ಕೇಂದ್ರದಿಂದ ಉದ್ಯೋಗ ಪ್ರಾರಂಭಿಸಲು 10 ಲಕ್ಷ ರೂ. ಸಾಲ ಮತ್ತು ಸಬ್ಸಿಡಿ. ಇಲ್ಲಿದೆ ಸಂಪೂರ್ಣ ವಿವರ.

Picsart 25 02 02 11 43 43 822

ಯುವ ಉದ್ಯಮಿಗಳಿಗೆ(entrepreneurs) ಕೇಂದ್ರ ಸರ್ಕಾರದ ಮಹತ್ವದ ಸೌಲಭ್ಯ : ₹10-25 ಲಕ್ಷ ಸಾಲ ಹಾಗೂ 35% ಸಬ್ಸಿಡಿ

ನಮ್ಮ ದೇಶದ ಯುವ ಪೀಳಿಗೆ ಉದ್ಯೋಗ ಹುಡುಕುವುದಕ್ಕಿಂತ ಸ್ವತಃ ಉದ್ಯಮ ಆರಂಭಿಸಲು ಹೆಚ್ಚಿನ ಆಸಕ್ತಿ ತೋರಿಸುತ್ತಿದೆ. ಇದನ್ನು ಗಮನದಲ್ಲಿಟ್ಟುಕೊಂಡು, ಕೇಂದ್ರ ಸರ್ಕಾರ ಪ್ರಧಾನಮಂತ್ರಿ ಉದ್ಯೋಗ ಸೃಷ್ಟಿ ಯೋಜನೆ (PMEGP) ಎಂಬ ಮಹತ್ವದ ಯೋಜನೆಯನ್ನು ಅನುಷ್ಠಾನಗೊಳಿಸಿದೆ. ಈ ಯೋಜನೆಯ ಮೂಲಕ ಹೊಸ ಬಿಸಿನೆಸ್ ಆರಂಭಿಸಲು ಬಯಸುವವರಿಗೆ ₹10 ರಿಂದ ₹25 ಲಕ್ಷದವರೆಗೆ ಸಾಲ ದೊರೆಯುತ್ತದೆ, ಜೊತೆಗೆ 35% ಸಬ್ಸಿಡಿ(35% subsidy) ಸಹ ಲಭ್ಯವಿದೆ. ಈ ಯೋಜನೆಯ ಉದ್ದೇಶ, ದೇಶದಲ್ಲಿ ಸ್ವ ಉದ್ಯೋಗವನ್ನು ಉತ್ತೇಜಿಸುವುದು ಮತ್ತು ಉದ್ಯಮಶೀಲತೆಯನ್ನು ಬೆಂಬಲಿಸುವುದಾಗಿದೆ. ಈ ಯೋಜನೆಯ ಮುಖ್ಯ ಉದ್ದೇಶವೇನು? ಯೋಜನೆಗೆ ಅರ್ಜಿ ಸಲ್ಲಿಸುವುದು ಹೇಗೆ ಎಂಬ ಸಂಪೂರ್ಣ ಮಾಹಿತಿಯನ್ನು ತಿಳಿದುಕೊಳ್ಳೋಣ ಬನ್ನಿ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ

ಪ್ರಧಾನಮಂತ್ರಿ ಉದ್ಯೋಗ ಸೃಷ್ಟಿ ಯೋಜನೆ (PMEGP) ಎಂಬುದು ಕೇಂದ್ರ ಸರ್ಕಾರದ(Central Government ) ಮಹತ್ವದ ಯೋಜನೆಯಾಗಿದ್ದು, ಇದನ್ನು ಖಾದಿ ಮತ್ತು ಗ್ರಾಮೋದ್ಯೋಗ ಆಯೋಗ (KVIC) ನೇತೃತ್ವದಲ್ಲಿ ಕಾರ್ಯಗತಗೊಳಿಸಲಾಗುತ್ತಿದೆ. ಈ ಯೋಜನೆ ಅಡಿಯಲ್ಲಿ ಹೊಸ ಉದ್ಯಮ ಆರಂಭಿಸಲು ಆಸಕ್ತಿಯುಳ್ಳ ವ್ಯಕ್ತಿಗಳಿಗೆ ಅಲ್ಪ ಬಡ್ಡಿದರದಲ್ಲಿ(low interest rate) ಸಾಲ ದೊರೆಯುತ್ತದೆ. ಮುಖ್ಯವಾಗಿ ಗ್ರಾಮೀಣ ಹಾಗೂ ನಗರ ಪ್ರದೇಶದ ನಿರುದ್ಯೋಗಿಗಳಿಗಿದು ದೊಡ್ಡ ಅವಕಾಶ.

