ವಿಪ್ರೋ ಮತ್ತು ಇನ್ಫೋಸಿಸ್(Wipro and Infosys) ಉದ್ಯೋಗ ನೇಮಕಾತಿ ಯೋಜನೆ: ಬೃಹತ್ ಪ್ರಮಾಣದ ಉದ್ಯೋಗಾವಕಾಶಗಳು
ಭಾರತದ ಪ್ರಮುಖ ಐಟಿ ಕಂಪನಿಗಳಲ್ಲಿ(IT company) ವಿಪ್ರೋ ಮತ್ತು ಇನ್ಫೋಸಿಸ್ ತನ್ನ ವಿಶಿಷ್ಟ ಕಾರ್ಯಪ್ರವೃತ್ತಿ ಹಾಗೂ ಉದ್ಯೋಗಾವಕಾಶಗಳಿಂದ ಗುರುತಿಸಿಕೊಂಡಿವೆ. ಇತ್ತೀಚೆಗೆ ಇವುಗಳು ಬೃಹತ್ ಮಟ್ಟದಲ್ಲಿ ಹೊಸ ಉದ್ಯೋಗಿಗಳನ್ನು(Fresher employees) ನೇಮಕ ಮಾಡಿಕೊಳ್ಳಲು ಮುಂದಾಗಿವೆ ಎಂಬ ಮಾಹಿತಿ ದೇಶದ ಯುವ ಜನಾಂಗದಲ್ಲಿ ಆಶಾಭಾವನೆಯನ್ನು ಸೃಷ್ಟಿಸಿದೆ. ಈ ಯೋಜನೆಗಳು ಮುಂಬರುವ ವರ್ಷಗಳಲ್ಲಿ ಐಟಿ ಕ್ಷೇತ್ರವನ್ನು ಹೊಸ ಹಾದಿಗೆ ಕರೆದೊಯ್ಯುವ ನಿರೀಕ್ಷೆ ಇದೆ. ಎಷ್ಟು ಹೊಸ ನೇಮಕಾತಿಗಳನ್ನು ಮಾಡಿಕೊಳ್ಳಲಾಗುತ್ತದೆ ಎಂಬ ಸಂಪೂರ್ಣ ಮಾಹಿತಿಯನ್ನು ತಿಳಿದುಕೊಳ್ಳೋಣ ಬನ್ನಿ.
ವಿಪ್ರೋ ಕಂಪನಿಯ 2025-26ರ ಆರ್ಥಿಕ ವರ್ಷದಲ್ಲಿ ಹೊಸ ನೇಮಕಾತಿ:
ಭಾರತೀಯ ಮಾಹಿತಿ ತಂತ್ರಜ್ಞಾನ (ಐಟಿ) ಕ್ಷೇತ್ರದಲ್ಲಿ ವಿಪ್ರೋ ತನ್ನ ವಿಶಿಷ್ಟ ಸ್ಥಾನವನ್ನು ಹೊಂದಿದೆ. ಇನ್ನು ಉದ್ಯೋಗವಕಾಶಗಳ ಸೃಷ್ಟಿ ಹಾಗೂ ಯುವ ಪ್ರತಿಭೆಗಳ ಪ್ರೋತ್ಸಾಹದ ಮೂಲಕ ದೇಶದ ಆರ್ಥಿಕ ಸಬಲತೆಗೆ ವಿಪ್ರೋ ಕೂಡಾ ತನ್ನ ಕೊಡುಗೆಯನ್ನು ನೀಡುತ್ತಿದೆ. 2025-26ರ ಆರ್ಥಿಕ ವರ್ಷದಲ್ಲೂ ಕಂಪನಿಯು ಬೃಹತ್ ಪ್ರಮಾಣದಲ್ಲಿ ಹೊಸ ನೇಮಕಾತಿಗಳನ್ನು(New appointments) ಮಾಡಲು ತಯಾರಾಗಿದೆ.
