ರಾಜ್ಯದ ಜನತೆ ಗಮನಕ್ಕೆ: ಯಶಸ್ವಿನಿ ಮತ್ತು ಆಯುಷ್ಮಾನ್ ಯೋಜನೆಗಳ ಮಹತ್ವದ ಮಾಹಿತಿ!
ರಾಜ್ಯದ ಜನಸಾಮಾನ್ಯರ ಆರೋಗ್ಯ ಸುರಕ್ಷತೆಗೆ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು (central and state government ) ಹಲವಾರು ಜನಪ್ರಿಯ ಯೋಜನೆಗಳನ್ನು ಜಾರಿಗೆ ತರುತ್ತಿವೆ. ಅದರಲ್ಲಿ ಆಯುಷ್ಮಾನ್ ಕಾರ್ಡ್ (Ayushman card) ಮಹತ್ವವನ್ನು ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರದ ಸಂಸದ ಡಾ. ಕೆ. ಸುಧಾಕರ್ ಅವರು ಪ್ರಸ್ತಾಪಿಸಿದ್ದಾರೆ. ಇನ್ನು ಯಶಸ್ವಿನಿ ಆರೋಗ್ಯ ರಕ್ಷಣಾ ಯೋಜನೆ ಮತ್ತೊಮ್ಮೆ ನವೀಕರಣಗೊಂಡಿದ್ದು, ಜನರಿಗೆ ಹೆಚ್ಚಿನ ಪ್ರಯೋಜನ ಕಲ್ಪಿಸಬೇಕೆಂಬ ಉದ್ದೇಶವನ್ನು ಹೊಂದಿದೆ. ಸಹಕಾರ ಇಲಾಖೆಯ (Cooperation Department) ಸಹಯೋಗದೊಂದಿಗೆ ಈ ಯೋಜನೆಗೆ ಹೊಸದಾಗಿ ನೋಂದಾಯಿಸಲು ಹಾಗೂ ನವೀಕರಣಕ್ಕೆ ದಿನಾಂಕ 2025, ಜನವರಿ 31 ಕೊನೆಯ ದಿನವಾಗಿದೆ. ಈ ಬಗ್ಗೆ ಸಂಪೂರ್ಣ ಮಾಹಿತಿಯನ್ನು ತಿಳಿದುಕೊಳ್ಳೋಣ ಬನ್ನಿ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ
ಯಶಸ್ವಿನಿ ಆರೋಗ್ಯ ರಕ್ಷಣಾ ಯೋಜನೆ (Yshaswini Arogya rakshana yojana), ಗ್ರಾಮೀಣ ಸಹಕಾರ ಸಂಘದ ಸದಸ್ಯರಿಗೆ ಮತ್ತು ಅವರ ಕುಟುಂಬಗಳಿಗೆ ಸೌಲಭ್ಯಗಳು ಒದಗಿಸುವ ಮಹತ್ವದ ಯೋಜನೆಯಾಗಿದ್ದು, 2024–2025 ಅವಧಿಗೆ ನೂತನ ಹಾಗೂ ನವೀಕರಿತ ನೋಂದಣಿ ಪ್ರಕ್ರಿಯೆ ಆರಂಭವಾಗಿದೆ. ಈ ಯೋಜನೆಯು ಗ್ರಾಮೀಣ ಮತ್ತು ನಗರ ಭಾಗದ ಸಹಕಾರ ಸಂಘಗಳ (Rural Urban and Area Co-operative Societies) ಸದಸ್ಯರಿಗೆ ಕೈಗೊಳ್ಳಲಾಗಿದ್ದು, ಆರೋಗ್ಯ ಸೇವೆಗಳ ವ್ಯಯವನ್ನು ಕಡಿಮೆ ಮಾಡಲು ಸರ್ಕಾರ ಮತ್ತು ಸಹಕಾರ ಇಲಾಖೆಯ ಸಂಯುಕ್ತ ಆಶಯದಿಂದ ತಾಯಿ, ಮಕ್ಕಳ ಆರೋಗ್ಯ ಸೇರಿದಂತೆ ಹಲವು ಪ್ರಮುಖ ವೈದ್ಯಕೀಯ ಸೌಲಭ್ಯಗಳನ್ನು ಒದಗಿಸುತ್ತದೆ.
