ಬಜೆಟ್ 2025: ಆಭರಣಗಳ ಮೇಲಿನ ಕಸ್ಟಮ್ಸ್ ಸುಂಕ ಇಳಿಕೆ – ಚಿನ್ನ ಮತ್ತು ವಜ್ರಾಭರಣಗಳ ಬೆಲೆ ಭಾರೀ ಕುಸಿತ!
ಭಾರತದ ಆರ್ಥಿಕ ನೀತಿಗಳು (Economic policies) ಪ್ರತಿವರ್ಷದಂತೆ ಬಜೆಟ್ ಮೂಲಕ ಹೊಸ ರೂಪ ಪಡೆದುಕೊಳ್ಳುತ್ತವೆ. 2025-26ನೇ ಆರ್ಥಿಕ ವರ್ಷದ ಬಜೆಟ್ ಪ್ರಸ್ತುತ ಪಡಿಸಿರುವ ಕೇಂದ್ರ ಸರ್ಕಾರ (Central government) ಹಲವಾರು ಪ್ರಮುಖ ತೀರ್ಮಾನಗಳನ್ನು ಪ್ರಕಟಿಸಿದೆ. ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್(Finance Minister Nirmala Sitharaman) ಬಜೆಟ್ ಭಾಷಣದಲ್ಲಿ ವಾಣಿಜ್ಯ, ಕೈಗಾರಿಕೆ ಮತ್ತು ಮಧ್ಯಮ ವರ್ಗದ ಜನತೆಗೆ ಪ್ರಮುಖ ಅನುಕೂಲಗಳನ್ನು ಒದಗಿಸುವ ಮಹತ್ವದ ಘೋಷಣೆಗಳನ್ನು ಮಾಡಿದರು. ಈ ಕುರಿತು ಸಂಪೂರ್ಣವಾದ ಮಾಹಿತಿ ಕೆಳಗೆ ಕೊಡಲಾಗಿದೆ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ
ಈ ಬಾರಿಯ ಬಜೆಟ್‌ನ (Budget) ಪ್ರಮುಖ ತೀರ್ಮಾನಗಳಲ್ಲಿ, ಆಭರಣಗಳ ಮೇಲಿನ ಕಸ್ಟಮ್ಸ್ ಸುಂಕವನ್ನು ಕಡಿಮೆ ಮಾಡಲಾಗಿದೆ. ಇದರಿಂದಾಗಿ ಚಿನ್ನ, ವಜ್ರ ಮತ್ತು ಪ್ಲಾಟಿನಂ ಆಭರಣಗಳ ಬೆಲೆಯಲ್ಲಿ ಗಣನೀಯ ಇಳಿಕೆಯಾಗಲಿದೆ. ಭಾರತದಲ್ಲಿ ಚಿನ್ನ ಮತ್ತು ವಜ್ರಾಭರಣಗಳ (Gold and Diamonds) ಮಾರುಕಟ್ಟೆ ಅತಿವ್ಯಾಪಕವಾಗಿದ್ದು, ಈ ನಿರ್ಧಾರವು ಆಭರಣ ವಹಿವಾಟಿನ ಆರ್ಥಿಕತೆಗೆ ಪೋಷಕವಾಗಿ ಕೆಲಸ ಮಾಡುವ ನಿರೀಕ್ಷೆ ಇದೆ. ಚಿನ್ನ ಮತ್ತು ವಜ್ರ, ಪ್ಲಾಟಿನಂ ಆಭರಣಗಳ ಇತ್ತೀಚಿನ ಬೆಲೆಯ ಸಂಪೂರ್ಣ ಮಾಹಿತಿಯನ್ನು ತಿಳಿದುಕೊಳ್ಳೋಣ ಬನ್ನಿ.
ಚಿನ್ನ ಮತ್ತು ಆಭರಣಗಳ ಮೇಲಿನ ಕಸ್ಟಮ್ಸ್ ಸುಂಕ (Customs toll) ಇಳಿಕೆ:
ಕೇಂದ್ರ ಸರ್ಕಾರವು ಕಸ್ಟಮ್ಸ್ ಸುಂಕ ಕಾಯ್ದೆ 1975 ರ(Customs Duties Act 1975) ಪ್ರಕಾರ, ಫಸ್ಟ್ ಷೆಡ್ಯೂಲ್‌ನ ಅಡಿಯಲ್ಲಿ ಸುಂಕ ಕಡಿತ ಮಾಡಲು ತೀರ್ಮಾನಿಸಿದೆ. ಈ ಹೊಸ ನಿಯಮವು 2025ರ ಫೆಬ್ರವರಿ 2ರಿಂದಲೇ(February 2, 2025) ಜಾರಿಗೆ ಬರಲಿದೆ. ಈ ಬದಲಾವಣೆಯು ಆಭರಣ ವಾಣಿಜ್ಯದಲ್ಲಿ ಹೊಸ ಜೋಶ್ ನೀಡಲಿದೆ ಮತ್ತು ಚಿನ್ನ-ವಜ್ರಾಭರಣಗಳ ಬೆಲೆಯನ್ನು ಕಡಿಮೆ ಮಾಡಲಿದೆ.