ವಿಪ್ರೋದ ಮುಖ್ಯ ಮಾನವ ಸಂಪನ್ಮೂಲ ಅಧಿಕಾರಿ (CHRO) ಸೌರಭ್ ಗೋವಿಲ್(Saurabh Govil) 2025ರ ಜನವರಿ 17ರಂದು ಪ್ರಕಟಿಸಿದ ಮಾಹಿತಿ ಪ್ರಕಾರ, ಈ ಆರ್ಥಿಕ ವರ್ಷದಲ್ಲಿ ಸುಮಾರು 10,000-12,000 ಫ್ರೆಶರ್‌ಗಳನ್ನು ನೇಮಕ(Recruitment of freshers) ಮಾಡಿಕೊಳ್ಳುವ ಗುರಿ ಹೊಂದಲಾಗಿದೆ. ಈ ಮಾದರಿಯೇ ಮುಂದಿನ ವರ್ಷಗಳಲ್ಲಿಯೂ ಮುಂದುವರಿಯಲಿದೆ. ಕಳೆದ ಮೂರು ತ್ರೈಮಾಸಿಕಗಳಲ್ಲಿ ಸರಾಸರಿ 7,000 ಹುದ್ದೆಗಳನ್ನು ಭರ್ತಿ ಮಾಡಲಾಗಿದೆ. ನಿಖರವಾಗಿ, ಮುಂದಿನ ನಾಲ್ಕನೇ ತ್ರೈಮಾಸಿಕದಲ್ಲಿ 2,500-3,000 ಹುದ್ದೆಗಳಿಗೆ ಅವಕಾಶ ನೀಡಲಾಗುವುದು ಎಂದು ಗೋವಿಲ್ ತಿಳಿಸಿದ್ದಾರೆ.
ವಿಪ್ರೋನ ನೇಮಕಾತಿ ತಂತ್ರ :
ವಿಪ್ರೋ ತನ್ನ ಸ್ಪರ್ಧಿಗಳಾದ ಇನ್ಫೋಸಿಸ್ ಮತ್ತು ಟಿಸಿಎಸ್(Infosys and TCS) ನಂತಹ ಸಂಸ್ಥೆಗಳ ನೇಮಕಾತಿ ನಿರ್ಧಾರಗಳಿಗೆ ತಕ್ಕ ಪ್ರತಿಕ್ರಿಯೆ ನೀಡುತ್ತಿದೆ. ಇನ್ಫೋಸಿಸ್, ತನ್ನ 2026ರ ಹಣಕಾಸು ವರ್ಷದಲ್ಲಿ 20,000 ಕ್ಕೂ ಹೆಚ್ಚು ಫ್ರೆಶರ್‌ಗಳನ್ನು ನೇಮಕ ಮಾಡಿಕೊಳ್ಳಲು ತೀರ್ಮಾನಿಸಿದೆ. ಇದಕ್ಕೆ ವಿರುದ್ಧವಾಗಿ, ವಿಪ್ರೋ ತಾನು ಅಧಿಕ ಪ್ರಮಾಣದಲ್ಲಿ ನೇಮಕಾತಿ ಮಾಡಿಕೊಳ್ಳುವುದಿಲ್ಲ ಎಂದು ಸ್ಪಷ್ಟಪಡಿಸಿದೆ. ನಾವು “ಪಾಠ ಕಲಿತಿದ್ದೇವೆ” ಎಂದು ಹೇಳುವ ಮೂಲಕ, ದೀರ್ಘಕಾಲೀನ ಯೋಜನೆಗಳಲ್ಲಿ ಹೆಚ್ಚಿನ ಗಮನ ಹರಿಸುತ್ತಿರುವುದಾಗಿ ಸೂಚಿಸಿದೆ. “ನಾವು ಹೆಚ್ಚು ಜಾಗರೂಕರಾಗಲು ಬಯಸುತ್ತೇವೆ,” ಎಂದು ಸೌರಭ್ ಗೋವಿಲ್(Saurabh Govil) ಅಭಿಪ್ರಾಯಪಟ್ಟಿದ್ದಾರೆ.
