ಭಾರತದಲ್ಲಿ ಎಲೆಕ್ಟ್ರಿಕ್ ಸ್ಕೂಟರ್ ಕ್ರಾಂತಿ: 150 ಕಿ.ಮೀ.ಗಿಂತ ಹೆಚ್ಚು ರೇಂಜ್ ಹೊಂದಿರುವ ಟಾಪ್-3 ಮಾದರಿಗಳು ಹೀಗಿವೆ.
ಭಾರತದಲ್ಲಿ ಎಲೆಕ್ಟ್ರಿಕ್ ಸ್ಕೂಟರ್‌ಗಳ (Electric scooter’s) ಜನಪ್ರಿಯತೆ ದಿನೇ ದಿನೇ ಹೆಚ್ಚಾಗುತ್ತಿದೆ. ಇಂಧನದ ಬೆಲೆ ಹೆಚ್ಚಾಗುತ್ತಿದ್ದು, ಪರಿಸರದ ಮೇಲೆ ಉಂಟಾಗುತ್ತಿರುವ ವಾಯುಮಾಲಿನ್ಯದ ಪರಿಣಾಮವನ್ನು ತಡೆಯಲು ಹಾಗೂ ತಂತ್ರಜ್ಞಾನದಲ್ಲಿ (In Technology) ಆಗುತ್ತಿರುವ ತ್ವರಿತ ಪ್ರಗತಿ ಎಲೆಕ್ಟ್ರಿಕ್ ದ್ವಿಚಕ್ರ ವಾಹನಗಳ (Electric two wheel vehicles) ಉತ್ತೇಜನಕ್ಕೆ ಕಾರಣವಾಗಿದೆ. ಕೆಲವು ವರ್ಷಗಳ ಹಿಂದಿನ ಬ್ಯಾಟರಿ ಬೆಂಕಿ ಅವಘಡಗಳ ವಿಷಯಗಳು ಎಲೆಕ್ಟ್ರಿಕ್ ವಾಹನಗಳ ವಿಶ್ವಾಸವನ್ನು ಕಡಿಮೆ ಮಾಡಿದರೂ, ಈಗ ಆಟೋಮೊಬೈಲ್ ತಂತ್ರಜ್ಞಾನದಲ್ಲಿ (Automobile Technology) ಸಾಕಷ್ಟು ಅಭಿವೃದ್ಧಿಯು ಕಂಡುಬಂದಿದೆ. ಇದು ಅವಘಡಗಳನ್ನು ಕಡಿಮೆ ಮಾಡುವುದರೊಂದಿಗೆ ಸ್ಕೂಟರ್‌ಗಳಿಗೆ ಮತ್ತೊಮ್ಮೆ ಗ್ರಾಹಕರ ವಿಶ್ವಾಸವನ್ನು ಕಟ್ಟಿಕೊಡುತ್ತಿದೆ.
ಸದ್ಯ, ಎಲೆಕ್ಟ್ರಿಕ್ ದ್ವಿಚಕ್ರ ವಾಹನಗಳ ಮಾರಾಟದಲ್ಲಿ ಗಣನೀಯ ಏರಿಕೆಯನ್ನು ನೋಡಬಹುದು. ಇಂಧನ ಚಾಲಿತ ವಾಹನಗಳಿಗೆ ಆಧುನಿಕ ಪರ್ಯಾಯವಾಗಿ ಎಲೆಕ್ಟ್ರಿಕ್ ಸ್ಕೂಟರ್‌ಗಳು ದೇಶದಾದ್ಯಂತ ಗಮನ ಸೆಳೆಯುತ್ತಿವೆ. ಈ ಮಾರುಕಟ್ಟೆಯಲ್ಲಿ 150 ಕಿ.ಮೀ.