ಈ ಯೋಜನೆಯ ಪ್ರಮುಖ ಉದ್ದೇಶವೇನು?:

ಹೊಸ ಉದ್ಯಮಿಗಳ ಅಭಿವೃದ್ಧಿಗೆ ಬೆಂಬಲ ನೀಡುವುದು.
ನಿರುದ್ಯೋಗ ತಗ್ಗಿಸುವ ಮೂಲಕ ಉದ್ಯೋಗ ಸೃಷ್ಟಿ ಮಾಡುವುದು.
ಗ್ರಾಮೀಣ ಹಾಗೂ ನಗರ ಪ್ರದೇಶದ ಯುವಕರಿಗೆ ಸ್ವಂತ ಉದ್ಯೋಗ ಆರಂಭಿಸಲು ಸಹಾಯ ಮಾಡುವುದು.
ಅರ್ಥಿಕವಾಗಿ ಹಿಂದುಳಿದ ವರ್ಗದವರಿಗೆ (SC/ST/OBC/Minorities) ವಿಶೇಷ ಪ್ರೋತ್ಸಾಹ ನೀಡುವುದು.

PMEGP ಯೋಜನೆಯಡಿಯಲ್ಲಿ ಉದ್ಯಮ ಪ್ರಕಾರವಾಗಿ ನೀಡಲಾಗುವ ಸಾಲ ಮತ್ತು ಸಬ್ಸಿಡಿಯ ವಿವರ ಇಲ್ಲಿದೆ:

1. ಸೇವಾ (Service) ಕ್ಷೇತ್ರದಲ್ಲಿ ಬಿಸಿನೆಸ್:

ನೀವು ಟೈಲರಿಂಗ್, ಸಲೂನ್, ಮೆಡಿಕಲ್ ಶಾಪ್, ಸೂಪರ್ ಮಾರ್ಕೆಟ್, ಟ್ಯಾಕ್ಸಿ ಸೇವೆ ಅಥವಾ ಯಾವುದೇ ಸರ್ವಿಸ್-ಆಧಾರಿತ ಬಿಸಿನೆಸ್ ಆರಂಭಿಸಬೇಕೆಂದರೆ, ಈ ಯೋಜನೆಯಡಿ ₹10 ಲಕ್ಷದವರೆಗೆ ಸಾಲ ಪಡೆಯಬಹುದಾಗಿದೆ. ಇದರಲ್ಲಿ 35% ಸರಕಾರೀ ಸಬ್ಸಿಡಿ(35% Govt Subsidy) ಲಭ್ಯವಿದೆ.

2. ಉತ್ಪಾದನಾ (Manufacturing) ಕ್ಷೇತ್ರದಲ್ಲಿ ಬಿಸಿನೆಸ್:

ನೀವು ಉತ್ಪಾದನಾ (Manufacturing) ಅಥವಾ ಕೈಗಾರಿಕಾ (Industrial) ಕ್ಷೇತ್ರದಲ್ಲಿ ಬಿಸಿನೆಸ್ ಆರಂಭಿಸಲು ಬಯಸಿದರೆ, ₹25 ಲಕ್ಷದವರೆಗೆ ಸಾಲ ಪಡೆಯಬಹುದು. ಇದಕ್ಕೂ 35% ಸಬ್ಸಿಡಿ ಲಭ್ಯವಿದೆ.

ಈ ಯೋಜನೆಯ ಲಾಭಗಳೇನು?:

ಸರ್ಕಾರ ಪ್ರೋತ್ಸಾಹಿಸುವ ಯೋಜನೆಯಾದ್ದರಿಂದ ಬ್ಯಾಂಕುಗಳು(Banks) ಸುಲಭವಾಗಿ ಸಾಲ ನೀಡುತ್ತವೆ.
ಸಾಮಾನ್ಯ ಬಿಸಿನೆಸ್ ಲೋನ್‌ಗಿಂತ PMEGP ಲೋನ್‌ನಲ್ಲಿ ಕಡಿಮೆ ಬಡ್ಡಿದರ ಇರಲಿದೆ.
35% ಸರ್ಕಾರಿ ಸಬ್ಸಿಡಿ ಇರುವುದರಿಂದ ಉದ್ಯಮಿಗಳಿಗೆ ದೊಡ್ಡ ಆರ್ಥಿಕ ಸಹಾಯ ಸಿಗುತ್ತದೆ.

ಸರಿಯಾದ ಪ್ರಾಜೆಕ್ಟ್ ರಿಪೋರ್ಟ್(Project Report) ಹೊಂದಿದ್ದರೆ ಬ್ಯಾಂಕುಗಳು ಕಡಿಮೆ ಸಮಯದಲ್ಲಿ ಸಾಲ ಮಂಜೂರು ಮಾಡುತ್ತವೆ.

ಅರ್ಜಿ ಹಾಕುವ ವಿಧಾನ ಹೀಗಿದೆ :

PMEGP ಯೋಜನೆಯಡಿಯಲ್ಲಿ ಲೋನ್ ಪಡೆಯಲು ನೀವು ನಿಮ್ಮ ಹತ್ತಿರದ ಬ್ಯಾಂಕ್ ಅಥವಾ ಖಾದಿ ಮತ್ತು ಗ್ರಾಮೋದ್ಯೋಗ ಆಯೋಗ (KVIC) ಕಚೇರಿಗೆ ಭೇಟಿ ನೀಡಬಹುದು. ಅಲ್ಲದೆ, ಅಧಿಕೃತ ವೆಬ್‌ಸೈಟ್ (www.kviconline.gov.in) ಮೂಲಕವೂ ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಬಹುದು.

