ಪರೀಕ್ಷಿಸುವುದು ಅತ್ಯಂತ ಮುಖ್ಯವಾಗಿದೆ. ಫುಲ್ ಬ್ಲಡ್ ಕೌಂಟ್(Full blood count), ಕೊಲೆಸ್ಟ್ರಾಲ್(Cholesterol) ಮಟ್ಟ, ಮೂತ್ರಪಿಂಡ, ಯಕೃತ್ತ, ಥೈರಾಯ್ಡ್(Thyroid), ಮತ್ತು ಇಸಿಜಿ(ECG) ಪರೀಕ್ಷೆಗಳನ್ನು ನಿಯಮಿತವಾಗಿ ಮಾಡಿಸಬೇಕು. ಇದು ಸಾಧ್ಯವಾದಲ್ಲಿ, ಆರಂಭಿಕ ಹಂತದಲ್ಲೇ ಸಮಸ್ಯೆಗಳನ್ನು ಪತ್ತೆಹಚ್ಚಲು ಸಹಾಯವಾಗುತ್ತದೆ.
ನೀವು ಈ ಅಭ್ಯಾಸಗಳನ್ನು ಜೀವನದಲ್ಲಿ ಅಳವಡಿಸಿಕೊಂಡರೆ, ಹೃದಯ ಸಂಬಂಧಿ ಕಾಯಿಲೆಗಳ ಬಗ್ಗೆ ಭಯವಿಲ್ಲದಂತೆ ಜೀವನ ನಡೆಸಬಹುದು.

ಈ ಮಾಹಿತಿಗಳನ್ನು ಓದಿ

 


ದಯವಿಟ್ಟು ಗಮನಿಸಿ: ನೀಡ್ಸ್ ಆಫ್ ಪಬ್ಲಿಕ್ ತನ್ನ ಓದುಗರಿಗೆ ನಿಖರವಾದ ಮತ್ತು ಅಧಿಕೃತ ಮಾಹಿತಿಗಳನ್ನು ಮಾತ್ರ ಪ್ರಕಟಿಸುತ್ತದೆ. ಇಲ್ಲಿ ನಾವು ಯಾವುದೇ ಅನಧಿಕೃತ ಮತ್ತು ಸುಳ್ಳು ಮಾಹಿತಿಯನ್ನು ಬಿತ್ತರಿಸುವುದಿಲ್ಲ.

WhatsApp Group Join Now
Telegram Group Join Now

Related Posts

Leave a Reply

Your email address will not be published. Required fields are marked *

error: Content is protected !!