ಕಸ್ಟಮ್ಸ್ ಸುಂಕದ ಹೊಸ ಬದಲಾವಣೆಗಳು ಹೀಗಿವೆ :
ಪ್ರಸ್ತುತ ಆಭರಣಗಳ ಮೇಲಿನ ಕಸ್ಟಮ್ಸ್ ಸುಂಕ ಶೇಕಡಾ 25 ಇದ್ದರೂ, 2025 ರ ಬಜೆಟ್ ನಲ್ಲಿ(2025 budget) ಅದನ್ನು 20% ಕ್ಕೆ ಕಡಿಮೆ ಮಾಡಲಾಗಿದೆ. ಪ್ಲಾಟಿನಂ ಆಭರಣಗಳ ಮೇಲಿನ ಸುಂಕ ಶೇ. 25ರಿಂದ ಶೇ. 5ಕ್ಕೆ ಕಡಿಮೆಯಾಗಿದೆ, ಇದು ಐಷಾರಾಮಿ ವಸ್ತುಗಳ ಮಾರುಕಟ್ಟೆಗೆ ಹೊಸ ಚೈತನ್ಯವನ್ನು ಒದಗಿಸಲಿದೆ.
2024ರ ಜುಲೈ ಬಜೆಟ್ ನಲ್ಲಿ(July Budget 2024) ಚಿನ್ನದ ಆಮದು ಸುಂಕವನ್ನು ಶೇ. 15 ರಿಂದ ಶೇ. 6ಕ್ಕೆ ಕಡಿಮೆ ಮಾಡಿದ್ದರೂ ಕೂಡ, ಈ ಬಾರಿಯ ಬಜೆಟ್‌ನಲ್ಲಿ ಯಾವುದೇ ಹೆಚ್ಚಳ ಅಥವಾ ಇತರ ಬದಲಾವಣೆ ಮಾಡಿಲ್ಲ.
ಹೊಸ ಬದಲಾವಣೆಗಳು (New updates) ಆಭರಣ ಮಾರುಕಟ್ಟೆಯ ಮೇಲೆ ಯಾವ ರೀತಿ ಪ್ರಭಾವ ಬೀರಬಹುದು :
ಈ ಬಜೆಟ್ ತೀರ್ಮಾನವನ್ನು ಭಾರತೀಯ ಆಭರಣ ವಹಿವಾಟು ಮತ್ತು ವ್ಯಾಪಾರ ಸಂಘಗಳು, ಜ್ಯುವೆಲ್ಲರಿ ಕಂಪನಿಗಳು ಮತ್ತು ಹೂಡಿಕೆದಾರರು ಹರ್ಷದಿಂದ ಸ್ವಾಗತಿಸಿವೆ. ಕಸ್ಟಮ್ಸ್ ಸುಂಕ ಕಡಿಮೆ ಮಾಡಿರುವುದು ದೇಶೀಯ ಮಾರುಕಟ್ಟೆಯಲ್ಲಿ ಚಿನ್ನದ ಬೆಲೆಯ ಮೇಲೆ ಪ್ರಭಾವ ಬೀರುತ್ತದೆ ಮತ್ತು ಆಭರಣ ಖರೀದಿಗೆ ಪ್ರೋತ್ಸಾಹ ನೀಡುತ್ತದೆ.
ಆಭರಣ ಉದ್ಯಮದವರ ಪ್ರತಿಕ್ರಿಯೆಗಳು ಯಾವ ರೀತಿಯಿವೆ :
ಕ್ಯಾಮಾ ಜ್ಯುವೆಲ್ಲರಿಯ (Cama Jewellery) ಎಂಡಿ ಕಾಲಿನ್ ಶಾ (MD Colin Shaw) ಅವರ ಪ್ರಕಾರ, “ಸುಂಕ ಇಳಿಕೆಯು ಆಭರಣ ಕ್ಷೇತ್ರಕ್ಕೆ ಬಲ ನೀಡಲಿದೆ. ಭಾರತೀಯ ಮಾರುಕಟ್ಟೆಯಲ್ಲಿ ಚಿನ್ನ ಮತ್ತು ವಜ್ರಾಭರಣಗಳ ಮೇಲೆ ಹೆಚ್ಚಿನ ಬೇಡಿಕೆ ಉಂಟಾಗಲಿದೆ” ಎಂದು ತಿಳಿಸಿದ್ದಾರೆ.
