ದಾವಣಗೆರೆಯಲ್ಲಿ ಜನವರಿ 24 ರಂದು ವಿವಿಧ ಮಟ್ಟದ ವಿದ್ಯಾರ್ಥಿಗಳಿಗಾಗಿ ಉದ್ಯೋಗ ಮೇಳ
ದಾವಣಗೆರೆ (Davanagere) ಜಿಲ್ಲೆಯ ಯುವಕರಿಗೆ ತಮ್ಮ ಭವಿಷ್ಯದ ವೃತ್ತಿ ನಿರ್ಮಾಣದಲ್ಲಿ ಸಹಾಯ ಮಾಡಲು, ಜಿಲ್ಲಾಡಳಿತದ ಉದ್ಯೋಗ ವಿನಿಮಯ ಕೇಂದ್ರ ಮತ್ತು ಮಾದರಿ ವೃತ್ತಿ ಕೇಂದ್ರದ ವತಿಯಿಂದ ಜನವರಿ 24 ರಂದು ಉಚಿತ ಉದ್ಯೋಗ ಮೇಳವನ್ನು (Free job fair) ಆಯೋಜಿಸಲಾಗಿದೆ. ಈ ಮೇಳವು ಬೆಳಗ್ಗೆ 10 ಗಂಟೆಯಿಂದ ಜಿಲ್ಲಾಧಿಕಾರಿ ಕಚೇರಿ ಆವರಣದ ಕೊಠಡಿ ಸಂಖ್ಯೆ 51ರಲ್ಲಿ ನಡೆಯಲಿದೆ. ಈ ಕುರಿತು ಸಂಪೂರ್ಣವಾದ ಮಾಹಿತಿ ಕೆಳಗೆ ಕೊಡಲಾಗಿದೆ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ
ಈ ಉದ್ಯೋಗ ಮೇಳದಲ್ಲಿ ಖಾಸಗಿ ಸಂಸ್ಥೆಗಳು (Private companies) ಭಾಗವಹಿಸಲಿದ್ದು, ತಮ್ಮ ಸಂಸ್ಥೆಗಳಲ್ಲಿ ಖಾಲಿ ಇರುವ ಹುದ್ದೆಗಳಿಗೆ ಆಯ್ಕೆಯನ್ನು ನಡೆಸಲಿದ್ದು, ಐಟಿಐ, ಡಿಪ್ಲೋಮಾ, ಪಿಯುಸಿ, ಪದವಿ ಮತ್ತು ಸ್ನಾತಕೋತ್ತರ ಪದವಿ ವಿದ್ಯಾರ್ಹತೆಯನ್ನು ಹೊಂದಿರುವ ಅಭ್ಯರ್ಥಿಗಳಿಗೆ ಉದ್ಯೋಗದ ಅವಕಾಶಗಳು ಲಭ್ಯವಿದ್ದು, ಕಂಪನಿಗಳು ನೇರ ಸಂದರ್ಶನಗಳ ಮೂಲಕ ನೇಮಕಾತಿ ಪ್ರಕ್ರಿಯೆ ನಡೆಸಲಿವೆ.
ಅಭ್ಯರ್ಥಿಗಳಿಗೆ ಮಾರ್ಗಸೂಚಿ:
ಈ ಮೇಳದಲ್ಲಿ ಭಾಗವಹಿಸಲು ಆಸಕ್ತ ಅಭ್ಯರ್ಥಿಗಳು ಕನಿಷ್ಠ ಐದು ಪ್ರತಿ ತಮ್ಮ ಸ್ವವಿವರ (Biodata) ಮತ್ತು ಆಧಾರ್ ಸಂಖ್ಯೆ ಹೊಂದಿರಬೇಕು. ನೇರವಾಗಿ ಮೇಳಕ್ಕೆ ಹಾಜರಾಗುವ ಮೂಲಕ ಉದ್ಯೋಗದ ಅವಕಾಶವನ್ನು ಕಳೆದುಕೊಳ್ಳದೇ ಬಳಸಿಕೊಳ್ಳಲು ಆಯೋಜಕರು ಕರೆ ನೀಡಿದ್ದಾರೆ.
ಹೆಚ್ಚಿನ ಮಾಹಿತಿಗಾಗಿ (For more details) ಅಥವಾ ಸಂದೇಹಗಳಿಗೆ, ದೂ.ಸಂ: 7483808321 ಅನ್ನು ಸಂಪರ್ಕಿಸಲು ಉದ್ಯೋಗಾಧಿಕಾರಿ ರವೀಂದ್ರ.ಡಿ. ವಿನಂತಿ ಮಾಡಿದ್ದಾರೆ.
ಈ ಉದ್ಯೋಗ ಮೇಳವು ದಾವಣಗೆರೆ ಜಿಲ್ಲೆಯ ಎಲ್ಲಾ ಆಕಾಂಕ್ಷಿ ಉದ್ಯೋಗಿಗಳಿಗೂ ತಾವು ಕನಸಿನಲ್ಲಿ ಕಾಣುವ ವೃತ್ತಿಯತ್ತ ಕೈಹಿಡಿಯುವಂತೆ ಪ್ರೇರೇಪಿಸಲಿದ್ದು, ಎಲ್ಲ ಅರ್ಹ ಫಲಾನುಭವಿಗಳು ಇದರ ಸದುಪಯೋಗ ಪಡೆದುಕೊಳ್ಳಬೇಕು.
ಈ ಮಾಹಿತಿಗಳನ್ನು ಓದಿ
ದಯವಿಟ್ಟು ಗಮನಿಸಿ: ನೀಡ್ಸ್ ಆಫ್ ಪಬ್ಲಿಕ್ ತನ್ನ ಓದುಗರಿಗೆ ನಿಖರವಾದ ಮತ್ತು ಅಧಿಕೃತ ಮಾಹಿತಿಗಳನ್ನು ಮಾತ್ರ ಪ್ರಕಟಿಸುತ್ತದೆ. ಇಲ್ಲಿ ನಾವು ಯಾವುದೇ ಅನಧಿಕೃತ ಮತ್ತು ಸುಳ್ಳು ಮಾಹಿತಿಯನ್ನು ಬಿತ್ತರಿಸುವುದಿಲ್ಲ.