ರೈಲ್ವೆ ಉದ್ಯೋಗಕ್ಕಾಗಿ ಸುವರ್ಣಾವಕಾಶ: 32,438 ಹುದ್ದೆಗಳ ನೇಮಕಾತಿ
ಭಾರತೀಯ ರೈಲ್ವೆ ನೇಮಕಾತಿ ಮಂಡಳಿ (Indian Railway Recruitment Board) 2025ನೇ ಸಾಲಿನ ಲೆವೆಲ್ 1 ಹುದ್ದೆಗಳಿಗೆ ಭರ್ಜರಿ ನೇಮಕಾತಿ ಪ್ರಕಟಣೆ ನೀಡಿದ್ದು, 32,438 ಹುದ್ದೆಗಳ ಭರ್ತಿಗೆ ಆನ್‌ಲೈನ್ ಅರ್ಜಿ ಪ್ರಕ್ರಿಯೆ ಪ್ರಾರಂಭವಾಗಿದೆ. ಸರ್ಕಾರಿ ನೌಕರಿಗೆ ಕನಸು ಕಾಣುವ ಲಕ್ಷಾಂತರ ಅಭ್ಯರ್ಥಿಗಳಿಗೆ ಈ ಅಧಿಸೂಚನೆ ಸಿಹಿ ಸುದ್ದಿ ತಂದಿದ್ದು, ರೈಲ್ವೆಯಂತಹ ಪ್ರತಿಷ್ಠಿತ ಸಂಸ್ಥೆಯಲ್ಲಿ ಕೆಲಸ ಮಾಡಲು ಇದೊಂದು ಅಪೂರ್ವ ಅವಕಾಶ. ಈ ನೇಮಕಾತಿ 7ನೇ ವೇತನ ಆಯೋಗದ (7th pay commission) ಪ್ರಕಾರ ಸಂಬಳ ವಿನ್ಯಾಸವನ್ನು ಹೊಂದಿದ್ದು, ರೈಲ್ವೆಯ ವಿವಿಧ ವಿಭಾಗಗಳಲ್ಲಿ ಉದ್ಯೋಗಾವಕಾಶಗಳನ್ನು ಒದಗಿಸುತ್ತದೆ. ಯಾವ ಯಾವ ಭಾಗಗಳಲ್ಲಿ ಉದ್ಯೋಗವನ್ನು ಒದಗಿಸುತ್ತಿದೆ? ಹೇಗೆ ಅರ್ಜಿ ಸಲ್ಲಿಸಬೇಕು? ಎಂಬ ಸಂಪೂರ್ಣ ಮಾಹಿತಿಯನ್ನು ತಿಳಿದುಕೊಳ್ಳೋಣ ಬನ್ನಿ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ
ಅಧಿಸೂಚನೆಯ ವಿವರಗಳು ಹೀಗಿವೆ :
ಅರ್ಜಿ (Application) ಸಲ್ಲಿಕೆ ಪ್ರಕ್ರಿಯೆ ಜನವರಿ 23, 2025 ರಿಂದ ಫೆಬ್ರವರಿ 22, 2025ರವರೆಗೆ ಚಾಲ್ತಿಯಲ್ಲಿದ್ದು, ಅಧಿಕೃತ ವೆಬ್‌ಸೈಟ್ (Website) rrbahmedabad.gov.in ಮೂಲಕ ಅರ್ಜಿಗಳನ್ನು ಸಲ್ಲಿಸಬಹುದು. ನೇಮಕಾತಿ ಅಡಿಯಲ್ಲಿ ಬರುವ ಹುದ್ದೆಗಳು ದೇಶದ ವಿವಿಧ ಜೋನ್‌ಗಳಿಗೆ ಸಂಬಂಧಿಸಿದೆ. ವಯೋಮಿತಿ 18 ರಿಂದ 36 ವರ್ಷಗಳಿದ್ದು, ಕಾಯ್ದಿರಿಸಿದ ವರ್ಗಗಳ ಅಭ್ಯರ್ಥಿಗಳಿಗೆ ಸರ್ಕಾರದ ನಿಯಮಾನುಸಾರ ವಯೋಮಿತಿಯಲ್ಲಿ ಸಡಿಲಿಕೆ ನೀಡಲಾಗುತ್ತದೆ.
ಅರ್ಜಿ ಶುಲ್ಕದ (Application fee) ವಿವರಗಳು ಕೆಳಗಿನಂತಿವೆ :
ಸಾಮಾನ್ಯ ವರ್ಗ: ₹500
ಪಿಡಬ್ಲ್ಯೂಬಿಡಿ, ಮಹಿಳಾ, ಲಿಂಗಾಯತ, ಎಸ್‌ಸಿ/ಎಸ್‌ಟಿ, ಅಲ್ಪಸಂಖ್ಯಾತ ಮತ್ತು ಇಬಿಸಿ ವರ್ಗಗಳು: ₹250
ಆನ್‌ಲೈನ್ ಮೋಡ್ ಮೂಲಕ ಈ ಶುಲ್ಕವನ್ನು ಪಾವತಿಸಬಹುದು.