ಇನ್ನು ಅದೇ ರೀತಿಯಾಗಿ ಸೆನ್ಕೊ ಗೋಲ್ಡ್ & ಡೈಮಂಡ್ಸ್ (Senco Gold and Diamonds) ಎಂಡಿ ಸುವಾಂಕರ್ ಸೇನ್(MD Suvankar Sen) ಅವರ ಅಭಿಪ್ರಾಯದಲ್ಲಿ, “ಬಜೆಟ್ ಮಧ್ಯಮ ವರ್ಗದ ಬಳಕೆಯನ್ನು ಹೆಚ್ಚಿಸುವತ್ತ ಗಮನಹರಿಸಿದ್ದು, ಗ್ರಾಮೀಣ ಆರ್ಥಿಕತೆಗೆ ಸಹಕಾರಿಯಾಗಲಿದೆ” ಎಂದು ಅಭಿಪ್ರಾಯ ಪಟ್ಟಿದ್ದಾರೆ.
ಚಿನ್ನದ ಬೆಲೆಯಲ್ಲಿ ಕುಸಿತದ ಮುನ್ಸೂಚನೆ:
ಬಜೆಟ್ ಘೋಷಣೆಯ ನಂತರ ಚಿನ್ನದ ಮೌಲ್ಯದಲ್ಲಿ ತೀವ್ರ ಕುಸಿತ ಕಂಡುಬಂದಿದೆ. 2025ರ ಫೆಬ್ರವರಿ 2 ರಿಂದಲೇ ಪರಿಷ್ಕೃತ ಕಸ್ಟಮ್ಸ್ ದರ (Custems rate) ಜಾರಿಗೆ ಬರುವುದರಿಂದ, ಸೋಮವಾರ ಚಿನ್ನದ ಮಾರುಕಟ್ಟೆಯಲ್ಲಿ ಪ್ರಮುಖ ಬದಲಾವಣೆಗಳಾಗುವ ನಿರೀಕ್ಷಿ ಇದೆ. ಆಭರಣಗಳ ಸುಂಕ ಕಡಿತಗೊಂಡ ಹಿನ್ನೆಲೆಯಲ್ಲಿ, ಚಿನ್ನದ ಬೆಲೆ ಇನ್ನುಮುಂದಿನ ದಿನಗಳಲ್ಲಿ ಮತ್ತಷ್ಟು ಕುಸಿಯುವ ಸಾಧ್ಯತೆ ಕೂಡ ಹೆಚ್ಚಿದೆ.
12 ಲಕ್ಷ ರೂ. ಆದಾಯದವರಿಗಾಗಿ ತೆರಿಗೆ ವಿನಾಯಿತಿಯು ಚಿನ್ನದ ಹೂಡಿಕೆಗೆ ಉತ್ತೇಜನ ನೀಡಬಹುದು ಎಂದು ಊಹಿಸಲಾಗಿದೆ.
ಭಾರತೀಯ ಆಭರಣ ಮಾರುಕಟ್ಟೆಯ ಭವಿಷ್ಯ:
ಈ ನಿರ್ಧಾರವು ದೇಶೀಯ ಆಭರಣ ಮಾರುಕಟ್ಟೆಯಲ್ಲಿ ಹೆಚ್ಚುವರಿ ಖರೀದಿಗೆ ಉತ್ತೇಜನ ನೀಡಲಿದೆ. ಚಿನ್ನ, ವಜ್ರ, ಮತ್ತು ಪ್ಲಾಟಿನಂ ಆಭರಣಗಳ ಬೆಲೆಯ ಇಳಿಕೆ ಹೂಡಿಕೆದಾರರು ಮತ್ತು ಗ್ರಾಹಕರಿಗೆ ಅನುಕೂಲಕರವಾಗಿದೆ.
ಮತ್ತಷ್ಟು ಖರೀದಿದಾರರು ಆಭರಣ ಮಾರುಕಟ್ಟೆಯಲ್ಲಿ ಹೂಡಿಕೆ ಮಾಡುವ ಸಾಧ್ಯತೆ ಇದ್ದು, ಇದರಿಂದಾಗಿ ಚಿನ್ನ ಮತ್ತು ವಜ್ರಾಭರಣ ಉದ್ಯಮದ ವೃದ್ಧಿಯೂ ಹೆಚ್ಚಾಗಲಿದೆ ಎಂದು ನಿರೀಕ್ಷಿಸಲಾಗಿದೆ.