ಕ್ಯಾಂಪಸ್ ನೇಮಕಾತಿಯ(Campus recruitment) ಮಹತ್ವವೇನು?:
ಪ್ರತಿ ವರ್ಷ ಕ್ಯಾಂಪಸ್‌ನಲ್ಲಿ ಸುಮಾರು 10,000-12,000 ವಿದ್ಯಾರ್ಥಿಗಳನ್ನು ಆಯ್ಕೆ ಮಾಡಿಕೊಳ್ಳುವ ಪ್ರಕ್ರಿಯೆ ತುಂಬಾ ಒಳ್ಳೆಯದಾಗಿದ್ದು, ವಿಪ್ರೋ ತಕ್ಷಣದ ಆರ್ಥಿಕ ಚಟುವಟಿಕೆಗಳಿಗೆ ಮಾತ್ರ ಸೀಮಿತವಾಗದೆ, ಶ್ರೇಷ್ಠತೆಯ ಉನ್ನತಿಕೇಂದ್ರವನ್ನಾಗಿ ಬಳಸುತ್ತಿದೆ. ಈ ನಿರ್ಧಾರವು ವಿದ್ಯಾರ್ಥಿಗಳ ಮತ್ತು ಕಂಪನಿಯ ನಡುವೆ ವಿಶ್ವಾಸಯುತ ಸಂಬಂಧವನ್ನು ಬೆಳೆಸಲು ಸಹಕಾರಿಯಾಗುತ್ತದೆ.
ಉದಯೋನ್ಮುಖ ವಿದ್ಯಾರ್ಥಿಗಳಿಗೆ ಸುವರ್ಣಾವಕಾಶ:
ಭಾರತೀಯ ಕಾಲೇಜುಗಳಲ್ಲಿ ಶಿಕ್ಷಣ ಪಡೆಯುತ್ತಿರುವ ಸಾವಿರಾರು ವಿದ್ಯಾರ್ಥಿಗಳಿಗೆ ಇದು ಸುವರ್ಣಾವಕಾಶವಾಗಿದೆ. ವಿಪ್ರೋ ಸೇರಿ ಇತರ ಐಟಿ ಕಂಪನಿಗಳು ನಿರಂತರವಾಗಿ ಹೊಸತನ್ನು ಕಲಿಯಲು ಮತ್ತು ಉದ್ಯೋಗಿಗಳ ವೃತ್ತಿ ಉನ್ನತಿಗೆ ಬೆಂಬಲ ನೀಡಲು ನಿರ್ಧರಿಸಿವೆ.
ಇನ್ಫೋಸಿಸ್ ನಲ್ಲೂ(Infosys) 20,000+ ಉದ್ಯೋಗಾವಕಾಶಗಳು:
ಭಾರತದ ಆಧುನಿಕ ತಂತ್ರಜ್ಞಾನ ಕ್ಷೇತ್ರವನ್ನು ಕಟ್ಟಕಡೆಗೂ ದಕ್ಷಿಣಾಭಿಮುಖ ಗೊಳಿಸಿರುವ ಪ್ರತಿಷ್ಠಿತ ಸಾಫ್ಟ್‌ವೇರ್ ಕಂಪನಿಗಳಲ್ಲಿ(software companies) ಒಂದಾದ ಇನ್ಫೋಸಿಸ್, ತನ್ನ ಹೊಸ ಯೋಜನೆ ಮೂಲಕ ಉದ್ಯೋಗ ಪ್ರಾಪ್ತಿಗಾಗಿ ಬೃಹತ್ ಅವಕಾಶಗಳನ್ನು ಸೃಷ್ಟಿಸುತ್ತಿದೆ. ಈ ಬಾರಿಯ ಯೋಜನೆಗಳ ಪ್ರಕಾರ, ಕಂಪನಿ 20,000ಕ್ಕೂ ಹೆಚ್ಚು ಹೊಸ ಹುದ್ದೆಗಳಿಗೆ ನೇಮಕಾತಿ ಮಾಡುವ ಉದ್ದೇಶವನ್ನು ಪ್ರಕಟಿಸಿದೆ. ಇದು ವಿಶೇಷವಾಗಿ ಪ್ರಾರಂಭಿಕ ಹಂತದ (ಫ್ರೆಶರ್) ಅಭ್ಯರ್ಥಿಗಳಿಗೆ ಅವಕಾಶವನ್ನು ತಂದುಕೊಡುವ ಪ್ರಯತ್ನವಾಗಿದೆ.