ಅರ್ಜಿ ಸಲ್ಲಿಸಲು ಬೇಕಾಗುವ ಪ್ರಮುಖ ದಾಖಲೆಗಳು ಯಾವುವು?:

ಆಧಾರ್ ಕಾರ್ಡ್ & ಪಾನ್ ಕಾರ್ಡ್(Aadhaar Card & PAN Card).
ಬ್ಯಾಂಕ್ ಪಾಸ್‌ಬುಕ್(Bank Passbook).
ವಾಸಸ್ಥಳ ಮತ್ತು ವಾಣಿಜ್ಯ ಪರವಾನಿಗೆ(Commercial license) ದಾಖಲೆಗಳು.
ಪ್ರಾಜೆಕ್ಟ್ ರಿಪೋರ್ಟ್(Project Report).
ಕೌಟುಂಬಿಕ ಆದಾಯ ಪ್ರಮಾಣಪತ್ರ (ಹೊಂದಿದ್ದರೆ).

ಯಾರೆಲ್ಲ ಈ ಯೋಜನೆಯ ಉಪಯೋಗ ಪಡೆಯಬಹುದು?:

ಹೊಸ ಉದ್ಯಮ ಆರಂಭಿಸುವ ಆಸಕ್ತಿಯುಳ್ಳ ಯುವಕರು.
ಪ್ರಸ್ತುತ ಅಲ್ಪ ಪ್ರಮಾಣದಲ್ಲಿ ಬಿಸಿನೆಸ್ ನಡೆಸುತ್ತಿರುವವರು.
ಅರ್ಥಿಕವಾಗಿ ಹಿಂದುಳಿದ ವರ್ಗದವರು (SC/ST/OBC/Minorities).
ನೌಕರಿಯ ಬದಲು ಸ್ವಂತ ಉದ್ಯಮ ಮಾಡುವವರು.

ಗಮನಿಸಿ : ಹೆಚ್ಚಿನ ಮಾಹಿತಿಗೆ ಹತ್ತಿರದ ಬ್ಯಾಂಕ್ ಅಥವಾ PMEGP ಅಧಿಕೃತ ವೆಬ್‌ಸೈಟ್ (www.kviconline.gov.in) ಮೂಲಕ ಸಂಪರ್ಕಿಸಿ.

PMEGP ಯೋಜನೆಯು ಯುವ ಉದ್ಯಮಿಗಳಿಗೆ ಆರ್ಥಿಕ ನೆರವು(Financial assistance) ನೀಡುವ ಮೂಲಕ ಅವರು ಸ್ವತಂತ್ರ ಉದ್ಯೋಗಿ ಆಗಲು ಸಹಾಯ ಮಾಡುತ್ತದೆ. ಸರಕಾರದ 35% ಸಬ್ಸಿಡಿ ಹಾಗೂ ಕಡಿಮೆ ಬಡ್ಡಿದರದ ಸಾಲ ಈ ಯೋಜನೆಯನ್ನು ಇನ್ನಷ್ಟು ಲಾಭಕರವಾಗಿಸುತ್ತದೆ. ನೀವು ಬಿಸಿನೆಸ್ ಆರಂಭಿಸಲು ಯೋಚಿಸುತ್ತಿದ್ದರೆ, ಈ ಯೋಜನೆಯ ಪ್ರಯೋಜನ ಪಡೆದುಕೊಳ್ಳಿ!

ಈ ಮಾಹಿತಿಯನ್ನು ಕೂಡಲೇ ನಿಮ್ಮೆಲ್ಲಾ ಸ್ನೇಹಿತರೊಂದಿಗೆ ಹಾಗೂ ಬಂಧುಗಳಿಗೆ ಶೇರ್ ಮಾಡಿ, ಧನ್ಯವಾದಗಳು.

ಈ ಮಾಹಿತಿಗಳನ್ನು ಓದಿ

 

ದಯವಿಟ್ಟು ಗಮನಿಸಿ: ನೀಡ್ಸ್ ಆಫ್ ಪಬ್ಲಿಕ್ ತನ್ನ ಓದುಗರಿಗೆ ನಿಖರವಾದ ಮತ್ತು ಅಧಿಕೃತ ಮಾಹಿತಿಗಳನ್ನು ಮಾತ್ರ ಪ್ರಕಟಿಸುತ್ತದೆ. ಇಲ್ಲಿ ನಾವು ಯಾವುದೇ ಅನಧಿಕೃತ ಮತ್ತು ಸುಳ್ಳು ಮಾಹಿತಿಯನ್ನು ಬಿತ್ತರಿಸುವುದಿಲ್ಲ.

WhatsApp Group Join Now
Telegram Group Join Now

Related Posts

Leave a Reply

Your email address will not be published. Required fields are marked *

error: Content is protected !!