ನೋಂದಣಿಯ ಕೊನೆಯ ದಿನಾಂಕ (Last date of registration) :
ಯಶಸ್ವಿನಿ ಯೋಜನೆಗೆ ನೋಂದಣಿಗಾಗಿ ಅಥವಾ ನವೀಕರಣಕ್ಕಾಗಿ ಸಲ್ಲಿಸಲು 31 ಜನವರಿ 2025 (31, January, 2025) ಕೊನೆ ದಿನಾಂಕವಾಗಿದೆ. ಸದಸ್ಯರು ಈ ಅವಧಿಯೊಳಗೆ ತಕ್ಕ ದಸ್ತಾವೇಜುಗಳನ್ನು ಒದಗಿಸಿ ನೋಂದಣಿ ಪ್ರಕ್ರಿಯೆ ಪೂರ್ಣಗೊಳಿಸಬಹುದು.
ನವೀಕರಣಕ್ಕೆ ಅಗತ್ಯ ದಾಖಲೆಗಳು (Documents) :
1. ಯಶಸ್ವಿನಿ ಐಡಿ ಕಾರ್ಡ್
2. ಆಧಾರ್ ಕಾರ್ಡ್ ಜೆರಾಕ್ಸ್ (ಪ್ರತಿ ಸದಸ್ಯನದ್ದು)
3. ಪರಿಶಿಷ್ಟ ಜಾತಿ/ಪಂಗಡದವರು ಜಾತಿ ಪ್ರಮಾಣ ಪತ್ರದ ನಕಲು (ಕುಟುಂಬದ ಒಬ್ಬ ಸದಸ್ಯನದ್ದು)
ಹೊಸದಾಗಿ ನೋಂದಾಯಿಸಲು ಅಗತ್ಯವಿರುವ ದಾಖಲೆಗಳು (Documents required for new registration) :
1. ಸಹಕಾರ ಸಂಘದಲ್ಲಿ ಸದಸ್ಯತ್ವ ಇರಬೇಕು
2. ಕುಟುಂಬದ ರೇಷನ್ ಕಾರ್ಡ್ ಪ್ರತಿಯ ಜೆರಾಕ್ಸ್
3. ಆಧಾರ್ ಕಾರ್ಡ್ ಪ್ರತಿಯ ಜೆರಾಕ್ಸ್ (ಪ್ರತಿ ಸದಸ್ಯನದ್ದು)
4. ಪರಿಶಿಷ್ಟ ಜಾತಿ/ಪಂಗಡದವರಿಗೆ ಜಾತಿ ಪ್ರಮಾಣ ಪತ್ರದ ನಕಲು (ಕುಟುಂಬದ ಒಬ್ಬನದ್ದು)
5. ಪ್ರತಿ ಸದಸ್ಯನ 2 ಪಾಸ್‌ಪೋರ್ಟ್ ಸೈಜ್ ಫೋಟೋಗಳು
ಚಿಕಿತ್ಸಾ ಅವಧಿ ಮತ್ತು ಪಾವತಿ ವಿವರಗಳು(Treatment period and payment details) :
ಯಶಸ್ವಿನಿ ಯೋಜನೆಯ (Yshaswini yojana) 2024-25 ಸಾಲಿನ ನೋಂದಣಿ ಪ್ರಕ್ರಿಯೆ 1 ಜನವರಿ 2024 ರಿಂದ ಆರಂಭಗೊಂಡಿದ್ದು, 01 ಏಪ್ರಿಲ್ 2025 ರಿಂದ 31 ಮಾರ್ಚ್ 2026 ರವರೆಗೆ ಚಿಕಿತ್ಸಾ ಅವಧಿ ಇರಲಿದೆ. ಈ ಯೋಜನೆಯಡಿ, ಗ್ರಾಮೀಣ ಪ್ರದೇಶದ 4 ಸದಸ್ಯರ ಕುಟುಂಬಕ್ಕೆ ವಾರ್ಷಿಕ ರೂ.500 ಹಾಗೂ 4 ಕ್ಕಿಂತ ಹೆಚ್ಚು ಸದಸ್ಯರಿದ್ದರೆ ತಲಾ ರೂ.100 ಮತ್ತು ನಗರ ಪ್ರದೇಶದ 4 ಸದಸ್ಯರ ಕುಟುಂಬಕ್ಕೆ ವಾರ್ಷಿಕ ರೂ.1000 ಹಾಗೂ 4 ಕ್ಕಿಂತ ಹೆಚ್ಚು ಸದಸ್ಯರಿದ್ದರೆ ತಲಾ ರೂ.200 ಪಾವತಿಸಬೇಕು.
