E-Khata Update: ಆಸ್ತಿ ಮಾಲೀಕರೇ ಗಮನಿಸಿ, ಅಂತಿಮ ಇ-ಖಾತೆ ಪಡೆಯುವುದು ಹೇಗೆ? ಇಲ್ಲಿದೆ ವಿವರ 

Picsart 25 02 01 14 05 04 451

ಬೆಂಗಳೂರು ಆಸ್ತಿ ಮಾಲೀಕರಿಗೆ(property owners) ಗುಡ್ ನ್ಯೂಸ್: ಅಂತಿಮ ಇ-ಖಾತಾ(e-Katha) ಡೌನ್‌ಲೋಡ್ ಪ್ರಕ್ರಿಯೆ ಪ್ರಾರಂಭ!

ಬೆಂಗಳೂರು ನಗರ ವ್ಯಾಪ್ತಿಯ ಆಸ್ತಿ ಮಾಲೀಕರಿಗೆ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ಮೌಲ್ಯಯುತ ಸೇವೆಗಳನ್ನು ಪೂರೈಸಲು ನಿರಂತರವಾಗಿ ವಿವಿಧ ನವೀಕರಣಗಳನ್ನು ಜಾರಿಗೆ ತರುತ್ತಿದೆ. ಅದರಲ್ಲೂ ಕಂದಾಯ ವ್ಯವಸ್ಥೆಯಲ್ಲಿ ಪಾರದರ್ಶಕತೆ ಮತ್ತು ಸುಲಭಗೊಳಿಸುವ ಉದ್ದೇಶದಿಂದ ಬಿಬಿಎಂಪಿ(BBMP) ಇ-ಖಾತಾ ಸೇವೆಯನ್ನು ಡಿಜಿಟಲೀಕರಣಗೊಳಿಸಿದೆ(Digitized). ಈ ನಿಟ್ಟಿನಲ್ಲಿ, ನಗರದಲ್ಲಿ ಹಲವಾರು ಆಸ್ತಿಗಳಿಗೆ ಅಂತಿಮ ಇ-ಖಾತಾ (Final E-Khata) ಹಂಚಿಕೆ ಪ್ರಕ್ರಿಯೆ ಪ್ರಾರಂಭವಾಗಿದೆ. ಇನ್ನು ಆಸ್ತಿ ಮಾಲೀಕರಿಗೆ ಅಂತಿಮ ಇ-ಖಾತಾ ಡೌನ್‌ಲೋಡ್ ಮಾಡಿಕೊಳ್ಳುವಂತೆ ತಿಳಿಸಲಾಗಿದೆ. ಹಾಗಾದರೆ ಫೈನಲ್ ಇ-ಖಾತಾ ಡೌನ್‌ಲೋಡ್ ಮಾಡಿಕೊಳ್ಳುವುದು ಹೇಗೆ? ಎಂಬ ಸಂಪೂರ್ಣ ಮಾಹಿತಿಯನ್ನು ತಿಳಿದುಕೊಳ್ಳೋಣ ಬನ್ನಿ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ

ಇ-ಖಾತಾ ಸೇವೆಯು ಆಸ್ತಿ ಮಾಲೀಕರಿಗೆ(property owners) ನೇರವಾಗಿ ಲಭ್ಯವಾಗುವಂತೆ ತಯಾರಿಸಲಾಗಿದ್ದು, ಇದರಿಂದ ಆಸ್ತಿಯ ಸ್ವಾಮ್ಯವನ್ನು ಸಾಬೀತುಪಡಿಸುವುದು ಸುಲಭವಾಗುತ್ತದೆ. ಹೆಚ್ಚಿನ ಸಂಖ್ಯೆಯ ಆಸ್ತಿಗಳನ್ನು ಡಿಜಿಟಲೀಕರಣಗೊಳಿಸುವ ಪ್ರಯತ್ನವಾಗಿ, ಬಿಬಿಎಂಪಿ ಈಗಾಗಲೇ 22 ಲಕ್ಷಕ್ಕೂ(22 lakhs) ಹೆಚ್ಚು ಆಸ್ತಿಗಳಿಗೆ ಕರಡು ಇ-ಖಾತಾಗಳನ್ನು ವಿತರಿಸಿದೆ. ಇದೀಗ ಅಂತಿಮ ಇ-ಖಾತಾ ಡೌನ್‌ಲೋಡ್( e-Katha Download ) ಮಾಡಿಕೊಳ್ಳುವ ಪ್ರಕ್ರಿಯೆ ಇನ್ನಷ್ಟು ಸುಗಮವಾಗಿದೆ.