ಕಂಪನಿಯ ನೇಮಕಾತಿಯ ಅಗತ್ಯತೆ :
ಇನ್ಫೋಸಿಸ್ ಸಂಸ್ಥೆಯು ದೇಶದ ಎರಡನೇ ಅತಿದೊಡ್ಡ ಸಾಫ್ಟ್‌ವೇರ್ ಸೇವಾ ಕಂಪನಿಯಾಗಿದ್ದು, ಪಾಶ್ಚಿಮಾತ್ಯ ರಾಷ್ಟ್ರಗಳಿಂದ ತನ್ನ ಆದಾಯದ ಶೇಕಡ 80ಕ್ಕಿಂತ ಹೆಚ್ಚು ಭಾಗವನ್ನುಗಳಿಸುತ್ತದೆ. ಭವಿಷ್ಯದ ವ್ಯಾಪಾರ ನಿರ್ವಹಣೆಯನ್ನು ಸುಧಾರಿಸಲು ಮತ್ತು ಹೊಸ ಮಾರುಕಟ್ಟೆಗಳನ್ನು ಅನ್ವೇಷಿಸಲು, ಕಂಪನಿಯು ತನ್ನ ಸಾಮರ್ಥ್ಯವನ್ನು ಮತ್ತಷ್ಟು ಬಲಪಡಿಸಲು ಬಲಿಷ್ಠ ಕಾರ್ಯತಂತ್ರವನ್ನು ರೂಪಿಸುತ್ತಿದೆ. ಉದ್ಯೋಗಿಗಳನ್ನು ಕೇಂದ್ರಬಿಂದುವಾಗಿಟ್ಟುಕೊಂಡು ಸಂಸ್ಥೆಯ ಮುಂದಿನ ಬೆಳವಣಿಗೆ ಯತ್ನಗಳನ್ನು ತ್ರಿಮಾಸಿಕ ಯೋಜನೆಯಡಿಯಲ್ಲಿ (Q3) ರೂಪಿಸಲಾಗಿದೆ.
ಉದ್ಯೋಗ ಕ್ಷೇತ್ರ ಹಾಗೂ ಹುದ್ದೆಗಳ ವಿವರಗಳು ಹೀಗಿವೆ :
ಈ ಬೃಹತ್ ನೇಮಕಾತಿ ಪ್ರಕ್ರಿಯೆ 2026ರ ಪ್ಲಾನ್‍ನ ಅಡಿಯಲ್ಲಿ ಕೈಗೆತ್ತಿಕೊಳ್ಳಲಾಗಿದೆ. ಹೊಸಬರಿಗೆ ಕಂಪನಿಯಲ್ಲೇ ತಕ್ಷಣ ತರಬೇತಿ ನೀಡಿ, ವಿವಿಧ ತಾಂತ್ರಿಕ ವಿಭಾಗಗಳಲ್ಲಿ ನೇಮಿಸುವ ಗುರಿ ಹೊಂದಲಾಗಿದೆ. ಕಂಪನಿಯ ಕಾರ್ಯನಿರ್ವಾಹಕರು(Company executives), “ನಮ್ಮ ಮುಂದಿನ ಬೆಳವಣಿಗೆ ಗುರಿಗಳನ್ನು ಸಾಧಿಸಲು ನಮಗೆ ಚುರುಕಿನ ಹಾಗೂ ಹೊಸ ಪ್ರತಿಭೆಗಳ ಅವಶ್ಯಕತೆ ಇದೆ ಎಂದು ಹೈಲೈಟ್ ಮಾಡಿದ್ದಾರೆ.