ಅರ್ಜಿ ಸಲ್ಲಿಸುವ ವಿಧಾನ ಹೇಗೆ ?
1. ಅಧಿಕೃತ ವೆಬ್‌ಸೈಟ್ rrbahmedabad.gov.in ಗೆ ಭೇಟಿ ನೀಡಿ.
2. ಮುಖಪುಟದಲ್ಲಿ “ನೇಮಕಾತಿ” ವಿಭಾಗದಲ್ಲಿ ಲಭ್ಯವಿರುವ ಲಿಂಕ್ ಮೇಲೆ ಕ್ಲಿಕ್ ಮಾಡಿ.
3. ಫಾರ್ಮ್ ನಲ್ಲಿ ಅಗತ್ಯವಾದ ಮಾಹಿತಿಗಳನ್ನು ಭರ್ತಿ ಮಾಡಿ.
4. ಅಟೆಚ್ಮೆಂಟ್ ಆಗಿರುವ ದಾಖಲೆಗಳನ್ನು ಅಪ್ಲೋಡ್ ಮಾಡಿ.
5. ಶುಲ್ಕ ಪಾವತಿಸಿ.
6. ಅರ್ಜಿಯನ್ನು ಸಲ್ಲಿಸಿದ ಬಳಿಕ ಪ್ರಿಂಟ್ ಔಟ್ ತೆಗೆದುಕೊಳ್ಳಿ.
ನೇಮಕಾತಿ ಪ್ರಕ್ರಿಯೆ (Recruitment process) :
ಅಭ್ಯರ್ಥಿಗಳು ಲಿಖಿತ ಪರೀಕ್ಷೆ, ದೈಹಿಕ ಸಾಮರ್ಥ್ಯ ಪರೀಕ್ಷೆ (PET), ದಾಖಲೆಗಳ ಪರಿಶೀಲನೆ, ಮತ್ತು ವೈದ್ಯಕೀಯ ಪರೀಕ್ಷೆಯಂತೆ ವಿವಿಧ ಹಂತಗಳಲ್ಲಿ ತುರ್ತು ಶ್ರೇಣಿಯಲ್ಲಿಯೇ ನೇಮಕಾತಿ ಪ್ರಕ್ರಿಯೆ ನಡೆಯಲಿದೆ.
ಉದ್ಯೋಗದ ಮಹತ್ವವೇನು :
ಭಾರತೀಯ ರೈಲ್ವೆಯು ದೇಶದ ಅತ್ಯಂತ ದೊಡ್ಡ ಉದ್ಯೋಗಗಳಲ್ಲಿ ಒಂದಾಗಿದೆ. ಈ ನೇಮಕಾತಿ ಅಭ್ಯರ್ಥಿಗಳಿಗೆ ಉದ್ಯೋಗದಲ್ಲಿ ಸ್ಥಿರತೆ ಮತ್ತು ಉತ್ತಮ ಭವಿಷ್ಯವನ್ನು ರೂಪಿಸಿಕೊಡುತ್ತದೆ. ಹೆಚ್ಚಿನ ಮಾಹಿತಿಗಾಗಿ, rrbahmedabad.gov.in ವೆಬ್‌ಸೈಟ್ ಗೆ ಭೇಟಿ ನೀಡಿ.
ಗಮನಿಸಿ (Notice) :
ಅರ್ಜಿ ಪ್ರಾರಂಭ ದಿನಾಂಕ: ಜನವರಿ 23, 2025
ಅರ್ಜಿ ಕೊನೆಯ ದಿನಾಂಕ: ಫೆಬ್ರವರಿ 22, 2025
ಈ ಮಾಹಿತಿಗಳನ್ನು ಓದಿ
ದಯವಿಟ್ಟು ಗಮನಿಸಿ: ನೀಡ್ಸ್ ಆಫ್ ಪಬ್ಲಿಕ್ ತನ್ನ ಓದುಗರಿಗೆ ನಿಖರವಾದ ಮತ್ತು ಅಧಿಕೃತ ಮಾಹಿತಿಗಳನ್ನು ಮಾತ್ರ ಪ್ರಕಟಿಸುತ್ತದೆ. ಇಲ್ಲಿ ನಾವು ಯಾವುದೇ ಅನಧಿಕೃತ ಮತ್ತು ಸುಳ್ಳು ಮಾಹಿತಿಯನ್ನು ಬಿತ್ತರಿಸುವುದಿಲ್ಲ.