ಚಿಕಿತ್ಸಾ ಸೌಲಭ್ಯಗಳು ಹೀಗಿವೆ (Treatment facilities) :
ಈ ಯೋಜನೆಯಡಿ ಹಲವಾರು ಪ್ರಮುಖ ಆರೋಗ್ಯ ಸಮಸ್ಯೆಗಳಿಗೆ ಚಿಕಿತ್ಸಾ ವೆಚ್ಚವನ್ನು ಅನುಮೋದಿಸಲಾಗಿದೆ:
ಹೃದಯ ರೋಗಗಳು (Heart diseases) :
ಕಿವಿ, ಮೂಗು, ಗಂಟಲು ಸಂಬಂಧಿತ ಸಮಸ್ಯೆಗಳು
ಕರುಳಿನ ಖಾಯಿಲೆಗಳು
ನರ ಸಂಬಂಧಿತ ಕಾಯಿಲೆಗಳು
ಕಣ್ಣು ಮತ್ತು ಮೂಳೆ ಸಂಬಂಧಿತ ಚಿಕಿತ್ಸೆ
ಸ್ತ್ರೀಯರಿಗೆ ಸಂಬಂಧಿಸಿದ ಖಾಯಿಲೆಗಳು
ಪ್ರತಿ ಫಲಾನುಭವಿ ಕುಟುಂಬಕ್ಕೆ ವಾರ್ಷಿಕವಾಗಿ ರೂ. 5 ಲಕ್ಷದ ವೈದ್ಯಕೀಯ ವೆಚ್ಚ ಮಿತಿ ನಿಗದಿಪಡಿಸಲಾಗಿದೆ. ರಾಜ್ಯದ ಯಶಸ್ವಿನಿ ನೆಟ್‌ವರ್ಕ್‌ಗೆ ಸೇರಿದ ಆಸ್ಪತ್ರೆಗಳಲ್ಲಿ ಈ ಸೌಲಭ್ಯಗಳನ್ನು ಪಡೆಯಬಹುದು.
ಪರಿಶಿಷ್ಟ ಜಾತಿ/ಪಂಗಡದ ಸದಸ್ಯರಿಗೆ ವಿಶೇಷ ಸೂಚನೆ :
ಚಿಕಿತ್ಸಾ ಸಮಯದಲ್ಲಿ, ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಫಲಾನುಭವಿಗಳು ತಮ್ಮ ಜಾತಿ ಪ್ರಮಾಣ ಪತ್ರದ ಆರ್‌ಡಿ ಸಂಖ್ಯೆಯನ್ನು ಕಡ್ಡಾಯವಾಗಿ ಹಾಜರುಪಡಿಸಬೇಕು.
ಸಹಕಾರ ಸಂಘದ ಸದಸ್ಯರು ತಮ್ಮ ಹತ್ತಿರದ ಸಹಕಾರ ಸಂಘಗಳಲ್ಲಿ ಅಗತ್ಯ ದಾಖಲೆಗಳೊಂದಿಗೆ ನೋಂದಣಿ ಪ್ರಕ್ರಿಯೆಯನ್ನು ಮುಗಿಸಿ, ಯೋಜನೆಯ ಸೌಲಭ್ಯಗಳನ್ನು ಪಡೆಯುವಂತೆ ಸಹಕಾರ ಇಲಾಖೆ ಮನವಿ ಮಾಡಿದೆ.