2025ರ ಕೇಂದ್ರ ಬಜೆಟ್ ನಲ್ಲಿ ಕಸ್ಟಮ್ಸ್ ಸುಂಕ (Custems toll) ಕಡಿಮೆ ಮಾಡಿರುವ ವಿಚಾರದ ಮುಖ್ಯಾಂಶಗಳು :
2025ರ ಕೇಂದ್ರ ಬಜೆಟ್ ನಲ್ಲಿ ಚಿನ್ನ, ವಜ್ರ ಮತ್ತು ಪ್ಲಾಟಿನಂ ಆಭರಣಗಳ ಮೇಲಿನ ಕಸ್ಟಮ್ಸ್ ಸುಂಕ ಕಡಿಮೆ ಮಾಡಲಾಗಿದೆ.
ಚಿನ್ನದ ಬೆಲೆಯಲ್ಲಿ ಭಾರೀ ಇಳಿಕೆಯಾಗುವ ನಿರೀಕ್ಷೆ ಇದೆ. ಫೆಬ್ರವರಿ 2ರಿಂದ ಹೊಸ ಸುಂಕ ದರ ಜಾರಿಗೆ ಬರುವುದರಿಂದ, ಆಭರಣ ಖರೀದಿ ಹೆಚ್ಚಾಗಬಹುದು. ಭಾರತೀಯ ಆಭರಣ ಮಾರುಕಟ್ಟೆಗೆ (Market ) ಇದು ದೊಡ್ಡ ಮಟ್ಟದ ಪ್ರಭಾವ ಬೀರುವಲ್ಲಿ ಯಾವುದೇ ಸಂಶಯವಿಲ್ಲ.
ಈ ಬಜೆಟ್ ಚಿನ್ನಾಭರಣ ವ್ಯಾಪಾರಿಗಳಿಗೆ ಮತ್ತು ಗ್ರಾಹಕರಿಗೆ ದೊಡ್ಡ ಮಟ್ಟದ ಯಶಸ್ಸನ್ನು ಒದಗಿಸಲಿದೆ. ಮುಂಬರುವ ದಿನಗಳಲ್ಲಿ ಚಿನ್ನ, ವಜ್ರ ಮತ್ತು ಪ್ಲಾಟಿನಂ ಮಾರುಕಟ್ಟೆಯಲ್ಲಿ ಹೊಸ ಬೆಳವಣಿಗೆಗಳು ಕಂಡುಬರಬಹುದು.
ನಿಮ್ಮದಾಗಿಸಿಕೊಳ್ಳಲು ತಡ ಮಾಡಬೇಡಿ! ಇಂದೇ 5,000 ರೂ. ಬಾಕಿ ಉಳಿಸಿ, ನಿಮ್ಮ ಭವಿಷ್ಯದ ಕಾರನ್ನು ಈಗಲೇ ಪ್ರೀ-ಬುಕ್ ಮಾಡಿ!
ಪ್ರತಿದಿನ ಇದೇ ರೀತಿಯ ಉಪಯುಕ್ತ ಮಾಹಿತಿ ಮತ್ತು ನ್ಯೂಸ್ ಅಲರ್ಟ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ 👉 WhatsApp Channel ನೀಡ್ಸ್ ಆಫ್ ಪಬ್ಲಿಕ್ ವಾಟ್ಸಾಪ್ ಚಾನೆಲ್ ಸೇರಿಕೊಳ್ಳಿ
ಈ ಮಾಹಿತಿಗಳನ್ನು ಓದಿ
ದಯವಿಟ್ಟು ಗಮನಿಸಿ: ನೀಡ್ಸ್ ಆಫ್ ಪಬ್ಲಿಕ್ ತನ್ನ ಓದುಗರಿಗೆ ನಿಖರವಾದ ಮತ್ತು ಅಧಿಕೃತ ಮಾಹಿತಿಗಳನ್ನು ಮಾತ್ರ ಪ್ರಕಟಿಸುತ್ತದೆ. ಇಲ್ಲಿ ನಾವು ಯಾವುದೇ ಅನಧಿಕೃತ ಮತ್ತು ಸುಳ್ಳು ಮಾಹಿತಿಯನ್ನು ಬಿತ್ತರಿಸುವುದಿಲ್ಲ.