ವೇತನ ಮಾಹಿತಿ ಹಾಗೂ ಅರ್ಜಿ ಪ್ರಕ್ರಿಯೆ ಹೀಗಿದೆ :
ಈ ನೇಮಕಾತಿಗೆ ಸಂಬಂಧಿಸಿದಂತೆ ಕಂಪನಿಯ ಅಧಿಕೃತ ವೆಬ್‌ಸೈಟ್ ಮೂಲಕ ಅರ್ಜಿಗಳನ್ನು ಆಹ್ವಾನಿಸಲಾಗುವುದು. ಹೆಚ್ಚಿನ ಮಾಹಿತಿಯನ್ನು ಅರ್ಜಿದಾರರು ಇನ್ಫೋಸಿಸ್’ನ ಕೇರಿಯರ್ ಪೋರ್ಟಲ್(Infosys’ career portal) ಅಥವಾ ಕಂಪನಿಯ ಘೋಷಣೆಗಳ ಮೂಲಕ ತಿಳಿದುಕೊಳ್ಳಬಹುದು. ಪ್ರಾರಂಭಿಕ ಹಂತದಲ್ಲಿ ನೇಮಕವಾಗುವವರಿಗೆ ಪ್ರತೀ ತಿಂಗಳು ₹30,000-₹50,000 ಆಕರ್ಷಕ ವೇತನವನ್ನು ಕಂಪನಿಯು ನೀಡಲಿದ್ದು, ಅನುಭವದಿಂದಾಗಿ ಮುಂದಿನ ದಿನಗಳಲ್ಲಿ ವೇತನ ಹೆಚ್ಚುವ ಅವಕಾಶ ಇದೆ.
ಭಾರತೀಯ ತಂತ್ರಜ್ಞಾನ(Indian technology) ಕ್ಷೇತ್ರದಲ್ಲಿ ಮಹತ್ವದ ಬದಲಾವಣೆ:
ಈ ಬೃಹತ್ ನೇಮಕಾತಿ ಒಬ್ಬ ಉದ್ಯೋಗಿಯ ಜೀವನಮಟ್ಟವನ್ನು ಸುಧಾರಿಸುವುದಷ್ಟೇ ಅಲ್ಲ, ದೇಶದ ಆರ್ಥಿಕತೆಯಲ್ಲೂ ಪ್ರಮುಖ ಕೊಡುಗೆಯನ್ನು ನೀಡುವ ದಿಟ್ಟ ಹೆಜ್ಜೆಯಾಗಿದೆ. ಇನ್ಫೋಸಿಸ್ ಸಂಸ್ಥೆಯ ಈ ಹೊಸ ಹಾದಿ, ಯುವ ತಂತ್ರಜ್ಞರಿಗೆ ತಂತ್ರಜ್ಞಾನ ಕ್ಷೇತ್ರದಲ್ಲಿ ಪ್ರಭಾವಶಾಲಿಯಾಗಿ ಮುಂದುವರೆಯಲು ಅತ್ಯುತ್ತಮ ವೇದಿಕೆಯನ್ನು ಒದಗಿಸಲಿದೆ.
ಒಟ್ಟಾರೆಯಾಗಿ 2025-26ರ ಹಣಕಾಸು ವರ್ಷವು(Financial year 2025-26) ಭಾರತದಲ್ಲಿನ ಐಟಿ ಉದ್ಯೋಗ ಕ್ಷೇತ್ರದಲ್ಲಿ ಮಹತ್ವದ ವರ್ಷವಾಗಲಿದೆ. ವಿಪ್ರೋ ಮತ್ತು ಇನ್ಫೋಸಿಸ್(Wipro and Infosys) ನಂತಹ ಪ್ರಖ್ಯಾತ ಕಂಪನಿಗಳ ಈ ರೀತಿಯ ತೀರ್ಮಾನಗಳು ದೇಶದ ಆರ್ಥಿಕ ಪರಿಸ್ಥಿತಿಗೆ ಪೂರಕವಾದಂತಹ ಬೆಳವಣಿಗೆಯಾಗಿದೆ.
ಈ ಮಾಹಿತಿಗಳನ್ನು ಓದಿ
ದಯವಿಟ್ಟು ಗಮನಿಸಿ: ನೀಡ್ಸ್ ಆಫ್ ಪಬ್ಲಿಕ್ ತನ್ನ ಓದುಗರಿಗೆ ನಿಖರವಾದ ಮತ್ತು ಅಧಿಕೃತ ಮಾಹಿತಿಗಳನ್ನು ಮಾತ್ರ ಪ್ರಕಟಿಸುತ್ತದೆ. ಇಲ್ಲಿ ನಾವು ಯಾವುದೇ ಅನಧಿಕೃತ ಮತ್ತು ಸುಳ್ಳು ಮಾಹಿತಿಯನ್ನು ಬಿತ್ತರಿಸುವುದಿಲ್ಲ.