ಈ ಯೋಜನೆಯು ಆರೋಗ್ಯ ಸೇವೆಗಳಿಗೆ ಸುಲಭ ಪ್ರವೇಶ ಮತ್ತು ವ್ಯಯವಿಲ್ಲದ ಚಿಕಿತ್ಸಾ ಅವಕಾಶವನ್ನು ನೀಡುವುದರ ಮೂಲಕ ಸಹಕಾರ ಸಂಘದ ಸದಸ್ಯರಿಗೆ ಜೀವಾವಶ್ಯಕ ನೆರವನ್ನು ಒದಗಿಸುತ್ತಿದೆ.
ಆಯುಷ್ಮಾನ್ ಭಾರತ್ ಯೋಜನೆ(Ayushman Bharat Yojana) :
ಯುಷ್ಮಾನ್ ಭಾರತ್ ಯೋಜನೆ, ದೇಶದ ಜನಸಾಮಾನ್ಯರ ಆರೋಗ್ಯ ಭದ್ರತೆಗಾಗಿ ಕೇಂದ್ರ ಸರ್ಕಾರದಿಂದ ಜಾರಿಗೆ ತಂದ ಮಹತ್ವಾಕಾಂಕ್ಷಿ ಆರೋಗ್ಯ ಯೋಜನೆಗಳಲ್ಲಿ ಪ್ರಮುಖವಾಗಿದ್ದು, ಇದು ಲಕ್ಷಾಂತರ ಬಡ ಕುಟುಂಬಗಳಿಗೆ ಆಶಾಕಿರಣವಾಗಿದೆ. 5 ಲಕ್ಷದವರೆಗೆ ಉಚಿತ ಚಿಕಿತ್ಸಾ ಸೌಲಭ್ಯ ನೀಡುವ ಈ ಯೋಜನೆಯು, ಅದರ ವ್ಯಾಪ್ತಿ ಮತ್ತು ಫಲಿತಾಂಶದ ಹಿನ್ನೆಲೆಯಲ್ಲಿ ವಿಶ್ವದ ಅತಿದೊಡ್ಡ ಆರೋಗ್ಯ ವಿಮಾ ಯೋಜನೆಗಳಲ್ಲಿ ಒಂದಾಗಿದೆ.
ಇದೀಗ, ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರದ ಸಂಸದ ಡಾ. ಕೆ. ಸುಧಾಕರ್, ಆಯುಷ್ಮಾನ್ ಕಾರ್ಡ್ ಮಹತ್ವವನ್ನು ಪ್ರಸ್ತಾಪಿಸಿ, ಈ ಯೋಜನೆಯ ಲಾಭವನ್ನು ಪ್ರತಿ ನಾಗರಿಕನಿಗೂ ತಲುಪಿಸುವ ಕುರಿತು ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.
ಸಭೆಯ ವಿವರಗಳು ಹೀಗಿವೆ :
ಜಿಲ್ಲಾಡಳಿತ ಭವನದಲ್ಲಿರುವ ಜಿಲ್ಲಾ ಪಂಚಾಯಿತಿ ಕಚೇರಿ ಸಭಾಂಗಣದಲ್ಲಿ ನಡೆದ ದಿಶಾ ಸಮಿತಿಯ ಎರಡನೇ ತ್ರೈಮಾಸಿಕ ಸಭೆಯ (Second quarterly meeting) ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿದ ಡಾ. ಸುಧಾಕರ್, ಆಯುಷ್ಮಾನ್ ಕಾರ್ಡ್ ಆಧಾರಿತ ಉಚಿತ ವೈದ್ಯಕೀಯ ಸೇವೆಗಳನ್ನು ಮುಂಚೂಣಿಗೆ ತರುವಂತೆ ಮತ್ತು ಜನರು ಈ ಯೋಜನೆಗೆ ಸಕ್ರಿಯವಾಗಿ ಹೆಸರು ನೋಂದಾಯಿಸಲು ಪ್ರಯತ್ನಿಸುವಂತೆ ಮನವಿ ಮಾಡಿದರು.