ಗಿಂತ ಹೆಚ್ಚಿನ ರೇಂಜ್ (Range) ನೀಡುವ ಟಾಪ್-3 ಸ್ಕೂಟರ್‌ಗಳು ಗ್ರಾಹಕರ ಮಧ್ಯೆ ವಿಶೇಷವಾಗಿ ಗಮನ ಸೆಳೆದಿವೆ. ಭಾರತದಲ್ಲಿ ಸದ್ದು ಮಾಡುತ್ತಿರುವ ಮೂರು ಪ್ರಮುಖ ಎಲೆಕ್ಟ್ರಿಕ್ ಸ್ಕೂಟರ್‌ಗಳ ಯಾವುವು ಎಂಬ ಸಂಪೂರ್ಣ ಮಾಹಿತಿಯನ್ನು ತಿಳಿದುಕೊಳ್ಳೋಣ ಬನ್ನಿ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ
1. ಬಜಾಜ್ ಚೇತಕ್ 35 ಸೀರಿಸ್ (Bajaj Chethak 35 Series) :
ಬಜಾಜ್ ಕಂಪನಿಯ 2025ರ ಚೇತಕ್ 35 ಸರಣಿಯ ಎಲೆಕ್ಟ್ರಿಕ್ ಸ್ಕೂಟರ್ ಗಳು ತಾಂತ್ರಿಕತೆಯುಳ್ಳ ವಿನ್ಯಾಸ ಮತ್ತು ಸುಧಾರಿತ ತಂತ್ರಜ್ಞಾನಗಳೊಂದಿಗೆ ಮಾರುಕಟ್ಟೆಗೆ ಪ್ರವೇಶಿಸುತ್ತಿದ್ದು, 3.5 ಕಿಲೋವ್ಯಾಟ್ (3.5 kilowatt) ಸಾಮರ್ಥ್ಯದ ಲಿಥಿಯಂ-ಐಯಾನ್ ಬ್ಯಾಟರಿಯಿಂದ ಚಾಲಿತವಾಗಿರುವ ಈ ಸ್ಕೂಟರ್, ಅತ್ಯಾಧುನಿಕ ಎಲೆಕ್ಟ್ರಿಕ್ ವಾಹನಗಳಲ್ಲಿ ಒಂದಾಗಿದೆ. ಇದರ ಪ್ರಾರಂಭಿಕ ಎಕ್ಸ್ ಶೋರೂಂ ಬೆಲೆ ರೂ.1.20 ಲಕ್ಷಗಳಾಗಿದ್ದು, ಇದು ಆಕರ್ಷಕ ಮತ್ತು ಸ್ಪರ್ಧಾತ್ಮಕವಾಗಿದೆ.
ಬಜಾಜ್ ಚೇತಕ್ 35 ಸೀರಿಸ್ ವಿಶೇಷತೆಗಳೇನು (Features) ?
ಈ ಸ್ಕೂಟರ್ ನಲ್ಲಿ 950-ವ್ಯಾಟ್ ಆನ್‌ಬೋರ್ಡ್ ಚಾರ್ಜರ್ ಇದ್ದು, ಕೇವಲ ಮೂರು ಗಂಟೆಗಳಲ್ಲಿ ಶೇ.80 ರಷ್ಟು ಬ್ಯಾಟರಿ ಚಾರ್ಜ್ (Battery charge) ಮಾಡಬಹುದಾಗಿದೆ. ಒಂದೇ ಬಾರಿ ಸಂಪೂರ್ಣ ಚಾರ್ಜ್ ಮಾಡಿದರೆ 153 ಕಿಲೋಮೀಟರ್‌ಗಳ ವಿಸ್ತೃತ ಶ್ರೇಣಿಯನ್ನು ನೀಡುತ್ತದೆ. ಇದು ದೈನಂದಿನ ಪ್ರಯಾಣಕ್ಕೆ ಸೂಕ್ತವಾಗಿದ್ದು, 73 ಕಿಲೋಮೀಟರ್‌ಗಳ ಗಂಟೆಯ ಗರಿಷ್ಠ ವೇಗ ಹೊಂದಿರುವ ಈ ಸ್ಕೂಟರ್, ನಗರಗಳಲ್ಲಿ ದ್ವಿಚಕ್ರ ವಾಹನಗಳನ್ನು ಹೆಚ್ಚು ಇಷ್ಟ ಪಡುವವರಿಗೆ ಉಪಯೋಗವಾಗಲಿದೆ.
