ಇನ್ಫೋಸಿಸ್‌ನಿಂದ 20,000ಕ್ಕೂ ಹೆಚ್ಚು ಹೊಸ ಉದ್ಯೋಗ: ಐಟಿ ಕ್ಷೇತ್ರದ ಹೊಸ ಯುವಕರಿಗೆ ಅವಕಾಶ
ಭಾರತದ ಐಟಿ ಕ್ಷೇತ್ರದಲ್ಲಿ ಪ್ರಗತಿಯ ಆಲೋಚನೆ ಮಾಡುತ್ತಿರುವ ಯುವಜನತೆಗೆ ಇನ್ಫೋಸಿಸ್(Infosys) ಹೊಸದೊಂದು ದಾರಿ ತೆರೆದು ಕೊಟ್ಟಿದೆ. ಕಂಪನಿಯು 20,000ಕ್ಕೂ ಹೆಚ್ಚು ಫ್ರೆಶರ್ ಅಭ್ಯರ್ಥಿಗಳನ್ನು(Fresher Candidates)ನೇಮಕ ಮಾಡಲು ಬೃಹತ್ ಯೋಜನೆ ರೂಪಿಸುತ್ತಿದೆ ಎಂದು ಅಧಿಕೃತವಾಗಿ ತಿಳಿಸಲಾಗಿದೆ. ತಾಂತ್ರಿಕ ಮತ್ತು ಇಂಜಿನಿಯರಿಂಗ್(Technical and Engineering)ಹಿನ್ನಲೆಯವರು ತಮ್ಮ ವೃತ್ತಿಜೀವನದ ಮೊದಲ ಹೆಜ್ಜೆಯನ್ನು ಇಡಲು ಇದು ಸೂಕ್ತ ವೇದಿಕೆಯಾಗಲಿದೆ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ
2026ನೇ ವರ್ಷದ ನೇಮಕಾತಿ ಉದ್ದೇಶ
ಇನ್ಫೋಸಿಸ್ ಸಂಸ್ಥೆಯು 2026ರ ಸಾಲಿನಲ್ಲಿ ಈ ನೇಮಕಾತಿ ಪ್ರಕ್ರಿಯೆಯನ್ನು ಪ್ರಾರಂಭಿಸಲು ಸಿದ್ಧತೆ ನಡೆಸಿದೆ. ಇದಕ್ಕಾಗಿ ಕಂಪನಿಯ Q3 ಹಣಕಾಸು ಯೋಜನೆ(Q3 financial plan) ಈಗಾಗಲೇ ರೂಪಗೊಂಡಿದ್ದು, ಇದರಡಿಯಲ್ಲಿ ದೇಶಾದ್ಯಂತ ಬೃಹತ್ ನೇಮಕಾತಿಯನ್ನು ಕಂಪನಿಯು ಕೈಗೊಳ್ಳಲಿದೆ. ಕಾರ್ಪೊರೇಟ್ನಲ್ಲಿ Q3 ಎಂದು ಕರೆಯುವ ಈ ಅವಧಿ ಜನವರಿಯಿಂದ ಸೆಪ್ಟೆಂಬರ್‌ವರೆಗೆ ವಿಸ್ತರಿಸುತ್ತದೆ. ಈ ಅವಧಿಯಲ್ಲಿ ಹೆಚ್ಚಿನ ನೇಮಕಾತಿ ಕಾರ್ಯಗಳು ಚುರುಕುಗೊಳ್ಳಲಿವೆ ಎಂದು ಕಂಪನಿಯು ನಿರೀಕ್ಷಿಸಿದೆ.
ಇನ್ಫೋಸಿಸ್ ಸಂಸ್ಥೆಯ ಮಹತ್ವಾಕಾಂಕ್ಷೆಗಳು
ಭಾರತದ ಎರಡನೇ ಅತಿದೊಡ್ಡ ಸಾಫ್ಟ್‌ವೇರ್ ಸೇವಾ ಕಂಪನಿ(Software Service Company)ಯಾದ ಇನ್ಫೋಸಿಸ್ ತನ್ನ ಆದಾಯದ 80% ಭಾಗವನ್ನು ಪಾಶ್ಚಿಮಾತ್ಯ ಮಾರುಕಟ್ಟೆಯಿಂದ ಪಡೆಯುತ್ತದೆ. ಗ್ರಾಹಕರಿಗೆ ಉತ್ತಮ ಸೇವೆ ಒದಗಿಸಲು ಮತ್ತು ಕಂಪನಿಯ ಭವಿಷ್ಯವನ್ನು ಬಲಪಡಿಸಲು ಹೊಸ ಪ್ರತಿಭಾವಂತ ಯುವಜನತೆಯನ್ನು ಉದ್ಯೋಗಕ್ಕೆ ಸೇರಿಸಿಕೊಳ್ಳುವ ಯೋಜನೆ ರೂಪಿಸಿದೆ.