ಅಂತಿಮ ಇ-ಖಾತೆ ಪಡೆಯಲು ಅನುಸರಿಸಬೇಕಾದ ಕ್ರಮಗಳು ಹೀಗಿವೆ :

ನಿಮ್ಮ ಆಸ್ತಿಗೆ ಸಂಬಂಧಿಸಿದ ಅಂತಿಮ ಇ-ಖಾತಾವನ್ನು ಡೌನ್‌ಲೋಡ್ ಮಾಡಿಕೊಳ್ಳಲು, ನೀವೇ ನೇರವಾಗಿ ಬಿಬಿಎಂಪಿಯ ಅಧಿಕೃತ ವೆಬ್‌ಸೈಟ್ ಗೆ(Official website of BBMP) ಭೇಟಿ ನೀಡಬಹುದು. ಒಟ್ಟು 22 ಲಕ್ಷಕ್ಕೂ ಹೆಚ್ಚು ಆಸ್ತಿಗಳಿಗೆ ಕರಡು ಇ-ಖಾತಾಗಳನ್ನು ವಾರ್ಡ್‌ವಾರು ಆನ್‌ಲೈನ್‌ನಲ್ಲಿ(online) ಅಧಿಕೃತ ವೆಬ್‌ಸೈಟ್(BBMPeAasthi.karnataka.gov.in) ಗೆ ಹಾಕಲಾಗಿದೆ.

ಇ-ಖಾತಾಗಳನ್ನುಡೌನ್ಲೋಡ್ ಮಾಡಿಕೊಳ್ಳಲು ಅಧಿಕೃತ ವೆಬ್‌ಸೈಟ್ BBMPeAasthi.karnataka.gov.in ಗೆ ಭೇಟಿ ನೀಡಿ ಈ ಕೆಳಗಿನ ಹಂತಗಳನ್ನು ಅನುಸರಿಸಬಹುದು:

1. ನೀವು BBMPeAasthi.karnataka.gov.in ಗೆ ಲಾಗಿನ್ ಆಗಬೇಕು
2. ಮಾಲೀಕರ ಗುರುತಿಗಾಗಿ ಆಧಾರ್ ಸಂಖ್ಯೆ(Adhar number) ಅಗತ್ಯವಾದ್ದರಿಂದ ಆಧಾರ್ ಸಂಖ್ಯೆಯನ್ನು ನಮೂದಿಸಿ.
3. ಆಸ್ತಿ ತೆರಿಗೆ(Property tax) ಅರ್ಜಿ ಸಂಖ್ಯೆಯನ್ನು ದಾಖಲಿಸಿ (ಇದು ಆಸ್ತಿ ತೆರಿಗೆ ವ್ಯವಸ್ಥೆಯಿಂದ ಸ್ವಯಂಚಾಲಿತವಾಗಿ ದತ್ತಾಂಶವನ್ನು ಪಡೆಯುತ್ತದೆ) ಸ್ವಯಂಚಾಲಿತವಾಗಿ ತೆರಿಗೆ ಪೋರ್ಟಲ್‌ನಿಂದ ಪಡೆಯಲಾಗುತ್ತದೆ.
4. ಮಾರಾಟ/ನೋಂದಣಿ ಪಟ್ಟಿ ಸಂಖ್ಯೆ ನಮೂದಿಸಿ (ನೀವು ಖರೀದಿಸಿದ ಆಸ್ತಿಯ ದಾಖಲೆ ವಿವರಗಳು ಅನುಸರಿಸಿ ದಾಖಲಿಸಿ)
5. ಬೆಸ್ಕಾಂ(Bescom) 10-ಅಂಕಿಯ ಐಡಿ- (ಐಚ್ಛಿಕ) ನಮೂದಿಸಬೇಕು.  (ಖಾಲಿ ನಿವೇಶನಗಳಿಗಾಗಿ ಮಾತ್ರ ಬಳಸಬಹುದು)
6. ಆಸ್ತಿ ದೃಢೀಕರಣದ ಭಾಗವಾಗಿ, ನವೀನ ಫೋಟೋ ಬೇಕಾಗಬಹುದು ಆದ್ದರಿಂದ ಆಸ್ತಿ ಫೋಟೋ ಅಪ್ಲೋಡ್ ಮಾಡಿ.