ಕೇಂದ್ರ ಸರ್ಕಾರದ (Central government) ಪ್ರಯತ್ನಗಳು ಯಾವರೀತಿ ಇವೆ?:
ಕೇಂದ್ರ ಸರ್ಕಾರ ದೇಶದ ಅಭಿವೃದ್ಧಿಗೆ ಹಲವು ಮಹತ್ವಾಕಾಂಕ್ಷಿ ಯೋಜನೆಗಳನ್ನು ಜಾರಿಗೆ ತಂದಿದ್ದು, ರೈತರು, ಬಡವರು, ಹಿಂದುಳಿದ ವರ್ಗಗಳಿಗೆ ಹಲವು ಜನಪ್ರಿಯ ಕಾರ್ಯಕ್ರಮಗಳನ್ನು ಪರಿಚಯಿಸಲಾಗಿದೆ. ಆಯುಷ್ಮಾನ್ ಭಾರತ್ ಯೋಜನೆಯು ಅದರ ಪ್ರಮುಖ ಮಾದರಿಯಾಗಿದೆ. 5 ಲಕ್ಷದವರೆಗೆ ಉಚಿತ ವೈದ್ಯಕೀಯ ಸೇವೆಗಳನ್ನು ಜನರಿಗೆ ನೀಡುವ ಮೂಲಕ ಆರೋಗ್ಯ ಸೌಲಭ್ಯಗಳನ್ನು ನೀಡಿದೆ.
ಜಾಗೃತಿ ಮೂಡಿಸುವಂತೆ ಅಧಿಕಾರಿಗಳಿಗೆ ಸೂಚನೆ :
ಜಿಲ್ಲೆಯಲ್ಲಿ ಪ್ರತಿ ಕುಟುಂಬ ಈ ಯೋಜನೆಯ ಲಾಭವನ್ನು ಪಡೆಯಲು, ಎಲ್ಲರೂ ಆಯುಷ್ಮಾನ್ ಕಾರ್ಡ್ ಮಾಡಿಸಿಕೊಳ್ಳುವಂತೆ ಹಾಗೂ ಸಾರ್ವಜನಿಕರಲ್ಲಿ ಹೆಚ್ಚಿನ ಅರಿವು ಮೂಡಿಸಲು ಅಧಿಕಾರಿಗಳಿಗೆ ಸೂಚಿಸಿದರು. ಈ ಮೂಲಕ ಬಡತನ ಹಾಗೂ ದುಬಾರಿ ವೆಚ್ಚದ ವೈದ್ಯಕೀಯ ಕಾರಣದಿಂದಾಗಿ ಆಗುವ ಆರ್ಥಿಕ ಹಾನಿಯನ್ನು ತಪ್ಪಿಸಬಹುದಾಗಿದೆ ಎಂದು ತಿಳಿಸಿದರು.
ಯಶಸ್ವಿನಿ ಹಾಗೂ ಆಯುಷ್ಮಾನ್ ಯೋಜನೆಗಳು ಆರೋಗ್ಯ ರಕ್ಷಣೆಗೆ ಸರ್ಕಾರದ ಮಹತ್ವದ ಹೆಜ್ಜೆಗಳಾಗಿವೆ. ಸೂಕ್ತ ದಾಖಲೆಗಳನ್ನು ಬಳಸಿ ಜನತೆ ಈ ಸೌಲಭ್ಯವನ್ನು ಗಳಿಸಬಹುದು. ತಕ್ಷಣವೇ ನಿಮ್ಮ ಸಮೀಪದ ಸಹಕಾರ ಸಂಘದಲ್ಲಿ ನೋಂದಾಯಿಸಿ, ಆರೋಗ್ಯ ರಕ್ಷಣೆಗೆ ಕೈಜೋಡಿಸಿ!
ಈ ಮಾಹಿತಿಗಳನ್ನು ಓದಿ
ದಯವಿಟ್ಟು ಗಮನಿಸಿ: ನೀಡ್ಸ್ ಆಫ್ ಪಬ್ಲಿಕ್ ತನ್ನ ಓದುಗರಿಗೆ ನಿಖರವಾದ ಮತ್ತು ಅಧಿಕೃತ ಮಾಹಿತಿಗಳನ್ನು ಮಾತ್ರ ಪ್ರಕಟಿಸುತ್ತದೆ. ಇಲ್ಲಿ ನಾವು ಯಾವುದೇ ಅನಧಿಕೃತ ಮತ್ತು ಸುಳ್ಳು ಮಾಹಿತಿಯನ್ನು ಬಿತ್ತರಿಸುವುದಿಲ್ಲ.