Budget 2025: ಆದಾಯ ತೆರಿಗೆಯಲ್ಲಿ ಮಹತ್ವದ ಸುಧಿ! ₹12 ಲಕ್ಷ ವರೆಗೆ ತೆರಿಗೆ ಮುಕ್ತ ಆದಾಯ(Tax-free income), ಹೊಸ ಸ್ಲ್ಯಾಬ್ ಮತ್ತು ವಿನಾಯಿತಿಗಳ ಮಾಹಿತಿ
ಕೇಂದ್ರ ಸರ್ಕಾರ 2025ರ ಬಜೆಟ್‌ನಲ್ಲಿ ಆದಾಯ ತೆರಿಗೆ(Income tax)ದಾರರಿಗೆ ಬಹುದೊಡ್ಡ ಕೊಡುಗೆಯನ್ನು ನೀಡಿದೆ! ₹12 ಲಕ್ಷದವರೆಗೆ ಯಾವುದೇ ಆದಾಯ ತೆರಿಗೆ ಕಟ್ಟಬೇಕಾಗಿಲ್ಲ, ಇದು ಮಧ್ಯಮ ವರ್ಗದ ಜನತೆಗೆ ಬಹಳಷ್ಟು ಉಪಯುಕ್ತ. ಹೊಸ ತೆರಿಗೆ ಸ್ಲ್ಯಾಬ್‌ಗಳು ಹೇಗಿವೆ? ನೀವು ಎಷ್ಟು ತೆರಿಗೆ ಕಟ್ಟಬೇಕೆಂದು ತಿಳಿದುಕೊಳ್ಳಲು ಈ ಸಂಪೂರ್ಣ ಮಾಹಿತಿ ಓದಿ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ
ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್(Union Finance Minister Nirmala Sitharama) ಅವರು ಮಂಡಿಸಿದ 2025ನೇ ಸಾಲಿನ ಬಜೆಟ್ ಮಧ್ಯಮ ವರ್ಗದ ಜನರಿಗೆ ಸಿಹಿ ಸುದ್ದಿಯನ್ನು ಹೊತ್ತು ತಂದಿದೆ. ಆದಾಯ ತೆರಿಗೆಯಲ್ಲಿ ಮಹತ್ವದ ಬದಲಾವಣೆಗಳನ್ನು ತರುವ ಮೂಲಕ, ಸರ್ಕಾರವು ಜನಸಾಮಾನ್ಯರ ಕೈಗೆ ಹೆಚ್ಚಿನ ಹಣವನ್ನು ಉಳಿಸುವ ಅವಕಾಶವನ್ನು ಕಲ್ಪಿಸಿದೆ. ಈ ಲೇಖನದಲ್ಲಿ, ಬಜೆಟ್‌ನಲ್ಲಿನ ಪ್ರಮುಖ ಆದಾಯ ತೆರಿಗೆ ಬದಲಾವಣೆಗಳ ಬಗ್ಗೆ ವಿವರವಾಗಿ ತಿಳಿಸಲಾಗಿದೆ.
12 ಲಕ್ಷ ರೂ.ವರೆಗೆ ಆದಾಯ ತೆರಿಗೆ ಇಲ್ಲ! No income tax up to Rs. 12 lakh!
ಹೌದು, ನೀವು ಓದಿದ್ದು ಸರಿ! ವಾರ್ಷಿಕ 12 ಲಕ್ಷ ರೂ.ವರೆಗೆ ಆದಾಯ ಹೊಂದಿರುವ ವ್ಯಕ್ತಿಗಳು ಯಾವುದೇ ಆದಾಯ ತೆರಿಗೆಯನ್ನು ಪಾವತಿಸುವ ಅಗತ್ಯವಿಲ್ಲ. ಈ ಹಿಂದೆ 7 ಲಕ್ಷ ರೂ.ವರೆಗೆ ಇದ್ದ ತೆರಿಗೆ ವಿನಾಯಿತಿಯನ್ನು ಈಗ 12 ಲಕ್ಷಕ್ಕೆ ಹೆಚ್ಚಿಸಲಾಗಿದೆ. ಇದರರ್ಥ, ನಿಮ್ಮ ಆದಾಯ 12 ಲಕ್ಷ ರೂ.ಗಳಿಗಿಂತ ಹೆಚ್ಚಿಲ್ಲದಿದ್ದರೆ, ನೀವು ಯಾವುದೇ ತೆರಿಗೆಯನ್ನು ಪಾವತಿಸಬೇಕಾಗಿಲ್ಲ.