ಈ ಎಲ್ಲಾ ವಿವರಗಳು ಬಿಬಿಎಂಪಿಯ(BBMP) ದಾಖಲೆಗಳೊಂದಿಗೆ ಹೊಂದಿಕೆಯಾದರೆ, ನೀವು ನಿಮ್ಮ ಅಂತಿಮ ಇ-ಖಾತಾವನ್ನು ಯಶಸ್ವಿಯಾಗಿ ಡೌನ್‌ಲೋಡ್ ಮಾಡಿಕೊಳ್ಳಬಹುದು. ಆದರೆ, ಯಾವುದೇ ಮಾಹಿತಿ ಲಭ್ಯವಿಲ್ಲದಿದ್ದರೆ ಅಥವಾ ದಾಖಲೆಗಳೊಂದಿಗೆ ಸರಿಹೊಂದದಿದ್ದರೆ, ತಕ್ಷಣವೇ ಸಹಾಯಕ ಕಂದಾಯ ಅಧಿಕಾರಿಗಳ(Assistant Revenue Officers) ಗಮನಕ್ಕೆ ತರಬೇಕು.

ಸಹಾಯವಾಣಿ ಮತ್ತು ವಾರ್ಡ್ ಮಾಹಿತಿಗಾಗಿ ಸಂಪರ್ಕಿಸಿ :

ನಿಮ್ಮ ಆಸ್ತಿಯ ವಾರ್ಡ್ ಮಾಹಿತಿ ಪಡೆಯಲು, ನೀವು ಕಳೆದ ಆಸ್ತಿ ತೆರಿಗೆ ರಶೀದಿಯಲ್ಲಿರುವ ಮಾಹಿತಿಯನ್ನು ನೋಡಬಹುದು.
ಯಾವುದೇ ಸಹಾಯ ಅಥವಾ ವಿಚಾರಣೆಗಳಿಗಾಗಿ, ಬಿಬಿಎಂಪಿಯ ಇ-ಖಾತಾ ಸಹಾಯವಾಣಿ 94806 83695 ಗೆ ಕರೆ ಮಾಡಬಹುದು.

ಶೀಘ್ರದಲ್ಲಿ ಬೆಂಗಳೂರಿನಲ್ಲಿ ಇ-ಖಾತಾ ಮೇಳ(E-Katha Mela) ಆರಂಭ:

ಆಸ್ತಿ ಮಾಲೀಕರಿಗೆ ಸುಲಭವಾಗಿ ಇ-ಖಾತಾ ವಿತರಿಸಲು, ಬಿಬಿಎಂಪಿ ಇದೇ ಫೆಬ್ರವರಿಯಲ್ಲಿ(February) ಇ-ಖಾತಾ ಮೇಳ ಆಯೋಜನೆ ಮಾಡಲು ಮುಂದಾಗಿದೆ. ನಾಗರಿಕ ಕ್ಷೇಮಾಭಿವೃದ್ಧಿ ಸಂಘ-ಸಂಸ್ಥೆಗಳು, ವಸತಿ ಸಮುಚ್ಚಯ ನಿವಾಸಿಗಳ ಸಂಘಟನೆಗಳು ಈ ಕಾರ್ಯದಲ್ಲಿ ಬಿಬಿಎಂಪಿಗೆ ಬೆಂಬಲ ನೀಡಲಿವೆ. ಇದರಡಿ, ಬಿಬಿಎಂಪಿಯ ಕಂದಾಯ ವಿಭಾಗದ ಅಧಿಕಾರಿಗಳು ಸಾರ್ವಜನಿಕರೊಂದಿಗೆ ನೇರವಾಗಿ ಸಂಪರ್ಕ ಸಾಧಿಸಿ, ವಾಟ್ಸಾಪ್ ಗುಂಪುಗಳ(WhatsApp groups) ಮೂಲಕ ಮಾಹಿತಿ ಹಂಚಿಕೊಳ್ಳಲಿದ್ದಾರೆ. ಈ ಕಾರ್ಯಕ್ರಮದ ಮೂಲ ಉದ್ದೇಶವೆಂದರೆ, ನಾಗರಿಕರಿಗೆ ಕಡಿಮೆ ಸಮಯದಲ್ಲಿ ಖಾತೆ ಸೇವೆಗಳನ್ನು ಒದಗಿಸಿ, ಆಸ್ತಿ ಸ್ವಾಮ್ಯ ದೃಢೀಕರಣಕ್ಕೆ ಪಾರದರ್ಶಕತೆ ತರಲು ನೆರವಾಗುವುದು.

