8th Pay Commission: ಕೇಂದ್ರ  ನೌಕರರ  ಮೂಲ ವೇತನದಲ್ಲಿ ಭಾರೀ ಏರಿಕೆ! ಇಲ್ಲಿದೆ ಡೀಟೇಲ್ಸ್ 

Picsart 25 02 07 20 27 50 141 1

WhatsApp Group Telegram Group

8ನೇ ವೇತನ ಆಯೋಗ(8th Pay Commission): ಸರ್ಕಾರಿ ನೌಕರರಿಗೆ ಮಹತ್ತರ ವೇತನ ಹೆಚ್ಚಳದ ನಿರೀಕ್ಷೆ!

ಭಾರತದಲ್ಲಿ ಪ್ರತೀ ಹತ್ತು ವರ್ಷಗಳಿಗೊಮ್ಮೆ ಕೇಂದ್ರ ಮತ್ತು ರಾಜ್ಯ ಸರ್ಕಾರಿ ನೌಕರರ ವೇತನ ಪುನರ್ ಪರಿಶೀಲನೆಗೆ ವೇತನ ಆಯೋಗವನ್ನು ರಚಿಸಲಾಗುತ್ತದೆ. ಈ ಆಯೋಗಗಳು ಸರ್ಕಾರಿ ನೌಕರರ ಭವಿಷ್ಯದ ಆರ್ಥಿಕ ಭದ್ರತೆ ಹಾಗೂ ಜೀವನ ಶೈಲಿಯ ಸುಧಾರಣೆಗೆ ಪ್ರಮುಖ ಪಾತ್ರ ವಹಿಸುತ್ತವೆ. ಪ್ರಸ್ತುತ, 7ನೇ ವೇತನ ಆಯೋಗದ(7th Pay Commission) ಶಿಫಾರಸುಗಳ ಪ್ರಕಾರ ಸರ್ಕಾರಿ ನೌಕರರಿಗೆ ಶೇಕಡಾ 54ರಷ್ಟು ವೇತನ ಹೆಚ್ಚಳ ನೀಡಲಾಗಿತ್ತು. ಆದರೆ, ದಿನೇ ದಿನೇ ಜೀವನ ವಿನ್ಯಾಸದ ಬದಲಾವಣೆ, ದಿನಸಿ ವಸ್ತುಗಳ ಬೆಲೆ ಏರಿಕೆ, ವಸತಿ ಹಾಗೂ ಇತರ ಆರ್ಥಿಕ ಹೊರೆಗಳನ್ನು ಗಮನದಲ್ಲಿ ಇಟ್ಟುಕೊಂಡು, ಈಗ ಎಲ್ಲರ ದೃಷ್ಟಿ 8ನೇ ವೇತನ ಆಯೋಗದತ್ತ ಇದೆ. ಇದೇ ರೀತಿಯ ಎಲ್ಲಾ ಸರ್ಕಾರಿ ಸೌಲಭ್ಯಗಳ ಮಾಹಿತಿ & ನ್ಯೂಸ್ ಅಲರ್ಟ್ ಗಳಿಗಾಗಿ ನಮ್ಮ ಟೆಲಿಗ್ರಾಂ ಚಾನೆಲ್ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ. 

7ನೇ ವೇತನ ಆಯೋಗದ ಪ್ರಭಾವ:

7ನೇ ವೇತನ ಆಯೋಗವು 2.57 ಫಿಟ್‌ಮೆಂಟ್(2.57 Fitment) ಅಂಶವನ್ನು ಶಿಫಾರಸು ಮಾಡಿತ್ತು. ಇದರಿಂದಾಗಿ ಕೇಂದ್ರ ಸರ್ಕಾರಿ ನೌಕರರ ಕನಿಷ್ಠ ವೇತನವನ್ನು ರೂ. 7,000 ರಿಂದ ರೂ. 18,000 ಗೆ ಏರಿಸಲಾಯಿತು. ಇದರೊಂದಿಗೆ ಹೆಚ್ಚಿನ ಹುದ್ದೆಗಳ ವೇತನದಲ್ಲೂ ಶೇಕಡಾ 54ರಷ್ಟು ಹೆಚ್ಚಳ ಮಾಡಲಾಗಿತ್ತು. ಆದರೆ, ದಿನನಿತ್ಯದ ಖರ್ಚು ಮತ್ತು ಹಣದುಬ್ಬರದ ಪ್ರಮಾಣವನ್ನು ಲೆಕ್ಕಹಾಕಿದರೆ, ಇಂದಿನ ಖರ್ಚಿನ ವೆಚ್ಚಕ್ಕೆ ಪೂರಕವಾಗುವಷ್ಟು ವೇತನವಿಲ್ಲ ಎಂದು ನೌಕರರು ಅಭಿಪ್ರಾಯಪಟ್ಟರು.

