Karnataka Weather : ರಾಜ್ಯದ ಈ ಜಿಲ್ಲೆಗಳಿಗೆ ಭಾರೀ ಚಳಿ ಎಚ್ಚರಿಕೆ, ಹವಾಮಾನ ವರದಿ, ಮುನ್ಸೂಚನೆ

Picsart 25 01 23 08 00 25 878

ಕರ್ನಾಟಕದಲ್ಲಿ(Karnataka) ಚಳಿ ಪ್ರಮಾಣ ಹೆಚ್ಚಳ: ಬೆಂಗಳೂರು(Bangalore) ಸೇರಿ ಹಲವೆಡೆ ಮುಂದಿನ ಮೂರು ದಿನ ಎಚ್ಚರಿಕೆ.

ಕರ್ನಾಟಕದ ಹವಾಮಾನ (Weather) ದಲ್ಲಿ ಕೆಲವೊಂದು ಬದಲಾವಣೆ ಕಾಣಿಸಿಕೊಳ್ಳುತ್ತಿದೆ. ಕಳೆದ ಕೆಲವು ದಿನಗಳಿಂದ ರಾಜ್ಯದ ವಿವಿಧೆಡೆ ಭಾರೀ ಮಳೆಯ ಅಬ್ಬರ ಕಂಡುಬಂದಿತ್ತು. ಬೆಂಗಳೂರಿನಂತಹ ನಗರಗಳು ಸಹ ತುಂತುರು ಮಳೆಯ ಅನುಭವವನ್ನು ಪಡೆದಿದ್ದವು. ಆದರೆ, ಇದೀಗ ಬಂಗಾಳಕೊಲ್ಲಿ ಸಮುದ್ರ (Bay of Bengal Sea) ಭಾಗದಲ್ಲಿ ಉಂಟಾಗಿದ್ದ ವೈಪರಿತ್ಯಗಳು ಕಡಿಮೆಯಾಗುತ್ತಿರುವ ಹಿನ್ನೆಲೆಯಲ್ಲಿ ಮಳೆಯ ಪ್ರಮಾಣ ತಗ್ಗಿದ್ದು, ವಾತಾವರಣ ಸಹಜ ಸ್ಥಿತಿಯತ್ತ ಸಾಗುತ್ತಿದೆ

ಭಾರತೀಯ ಹವಾಮಾನ ಇಲಾಖೆಯ (IMD) ವರದಿ ಪ್ರಕಾರ, ಮುಂದಿನ ದಿನಗಳಲ್ಲಿ ರಾಜ್ಯದ ಕೆಲ ಭಾಗಗಳಲ್ಲಿ ಚಳಿ (cold) ಪ್ರಮಾಣ ಹೆಚ್ಚಾಗಿ ತೀವ್ರ ಮಂಜು, ತುಂತುರು ಮಳೆಯಾಗುವ ಸಂಭವವಿದೆ. ಬೆಂಗಳೂರು ಸೇರಿ ಕೆಲವು ಒಳನಾಡು ಜಿಲ್ಲೆಗಳಲ್ಲಿ ಚಳಿ ಪ್ರಮಾಣದಲ್ಲಿ ಏರಿಕೆಯು ಜನಜೀವನಕ್ಕೆ ತುಂಬಾ ಪರಿಣಾಮ ಬೀರುತ್ತಿದೆ. ಯಾವಯಾವ ಜಿಲ್ಲೆಗಳಲ್ಲಿ ಹೆಚ್ಚು ಚಳಿ ಇರಲಿದೆ ಎಂಬ ಸಂಪೂರ್ಣ ಮಾಹಿತಿಯನ್ನು ತಿಳಿದುಕೊಳ್ಳೋಣ ಬನ್ನಿ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ

ಬೆಂಗಳೂರಿನಲ್ಲಿ ಭಾರಿ ಚಳಿ (Cold in Bengaluru) :