ಬಿಬಿಎಂಪಿಯ ಇ-ಖಾತಾ ವ್ಯವಸ್ಥೆಯು, ಆಸ್ತಿ ಸ್ವಾಮ್ಯ(Property ownership) ಮತ್ತು ತೆರಿಗೆ ಸಂಬಂಧಿತ ಮಾಹಿತಿಯನ್ನು ಡಿಜಿಟಲೀಕರಣಗೊಳಿಸುವ ಪ್ರಮುಖ ಹೆಜ್ಜೆಯಾಗಿದೆ. ಅಂತಿಮ ಇ-ಖಾತಾ ಪಡೆಯಲು ಸರಿಯಾದ ಹಂತಗಳನ್ನು ಅನುಸರಿಸಿದರೆ, Bengaluru Metropolitan Area ವ್ಯಾಪ್ತಿಯ ಆಸ್ತಿ ಮಾಲೀಕರು ಸುಲಭವಾಗಿ ತಮ್ಮ ಖಾತೆ ಮಾಹಿತಿಯನ್ನು ಪಡೆಯಬಹುದು. ಇದರ ಜೊತೆಗೆ, ಇ-ಖಾತಾ ಮೇಳದ(E-Katha Mela) ಮೂಲಕ ಸಾರ್ವಜನಿಕರಿಗೆ ನೇರ ಸಹಾಯ ಲಭಿಸುವ ನಿರೀಕ್ಷೆ ಇದೆ. ಆದ್ದರಿಂದ, ನಿಮ್ಮ ಆಸ್ತಿಯ ಅಂತಿಮ ಇ-ಖಾತಾವನ್ನು ಪಡೆಯಲು ತಡಮಾಡದೆ, ವಹಿವಾಟು ಸರಳಗೊಳಿಸಲು ಈಗಲೇ BBMPeAasthi.karnataka.gov.in ಗೆ ಭೇಟಿ ನೀಡಿ!

ಈ ಮಾಹಿತಿಯನ್ನು ಕೂಡಲೇ ನಿಮ್ಮೆಲ್ಲಾ ಸ್ನೇಹಿತರೊಂದಿಗೆ ಹಾಗೂ ಬಂಧುಗಳಿಗೆ ಶೇರ್ ಮಾಡಿ, ಧನ್ಯವಾದಗಳು.

ಈ ಮಾಹಿತಿಗಳನ್ನು ಓದಿ

 

ದಯವಿಟ್ಟು ಗಮನಿಸಿ: ನೀಡ್ಸ್ ಆಫ್ ಪಬ್ಲಿಕ್ ತನ್ನ ಓದುಗರಿಗೆ ನಿಖರವಾದ ಮತ್ತು ಅಧಿಕೃತ ಮಾಹಿತಿಗಳನ್ನು ಮಾತ್ರ ಪ್ರಕಟಿಸುತ್ತದೆ. ಇಲ್ಲಿ ನಾವು ಯಾವುದೇ ಅನಧಿಕೃತ ಮತ್ತು ಸುಳ್ಳು ಮಾಹಿತಿಯನ್ನು ಬಿತ್ತರಿಸುವುದಿಲ್ಲ.

WhatsApp Group Join Now
Telegram Group Join Now

Related Posts

Leave a Reply

Your email address will not be published. Required fields are marked *

error: Content is protected !!