ಇನ್ನು, ಚೇತಕ್ 35 ಸರಣಿಯ ಡಿಜಿಟಲ್ ಡಿಸ್ಪ್ಲೇ, ಸ್ಮಾರ್ಟ್ ಫೀಚರ್‌ಗಳು, ಮತ್ತು ಪರಿಸರ ಸ್ನೇಹಿ ಕಾರ್ಯಕ್ಷಮತೆ, ನವೀಕರಣೆಯ ಕಡೆಗೆ ಬಜಾಜ್ ಕಂಪನಿಯ ಬದ್ಧತೆಯನ್ನು ಸೂಚಿಸುತ್ತವೆ. 2025ರ ಹೊಸ ಮಾದರಿಯು ಬಜಾಜ್‌ನ ಪರಂಪರೆಯಲ್ಲೇ ಮತ್ತೊಂದು ಯಶಸ್ವಿ ಅಧ್ಯಾಯವನ್ನು ಬರೆಯುವಲ್ಲಿ ಯಾವುದೇ ಸಂಶಯವಿಲ್ಲ.
2. ಸಿಂಪಲ್ ಒನ್ (Simple one) :
ಬೆಂಗಳೂರು ಮೂಲದ ಎಲೆಕ್ಟ್ರಿಕ್ ದ್ವಿಚಕ್ರ ವಾಹನ ತಯಾರಕಕಂಪನಿ ಸಿಂಪಲ್ ಎನರ್ಜಿ, ತನ್ನ ನವೀಕರಿಸಿದ “ಸಿಂಪಲ್ ಒನ್” ಎಲೆಕ್ಟ್ರಿಕ್ ಸ್ಕೂಟರ್‌ನೊಂದಿಗೆ ಮಾರುಕಟ್ಟೆಯನ್ನು ಪ್ರಭಾವಿತಗೊಳಿಸುತ್ತಿದೆ. ದೈನಂದಿನ ಬಳಕೆಗೆ ವಿನ್ಯಾಸಗೊಳಿಸಿದ ಈ ಸ್ಕೂಟರ್ 30 ಲೀಟರ್ ಅಂಡರ್‌ಸೀಟ್ ಸ್ಟೋರೇಜ್ (Under seat storage) ಹೊಂದಿದ್ದು, ಸರಕು ಸಾಮಗ್ರಿಗಳನ್ನು ಸಾಗಿಸಲು ಅನುಕೂಲಕರವಾಗಿದೆ.
ಸಿಂಪಲ್ ಒನ್ ಸ್ಕೂಟರ್ ನ ವಿಶೇಷತೆಗಳೇನು(features) ?
ಈ ಸ್ಕೂಟರ್ ವಿಶೇಷತೆಗಳಲ್ಲಿ ಎಲ್ಇಡಿ ಲೈಟ್ ಸೆಟಪ್, 7 ಇಂಚಿನ ಟಿಎಫ್‌ಟಿ ಟಚ್‌ಸ್ಕ್ರೀನ್ ಡಿಸ್ಪ್ಲೇ, ಮತ್ತು ಬ್ಲೂಟೂತ್ ಸಂಪರ್ಕವನ್ನು ಒಳಗೊಂಡಿದೆ. ಬುದ್ಧಿವಂತ ತಂತ್ರಜ್ಞಾನಗಳನ್ನು ಹೊಂದಿರುವ ಈ ವಾಹನವು ಬಳಸಲು ಸುಲಭವಾಗಿದ್ದು, ಎಲ್ಲ ರೀತಿಯ ಗ್ರಹಕರಿಗೂ ಹೆಚ್ಚು ಇಷ್ಟವಾಗಲಿದೆ.