8ನೇ ವೇತನ ಆಯೋಗದ ನಿರೀಕ್ಷೆಗಳು ಹೇಗಿವೆ :

ಇದರ ಬೆನ್ನಲ್ಲೇ 8ನೇ ವೇತನ ಆಯೋಗದ ನಿರೀಕ್ಷೆಗಳು ತೀವ್ರಗೊಂಡಿವೆ. ಲಭ್ಯವಿರುವ ಮಾಹಿತಿ ಪ್ರಕಾರ, ಈ ಬಾರಿ ಫಿಟ್‌ಮೆಂಟ್ ಅಂಶವನ್ನು 2.6 ರಿಂದ 2.85ರ ನಡುವೆ ನಿಗದಿಪಡಿಸಬಹುದೆಂದು ಅಂದಾಜಿಸಲಾಗಿದೆ. ಇದರ ಪ್ರಭಾವದಿಂದ ಮೂಲವೇತನವು 40% ರಿಂದ 50%ರಷ್ಟು ಏರಿಕೆಯಾಗಬಹುದು. ಉದಾಹರಣೆಗೆ, ಪ್ರಸ್ತುತ ರೂ. 20,000 ಮೂಲ ವೇತನ ಪಡೆಯುತ್ತಿರುವ ಉದ್ಯೋಗಿಯ ಸಂಬಳವು ರೂ. 46,600 ರಿಂದ ರೂ. 57,200 ವರೆಗೆ ಏರಿಸಬಹುದೆಂದು ನಿರೀಕ್ಷಿಸಲಾಗಿದೆ.

ಇದರಲ್ಲಿ ವಿಶೇಷವಾಗಿ ಗಮನಿಸಬೇಕಾದ ವಿಷಯವೆಂದರೆ, 8ನೇ ವೇತನ ಆಯೋಗವು ಕೇವಲ ವೇತನ ಹೆಚ್ಚಳವಷ್ಟೇ ಅಲ್ಲ, ಬೋನಸ್(Bonus), ಪಿಂಚಣಿ(Pension) ಹಾಗೂ ಇತರ ಭತ್ಯೆಗಳ ಮೇಲೂ ಪ್ರಭಾವ ಬೀರುತ್ತದೆ. ಕೇಂದ್ರ ಹಾಗೂ ರಾಜ್ಯ ಸರ್ಕಾರದ ನೌಕರರು ಈ ಆಯೋಗದ ಫಲಿತಾಂಶಕ್ಕಾಗಿ ತೀವ್ರ ನಿರೀಕ್ಷೆಯಲ್ಲಿ ಇದ್ದಾರೆ.

ಇನ್ನು, ಸರ್ಕಾರಿ ನೌಕರರಿಗೆ(government employees) ಇದೊಂದು ದೊಡ್ಡ ಆರ್ಥಿಕ ಭರವಸೆ ಆಗಿದ್ದು, ಅವರ ಜೀವನಮಟ್ಟವನ್ನು ಸುಧಾರಿಸುವುದರಲ್ಲಿ ಸಹಾಯಕವಾಗಲಿದೆ. ಆದರೆ, 8ನೇ ವೇತನ ಆಯೋಗದ ಅಧಿಕೃತ ಘೋಷಣೆ ಹಾಗೂ ಅಂತಿಮ ಶಿಫಾರಸುಗಳು(Final recommendations) ಹೊರಬಿದ್ದ ನಂತರ ಮಾತ್ರ ನಿಖರ ಮಾಹಿತಿಯನ್ನು ತಿಳಿದುಕೊಳ್ಳಲು ಸಾಧ್ಯ. ನೌಕರರು ಈ ಬಾರಿ ಹೆಚ್ಚುವರಿ ಸೌಲಭ್ಯಗಳ ನಿರೀಕ್ಷೆಯಲ್ಲಿದ್ದು, ಮುಂದಿನ ದಿನಗಳಲ್ಲಿ ಈ ಕುರಿತಂತೆ ಸರ್ಕಾರದ ನಿರ್ಧಾರವೇ ಬಹುಮುಖ್ಯವಾಗಲಿದೆ.

ಈ ಮಾಹಿತಿಗಳನ್ನು ಓದಿ

 

ದಯವಿಟ್ಟು ಗಮನಿಸಿ: ನೀಡ್ಸ್ ಆಫ್ ಪಬ್ಲಿಕ್ ತನ್ನ ಓದುಗರಿಗೆ ನಿಖರವಾದ ಮತ್ತು ಅಧಿಕೃತ ಮಾಹಿತಿಗಳನ್ನು ಮಾತ್ರ ಪ್ರಕಟಿಸುತ್ತದೆ. ಇಲ್ಲಿ ನಾವು ಯಾವುದೇ ಅನಧಿಕೃತ ಮತ್ತು ಸುಳ್ಳು ಮಾಹಿತಿಯನ್ನು ಬಿತ್ತರಿಸುವುದಿಲ್ಲ.

WhatsApp Group Join Now
Telegram Group Join Now

Leave a Reply

Your email address will not be published. Required fields are marked *

error: Content is protected !!