ಬೆಂಗಳೂರಿನಲ್ಲಿ ಇತ್ತೀಚೆಗೆ ಅಂದರೆ ಸೋಮವಾರದಿಂದ ಚಳಿಯ ಪ್ರಮಾಣದಲ್ಲಿ ಏರಿಕೆ ಕಂಡುಬಂದಿದ್ದು, ಮಧ್ಯಾಹ್ನದ ನಂತರ ತಾಪಮಾನ ಸಡಿಲವಾಗುತ್ತದೆ. ಗರಿಷ್ಠ ತಾಪಮಾನ ಏರಿಳಿತವನ್ನು ಅನುಭವಿಸುತ್ತಿರುವ ರಾಜ್ಯದ ಆಂತರಿಕ ಭಾಗಗಳಲ್ಲಿ ಚಳಿ ಮತ್ತು ಬಿಸಿಲಿನ ನಡುವೆ ವೈಪರಿತ್ಯ ಬೆಳಗ್ಗೆ ಮತ್ತು ಮಧ್ಯಾಹ್ನದಲ್ಲಿ ಏರಿಕೆಯಾಗುತ್ತಿವೆ. ತುಮಕೂರು, ಮಂಡ್ಯ, ಮೈಸೂರು, ರಾಮನಗರ, ಹಾಸನ, ಚಾಮರಾಜನಗರ, ಮತ್ತು ಬಳ್ಳಾರಿ ಸೇರಿದಂತೆ ಹಲವು ಜಿಲ್ಲೆಗಳಲ್ಲಿ ಜನರು ಇದೇ ರೀತಿಯ ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ.

ಅತ್ಯಧಿಕ ಚಳಿ ಪ್ರದೇಶಗಳು ಯಾವುವು?

IMD ನೀಡಿರುವ ಮಾಹಿತಿ ಪ್ರಕಾರ, ಚಿಕ್ಕಮಗಳೂರು, ಶಿವಮೊಗ್ಗ, ಹಾಸನ, ಮಡಿಕೇರಿ ಮತ್ತು ತುಮಕೂರು ಭಾಗಗಳಲ್ಲಿ ಚಳಿ ಪ್ರಮಾಣ ಗಣನೀಯವಾಗಿ ಹೆಚ್ಚಾಗಿದೆ. ಬೀದರ್ ಜಿಲ್ಲೆಯಲ್ಲಿ ಕನಿಷ್ಠ ಉಷ್ಣಾಂಶ 11 ಡಿಗ್ರಿ ಸೆಲ್ಸಿಯಸ್‌ಗೆ ಕುಸಿದಿದ್ದು, ಚಿಕ್ಕಮಗಳೂರಿನಲ್ಲಿ 12 ಡಿಗ್ರಿಯ ತಾಪಮಾನ (12 degree temperature) ದಾಖಲಾಗಿದೆ. ಧಾರವಾಡ, ವಿಜಯಪುರ, ಕೋಲಾರದ ಚಿಂತಾಮಣಿಯಲ್ಲಿ ಕನಿಷ್ಠ 14 ಡಿಗ್ರಿ, ಬೆಳಗಾವಿ ಏರ್‌ಪೋರ್ಟ್‌ನಲ್ಲಿ 15 ಡಿಗ್ರಿ ತಾಪಮಾನ ಕಂಡು ಬಂದಿದೆ.

ಈ ಪ್ರದೇಶಗಳಲ್ಲಿ ಬೆಳಗಿನ ಜಾವ ತೀವ್ರ ಚಳಿ ಮತ್ತು ದಟ್ಟ ಮಂಜು ಕಾಣಿಸಿಕೊಂಡರೆ, ಮಧ್ಯಾಹ್ನ ಬಿಸಿಲಿನ ಉಷ್ಣಾಂಶ ಏರಿಕೆ ಜನರನ್ನು ಅಸ್ವಸ್ಥಗೊಳಿಸುತ್ತಿದೆ.