ಸಿಂಪಲ್ ಒನ್ ಸ್ಕೂಟರ್ ಬೆಲೆಯು ಎಕ್ಸ್ ಶೋರೂಂ ದರ (Ex Showroom price) ದಂತೆ ರೂ.1.66 ಲಕ್ಷಗಳಾಗಿದ್ದು, 8.5 ಕಿಲೋವ್ಯಾಟ್ ಸಾಮರ್ಥ್ಯದ ಶಕ್ತಿಯ ಮೋಟರ್ ಮತ್ತು 5.0 ಕಿಲೋವ್ಯಾಟ್ ಲಿಥಿಯಂ-ಐಯಾನ್ (Lithium-ion) ಬ್ಯಾಟರಿಯನ್ನು ಹೊಂದಿದೆ. ಬ್ಯಾಟರಿಯನ್ನು ಎರಡು ಪ್ಯಾಕ್‌ಗಳಾಗಿ ವಿನ್ಯಾಸಗೊಳಿಸಲಾಗಿದೆ. ಇನ್ನು, ಒಮ್ಮೆ ಸಂಪೂರ್ಣ ಚಾರ್ಜ್ ಮಾಡಿದರೆ, ಈ ಸ್ಕೂಟರ್ 212 ಕಿಲೋಮೀಟರ್ ವರೆಗೆ ದೂರ ಪ್ರಯಾಣಿಸಬಹುದು. 105 ಕಿಲೋಮೀಟರ್ ಗಂಟೆಯ ಗರಿಷ್ಠ ವೇಗ ಹೊಂದಿರುವ ಈ ಸ್ಕೂಟರ್ ವೇಗ ಮತ್ತು ಶ್ರೇಣಿಯ ಸಮತೋಲನವನ್ನು ನೀಡುತ್ತದೆ.
3. ಓಲಾ ಎಸ್ 1 ಪ್ರೊ (Ola S 1pro) :
ಭಾರತದಲ್ಲಿ ಅತಿಹೆಚ್ಚು ಮಾರಾಟವಾಗುತ್ತಿರುವ ಟಾಪ್ ಎಲೆಕ್ಟ್ರಿಕ್ ಸ್ಕೂಟರ್‌ಗಳಲ್ಲಿ ಓಲಾ ಎಸ್ 1 ಪ್ರೊ (Ola S 1pro) ಪ್ರಮುಖವಾದದ್ದು ಎನ್ನಬಹುದು. ಈ ಸ್ಕೂಟರ್ ನ ಎಕ್ಸ್ ಶೋರೂಂ ದರ ರೂ. 1.35 ಲಕ್ಷವಾಗಿದೆ. ಉಪಯುಕ್ತ ವೈಶಿಷ್ಟ್ಯಗಳನ್ನು ಹೊಂದಿರುವ ಈ ಸ್ಕೂಟರ್ ದೈನಂದಿನ ಪ್ರಯಾಣಕ್ಕಾಗಿ ಅತ್ಯುತ್ತಮ ಆಯ್ಕೆಯಾಗಿದೆ.
ಓಲಾ ಎಸ್ 1 ಪ್ರೊ ಸ್ಕೂಟರ್ ನ ಫೀಚರ್‌ಗಳು (Features) ಹೀಗವೆ :
ಎಲೆಕ್ಟ್ರಿಕ್ ಸ್ಕೂಟರ್‌ನಲ್ಲಿ ರಿಜನರೇಟಿವ್ ಬ್ರೇಕಿಂಗ್, ಗೂಗಲ್ ಮ್ಯಾಪ್ಸ್ ಕನೆಕ್ಟಿವಿಟಿ, ಪಾರ್ಟಿ ಮೋಡ್, ಬ್ಲೂಟೂತ್ ಇಂಟಿಗ್ರೇಷನ್ ಹಾಗೂ ನಾಲ್ಕು ರೈಡಿಂಗ್ ಮೋಡ್‌ಗಳಂತಹ ವೈಶಿಷ್ಟ್ಯಗಳಿವೆ. 805 ಎಂಎಂ ಸೀಟ್ ಎತ್ತರ ಮತ್ತು 12 ಇಂಚಿನ ಅಲಾಯ್ ವೀಲ್‌ಗಳು ಸ್ಕೂಟರ್‌ಗೆ ಉತ್ತಮ ಸ್ಥಿರತೆ ಮತ್ತು ಕಂಫರ್ಟ್ ನೀಡುತ್ತವೆ. ಆಧುನಿಕ ತಂತ್ರಜ್ಞಾನಗಳಿಂದ ಸ್ಕೂಟರ್ ಪ್ರಯಾಣವನ್ನು ಹೆಚ್ಚು ಅನುಕೂಲಕರ ಹಾಗೂ ಆಕರ್ಷಕವಾಗಿಸುತ್ತದೆ.