ಹೊಸ ತೆರಿಗೆ ಸ್ಲಾಬ್‌ಗಳು(New tax slabs):
0-4 ಲಕ್ಷ ರೂ.: ತೆರಿಗೆ ಇಲ್ಲ
4-8 ಲಕ್ಷ ರೂ.: 5% ತೆರಿಗೆ
8-12 ಲಕ್ಷ ರೂ.: 10% ತೆರಿಗೆ
12-16 ಲಕ್ಷ ರೂ.: 15% ತೆರಿಗೆ
16-20 ಲಕ್ಷ ರೂ.: 20% ತೆರಿಗೆ
20-24 ಲಕ್ಷ ರೂ.: 25% ತೆರಿಗೆ
24 ಲಕ್ಷ ರೂ. ಮೇಲ್ಪಟ್ಟು: 30% ತೆರಿಗೆ
ಈ ಹೊಸ ತೆರಿಗೆ ಸ್ಲಾಬ್‌ಗಳ ಮೂಲಕ, ಸರ್ಕಾರವು ಮಧ್ಯಮ ವರ್ಗದ ಜನರ ತೆರಿಗೆ ಹೊರೆಯನ್ನು ಕಡಿಮೆ ಮಾಡುವ ಪ್ರಯತ್ನ ಮಾಡಿದೆ. ಉದಾಹರಣೆಗೆ, 8 ಲಕ್ಷ ರೂ. ಆದಾಯ ಹೊಂದಿರುವವರು 30,000 ರೂ., 9 ಲಕ್ಷ ರೂ. ಆದಾಯ ಹೊಂದಿರುವವರು 40,000 ರೂ., ಮತ್ತು 10 ಲಕ್ಷ ರೂ. ಆದಾಯ ಹೊಂದಿರುವವರು 50,000 ರೂ. ಉಳಿತಾಯವನ್ನು ಪಡೆಯಬಹುದು.
ಉಳಿತಾಯದ ಲೆಕ್ಕಾಚಾರ(Savings calculation):
ವ್ಯಕ್ತಿಯ ಆದಾಯಕ್ಕೆ ಅನುಗುಣವಾದ ಉಳಿತಾಯ:
8 ಲಕ್ಷ ರೂ. ಆದಾಯ ಇದ್ದರೆ, 30,000 ರೂ. ಉಳಿತಾಯ ಸಾಧ್ಯ
9 ಲಕ್ಷ ರೂ. ಆದಾಯದಲ್ಲಿ, 40,000 ರೂ. ಉಳಿತಾಯ ಮಾಡಬಹುದು
10 ಲಕ್ಷ ರೂ. ಗಳಿಸಿದರೆ, 50,000 ರೂ. ಉಳಿತಾಯ ಸಾಧ್ಯ
11 ಲಕ್ಷ ರೂ. ಆದಾಯವಿದ್ದರೆ, 65,000 ರೂ. ಉಳಿತಾಯ ಸಾಧ್ಯ
12 ಲಕ್ಷ ರೂ. ಆದಾಯಕ್ಕೆ, 80,000 ರೂ. ಉಳಿತಾಯ ಮಾಡಲು ಸಾಧ್ಯ
16 ಲಕ್ಷ ರೂ. ಆದಾಯದಿಂದ 50,000 ರೂ. ಉಳಿತಾಯ
20 ಲಕ್ಷ ರೂ. ಆದಾಯ ಇದ್ದರೆ 90,000 ರೂ. ಉಳಿತಾಯ
24 ಲಕ್ಷ ರೂ. ಆದಾಯಕ್ಕೆ 1.10 ಲಕ್ಷ ರೂ. ಉಳಿತಾಯ
50 ಲಕ್ಷ ರೂ. ಆದಾಯ ಹೊಂದಿದರೆ 1.10 ಲಕ್ಷ ರೂ. ಉಳಿತಾಯ
ಸೆಕ್ಷನ್ 87ಎ ಅಡಿಯಲ್ಲಿ ಹೆಚ್ಚುವರಿ ರಿಯಾಯಿತಿ Additional discount under Section 87A
ಸೆಕ್ಷನ್ 87ಎ ಅಡಿಯಲ್ಲಿ ನೀಡಲಾಗುವ ರಿಯಾಯಿತಿಯನ್ನು ಈ ಬಾರಿ ಹೆಚ್ಚಿಸಲಾಗಿದೆ. ಈ ಹಿಂದೆ 7 ಲಕ್ಷ ರೂ.ವರೆಗೆ ಆದಾಯ ಹೊಂದಿರುವವರಿಗೆ ತೆರಿಗೆ ರಿಯಾಯಿತಿ ನೀಡಲಾಗುತ್ತಿತ್ತು. ಈಗ ಈ ಮಿತಿಯನ್ನು 12 ಲಕ್ಷಕ್ಕೆ ಹೆಚ್ಚಿಸಲಾಗಿದೆ. ಇದರರ್ಥ, 12 ಲಕ್ಷ ರೂ.ವರೆಗೆ ಆದಾಯ ಹೊಂದಿರುವವರು ಸೆಕ್ಷನ್ 87ಎ ಅಡಿಯಲ್ಲಿ ರಿಯಾಯಿತಿ ಪಡೆಯುವ ಮೂಲಕ ತೆರಿಗೆಯನ್ನು ಕಡಿಮೆ ಮಾಡಿಕೊಳ್ಳಬಹುದು.