ಉದ್ಯೋಗಿಗಳಿಗೆ ಮಹತ್ವಪೂರ್ಣ ಅವಕಾಶ
ಈ ಹಿಂದೆ IT ಕ್ಷೇತ್ರದಲ್ಲಿ ಆರ್ಥಿಕ ಕುಸಿತದಿಂದ ಉದ್ಯೋಗ ಕಳೆದುಕೊಂಡ ಕೆಲ ಇಂಜಿನಿಯರಿಂಗ್ ಪದವೀಧರರು ಈಗ ಪುನಃ ಉದ್ಯೋಗ ಅವಕಾಶಗಳಿಗಾಗಿ ಕಾತರರಾಗಿದ್ದರು. ಆದರೆ ಇನ್ಫೋಸಿಸ್‌ನಂತಹ ಕಂಪನಿಗಳು ಈಗ ನಿಧಾನಗತಿಯಲ್ಲಿ ಪ್ರಗತಿ ಸಾಧಿಸುತ್ತಿದ್ದು, ಯುವಜನತೆಗೆ ಹೊಸ ಭರವಸೆಗಳನ್ನು ಒದಗಿಸುತ್ತಿವೆ.
ಇನ್ಫೋಸಿಸ್‌ನಲ್ಲಿ ಕೆಲಸ ಮಾಡಲು ನೀವು ಇಚ್ಛಿಸುತ್ತಿದ್ದರೆ, ಈಗಲೇ ನಿಮ್ಮ ಕೌಶಲ್ಯವನ್ನು ಬೆಳೆಸಿ ಪೋಫೈಲ್ ಸಿದ್ಧಪಡಿಸಿಕೊಳ್ಳಿ. ಐಟಿ ಕ್ಷೇತ್ರದಲ್ಲಿ ಬೇಸಿಕ್ ಪ್ರೋಗ್ರಾಮಿಂಗ್+Basic Programming), ಡೇಟಾ ಅನಾಲಿಟಿಕ್ಸ್(Data Analytics), ಸೈಬರ್ ಸೆಕ್ಯುರಿಟಿ(Cyber Security), ಮತ್ತು ಆಜೀವಿಕ ಮ್ಯಾನೇಜ್ಮೆಂಟ್(Lifecycle Management) ಕ್ಷೇತ್ರಗಳಲ್ಲಿ ಪರಿಣತಿ ಹೊಂದುವ ಮೂಲಕ ನೀವು ಇನ್ಫೋಸಿಸ್ ನೇಮಕಾತಿ ಪ್ರಕ್ರಿಯೆಯಲ್ಲಿ ಉತ್ತೀರ್ಣರಾಗಬಹುದು.
ಅರ್ಹತೆಯ ನಿಯಮಗಳು(Eligibility Criteria):
ವಿದ್ಯಾರ್ಹತೆ: ಇಂಜಿನಿಯರಿಂಗ್ ಪದವಿ ಅಥವಾ ಸಮಾನ ತಾಂತ್ರಿಕ ಪದವಿಗಳನ್ನು ಹೊಂದಿರಬೇಕು.
ಕೌಶಲ್ಯ: ಕೋಡಿಂಗ್, ಡೇಟಾ ಪ್ರಾಸೆಸಿಂಗ್ ಮತ್ತು ಸಾಫ್ಟ್‌ವೇರ್ ಡೆವಲಪ್ಮೆಂಟ್ ಕ್ಷೇತ್ರಗಳಲ್ಲಿ ತಿಳುವಳಿಕೆ ಹೊಂದಿರಬೇಕು.
ಅನನ್ಯತೆ: ಹೊಸ ಹೊಸ ಆಲೋಚನೆಗಳನ್ನು ತರಲು ಸಿದ್ಧವಾಗಿರಬೇಕು.
ಇನ್ಫೋಸಿಸ್‌ನ ಈ ಯೋಜನೆ ಭಾರತೀಯ ಐಟಿ ಉದ್ಯೋಗ ಕ್ಷೇತ್ರದಲ್ಲಿ ಹೊಸ ಬಲವನ್ನು ತಂದುಕೊಡಲಿದ್ದು, ನಿಮ್ಮ ಭವಿಷ್ಯಕ್ಕೆ qಪ್ಲಾಟ್‌ಫಾರ್ಮ್ ಒದಗಿಸುತ್ತದೆ. ಬಲಿಷ್ಠ ಪಾಯಿಂಟ್ ಆಗಿರುವ ಈ ಅವಕಾಶವನ್ನು ನೀವು ಬಳಸಿಕೊಂಡು ನಿಮ್ಮ ವೃತ್ತಿಜೀವನವನ್ನು ಉತ್ತಮ ಗತಿಯಲ್ಲಿ ಮುನ್ನಡೆಸಲು ಸಿದ್ಧರಾಗಿರಿ.
ಈ ಮಾಹಿತಿಗಳನ್ನು ಓದಿ
ದಯವಿಟ್ಟು ಗಮನಿಸಿ: ನೀಡ್ಸ್ ಆಫ್ ಪಬ್ಲಿಕ್ ತನ್ನ ಓದುಗರಿಗೆ ನಿಖರವಾದ ಮತ್ತು ಅಧಿಕೃತ ಮಾಹಿತಿಗಳನ್ನು ಮಾತ್ರ ಪ್ರಕಟಿಸುತ್ತದೆ. ಇಲ್ಲಿ ನಾವು ಯಾವುದೇ ಅನಧಿಕೃತ ಮತ್ತು ಸುಳ್ಳು ಮಾಹಿತಿಯನ್ನು ಬಿತ್ತರಿಸುವುದಿಲ್ಲ.