ಮುಂದಿನ ದಿನಗಳಲ್ಲಿ ಎಚ್ಚರಿಕೆಯಿಂದ ಇರಬೇಕಾಗಿ ಮುನ್ಸೂಚನೆ (forecast) :

ಮಂಗಳವಾರ ಬೆಂಗಳೂರಿನಲ್ಲಿ ಕನಿಷ್ಠ ತಾಪಮಾನ 15 ಡಿಗ್ರಿ ಸೆಲ್ಸಿಯಸ್ ದಾಖಲಾಗಿದ್ದು, ಮುಂದಿನ ಮೂರು ದಿನಗಳಲ್ಲಿ ತೀವ್ರ ಚಳಿಯ ವಾತಾವರಣ ಮುಂದುವರಿಯುವ ಸಾಧ್ಯತೆಯಿದೆ. ದಟ್ಟ ಮಂಜು ಮತ್ತು ತುಂತುರು ಮಳೆಯಯಾಗುವ ಸಾಧ್ಯತೆ ಇದ್ದು, ವೈದ್ಯರು ಚಳಿ ಪ್ರಭಾವದಿಂದಾಗಿ ಆರೋಗ್ಯದ ಕಡೆ ಗಮನಹರಿಸುವಂತೆ ಜನರಿಗೆ ಎಚ್ಚರಿಕೆ ನೀಡಿದ್ದಾರೆ.

ಹವಾಮಾನ ವೈಪರಿತ್ಯದ ಪರಿಣಾಮವೇನು ?

ರಾಜ್ಯದ ಹವಾಮಾನ ವೈಪರಿತ್ಯಗಳು ಮುಂದಿನ ಒಂದು ವಾರ  ಮುಂದುವರಿಯಲಿದ್ದು, ಭಾರೀ ಮಳೆಯ ಯಾವುದೇ ಸಾಧ್ಯತೆ ಇಲ್ಲ ಎಂದು IMD ಸ್ಪಷ್ಟಪಡಿಸಿದೆ. ಆದರೆ, ಬೆಳಗಿನ ತೀವ್ರ ಚಳಿಯಿಂದಾಗಿ ಕಾರ್ಮಿಕರು ಮತ್ತು ಬಡವರು ಆಘಾತಕ್ಕೀಡಾಗುವ ಸಾಧ್ಯತೆ ಹೆಚ್ಚಿದೆ. ಹೀಗಾಗಿ ಮುಂಜಾಗ್ರತೆಯ ಕ್ರಮಗಳನ್ನು ಕೈಗೊಳ್ಳುವ ಅಗತ್ಯವಿದೆ.

ರಾಜ್ಯದ ವಿವಿಧೆಡೆಗಳಲ್ಲಿ ಚಳಿಯ ಪ್ರಭಾವದಿಂದಲೂ, ಮಧ್ಯಾಹ್ನ ಬಿಸಿಲಿನ ತೀವ್ರತೆಯಿಂದಲೂ ಜನಜೀವನದಲ್ಲಿ ಸಂಕಷ್ಟ ಎದುರಾಗುತ್ತಿದ್ದು, ಜನರು ಹೆಚ್ಚರಿಕೆಯಿಂದ ಇರಬೇಕು ಎಂದು ಹವಾಮಾನ ಇಲಾಖೆ ತಿಳಿಸಿದೆ.

ಅಂತೆಯೇ,ನೀವೂ ನಿಮ್ಮ ಪತ್ನಿ ಅಥವಾ ತಾಯಿಯ ಹೆಸರಿನಲ್ಲಿ MSSC ಖಾತೆ ತೆರೆಯಿರಿ ಮತ್ತು ಉತ್ತಮ ಬಡ್ಡಿಯ ಲಾಭವನ್ನು ಅನುಭವಿಸಿ!

ಈ ಮಾಹಿತಿಗಳನ್ನು ಓದಿ

 

ದಯವಿಟ್ಟು ಗಮನಿಸಿ: ನೀಡ್ಸ್ ಆಫ್ ಪಬ್ಲಿಕ್ ತನ್ನ ಓದುಗರಿಗೆ ನಿಖರವಾದ ಮತ್ತು ಅಧಿಕೃತ ಮಾಹಿತಿಗಳನ್ನು ಮಾತ್ರ ಪ್ರಕಟಿಸುತ್ತದೆ. ಇಲ್ಲಿ ನಾವು ಯಾವುದೇ ಅನಧಿಕೃತ ಮತ್ತು ಸುಳ್ಳು ಮಾಹಿತಿಯನ್ನು ಬಿತ್ತರಿಸುವುದಿಲ್ಲ.

WhatsApp Group Join Now
Telegram Group Join Now

Related Posts

Leave a Reply

Your email address will not be published. Required fields are marked *

error: Content is protected !!