ಇನ್ನು ಈ ಸ್ಕೂಟರ್ ನ ಪರ್ಫಾರ್ಮೆನ್ಸ್ (Performence) ನೋಡುವುದಾದರೆ :
ಹೊಸ ಓಲಾ ಎಸ್ 1 ಪ್ರೊ 4 ಕಿಲೋವ್ಯಾಟ್ ಬ್ಯಾಟರಿಯನ್ನು ಹೊಂದಿದ್ದು, ಅದನ್ನು ಒಮ್ಮೆ ಚಾರ್ಜ್ ಮಾಡಿದರೆ 195 ಕಿಲೋಮೀಟರ್ ರೇಂಜ್ ಪಡೆಯಬಹುದು. ಇದರಿಂದ ದಿನದ ಪ್ರಯಾಣವನ್ನು ಖುಷಿಯಾಗಿ ಕಳೆಯಲು ಅನುಕೂಲವಾಗುತ್ತದೆ. ಒಟ್ಟಾರೆಯಾಗಿ ಓಲಾ ಎಸ್ 1 ಪ್ರೊ, ಇತ್ತೀಚಿನ ದಿನಗಳಲ್ಲಿ ಭಾರತದಲ್ಲಿ ಹೆಚ್ಚು ಮಾರಾಟವಾಗುತ್ತಿರುವ ಎಲೆಕ್ಟ್ರಿಕ್ ಸ್ಕೂಟರ್ ಆಗಿದೆ.
ಎಲೆಕ್ಟ್ರಿಕ್ ವಾಹನ ಕ್ಷೇತ್ರವು ತಂತ್ರಜ್ಞಾನ ಮತ್ತು ನಾವೀನ್ಯತೆಯಲ್ಲಿ ತ್ವರಿತ ಪ್ರಗತಿಯನ್ನು ಕಾಣುತ್ತಿದ್ದು, ಗ್ರಾಹಕರು ಇಂಧನ ಬಿಲ್‌ಗಳನ್ನು ಕಡಿಮೆ ಮಾಡುವುದರ ಜೊತೆಗೆ ಪರಿಸರ ಸ್ನೇಹಿ (Eco friendly) ಆಯ್ಕೆಗೆ ಹೆಚ್ಚು ಆಕರ್ಷಿತರಾಗುತ್ತಿದ್ದಾರೆ. ಈ ಮೂರು ಎಲೆಕ್ಟ್ರಿಕ್ ಸ್ಕೂಟರ್‌ಗಳು ಗ್ರಾಹಕ ಮನಸ್ಸನ್ನು ಗೆಲ್ಲುವಲ್ಲಿ ಯಾವುದೇ ಸಂಶಯವಿಲ್ಲ ಎನ್ನಬಹುದು.
ಈ ಮಾಹಿತಿಗಳನ್ನು ಓದಿ
ದಯವಿಟ್ಟು ಗಮನಿಸಿ: ನೀಡ್ಸ್ ಆಫ್ ಪಬ್ಲಿಕ್ ತನ್ನ ಓದುಗರಿಗೆ ನಿಖರವಾದ ಮತ್ತು ಅಧಿಕೃತ ಮಾಹಿತಿಗಳನ್ನು ಮಾತ್ರ ಪ್ರಕಟಿಸುತ್ತದೆ. ಇಲ್ಲಿ ನಾವು ಯಾವುದೇ ಅನಧಿಕೃತ ಮತ್ತು ಸುಳ್ಳು ಮಾಹಿತಿಯನ್ನು ಬಿತ್ತರಿಸುವುದಿಲ್ಲ
ದಯವಿಟ್ಟು ಗಮನಿಸಿ: ನೀಡ್ಸ್ ಆಫ್ ಪಬ್ಲಿಕ್ ತನ್ನ ಓದುಗರಿಗೆ ನಿಖರವಾದ ಮತ್ತು ಅಧಿಕೃತ ಮಾಹಿತಿಗಳನ್ನು ಮಾತ್ರ ಪ್ರಕಟಿಸುತ್ತದೆ. ಇಲ್ಲಿ ನಾವು ಯಾವುದೇ ಅನಧಿಕೃತ ಮತ್ತು ಸುಳ್ಳು ಮಾಹಿತಿಯನ್ನು ಬಿತ್ತರಿಸುವುದಿಲ್ಲ.