ಹಿರಿಯ ನಾಗರಿಕರಿಗೆ ವಿಶೇಷ ಸೌಲಭ್ಯ Special facilities for senior citizens
ಹಿರಿಯ ನಾಗರಿಕರಿಗೆ ಸಿಗುವ ಬಡ್ಡಿ ಆದಾಯದಲ್ಲಿ ಟ್ಯಾಕ್ಸ್ ಡಿಡಕ್ಷನ್ ಮಿತಿಯನ್ನು 1 ಲಕ್ಷ ರೂ.ಗೆ ಹೆಚ್ಚಿಸಲಾಗಿದೆ. ಅಂದರೆ, ಠೇವಣಿಗಳಿಂದ ವರ್ಷಕ್ಕೆ ಸಿಗುವ 1 ಲಕ್ಷ ರೂ.ವರೆಗೆ ಬಡ್ಡಿ ಆದಾಯಕ್ಕೆ ಟ್ಯಾಕ್ಸ್ ವಿನಾಯಿತಿ ಸಿಗುತ್ತದೆ.
ಬಾಡಿಗೆ ಆದಾಯದ ಮೇಲಿನ ಟಿಡಿಎಸ್ ಮಿತಿ ಹೆಚ್ಚಳ TDS limit on rental income increased
ಬಾಡಿಗೆಗಳಿಂದ ಬರುವ ಆದಾಯಕ್ಕೆ ವಾರ್ಷಿಕ ಟಿಡಿಎಸ್ ಮಿತಿಯನ್ನು 2.4 ಲಕ್ಷ ರೂ.ನಿಂದ 6 ಲಕ್ಷ ರೂ.ಗೆ ಏರಿಸಲಾಗಿದೆ.
ಈ ಬದಲಾವಣೆಗಳ ಪ್ರಯೋಜನಗಳು(Benefits of these changes)
* ಮಧ್ಯಮ ವರ್ಗದ ಜನರಿಗೆ ಹೆಚ್ಚಿನ ಉಳಿತಾಯದ ಅವಕಾಶ
* ತೆರಿಗೆ ಹೊರೆ ಇಳಿಕೆಯಿಂದಾಗಿ ಜನರ ಬಳಕೆಯ ಸಾಮರ್ಥ್ಯ ಹೆಚ್ಚಳ
* ಹಿರಿಯ ನಾಗರಿಕರಿಗೆ ಮತ್ತು ಬಾಡಿಗೆದಾರರಿಗೆ ಅನುಕೂಲ
* ಆರ್ಥಿಕತೆಯಲ್ಲಿ ಚೇತರಿಕೆ
ಒಟ್ಟಿನಲ್ಲಿ, ಬಜೆಟ್ 2025 ಆದಾಯ ತೆರಿಗೆಯಲ್ಲಿ ಮಹತ್ವದ ಬದಲಾವಣೆಗಳನ್ನು ತರುವ ಮೂಲಕ ಜನಸಾಮಾನ್ಯರಿಗೆ ಹೆಚ್ಚಿನ ಅನುಕೂಲವನ್ನು ಕಲ್ಪಿಸಿದೆ. ಈ ಬದಲಾವಣೆಗಳು ಮಧ್ಯಮ ವರ್ಗದ ಜನರ ಜೀವನದಲ್ಲಿ ಸಕಾರಾತ್ಮಕ ಪರಿಣಾಮ ಬೀರಲಿವೆ ಎಂದು ನಿರೀಕ್ಷಿಸಲಾಗಿದೆ. ಇವುಗಳಿಂದ ಜನರ ಖಾತೆಯಲ್ಲಿ ಹೆಚ್ಚಿನ ಹಣ ಉಳಿಯುವ ಮೂಲಕ, ದೇಶದ ಆರ್ಥಿಕತೆಯ ಉತ್ತೇಜನಕ್ಕೆ ಸಹಕಾರಿಯಾಗಲಿದೆ.
ಈ ಮಾಹಿತಿಯನ್ನು ಕೂಡಲೇ ನಿಮ್ಮೆಲ್ಲಾ ಸ್ನೇಹಿತರೊಂದಿಗೆ ಹಾಗೂ ಬಂಧುಗಳಿಗೆ ಶೇರ್ ಮಾಡಿ, ಧನ್ಯವಾದಗಳು.
ಈ ಮಾಹಿತಿಗಳನ್ನು ಓದಿ
ದಯವಿಟ್ಟು ಗಮನಿಸಿ: ನೀಡ್ಸ್ ಆಫ್ ಪಬ್ಲಿಕ್ ತನ್ನ ಓದುಗರಿಗೆ ನಿಖರವಾದ ಮತ್ತು ಅಧಿಕೃತ ಮಾಹಿತಿಗಳನ್ನು ಮಾತ್ರ ಪ್ರಕಟಿಸುತ್ತದೆ. ಇಲ್ಲಿ ನಾವು ಯಾವುದೇ ಅನಧಿಕೃತ ಮತ್ತು ಸುಳ್ಳು ಮಾಹಿತಿಯನ್ನು ಬಿತ್ತರಿಸುವುದಿಲ್ಲ.